For Quick Alerts
  ALLOW NOTIFICATIONS  
  For Daily Alerts

  ಈ ಎರಡು ರಾಜ್ಯಗಳಲ್ಲಿ ಡಬ್ ಆದ ಸಿನಿಮಾಗಳ ಬಾಕ್ಸಾಫೀಸ್ ದರ್ಬಾರ್ ಬಲು ಜೋರು!

  |

  ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. 'ಕೆಜಿಎಫ್ 2' ಸಿನಿಮಾ ಬಳಿಕ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಬೇರೆ ರಾಜ್ಯಗಳ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿವೆ.

  ರಾಜಮೌಳಿಯ 'ಬಾಹುಬಲಿ' ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ನಾಂದಿ ಹಾಡಿತ್ತು ಅನ್ನೋದು ಗೊತ್ತೇ ಇದೆ. ಇಲ್ಲಿಂದ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಉತ್ತರದಲ್ಲೂ ಕ್ರೇಜ್ ದುಪ್ಪಟ್ಟಾಗಿದೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ನಿರ್ಮಾಣಗೊಂಡ ಸಿನಿಮಾಗಳು ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಬೇಜಾನ್ ಲೂಟಿ ಮಾಡಿದೆ. ಆದರಲ್ಲೂ ಬಾಲಿವುಡ್ ಬಾಕ್ಸಾಫೀಸ್‌ ಮೇಲೆ ಎಲ್ಲರ ಕಣ್ಣಿತ್ತು. ಆದರೆ, ಬಾಲಿವುಡ್‌ನಷ್ಟೇ ಟಾಲಿವುಡ್ ಬಾಕ್ಸಾಫೀಸ್‌ ಕೂಡ ಅಷ್ಟೇ ದೊಡ್ಡದಿದ್ದು, ಸಿನಿಮಾ ಮಂದಿ ಕೋಟಿ ಹಣವನ್ನು ಬಾಚಿಕೊಂಡಿದ್ದಾರೆ.

  ಮೈಸೂರಿನಲ್ಲಿ ಮಣಿರತ್ನಂ ಕಾಟ ತಾಳಲಾರದೇ ಕಮಲ್ ಹಾಸನ್‌ಗೆ ಫೋನ್ ಮಾಡಿದ್ದರಂತೆ ತಲೈವಾ!ಮೈಸೂರಿನಲ್ಲಿ ಮಣಿರತ್ನಂ ಕಾಟ ತಾಳಲಾರದೇ ಕಮಲ್ ಹಾಸನ್‌ಗೆ ಫೋನ್ ಮಾಡಿದ್ದರಂತೆ ತಲೈವಾ!

  ಆಂಧ್ರ ಹಾಗೂ ತೆಲಂಗಾಣ ಈ ಎರಡೂ ರಾಜ್ಯಗಳಲ್ಲಿ ಬಾಕ್ಸಾಫೀಸ್‌ ಬಾಲಿವುಡ್‌ಗಿಂತ ಕಮ್ಮಿಯಿಲ್ಲ. ಹೀಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅಂದುಕೊಳ್ಳೋರು ತೆಲುಗು ಬಿಟ್ಟು ಯೋಚನೆ ಮಾಡೋದೇ ಇಲ್ಲ. ಸದ್ಯ ಈ ತೆಲುಗಿಗೆ ಡಬ್ ಆಗಿ ರಿಲೀಸ್ ಆದ ಸಿನಿಮಾಗಳ ಬಾಕ್ಸಾಫೀಸ್‌ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

  'ಕೆಜಿಎಫ್ 2

  'ಕೆಜಿಎಫ್ 2

  ರಾಕಿ ಬಾಯ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಹೊಸ ಚರಿತ್ರೆಯನ್ನು ಸೃಷ್ಟಿಸಿದ್ದು 'ಕೆಜಿಎಫ್ 2'. ಈ ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡಿತ್ತು. ಆದರೆ, ಟಾಲಿವುಡ್‌ ಬಾಕ್ಸಾಫೀಸ್‌ನಲ್ಲೇನು ಕಮ್ಮಿ ಲೂಟಿ ಮಾಡಿಲ್ಲ. ಬರೋಬ್ಬರಿ 137 ಕೋಟಿ ರೂ. ಲೂಟಿ ಮಾಡಿತ್ತು.

   '2.0'

  '2.0'

  ರಜನಿಕಾಂತ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ '2.0' ತೆಲುಗಿಗೆ ಡಬ್ ಆಗಿತ್ತು. ಹೈ ಬಜೆಟ್ ಸಿನಿಮಾ ತೆಲುಗು ಬಾಕ್ಸಾಫೀಶ್‌ನಲ್ಲಿ ಸುಮಾರು 90 ಕೋಟಿ ರೂ.ಯಷ್ಟು ಕಲೆಕ್ಷನ್ ಮಾಡಿತ್ತು.

  'PS1' ಚಿತ್ರದಲ್ಲಿ ರಜಿನಿಗೆ ಜಯಲಲಿತಾ ಸೂಚಿಸಿದ್ದ ಪಾತ್ರ ಯಾವುದು? ತಲೈವಾ ಕಲ್ಪನೆಯಲ್ಲಿ ಯಾರ್ಯಾರು ಇದ್ದರು?'PS1' ಚಿತ್ರದಲ್ಲಿ ರಜಿನಿಗೆ ಜಯಲಲಿತಾ ಸೂಚಿಸಿದ್ದ ಪಾತ್ರ ಯಾವುದು? ತಲೈವಾ ಕಲ್ಪನೆಯಲ್ಲಿ ಯಾರ್ಯಾರು ಇದ್ದರು?

  'ರೋಬೊ'

  'ರೋಬೊ'

  ಟಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ರೋಬೊ'ನೂ ಇದೆ. ಇದೇ ಸಿನಿಮಾ ತಮಿಳಿನಲ್ಲಿ 'ಎಂದಿರನ್' ಅನ್ನೋ ಟೈಟಲ್‌ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಟಾಲಿವುಡ್‌ನಲ್ಲಿ ಗಳಿಸಿದ್ದು ಬರೋಬ್ಬರಿ 61 ಕೋಟಿ ರೂ.

  ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!

  'ಐ'

  'ಐ'

  ಶಂಕರ್ ನಿರ್ದೇಶಿಸಿದ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಐ'. ಚಿಯಾನ್ ವಿಕ್ರಮ್ ವಿಭಿನ್ನ ಅವತಾರದಲ್ಲಿ ಕಂಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ ಹೆಚ್ಚೇನು ಮೋಡಿ ಮಾಡದೆ ಇದ್ದರೂ ಟಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 51 ಕೋಟಿ ರೂ.

  'ಕಬಾಲಿ'

  'ಕಬಾಲಿ'

  ದೇಶಾದ್ಯಂತ ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದ ಸಿನಿಮಾ 'ಕಬಾಲಿ'. ಸೂಪರ್‌ಸ್ಟಾರ್ ರಜನಿಕಾಂತ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಕೊಟ್ಟ ಈ ಸಿನಿಮಾ ತೆಲುಗು ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು 38.6 ಕೋಟಿ ರೂ.

   'ಕಾಂಚನಾ' ಸೀರಿಸ್

  'ಕಾಂಚನಾ' ಸೀರಿಸ್

  ರಾಘವ ಲಾರೆನ್ಸ್ ನಟಿಸಿ, ನಿರ್ದೇಶಿಸಿದ 'ಕಾಂಚನಾ 3' ಸಿನಿಮಾ ಟಾಲಿವುಡ್‌ ಕಲೆಕ್ಷನ್ 33.5 ಕೋಟಿ ರೂ. ಹಾಗೇ 'ಕಾಂಚನಾ 2' 32.5 ಕೋಟಿ ರೂ. ಕಲೆ ಹಾಕಿತ್ತು.

   'ವಿಕ್ರಂ'

  'ವಿಕ್ರಂ'

  ಇತ್ತೀಚೆಗೆ ಕಮಲ್ ಹಾಸನ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ವಿಕ್ರಂ' ಕೂಡ ಬೇಜಾನ್ ಸದ್ದು ಮಾಡಿತ್ತು. ತೆಲುಗಿನ ಎರಡೂ ರಾಜ್ಯಗಳಲ್ಲಿ ಈ ಸಿನಿಮಾ ಗಳಿಸಿದ್ದು 31.45 ಕೋಟಿ ರೂ.

  'ಶಿವಾಜಿ'

  'ಶಿವಾಜಿ'

  ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ ಶಿವಾಜಿ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿತ್ತು. ಈ ಸಿನಿಮಾ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು 28.25 ಕೋಟಿ ರೂ. ಒಟ್ಟಾರೆ, ಟಾಲಿವುಡ್‌ನಲ್ಲಿ ರಜನಿಕಾಂತ್ ಆರ್ಭಟ ಜೋರಾಗಿದೆ. ಮುಂಬರುವ ಸಿನಿಮಾಗಳು ಹೇಗೆ ಲೂಟಿ ಮಾಡುತ್ತೆ? ಅನ್ನೋದು ಸದ್ಯಕ್ಕೆ ಕುತೂಹಲ.

  English summary
  KGF 2, Vikram, Kabali, Shivaji Highest Grossing Dubbed Films Of All Time In Telugu States, Know More.
  Thursday, September 15, 2022, 18:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X