For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಿತ್ರದ ಕಲಾವಿದರ ನಿವ್ವಳ ಮೌಲ್ಯ ಎಷ್ಟು?: ಮಾಹಿತಿ ಬಹಿರಂಗ

  |

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 ಚಿತ್ರ 2018ರಲ್ಲಿ ಬಿಡುಗಡೆಯಾದಾಗ ಭಾರತವೇ ಬೆರಗುಗಣ್ಣಿನಿಂದ ಕನ್ನಡ ಚಿತ್ರರಂಗದತ್ತ ನೋಡುವಂತಾಗಿತ್ತು. ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ, ಅದರ ಎರಡನೆಯ ಭಾಗದ ಬಿಡುಗಡೆಗಾಗಿ ಕಾತರದಿಂದ ಕಾಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

  ಚದುರಂಗದಲ್ಲಿ ಚಾಲೆಂಜ್ ಮಾಡಿಕೊಂಡ ಧ್ರುವ ಬ್ರದರ್ಸ್..! | Dhruva Sarja | Chiranjeevi Sarja

  ಈ ಚಿತ್ರ ಕನ್ನಡ ಸಿನಿಮಾರಂಗದ ಕುರಿತಾದ ತಪ್ಪು ಭಾವನೆ, ಕಡೆಗಣನೆಯನ್ನು ತೊಲಗಿಸುವುದು ಮಾತ್ರವಲ್ಲ, ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರಿ ಬೇಡಿಕೆಯನ್ನೂ ಸೃಷ್ಟಿಸಿದೆ. ಹಾಗೆಯೇ ಕಲಾವಿದರ ಹಣೆಬರಹವನ್ನೂ ಬದಲಿಸಿದೆ. ಯಶ್ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರ, ಅವರ ಗ್ರಾಫ್‌ಅನ್ನು ಗಗನಕ್ಕೇರಿಸಿದೆ. ಹಾಗೆಯೇ ಚಿತ್ರದ ತಾರಾಬಳಗದ ನಿವ್ವಳ ಮೌಲ್ಯ ಕೂಡ ಅಚ್ಚರಿ ಮೂಡಿಸುತ್ತದೆ. ಅವರಲ್ಲಿ ಕೆಲವು ನಟರ ನಿವ್ವಳ ಮೌಲ್ಯದ ಮಾಹಿತಿ ಇಲ್ಲಿದೆ. ಮುಂದೆ ಓದಿ...

  ಯಶ್ ನೆಟ್ ವರ್ಥ್

  ಯಶ್ ನೆಟ್ ವರ್ಥ್

  ಕೆಜಿಎಫ್ ಚಿತ್ರದಲ್ಲಿ ರಾಖಿ ಭಾಯ್ ಆಗಿ ನಟಿಸಿದ ಯಶ್, ಈ ಪಾತ್ರದ ಅಭಿನಯಕ್ಕಾಗಿ ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯಿಂದ ಚಿತ್ರರಂಗಕ್ಕೆ ಕಾಲಿರಿಸಿದ ಅವರು ಯಶಸ್ವಿ ಚಿತ್ರಗಳನ್ನು ನೀಡಿದ್ದರೂ ಕೆಜಿಎಫ್ ಅವರ ವೃತ್ತಿ ಬದುಕಿಗೆ ಭಾರಿ ತಿರುವು ನೀಡಿದೆ. ಯಶ್ ಅವರ ನಿವ್ವಳ ಮೌಲ್ಯ ಸುಮಾರು 40 ಕೋಟಿ.

  'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಭಾಕಿ?'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಭಾಕಿ?

  ನಾಯಕಿ ಶ್ರೀನಿಧಿ ಶೆಟ್ಟಿ

  ನಾಯಕಿ ಶ್ರೀನಿಧಿ ಶೆಟ್ಟಿ

  ಚಿತ್ರದಲ್ಲಿ ನಾಯಕಿ ರೀನಾ ದೇಸಾಯಿ ಪಾತ್ರದಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿಗೆ ಇದು ಮೊದಲ ಚಿತ್ರ. ಸಿನಿಮಾ ಮತ್ತು ವಿವಿಧ ಕಮರ್ಷಿಯಲ್ ಜಾಹೀರಾತುಗಳ ಮೂಲಕ ಆದಾಯ ಗಳಿಸಿರುವ ನಟಿ, ತಮಿಳಿನ 'ಕೋಬ್ರಾ' ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಅವರ ನಿವ್ವಳ ಮೌಲ್ಯ ಅಂದಾಜು 6 ಕೋಟಿ ರೂ.

  ಅನಂತ್ ನಾಗ್

  ಅನಂತ್ ನಾಗ್

  ಚಿತ್ರರಂಗದ ಹಿರಿಯ ಮತ್ತು ಪ್ರಮುಖ ನಟರಲ್ಲಿ ಒಬ್ಬರು ಅನಂತ್ ನಾಗ್. ಆನಂದ್ ಇಂಗಲಗಿ ಎಂಬ ಪಾತ್ರದಲ್ಲಿ ಅನಂತ್ ನಾಗ್ 'ಕೆಜಿಎಫ್‌'ನಲ್ಲಿ ನಟಿಸಿದ್ದರು. ಕನ್ನಡದಲ್ಲಿ ನಿರಂತರವಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಅನಂತ್ ನಾಗ್ ಅವರ ನಿವ್ವಳ ಮೌಲ್ಯ ಸುಮಾರು 22 ಕೋಟಿ ರೂ ಎಂದು ಅಂದಾಜಿಸಲಾಗಿದೆ.

  ಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿ

  ಅಚ್ಯುತ್ ಕುಮಾರ್

  ಅಚ್ಯುತ್ ಕುಮಾರ್

  ಕನ್ನಡದಲ್ಲಿ ಬಹುಬೇಡಿಕೆಯ ಪೋಷಕರ ನಟರಲ್ಲಿ ಅಚ್ಯುತ್ ಕುಮಾರ್ ಒಬ್ಬರು. ತಮಿಳಿನಲ್ಲಿಯೂ ಅನೇಕ ಪ್ರಮುಖ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಕೆಜಿಎಫ್‌ನಲ್ಲಿ ಅವರು ಗುರು ಪಾಂಡಿಯನ್ ಎಂಬ ಪಾತ್ರ ನಿರ್ವಹಿಸಿದ್ದರು. ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 7 ಕೋಟಿಗಳಷ್ಟಿದೆ.

  'KGF-2' ರಿಲೀಸ್ ಮುಂದಕ್ಕೆ ಸಾಧ್ಯತೆ: ಯಾವಾಗ ಬಿಡುಗಡೆಯಾಗುತ್ತೆ ಸಿನಿಮಾ?'KGF-2' ರಿಲೀಸ್ ಮುಂದಕ್ಕೆ ಸಾಧ್ಯತೆ: ಯಾವಾಗ ಬಿಡುಗಡೆಯಾಗುತ್ತೆ ಸಿನಿಮಾ?

  English summary
  KGF movie cast's wopphing net worth revealed. Here is the net worth details of Yash and some other actors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X