'ಧಮ್ ಬೇಕೊಲೇ' ಅಂತ್ಲೇ ಗೆದ್ರುಬಿಟ್ರಾ ಸ್ಟಾರ್ಸ್? ಈ ಚಿತ್ರಗಳ ಸಕ್ಸಸ್ ಸೀಕ್ರೆಟ್ ಅದೇನಾ?

ಸಿನಿಮಾ ಸಕ್ಸಸ್ ಸೀಕ್ರೆಟ್ ಏನು ಅನ್ನೋದು ನಿಜಕ್ಕೂ ಯಾರಿಗೂ ಗೊತ್ತಿಲ್ಲ. ಅದು ಗೊತ್ತಿದ್ದರೆ ಎಲ್ಲಾ ಸಿನಿಮಾಗಳು ಗೆದ್ದುಬಿಡುತ್ತಿದ್ದವೇನೋ? ಆದರೆ ಇತ್ತೀಚಿನ ಕೆಲ ಸಿನಿಮಾಗಳನ್ನು ಗಮನಿಸಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಬಹುತೇಕ ಎಲ್ಲಾ ಸ್ಟಾರ್ ನಟರ ಹಿಟ್ ಸಿನಿಮಾಗಳಲ್ಲಿ ಅದೊಂದು ಕಾಮನ್ ವಿಚಾರ ಇದೆ.

ಕನ್ನಡ ಮಾತ್ರವಲ್ಲ ಪರಭಾಷಾ ಸಿನಿಮಾಗಳಲ್ಲೂ ಇದೇ ಟ್ರೆಂಡ್ ಆಗಿದೆ. ಹಾಗಂತ ಅದು ಒಳ್ಳೆ ವಿಚಾರ ಏನಲ್ಲ. ಕೆಟ್ಟ ವಿಚಾರವೇ? ಆದರೆ ಆ ಕೆಟ್ಟ ವಿಚಾರವನ್ನೇ ತೆರೆಮೇಲೆ ಪದೇ ಪದೇ ತೋರಿಸಲಾಗುತ್ತಿದೆ. ಕನ್ನಡದ 'KGF', 'ಕಾಂತಾರ', 'ಕಾಟೇರ'ಯಿಂದ ಹಿಡಿದು ತೆಲುಗಿನ 'ಸಲಾರ್', ಹಿಂದಿಯ 'ಜವಾನ್', ತಮಿಳಿನ 'ಜೈಲರ್' ಹೀಗೆ ಎಲ್ಲಾ ಸಿನಿಮಾಗಳಲ್ಲೂ ಅದೊಂದು ವಿಚಾರ ಕಾಮನ್ ಆಗಿಬಿಟ್ಟಿದೆ.

KGF to Kaatera: this is the common thing in recent super hit films

'ಧಮ್ ಬೇಕೊಲೇ' ಅಂತ್ಲೇ ಸ್ಟಾರ್ ನಟರು ತೆರೆಮೇಲೆ ಅಬ್ಬರಿಸುತ್ತಿದ್ದಾರೆ. ಕನ್ಫ್ಯೂಸ್ ಆಗಬೇಡಿ. ಇಲ್ಲಿ ಧಮ್ ಅಂದ್ರೆ ತಾಕತ್ತು ಅಂತಲ್ಲ. ಧೂಮಪಾನ. ಸಿಗರೇಟ್ ಅಥವಾ ಬಿಡಿ ಸೇದುವುದು. 'ಧೂಮಪಾನ ಹಾಗೂ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ' ಎಂದು ಸಿನಿಮಾ ಪ್ರಾರಂಭವಾಗುವ ಆರಂಭದಲ್ಲೇ ತೋರಿಸಲಾಗುತ್ತದೆ. ಆದರೆ ಬಹುತೇಕ ಸಿನಿಮಾ ನಾಯಕರ ಕೈಯಲ್ಲಿ ಸಿಗರೇಟ್ ಇದ್ದೇ ಇರುತ್ತದೆ. ಇನ್ನು ಅಂತಹ ಸನ್ನಿವೇಶಗಳಲ್ಲಿ 'ಧೂಪಾನ ಹಾನಿಕರ' ಡಿಸ್‌ಕ್ಲಮೇರ್ ಹಾಕಿರುತ್ತಾರೆ.

ತಮಿಳಿನ 'ಲಿಯೋ' ಚಿತ್ರದ 'ನಾ ರೆಡಿ' ಹಾಡು ಬಿಡುಗಡೆಯಾದಾಗ ತಮಿಳುನಾಡಿನಲ್ಲಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಹಾಡಿನ ಬಗ್ಗೆ ದೂರು ದಾಖಲಾಗಿತ್ತು. ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ಲರಿಗೋ ಗೊತ್ತೇಯಿದೆ. ಆದರೆ ಪ್ರತಿ ಸಿನಿಮಾಗಳಲ್ಲಿ ಇದರ ವಿಜೃಂಭಣೆ ನಡೆಯುತ್ತದೆ. ಹೀರೊಗಳ ಬಾಡಿ ಲಾಂಗ್ವೇಜ್‌ಗೆ ಚೆನ್ನಾಗಿರುತ್ತದೆ, ಮಜಾ ಇರುತ್ತದೆ ಎನ್ನುವ ಕಾರಣಕ್ಕೋ ಇದನ್ನೇ ಹೈಲೆಟ್ ಮಾಡಲಾಗುತ್ತದೆ.

KGF to Kaatera: this is the common thing in recent super hit films

'KGF'-2 ಚಿತ್ರದಲ್ಲಿ ರಾಕಿ ಭಾಯ್ ಸಿಗರೇಟ್ ಹೊತ್ತಿಸಿಕೊಳ್ಳುವ ಸನ್ನಿವೇಶ ಎಷ್ಟು ವೈರಲ್ ಆಗಿತ್ತು ಅನ್ನೋದು ಗೊತ್ತೇಯಿದೆ. ದೊಡ್ಡ ಬಂದೂಕಿನಿಂದ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಕಾದು ಕೆಂಪಗಾದ ಅದರ ಕೊಳವೆಯಲ್ಲಿ ರಾಕಿ, ಸಿಗರೇಟ್ ಹೊತ್ತಿಸಿಕೊಂಡಿದ್ದನ್ನು ಕೆಲವರು ಕೊಂಡಾಡಿದ್ದರು. ಸದ್ಯ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕಾಟೇರ' ಚಿತ್ರದಲ್ಲೂ ನಾಯಕ ಬೀಡಿ ಸೇದುವ ಸನ್ನಿವೇಶವನ್ನು ಹೈಲೆಟ್ ಮಾಡಿ ಟೀಸರ್ ರಿಲೀಸ್ ಮಾಡಲಾಗಿತ್ತು.

'ಕಾಂತಾರ' ಚಿತ್ರದಲ್ಲೂ ಕಾಡುಬೆಟ್ಟು ಶಿವ ಬೀಡಿ ಸೇದುವ ಸನ್ನಿವೇಶಗಳಿವೆ. 'ಘೋಸ್ಟ್' ಚಿತ್ರದಲ್ಲಿ ಶಿವಣ್ಣ, 'ವಿಕ್ರಾಂತ್ ರೋಣ' ಚಿತ್ರದಲ್ಲಿ ಸುದೀಪ್ ಹೀಗೆ ಹೇಳ್ತಾ ಹೋದರೆ ಎಲ್ಲಾ ಸಿನಿಮಾಗಳಲ್ಲೂ ನಾಯಕ ನಟರು 'ಧಮ್ ಮಾರೋ ಧಮ್' ಎನ್ನುತ್ತಿದ್ದಾರೆ. ಕನ್ನಡ ಮಾತ್ರವಲ್ಲ ಪರಭಾಷಾ ಸಿನಿಮಾಗಳಲ್ಲೂ ಇದೇ ಹೈಲೆಟ್ ಆಗುತ್ತಿದೆ. ರಜನಿಕಾಂತ್ 'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ, ರಜನಿಕಾಂತ್, ಮೋಹನ್ ಲಾಲ್ ಮೂವರು ಸಿಗರೇಟ್ ಸೇದುವ ಸನ್ನಿವೇಶ ಹಿಟ್ ಆಗಿತ್ತು. ಇದು ತಪ್ಪ ಎಂದು ಗೊತ್ತಿದ್ದೂ ಎಲ್ಲಾ ಸಿನಿಮಾಗಳಲ್ಲಿ ಅದೇ ಹೈಲೆಟ್ ಆಗುತ್ತಿರುವುದು ಮಾತ್ರ ವಿಪರ್ಯಾಸ.

ಸೆನ್ಸಾರ್ ಮಂಡಳಿ ಕೆಲವೊಮ್ಮೆ ಇಂತಹ ಸನ್ನಿವೇಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು ಇದೆ. ಸಣ್ಣ ಪುಟ್ಟ ಸನ್ನಿವೇಶಗಳಿಗೆ ಕತ್ತರಿ ಹಾಕಿರುವುದು ಇದೆ. ಇನ್ನು ಕೆಲವೊಮ್ಮೆ ಅಂತಹ ಸನ್ನಿವೇಶಕ್ಕೆ ಡಿಸ್‌ಕ್ಲಮೇರ್ ಹಾಕದಿದ್ದಾಗ ಚಿತ್ರತಂಡದ ಗಮನಕ್ಕೆ ತಂದಿರುವುದು ಇದೆ.

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೂಡ ಇದೇ ಧೂಮಪಾನದ ಸನ್ನಿವೇಶಗಳು ಎದ್ದು ಕಾಣುತ್ತಿದೆ. ಸುದೀಪ್ ನಟನೆಯ 'ಮ್ಯಾಕ್ಸ್', ದುನಿಯಾ ವಿಜಯ್ 'ಭೀಮ' ಹಾಗೂ ಧ್ರುವ ಸರ್ಜಾ 'ಮಾರ್ಟಿನ್', 'KD' ಹೀಗೆ ಎಲ್ಲಾ ಸಿನಿಮಾಗಳಲ್ಲೂ ಅದೇ ಪುನರಾವರ್ತನೆ ಆಗುತ್ತಿದೆ.

More from Filmibeat

English summary
Did you notice one thing in the recent blockbuster films;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X