ಅವತ್ತು ಶೂಟಿಂಗ್‌ ವೇಳೆ ಏನಾಯ್ತು ಗೊತ್ತಾ? ಅದಕ್ಕೆ ನಾನು ಸಿಗರೇಟ್ ಸೇದುವುದು ಬಿಟ್ಟೆ- ಸುದೀಪ್

ಚಟ ಶುರುವಾದರೆ ಬಿಡೋದು ಕಷ್ಟ. ಸಿಗರೇಟ್, ಮದ್ಯ ಸೇವನೆ ರೀತಿಯ ಚಟ ಬಿಡೋಕೆ ಬಹುತೇಕರು ಸಿಕ್ಕಾಪಟ್ಟೆ ಸರ್ಕಸ್ ಮಾಡ್ತಾರೆ. ನಟ ಕಿಚ್ಚ ಸುದೀಪ್ ಒಂದ್ಕಾಲದಲ್ಲಿ ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದರು. ಬಳಿಕ ದಿಢೀರನೆ ಬಿಟ್ಟುಬಿಟ್ಟರು. ಅದು ಯಾಕೆ ಎನ್ನುವುದನ್ನು ಗಲಾಟ ತಮಿಳ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಯಾಗಿ ಸಖತ್ ಸದ್ದು ಮಾಡ್ತಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಕಿಚ್ಚನ ಆಕ್ಷನ್ ಧಮಾಕ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಶೀಘ್ರದಲ್ಲೇ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ಸಿಗರೇಟ್ ಸೇದುವ ಸನ್ನಿವೇಶಗಳಿವೆ. ಕ್ಲೈಮ್ಯಾಕ್ಸ್‌ನಲ್ಲಿ 'ಧಮ್ ಹೊಡೆಯೋದು ಕಮ್ಮಿ ಮಾಡ್ಬೇಕೊಲೆ' ಎನ್ನುವ ಡೈಲಾಗ್ ಕೂಡ ಇದೆ.

Kiccha Sudeep Reveals Why He Quit Smoking I Realised Cigarettes Were Controlling Me

ನಿಜಜೀವನದಲ್ಲಿ ಕಿಚ್ಚ ಸುದೀಪ್ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಮಾತ್ರ ಬಳಸುತ್ತಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಯಾಕೆ ಸಿಗರೇಟ್ ಸೇದುವುದು ಬಿಟ್ಟೆ ಅಂದ್ರೆ ಅದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ ಎಂದಿದ್ದಾರೆ. 2007ರಲ್ಲೇ ನಾನು ಸಿಗರೇಟ್ ಸೇದುವುದು ಕಲಿತೆ. 2013ರಲ್ಲೇ ಬಿಟ್ಟುಬಿಟ್ಟೆ ಎಂದು ಸುದೀಪ್ ಹೇಳಿದ್ದಾರೆ.

ದಿನಕ್ಕೆ ಎರಡ್ಮೂರು ಪ್ಯಾಕ್ ಸಿಗರೇಟ್ ಸೇದುತ್ತಿದ್ದೆ ಎಂದು ಸುದೀಪ್ ತಿಳಿಸಿದ್ದಾರೆ. "ಒಮ್ಮೆ ಯಾವುದೋ ಊರಿಗೆ ಚಿತ್ರೀಕರಣಕ್ಕಾಗಿ ಹೋಗಿದ್ದೆ. ಆಗ ಪೋರ್ಟರ್ ಸೌಲಭ್ಯ ಇರಲಿಲ್ಲ. ಅವತ್ತು ಸಿಗರೇಟ್ ಪ್ಯಾಕ್ ಮನೆಯಲ್ಲೇ ಬಿಟ್ಟು ಹೋಗಿದ್ದೆ. ನಮ್ಮ ಹುಡುಗರನ್ನು ಕೇಳಿದ್ದಕ್ಕೆ ನಾಲ್ಕೈದು ಕೊಟ್ರು. ಸೇದಿ ಬಿಸಾಕಿದೆ. ಬಳಿಕ ಕೇಳಿದ್ದಕ್ಕೆ ಬೇರೆ ಯಾರೋ ಮತ್ತೊಂದು ಬ್ರ್ಯಾಂಡ್ ಸಿಗರೇಟ್ ಕೊಟ್ರು. ಅದು ಮುಗಿದ ಬಳಿಕ ಅಕ್ಕ ಪಕ್ಕ ಎಲ್ಲಾದ್ರು ಸಿಗುತ್ತಾ ನೋಡಿ ಅಂದೆ. ಸುತ್ತಾಮುತ್ತಾ ಯಾವುದೇ ಅಂಗಡಿಗಳು ಇರಲಿಲ್ಲ. ಕೊನೆಗೆ ಯಾವುದೋ ಲೋ ಬ್ರ್ಯಾಂಡ್ ಫಿಲ್ಟರ್ ಇರಲಿಲ್ಲ, ಅದು ಕೊಟ್ರು. ಅದನ್ನು ಸೇದಿಬಿಟ್ಟೆ" ಎಂದು ಸುದೀಪ್ ಮೆಲುಕು ಹಾಕಿದ್ದಾರೆ.

Kiccha Sudeep Reveals Why He Quit Smoking I Realised Cigarettes Were Controlling Me

ಅವತ್ತು ಚಿತ್ರೀಕರಣ ಮುಗಿಸಿ ಮನೆಗೆ ಬಂದೆ. ಸ್ನೇಹಿತರ ಜೊತೆ ಕೂತು ಒಮ್ಮೆ ನನ್ನ ಬ್ರ್ಯಾಂಡ್ ಸಿಗರೇಟ್ ಸೇದುತ್ತಾ ಕೂತಿದ್ದೆ. ಹೀಗೆ ಯೋಚನೆ ಮಾಡುತ್ತಿದ್ದಾಗ ಒಂದು ಅನ್ನಿಸ್ತು. ಇದ್ದಕ್ಕಿದಂತೆ ಸಿಗರೇಟ್ ಬಿಟ್ಟೆ. ಕೆಲ ದಿನಗಳ ಬಳಿಕ ಸ್ನೇಹಿತರು ಕೇಳಿದಾಗ ಇಲ್ಲ ನಾನು ಸೇದಲ್ಲ ಅಂದೆ. ನೀವು ಬಿಟ್ರಾ? ನೋಡೋಣ ಬಿಡಿ ಅಂದ್ರು. ಏಯ್ ನಿಮಗೆ ಚಾಲೆಂಜ್ ಮಾಡೋಕೆ ಅಂತ ನಾನು ಸಿಗರೇಟ್ ಬಿಟ್ಟಿಲ್ಲ. ಬೇಡ ಅನ್ನಿಸ್ತು ಬಿಟ್ಟೆ ಅಂದೆ. ಕೆಲ ದಿನಗಳ ಬಳಿಕ ಯಾಕೆ ಅಂತ ಕೇಳಿದ್ರು ಆಗ ಆ ದಿನ ಚಿತ್ರೀಕರಣದ ವೇಳೆ ನಡೆದ ವಿಚಾರ ಹಂಚಿಕೊಂಡೆ ಎಂದು ಸುದೀಪ್ ಹೇಳಿದ್ದಾರೆ.

ಯಾವುದಾದರೂ ಒಂದು ಬ್ರ್ಯಾಂಡ್ ಸೇದಿದ್ರೆ, ಅದಕ್ಕೆ ಅಂಟಿಕೊಳ್ಳಬೇಕು. ಇಲ್ಲ ಅಂದಾಗ ಕೊಂಚ ಕಾಂಪ್ರಮೈಸ್ ಆಗಿ ಬೇರೆ ತೆಗೆದುಕೊಳ್ಳಬಹುದು. ಆದರೆ ಬಳಿಕ ಅದಕ್ಕಿಂತ ಕೆಳಗೆ ಹೋದೆ. ಕೊನೆಗೆ ಅದು ಇಲ್ಲದಿದ್ದರೆ ಬೀಡಿನಾ? ಇದು ಅಭ್ಯಾಸನಾ? ಚಟನಾ? ಅನ್ನಿಸ್ತು. ಇದು ಅಭ್ಯಾಸ ಅಲ್ಲ ಚಟ. ಸಿಗರೇಟ್ ನಮ್ಮನ್ನು ಕಂಟ್ರೋಲ್ ಮಾಡ್ತಿದೆ ಅನ್ನಿಸಿತು. ನನ್ನನ್ನು ಯಾರಾದರೂ ಕಂಟ್ರೋಲ್ ಮಾಡಿದ್ರೆ ಇಷ್ಟವಾಗಲ್ಲ. ಆದರೆ ಸಿಗರೇಟ್ ನನ್ನನ್ನು ಕಂಟ್ರೋಲ್ ಮಾಡ್ತಿತ್ತು. ನಾನು ಚಟಕ್ಕೆ ಬಿದ್ದಿದ್ದೆ. ಹಾಗಾಗಿ ಸಿಗರೇಟ್ ಸೇದುವುದು ಬಿಟ್ಟೆ. ಚಿತ್ರೀಕರಣದಲ್ಲಿ ಬೇಕು ಅಂದಾಗ ಮಾತ್ರ ಸೇದುತ್ತೇನೆ. ಇನ್ನುಳಿದಂತೆ ಮುಟ್ಟಲ್ಲ ಎಂದು ಸುದೀಪ್ ವಿವರಿಸಿದ್ದಾರೆ.

More from Filmibeat

Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X