ಮಲೈಕಾ ಅರೋರಾ ಫಿಟ್‌ನೆಸ್ ಮತ್ತು ಫುಡ್ ಡಯೆಟ್ ಸೀಕ್ರೆಟ್ ಬಗ್ಗೆ ತಿಳಿದುಕೊಳ್ಳಬೇಕೆ..? ಇಲ್ಲಿದೆ ಮಾಹಿತಿ
ಮಲೈಕಾ ಅರೋರಾ...ಅಬ್ಬಾ ಈ ಹೆಸರು ಕೇಳಿದರೇ ಮೊದಲು ನೆನಪಿಗೆ ಬರುವುದೇ ಅವರ ಫಿಟ್‌ನೆಟ್. ವಯಸ್ಸು 50 ದಾಟಿದರೂ, ಇಪ್ಪತ್ತರ ಯುವತಿಯರು ನಾಚುವಂತೆ ಕಾಣುತ್ತಾರೆ. ಜಿಮ್‌ನಲ್ಲಿ ದೇಹವನ್ನು ದಂಡಿಸಿ, ಆಹಾರದಲ್ಲಿ ಕಟ್ಟು ನಿಟ್ಟು ಅನುಸರಿಸುವ ಇವರ ಫಿಟ್ ಬಾಡಿ ನೋಡಿ ಕೋಟ್ಯಾಂತರ ಮಂದಿ ಫಿದಾ ಆಗಿದ್ದಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾ 'ಛೈಯಾ ಛೈಯಾ' ಹಾಡಿನಿಂದ ಸಕತ್ ಹಿಟ್ ಪಡೆದರು. ನಟಿಯಾಗಿ ಸಕ್ಸಸ್ ಕಾಣದಿದ್ದರೂ ಡ್ಯಾನ್ಸರ್ ಆಗಿ ತಮ್ಮದೆ ಛಾಪು ಮೂಡಿಸಿದ್ದಾರೆ. ಅದರಲ್ಲೂ ತಮ್ಮ ಫಿಟ್‌ನೆಸ್‌ಗಾಗಿ ಸಕತ್ ಪಾಪ್ಯೂಲರ್ ಆಗಿದ್ದಾರೆ. ದಶಕಗಳಿಂದ ಒಂದು ದಿನವೂ ಜಿಮ್‌ನ ಮಿಸ್ ಮಾಡದ ಬಾಲಿವುಡ್‌ನ ಸೆಲಬ್ರಿಟಿಗಳಲ್ಲಿ ಮಲೈಕಾ ಕೂಡ ಒಬ್ಬರು. ಅವರ ಫ್ಯಾನ್ಸ್‌ಗೂ ಆಗಾಗ್ಗೆ ಫಿಟ್‌ನೆಟ್ ಮತ್ತು ಡಯಟ್ ಟಿಪ್ಸ್ ನೀಡುತ್ತಾರೆ.

ಮಲೈಕಾ ಅರೋರಾ ಫಿಟ್‌ನೆಸ್
ಮಲೈಕಾ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್‌ನೆಟ್ ಬಗ್ಗೆ ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಫಿಟ್ ಆಗಿರುವುದರ ಅವಶ್ಯಕತೆಯನ್ನು ತಿಳಿಸುತ್ತಾರೆ. ತಮ್ಮದೇ ಯೋಗ ಸ್ಟುಡಿಯೋ ನಡೆಸುವ ಅವರು ಯೋಗ ಮಾಡುವುದನ್ನು ಇಷ್ಟಪಡುತ್ತಾರೆ. ತೀವ್ರ ಕೆಲಸದ ನಡಯವೆಯೂ ವರ್ಕ್‌ಕೌಟ್‌ಗೆ ಸಮಯ ಮೀಡಲಿಡುತ್ತಾರೆ.
ಮಲೈಕಾ ಅರೋರ ಮುಖ್ಯವಾಗಿ ಕಾರ್ಡಿಯೋ, ತೂಕ , ಯೋಗ ಮತ್ತು ಪೈಲೇಟ್ಸ್ ಸೇರಿದಂತೆ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವು ದಿನಗಳಲ್ಲಿ HIIT (High-intensity interval training) ಕೂಡ ಮಾಡುತ್ತಾರೆ. ತಮ್ಮ ದಿನವನ್ನು ಕಾರ್ಡಿಯೊದಿಂದ ಪ್ರಾರಂಭಿಸುತ್ತಾರೆ. ಪ್ರತಿದಿನ ಯೋಗ ಮಾಡುತ್ತಾರೆ. ಯೋಗ ಎಲ್ಲಾ ವಯಸ್ಸಿನ ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎನ್ನುತ್ತಾರೆ ಮಲೈಕಾ.
ಮಲೈಕಾ ಅರೋರಾ ಅವರ ಆಹಾರ ಕ್ರಮವೇನು?
ಶುಚಿಯಾದ ಆಹಾರ ಮತ್ತು ಫಿಟ್‌ನೆಸ್‌ನತ್ತ ಗಮನಹರಿಸಿದರೆ ಒಬ್ಬರು ಎಷ್ಟು ಸುಂದರವಾಗಿ ಕಾಣುತ್ತಾರೆ ಎಂಬುದಕ್ಕೆ ಮಲೈಕಾ ದೊಡ್ಡ ಉದಾಹರಣೆ. ಮಲೈಕಾ ಅರೋರ ಸಸ್ಯಾಹಾರಿ. ಎಲ್ಲಾ ಬಗೆಯ ಆಹಾರವನ್ನು ತಿನ್ನುವ ಆಕೆ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿದ್ದಾರೆ. ನಿಗದಿತ ಸಮಯದಲ್ಲಿ ಊಟ ಮಾಡುತ್ತಾರೆ. ಅವರ ದಿನದ ಕೊನೆಯ ಊಟ ಅಂದರೆ ಡಿನ್ನರ್ ಸಂಜೆ 6:30 ಕ್ಕೆ ಮುಗಿಯುತ್ತದೆ.

*ಮಲೈಕಾ ಬೆಳಗ್ಗೆ ತೆಂಗಿನ ಎಣ್ಣೆ, ಸ್ವಲ್ಪ ತುಪ್ಪ, ಜೀರಿಗೆ ನೀರು ಮತ್ತು ಒಂದು ಲೋಟ ನಿಂಬೆ ರಸವನ್ನು ಕುಡಿಯುತ್ತಾರೆ.
* ಬೆಳಗಿನ ಉಪಹಾರಕ್ಕೆ ಡ್ರೈ ಸೀಡ್ಸ್ , ಡ್ರೈ ನಟ್ಸ್ ಬಳಸುತ್ತಾರೆ. ಇದು ಆಕೆಯ ದಿನವನ್ನು ಕಿಕ್ಸ್ಟಾರ್ಟ್ ಮಾಡಲು ಹೆಚ್ಚಿನ ಶಕ್ತಿ ನೀಡುತ್ತದೆ. ದಿನವಿಡೀ, ದೇಹಕ್ಕೆ ಬೇಕಾಗುವಷ್ಟು ನೀರು ಇದೆಯೇ ಎಂದು ಪದೇ ಪದೇ ನೀಎಉ ಕುಡಿಯುತ್ತಾರೆ. ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಕೂಡ ಆರೋಗ್ಯಕರ ಕ್ರಮ
* ಮಧ್ಯಾಹ್ನದ ಊಟಕ್ಕೆ, ಕಾರ್ಬೋಹೈಡ್ರೇಟ್‌ಗಳು, ಗುಡ್ ಫ್ಯಾಟ್ ಮತ್ತು ಪ್ರೋಟೀನ್‌ಗಳ ಬ್ಯಾಲೆನ್ಸ್ ಇರುವ ಆಹಾರ ತೆಗೆದುಕೊಳ್ಳುತ್ತಾರೆ. ಅನ್ನ, ಕೆಲವು ತರಕಾರಿಗಳು ಅಥವಾ ಧಾನ್ಯಗಳಿಂದ ಮಾಡಿ ಅಡುಗೆಯನ್ನು ಇಷ್ಟಪಡಿತ್ತಾರೆ.
* ಸಂಜೆ ಸ್ನ್ಯಾಕ್ಸ್‌ಗೆ ತುಂಬಾ ಆರೋಗ್ಯಕರ ತಿಂಡಿಯನ್ನು ತಿನ್ನುತ್ತಾರೆ.
* ತಮ್ಮ ದಿನದ ಕೊನೆಯ ಮೀಲ್ ಅಂದರೆ ಡಿನ್ನರ್‌ಗೆ ಮಲೈಕಾ ಅರೋರಾ ತರಕಾರಿಗಳು, ಸಲಾಡ್ ತಿನ್ನುತ್ತಾರೆ. ಮಾಂಸಾಹಾರಿಯಾಗಿರುವ ವ್ಯಕ್ತಿ ಮಾಂಸ, ಮೊಟ್ಟೆ, ಅಥವಾ ಸ್ವಲ್ಪ ದ್ವಿದಳ ಧಾನ್ಯಗಳನ್ನು ತಿನ್ನಬಹುದು. ರಾತ್ರಿಯ ಊಟಕ್ಕೆ ನಟಿ ಮಲೈಕಾ ಒಂದು ಗುಟ್ಟು ಹೇಳುತ್ತಾರೆ. ರಾತ್ರಿ ಆದಷ್ಟು ಆರೋಗ್ಯಕರ ಊಟ ಮಾಡಲು ಪ್ರಯತ್ನಿಸಿ ಜೊತೆಗೆ ಸಂಜೆ 7 ರ ನಂತರ ಏನನ್ನೂ ತಿನ್ನಬೇಡಿ. ಅಷ್ಟರ ಒಳಗೆ ಎಲ್ಲಾ ಊಟ ಮುಗಿಸಿ ಎನ್ನುತ್ತಾರೆ.


Click it and Unblock the Notifications











