twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ನಟರನ್ನ ಬದಿಗಿಟ್ಟು ಚಿತ್ರರಂಗ ಆಳಿದ 'ಡ್ಯಾನ್ಸರ್' ಪದ್ಮಿನಿ

    |

    ''ನನಗೆ ಗೊತ್ತಿರುವ ಒಬ್ಬರೇ ಡ್ಯಾನ್ಸರ್ ಅದು ಪದ್ಮಿನಿ''....ಹೀಗಂತ ಹೇಳಿದ್ದು ತಮಿಳು ಸೂಪರ್ ಸ್ಟಾರ್ ಶಿವಾಜಿ ಗಣೇಶನ್. ಖ್ಯಾತ ನಟಿಯಾಗಿದ್ದರೂ ಆಕೆಯನ್ನ ಎಲ್ಲರೂ ಗುರುತಿಸಿದ್ದು ಮಾತ್ರ ಡ್ಯಾನ್ಸ ಮೂಲಕ. ಸ್ಟಾರ್ ನಟರನ್ನ ನೋಡಿ ಚಿತ್ರಮಂದಿರಕ್ಕೆ ಬರುತ್ತಿದ್ದ ಪ್ರೇಕ್ಷಕರನ್ನ, ಡ್ಯಾನ್ಸ್ ನಿಂದಲೇ ಮರುಳು ಮಾಡಿದ ನೃತ್ಯಗಾರ್ತಿ.

    ಡ್ಯಾನ್ಸ್ ಎಂಬ ಅತ್ಯದ್ಭುತ ಕಲೆಯಿಂದ ಇಡೀ ಚಿತ್ರರಂಗವನ್ನ ಆಳಿದ ನಟಿಯೊಬ್ಬರು ಸಿನಿಮಾ ಇಂಡಸ್ಟ್ರಿಯಲ್ಲಿದ್ದರೂ ಅಂದ್ರೆ ಅದು ಪದ್ಮಿನಿ ಮಾತ್ರ. ಡ್ಯಾನ್ಸ್ ನಿಂದಲೂ ಸಿನಿಮಾ ಗೆಲ್ಲಿಸಬಹುದು ಎಂದು ತೋರಿಸಿಕೊಟ್ಟ ಕಲಾವಿದೆ. ಶಾಸ್ತ್ರೀಯ ನೃತ್ಯ, ಭರತನಾಟ್ಯದ ಸಹಕಾರದಿಂದ ಖ್ಯಾತ ನಟಿಯರನ್ನೆಲ್ಲಾ ಹಿಂದಿಕ್ಕಿ ನಂಬರ್ 1 ನಟಿಯಾಗಿದ್ದು ಈಗ ಇತಿಹಾಸ.

    'ಹಾಲುಂಡ ತವರು' ನಟಿ ಸಿತಾರಾ ಮದುವೆಯಾಗದೆ 'ಒಬ್ಬಂಟಿಯಾಗಿ ಉಳಿದಿದ್ದೇಕೆ?'ಹಾಲುಂಡ ತವರು' ನಟಿ ಸಿತಾರಾ ಮದುವೆಯಾಗದೆ 'ಒಬ್ಬಂಟಿಯಾಗಿ ಉಳಿದಿದ್ದೇಕೆ?

    ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಎನ್.ಟಿ.ಆರ್ ಅಂತಹ ದಿಗ್ಗಜರು ಪದ್ಮಿನಿ ಕಾಲ್ ಶೀಟ್ ಪಡೆಯಲು ಕಾಯುತ್ತಿದ್ದರು. ಪದ್ಮಿನಿ ಅವರಿಗಾಗಿಯೇ ಕಥೆ ಬರೆಯುತ್ತಿದ್ದರು ಆಗಿನ ನಿರ್ದೇಶಕರು. ದಕ್ಷಿಣದಿಂದ ಉತ್ತರಕ್ಕೂ ಪದ್ಮಿನಿ ಹೆಸರು ಪಸರಿಸಿತು. ರಾಜ್ ಕಪೂರ್, ಕಿಶೋರ್ ಕುಮಾರ್, ಸುನೀಲ್ ದತ್, ಅಶೋಕ್ ಕುಮಾರ್, ಶಮಿ ಕಪೂರ್, ಧರ್ಮೇಂದ್ರ ಅಂತವರು ಪದ್ಮಿನಿಗೆ ಫಿದಾ ಆಗಿದ್ದರು.

    ನಟನೆ ಪದ್ಮಿನಿಯ ಉದ್ದೇಶವಲ್ಲ

    ನಟನೆ ಪದ್ಮಿನಿಯ ಉದ್ದೇಶವಲ್ಲ

    ನಟಿಸುವುದು ಪದ್ಮಿನಿಯ ಉದ್ದೇಶವಾಗಿರಲಿಲ್ಲ. ಆಕೆ ಅತ್ಯದ್ಭುತ ಡ್ಯಾನ್ಸರ್. ನೃತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡುವ ಕನಸು ಕಂಡಿದ್ದರು. 4ನೇ ವಯಸ್ಸಿನಲ್ಲಿ ಭರತನಾಟ್ಯ ಹಾಗೂ ಕಥಕಳಿ ತರಬೇತಿ ಪಡೆದಿದ್ದರು. 10ನೇ ವಯಸ್ಸಿನಲ್ಲಿ ಅರಂಗೇಟ್ರಂ ಕಲಿತರು. ಭಾರತದ ಖ್ಯಾತ ಡ್ಯಾನ್ಸರ್ ಗುರು ಗೋಪಿನಾಥ್ ಅವರ ಶಿಷ್ಯರಿವರು. ಪದ್ಮಿನಿ, ರಾಗಿಣಿ, ಲಲಿತಾ ಮೂವರು ಸಹೋದರಿಯರು. 'ತಿರುವಾಂಕೂರು ಸಿಸ್ಟರ್ಸ್' ಎಂದು ಖ್ಯಾತಿ ಹೊಂದಿದ್ದ ಈ ತ್ರಿವಳಿ ಸಹೋದರಿಯರು ಡ್ಯಾನ್ಸ್ ಅಂದ್ರೆ ಕೆಲಸ, ಕಾರ್ಯ ಬಿಟ್ಟು ಬರುತ್ತಿದ್ದ ಜನರಿದ್ದರು.

    ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

    ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

    50, 60, 70ರ ದಶಕದಲ್ಲಿ ಬಹುಬೇಡಿಕೆ ಹೊಂದಿದ್ದ ಪದ್ಮಿನಿ, ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದರು. ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

    ರಾಜಮಂಡ್ರಿಯ ಲಲಿತಾ ರಾಣಿ, ಜಯಪ್ರದ ಆಗಿ ಮಿಂಚಿದ ಅಪರೂಪದ ಕತೆ!ರಾಜಮಂಡ್ರಿಯ ಲಲಿತಾ ರಾಣಿ, ಜಯಪ್ರದ ಆಗಿ ಮಿಂಚಿದ ಅಪರೂಪದ ಕತೆ!

    ಅವಕಾಶ ಕೊಟ್ಟ ಉದಯ್ ಶಂಕರ್

    ಅವಕಾಶ ಕೊಟ್ಟ ಉದಯ್ ಶಂಕರ್

    ವೇದಿಕೆಯೊಂದರಲ್ಲಿ ಪದ್ಮಿನಿ ಡ್ಯಾನ್ಸ್ ನೋಡಿ ಮೆಚ್ಚಿಕೊಂಡ ಬಾಲಿವುಡ್ ನಟ ಉದಯ್ ಶಂಕರ್, ತಮ್ಮ 'ಕಲ್ಪನ' (1948) ಚಿತ್ರದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕುವಂತೆ ಅವಕಾಶ ಕೊಟ್ಟರು. ಆಗ ಅವರ ವಯಸ್ಸು 14. 'ಕಲ್ಪನ' ಸಿನಿಮಾ ಬಳಿಕ 'ಮನಮಗಳ್' ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾನೂ ಸೂಪರ್ ಹಿಟ್ ಆಯ್ತು, ಪದ್ಮಿನಿಯೂ ದೊಡ್ಡ ಸ್ಟಾರ್ ಆದರು.

    ಮರೆಯಲಾಗದ 'ತಿಲ್ಲಾನ ಮೋಹನಾಂಬಲ್'

    ಮರೆಯಲಾಗದ 'ತಿಲ್ಲಾನ ಮೋಹನಾಂಬಲ್'

    ಜೆಮಿನಿ ಗಣೇಶನ್-ಸಾವಿತ್ರಿ, ಎಂ.ಜಿ.ಆರ್-ಸರೋಜಾದೇವಿ 50 ಮತ್ತು 60ರ ದಶಕದಲ್ಲಿ ಅತ್ಯುತ್ತಮ ಜೋಡಿ ಎನಿಸಿಕೊಂಡಿದ್ದರು. ಇದೇ ಸಮಯದಲ್ಲಿ ಶಿವಾಜಿ ಗಣೇಶನ್ ಜೊತೆ ಪದ್ಮಿನಿ ದಿ ಬೆಸ್ಟ್ ಜೋಡಿ ಆಗಿ ಗುರುತಿಸಿಕೊಂಡರು. ಶಿವಾಜಿ ಗಣೇಶನ್ ಮತ್ತು ಪದ್ಮಿನಿ ಸುಮಾರು 60 ಸಿನಿಮಾ ಒಟ್ಟಿಗೆ ನಟಿಸಿದ್ದಾರೆ. ಅದರಲ್ಲೂ 'ತಿಲ್ಲಾನ ಮೋಹನಾಂಬಲ್' ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಡ್ಯಾನ್ಸರ್ ಪಾತ್ರದಲ್ಲಿ ಪದ್ಮಿನಿ ಮತ್ತು ನಾದಸ್ವರ ನುಡಿಸುವ ಕಲಾವಿದನಾಗಿ ಶಿವಾಜಿ ಗಣೇಶನ್ ಕಾಂಬಿನೇಷನ್ ದೊಡ್ಡ ಹಿಟ್ ಆಗಿತ್ತು. ಈಗಲೂ ಪದ್ಮಿನಿ ಅಂದ್ರೆ 'ಅರೇ ತಿಲ್ಲಾನ ಮೋಹನಾಂಬಲ್ ಸಿನಿಮಾ ನಟಿ ಅಲ್ವಾ! ಎಂದು ನೆನಪಿಸಿಕೊಳ್ಳುವ ಅಭಿಮಾನಿಗಳಿದ್ದಾರೆ.

    ಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯಯಾರಿಗೂ ಗೊತ್ತಿಲ್ಲದ ರಘುವೀರ್ ಜೀವನದ ಕರಾಳ ಅಧ್ಯಾಯ

    ಬಾಲಿವುಡ್ ಆಳಿದ ಪದ್ಮಿನಿ

    ಬಾಲಿವುಡ್ ಆಳಿದ ಪದ್ಮಿನಿ

    'ಕಲ್ಪನ' ಚಿತ್ರದಲ್ಲಿ ಒಂದು ಡ್ಯಾನ್ಸ್ ಮಾಡಿ ಹೋಗಿದ್ದ ಪದ್ಮಿನಿ, 'ಮಿಸ್ಟರ್ ಸಂಪತ್' ಎಂಬ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾದರು. ಹಿಂದಿಯಲ್ಲಿ ರಾಜ್‌ ಕಪೂರ್ ಜೊತೆ ಹೆಚ್ಚು ಸಿನಿಮಾ ಮಾಡಿದ ಪದ್ಮಿನಿ, ಹಿಂದಿ ಇಂಡಸ್ಟ್ರಿಯಲ್ಲೂ ಸದ್ದು ಮಾಡಿದ್ರು. 'ಜಿಸ್ ದೇಶ್ ಮೇ ಗಂಗಾ ಬೆಹ್ತಿ ಹೈ' ಮತ್ತು 'ಮೇರಾ ನಾಮ್‌ ಜೋಕರ್' ಸಿನಿಮಾಗಳು ಪದ್ಮಿನಿ ಅವರನ್ನ ಹಿಂದಿ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವಂತೆ ಮಾಡಿತು. ಪಾಯಲ್, ರಾಜ್ ತಿಲಕ್, ರಾಗಿಣಿ, ಸಿಂಗಾಪೂರ್, ಬಿಂದ್ಯಾ, ಆಶಿಕ್, ಕಾಜಲ್, ಮಹಾಭಾರತ್, ಮಸ್ತಾನ ಅಂತಹ ಸಿನಿಮಾದಲ್ಲಿ ಪದ್ಮಿನಿ ಬಣ್ಣ ಹಚ್ಚಿದ್ದರು.

    ನೆಹರೂ ಮೆಚ್ಚಿದ ಕಲೆ ಅವರದ್ದು

    ನೆಹರೂ ಮೆಚ್ಚಿದ ಕಲೆ ಅವರದ್ದು

    1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ, ಭಾರತೀಯ ಸೈನಿಕರ ಕ್ಯಾಂಪ್ ನಲ್ಲಿ ಪದ್ಮಿನಿ ಅವರ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮ ನೃತ್ಯದ ಮೂಲಕ ಯೋಧರನ್ನ ರಂಜಿಸಿದ್ದರು. ಪದ್ಮಿನಿ ಅವರ ನೃತ್ಯ ನೋಡಿ ಅಂದಿನ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಮೆಚ್ಚಿಕೊಂಡಿದ್ದರು. ಕಾಂಗ್ರೆಸ್ ಪಕ್ಷ ಕಾರ್ಯಕರ್ತೆಯಾಗಿದ್ದ ಪದ್ಮಿನಿ 1967-71ರ ಚುನಾವಣೆ ಪ್ರಚಾರದಲ್ಲೂ ಭಾಗಿಯಾಗಿದ್ದರು.

    ರಷ್ಯಾ ಸರ್ಕಾರದಿಂದ ಗೌರವ

    ರಷ್ಯಾ ಸರ್ಕಾರದಿಂದ ಗೌರವ

    1957ರಲ್ಲಿ ರಷ್ಯಾ ಚಿತ್ರದಲ್ಲಿ ನಟಿಸಿದ್ದರು. ಹಿಂದಿಯ ಪರದೇಶಿ ಸಿನಿಮಾ ರಷ್ಯಾದಲ್ಲಿ 'Journey Beyond Three Seas' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಪದ್ಮಿನಿ ನಟಿಸಲು ಆಕೆಯೆ ಆಪ್ತ ಸ್ನೇಹಿತೆ ನರ್ಗೀಸ್ ಕಾರಣವಾಗಿದ್ದರು. ವಿಶೇಷ ಅಂದ್ರೆ ರಷ್ಯಾದಲ್ಲೂ ಸ್ವತಃ ಪದ್ಮಿನಿ ವಾಯ್ಸ್ ಡಬ್ ಮಾಡಿದ್ದರು. ಮಹಾತ್ಮ ಗಾಂಧಿ, ರಾಜ್ ಕಪೂರ್ ಬಳಿಕ ರಷ್ಯಾ ಸರ್ಕಾರದಿಂದ ಸ್ಟಾಂಪ್ ಹೊಂದಿದ್ದ ನಟಿ ಪದ್ಮಿನಿ ಎಂಬುದು ಹೆಮ್ಮೆ.

    'ಶಿವಕಾಶಿಯಿಂದ ದುಬೈವರೆಗೆ': ಸುಂದರಿ ಶ್ರೀದೇವಿ ಬದುಕು ಹೇಗಿತ್ತು; ಅಂತ್ಯ ಹೀಗೇಕಾಯ್ತು?'ಶಿವಕಾಶಿಯಿಂದ ದುಬೈವರೆಗೆ': ಸುಂದರಿ ಶ್ರೀದೇವಿ ಬದುಕು ಹೇಗಿತ್ತು; ಅಂತ್ಯ ಹೀಗೇಕಾಯ್ತು?

    ಒಂದೇ ದಿನದಲ್ಲಿ ನಾಲ್ಕೈದು ಸಿನಿಮಾ ಮಾಡುತ್ತಿದ್ದರು

    ಒಂದೇ ದಿನದಲ್ಲಿ ನಾಲ್ಕೈದು ಸಿನಿಮಾ ಮಾಡುತ್ತಿದ್ದರು

    ಪದ್ಮಿನಿ ಎಷ್ಟು ಬ್ಯುಸಿ ಇದ್ದರೂ ಅಂದ್ರೆ, ಒಂದೇ ದಿನದಲ್ಲಿ ನಾಲ್ಕೈದು ಸಿನಿಮಾಗಳನ್ನ ಮಾಡುತ್ತಿದ್ದರು. ಬೆಳಿಗ್ಗೆ ಒಂದು ಸಿನಿಮಾದಲ್ಲಿ ನಟಿಸಿದರೆ, ಮಧ್ಯಾಹ್ನದ ವೇಳೆ ಇನ್ನೊಂದು ಚಿತ್ರ, ಸಂಜೆಯಾಗುತ್ತಿದ್ದಂತೆ ಮತ್ತೊಂದು ಸಿನಿಮಾ, ರಾತ್ರಿ ಮಗದೊಂದು ಸಿನಿಮಾದಲ್ಲಿ ಅಭಿನಯಿಸುವಷ್ಟು ಬ್ಯುಸಿ ಇದ್ದರು. ಸಿನಿಮಾದಲ್ಲಿ ನಟಿಸುವಾಗಲೇ ಅನೇಕ ಡ್ಯಾನ್ಸ್ ಶೋಗಳನ್ನ ಕೊಟ್ಟಿದ್ದಾರೆ.

    ವೈಜಯಂತಿಮಾಲ ಮತ್ತು ಪದ್ಮಿನಿ

    ವೈಜಯಂತಿಮಾಲ ಮತ್ತು ಪದ್ಮಿನಿ

    ಪದ್ಮಿನಿ ಮತ್ತು ವೈಜಯಂತಿಮಾಲ ಬಹುತೇಕ ಒಂದೇ ಸಮಕಾಲಿನವರು. ಪದ್ಮಿನಿಯಂತೆ ವೈಜಯಂತಿಮಾಲ ಕೂಡ ಅದ್ಭುತ ಡ್ಯಾನ್ಸರ್. 'ವಂಜಿಕೊಟ್ಟೈ ವಾಲಿಬಾನ್' ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದು, ಒಂದು ಹಾಡಿನಲ್ಲಿ ಇಬ್ಬರು ಪೈಪೋಟಿಗೆ ಬಿದ್ದು ಡ್ಯಾನ್ಸ್ ಮಾಡಿದ್ದಾರೆ. ನೀನಾ.....ನಾನಾ ಎಂದು ಕುಣಿದಿದ್ದಾರೆ. ಈ ಜುಗಲ್ ಬಂದಿ ನೋಡುವುದಕ್ಕೆ ಮಜಾ.

    ಪದ್ಮಿನಿ ಖಾಸಗಿ ಜೀವನ

    ಪದ್ಮಿನಿ ಖಾಸಗಿ ಜೀವನ

    1932 ಜೂನ್ 12 ರಂದು ಕೇರಳದ ತಿರುವನಂತಪುರಂನಲ್ಲಿ ಜನಿಸಿದ್ದರು. 1961ರಲ್ಲಿ ರಾಮಚಂದ್ರನ್ ಅವರನ್ನು ಮದುವೆಯಾದರು. ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ ಪದ್ಮಿನಿ, ಅಮೇರಿಕಾದಲ್ಲಿ ಪದ್ಮಿನಿ ಸ್ಕೂಲ್ ಆಫ್ ಫೈನ್ ಆರ್ಟ್ ಎಂಬ ನೃತ್ಯ ಶಾಲೆ ಸ್ಥಾಪಿಸಿಕೊಂಡರು. ಈಗ ಅಮೇರಿಕಾದಲ್ಲಿ ಬಹುದೊಡ್ಡ ಶಾಸ್ತ್ರೀಯ ಸಂಗೀತ ಶಾಲೆ ಎಂದು ಪ್ರಖ್ಯಾತಿ ಹೊಂದಿದೆ. 74ನೇ ವಯಸ್ಸಿನಲ್ಲಿ 2006ರಲ್ಲಿ ಹೃದಯಾಘಾತದಿಂದ ನಿಧನರಾದರು.

    English summary
    Indian famous Actress Padmini is trained Bharatanatyam dancer. who acted in over 250 Indian films. She acted in Tamil, Hindi, Malayalam Telugu and Russian language films.
    Saturday, January 4, 2020, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X