twitter
    For Quick Alerts
    ALLOW NOTIFICATIONS  
    For Daily Alerts

    ಜೂ ಎನ್‌ಟಿಆರ್ ಹುಟ್ಟುಹಬ್ಬ: ಅಪ್ಪು 'ಗೆಳೆಯ'ನ ಬಗ್ಗೆ ನಿಮಗೆ ತಿಳಿಯದ ಸಂಗತಿಗಳಿವು

    |

    'RRR' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂ ಎನ್‌ಟಿಆರ್‌ಗೆ ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತೆಲುಗು ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿ ಕನ್ನಡಿಗರ ಮನ ಗೆದ್ದಿದ್ದ ಜೂ ಎನ್‌ಟಿಆರ್, ಪುನೀತ್ ರಾಜ್‌ಕುಮಾರ್ ಜೊತೆಗೆ 'ಗೆಳೆಯ ಗೆಳೆಯ' ಎಂದು ಹಾಡು ಹಾಡಿದ ಬಳಿಕವಂತೂ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಜೂ ಎನ್‌ಟಿಆರ್.

    ಜೂ ಎನ್‌ಟಿಆರ್ ಹುಟ್ಟುಹಬ್ಬ ಇಂದು. ತೆಲುಗು ರಾಜ್ಯಗಳಲ್ಲಿ ಜೂ ಎನ್‌ಟಿಆರ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

    ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶಗಳಲ್ಲಿಯೂ ಭಾರಿ ಸಂಖ್ಯೆಯ ಅಭಿಮಾನಿಗಳು ಜೂ ಎನ್‌ಟಿಆರ್‌ಗೆ ಇದ್ದಾರೆ. ನೃತ್ಯ, ಫೈಟ್ಸ್‌ ಮಾತ್ರವೇ ಅಲ್ಲದೆ ಅದ್ಭುತವಾದ ಅಭಿನಯವನ್ನೂ ಮಾಡಬಲ್ಲ ಜೂ ಎನ್‌ಟಿಆರ್ ಪಕ್ಕಾ ಪ್ಯಾಕೇಜ್ ನಟ. ಜೂ ಎನ್‌ಟಿಆರ್‌ ಕುರಿತು ಹಲವರಿಗೆ ಗೊತ್ತಿಲ್ಲದ ಕೆಲವು ವಿಷಯಗಳು ಇಲ್ಲಿವೆ ನೋಡಿ.

    ಜೂ ಎನ್‌ಟಿಆರ್ ಹೆಸರು ಮತ್ತು ಮೊದಲ ಸಿನಿಮಾ

    ಜೂ ಎನ್‌ಟಿಆರ್ ಹೆಸರು ಮತ್ತು ಮೊದಲ ಸಿನಿಮಾ

    ಜೂ ಎನ್‌ಟಿಆರ್‌ ಮೊದಲ ಹೆಸರು ತಾರಕ್. ತಾತ ನಂದಮೂರಿ ತಾರಕರಾಮಾರಾವ್ ಹೆಸರಿನಿಂದ ಸ್ಪೂರ್ತಿ ಪಡೆದು ಇಟ್ಟ ಹೆಸರು ಅದು. ಜೂ ಎನ್‌ಟಿಆರ್ ಮೊದಲ ಸಿನಿಮಾ ಅವರ ತಾತ ನಟಿಸಿದ 'ಬ್ರಹ್ಮಷ್ರೀ ವಿಶ್ವಾಮಿತ್ರ'. ಆ ನಂತರ ಬಾಲನಟನಾಗಿ ರಾಮಾಯಣಂ ಸಿನಿಮಾದಲ್ಲಿಯೂ ನಟಿಸಿದರು. ನಾಯಕ ನಟನಾಗಿ ಮೊದಲು ನಟಿಸಿದ ಸಿನಿಮಾ 'ನಿನ್ನೇ ಚೂಡಾಲನಿ', ಮೊದಲ ಬ್ಲಾಕ್ ಬಸ್ಟರ್ ಸಿನಿಮಾ 2002 ರಲ್ಲಿ ಬಿಡುಗಡೆ ಆದ 'ಆದಿ'.

    ಶಾಸ್ತ್ರೀಕ ಖಥಕ್ ನೃತ್ಯಗಾರ ಜೂ ಎನ್‌ಟಿಆರ್

    ಶಾಸ್ತ್ರೀಕ ಖಥಕ್ ನೃತ್ಯಗಾರ ಜೂ ಎನ್‌ಟಿಆರ್

    ಜೂ ಎನ್‌ಟಿಆರ್ ಅತ್ಯುತ್ತಮ ಖಥಕ್ ನೃತ್ಯಗಾರ. ತೆಲುಗು ಸಿನಿಮಾ ರಂಗದ ಜನಪ್ರಿಯ ನೃಗಾರರಿಂದ ನೃತ್ಯವನ್ನು ಜೂ ಎನ್‌ಟಿಆರ್ ಕಲಿತಿದ್ದಾರೆ. ಅದರಲ್ಲಿ ನೃತ್ಯ ಶಿಕ್ಷಷ ಸುಧಾಕರ್ ಸಹ ಒಬ್ಬರು. ಜೂ ಎನ್‌ಟಿಆರ್ ಸಿನಿಮಾಗಳಲ್ಲಿ ಅದ್ಭುತವಾಗಿ ನೃತ್ಯ ಮಾಡುತ್ತಾರೆ. ಅವರ ಎಲ್ಲ ಸಿನಿಮಾಗಳಲ್ಲಿಯೂ ಆಕ್ಷನ್‌ ದೃಶ್ಯಗಳಿಗೆ ಇರುವಷ್ಟೆ ಆದ್ಯತೆ ನೃತ್ಯಕ್ಕೂ ಇರುತ್ತದೆ.

    ಫೋರ್ಬ್ಸ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡ ನಟ

    ಫೋರ್ಬ್ಸ್‌ನಲ್ಲಿ ಎರಡು ಬಾರಿ ಕಾಣಿಸಿಕೊಂಡ ನಟ

    ಫೋರ್ಬ್ಸ್‌ ಪಟ್ಟಿಯಲ್ಲಿ ಹೆಸರು ಬಂದ ದಕ್ಷಿಣ ಭಾರತದ ಕೆಲವೇ ನಟರಲ್ಲಿ ಜೂ ಎನ್‌ಟಿಆರ್ ಸಹ ಒಬ್ಬರು. ಜೂ ಎನ್‌ಟಿಆರ್ ಅವರು ಎರಡು ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡರು. 2012 ಹಾಗೂ 2016 ರಲ್ಲಿ ಪೋರ್ಬ್ಸ್ ಪಟ್ಟಿಯಲ್ಲಿ ಜೂ ಎನ್‌ಟಿಆರ್ ಕಾಣಿಸಿಕೊಂಡರು. ದಕ್ಷಿಣ ಭಾರತದ ಕೆಲವು ನಟರಷ್ಟೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಜೂ ಎನ್‌ಟಿಆರ್‌ ಆತ್ಮೀಯ ಗೆಳೆಯರು

    ಜೂ ಎನ್‌ಟಿಆರ್‌ ಆತ್ಮೀಯ ಗೆಳೆಯರು

    ಜೂ ಎನ್‌ಟಿಆರ್‌ಗೆ ಮೂವರು ಭಾರಿ ಆತ್ಮೀಯ ಗೆಳೆಯರಿದ್ದಾರೆ. ರಾಜಕಾರಣಿ ಕೊಡಲಿ ನಾನಿ ಜೂ ಎನ್‌ಟಿಆರ್‌ ಅವರ ಅತ್ಯಾಪ್ತ ಸ್ನೇಹಿತ ಬಳಿಕ ಜೂ ಎನ್‌ಟಿಆರ್‌ರ ಬಾಲ್ಯ ಸ್ನೇಹಿತ ಸ್ನೇಹಲ್ ಈಗ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅದರ ಬಳಿಕ ರಾಜೀವ್ ಕನಕಾಲ ಹಾಗೂ ನಟ ರಾಮ್ ಚರಣ್ ತೇಜ ಸಹ ಜೂ ಎನ್‌ಟಿಆರ್‌ಗೆ ಅತ್ಯಾಪ್ತ ಗೆಳೆಯ. ರಾಮ್ ಚರಣ್ ಹುಟ್ಟುಹಬ್ಬದಂದು ರಾತ್ರಿ 12 ಗಂಟೆಗೆ ತಪ್ಪದೆ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ಒಟ್ಟಿಗೆ ಸೇರುತ್ತಾರಂತೆ.

    ಲಕ್ಷಾಂತರ ಜನ ಅಭಿಮಾನಿಗಳು ಸೇರಿದ್ದರು

    ಲಕ್ಷಾಂತರ ಜನ ಅಭಿಮಾನಿಗಳು ಸೇರಿದ್ದರು

    ಜೂ ಎನ್‌ಟಿಆರ್‌ಗೆ ಭಾರಿ ಸಂಖ್ಯೆಯ ಅಭಿಮಾನಿ ವರ್ಗವಿದೆ. 2004ರಲ್ಲಿ ಬಿಡುಗಡೆ ಆಗಿದ್ದ 'ಆಂಧ್ರಾವಾಲ' ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಅಭಿಮಾನಿಗಳು ಸೇರಿದ್ದರು. ಸರ್ಕಾರದವರು ಈ ಕಾರ್ಯಕ್ರಮಕ್ಕೆಂದೇ 10 ಹೆಚ್ಚುವರಿ ರೈಲುಗಳನ್ನು ಓಡಿಸಿದ್ದರು. ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದರೂ ಯಾರಿಗೂ ಏನೂ ತೊಂದರೆ ಆಗಲಿಲ್ಲ. ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಆಡಿಯೋ ಫಂಕ್ಷನ್ ಒಂದಕ್ಕೆ ಅಷ್ಟು ಸಂಖ್ಯೆಯ ಜನ ಸೇರಿದ್ದು ಅದೇ ಮೊದಲು ಎನ್ನಲಾಗುತ್ತದೆ.

    ಜೂ ಎನ್‌ಟಿಆರ್ ಅದೃಷ್ಟ ಸಂಖ್ಯೆ 9

    ಜೂ ಎನ್‌ಟಿಆರ್ ಅದೃಷ್ಟ ಸಂಖ್ಯೆ 9

    ಜೂ ಎನ್‌ಟಿಆರ್‌ ಅದೃಷ್ಟ ಸಂಖ್ಯೆ 9. ಜೂ ಎನ್‌ಟಿಆರ್ ಖರೀದಿಸಿರುವ ಎಲ್ಲ ವಾಹನಗಳ ನೊಂದಣಿ ಸಂಖ್ಯೆ 9 ಎಂದೇ ಇದೆ. ಟ್ವಿಟ್ಟರ್‌ನಲ್ಲಿ ಅವರ ಐಡಿ ಸಹ 9 ಸಂಖ್ಯೆಯಿಂದ ಅಂತ್ಯವಾಗುತ್ತದೆ. ನ್ಯೂಮರಾಲಜಿ ನಂಬುವ ಜೂ ಎನ್‌ಟಿಆರ್ ದೇವರ ಬಗ್ಗೆಯೂ ಗೌರವ, ಆದರಗಳನ್ನು ಹೊಂದಿದ್ದಾರೆ. ಆಗಾಗ್ಗೆ ಕುಟುಂಬ ಸಮೇತರಾಗಿ ದೇವರ ದರ್ಶನ ಮಾಡುತ್ತಿರುತ್ತಾರೆ.

    ರಾಜಮೌಳಿ ಜೊತೆ ನಾಲ್ಕು ಸಿನಿಮಾ

    ರಾಜಮೌಳಿ ಜೊತೆ ನಾಲ್ಕು ಸಿನಿಮಾ

    ರಾಜಮೌಳಿ ನಿರ್ದೇಶನದಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಾಯಕ ನಟ ಜೂ ಎನ್‌ಟಿಆರ್. ರಾಜಮೌಳಿಯ ಮೊದಲ ಸಿನಿಮಾ 'ಸ್ಟೂಡೆಂಟ್ ನಂ 1' ನಲ್ಲಿ ಜೂ ಎನ್‌ಟಿಆರ್ ನಾಯಕ. ಆ ಬಳಿಕ 'ಸಿಂಹಾದ್ರಿ' ಸೂಪರ್ ಹಿಟ್ ಆಯಿತು. ಬಳಿಕ ದಪ್ಪಗಿದ್ದ ಜೂ ಎನ್‌ಟಿಆರ್ ತೂಕ ತಗ್ಗಿಸಿಕೊಂಡಿದ್ದು ರಾಜಮೌಳಿ ನಿರ್ದೇಶನದ 'ಯಮದೊಂಗ' ಸಿನಿಮಾಕ್ಕಾಗಿ. ಆ ಬಳಿಕ ಇದೀಗ 'RRR' ಸಿನಿಮಾದಲ್ಲಿಯೂ ಜೂ ಎನ್‌ಟಿಆರ್ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ.

    ಒಳ್ಳೆಯ ಗಾಯಕ ಸಹ ಹೌದು

    ಒಳ್ಳೆಯ ಗಾಯಕ ಸಹ ಹೌದು

    ಅದ್ಭುತ ಡ್ಯಾನ್ಸರ್ ಆಗಿರುವ ಜೂ ಎನ್‌ಟಿಆರ್ ಒಳ್ಳೆಯ ಗಾಯಕ ಸಹ ಹೌದು. ತೆಲುಗಿನಲ್ಲಿ ಈಗಾಗಲೇ ಕೆಲವಾರು ಹಾಡುಗಳನ್ನು ಹಾಡಿರುವ ಜೂ ಎನ್‌ಟಿಆರ್. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಗಾಗಿ 'ಗೆಳೆಯ-ಗೆಳೆಯ' ಹಾಡು ಹಾಡಿದ್ದಾರೆ. ಪುನೀತ್ ನಿಧನದ ಬಳಿಕ ಬೆಂಗಳೂರಿಗೆ ಬಂದಿದ್ದಾಗಲೂ ಜೂ ಎನ್‌ಟಿಆರ್ 'ಗೆಳೆಯ-ಗೆಳೆಯ' ಹಾಡು ಹಾಡಿದ್ದರು.

    English summary
    Here is some lesser known facts about Telugu actor Jr NTR. Today is Jr NTR's birthday. Fans celebrating his birthday in never before style.
    Friday, May 20, 2022, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X