For Quick Alerts
  ALLOW NOTIFICATIONS  
  For Daily Alerts

  ನಟಿಯರು ಹೀಗ್ಯಾಕೆ? ವಿವಾಹಿತ ಪುರುಷರೊಂದಿಗೆ ಪ್ರೀತಿಯಲ್ಲಿ ಬಿದ್ದವರು

  |

  ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಗಡಿಯಿಲ್ಲ ಎಂಬ ಮಾತಿದೆ. ಈ ಮಾತು ಸೆಲೆಬ್ರಿಟಿಗಳ ವಿಚಾರದಲ್ಲಿಯೂ ಸತ್ಯ ಎನ್ನಬಹುದು. ಸೆಲೆಬ್ರಿಟಿಗಳ ಜೀವನ ಪ್ರೀತಿ, ಪ್ರೇಮ, ಪ್ರಣಯ, ಬ್ರೇಕ್ ಅಪ್, ವಿವಾದ ಹೀಗೆ ಎಲ್ಲವೂ ಒಳಗೊಂಡಿರುತ್ತದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲ ಸ್ಟಾರ್ಸ್ ಜೀವನ ಒಂದೇ ರೀತಿ ಇರಲ್ಲ. ಆದರೆ, ಕೆಲವರ ಲೈಫ್ ಇಂತಹ ಸುಳಿಯಲ್ಲಿ ಸಿಲುಕಿಕೊಂಡಿರುತ್ತದೆ. ಅದರಲ್ಲೂ ಬಾಲಿವುಡ್ ವಿಚಾರಕ್ಕೆ ಬಂದ್ರೆ ಲವ್ವು-ಬ್ರೇಕ್ ಅಪ್ ಹಾಗೂ ವಿವಾಹಿತ ಪುರುಷ ಹಾಗೂ ವಿವಾಹಿತೆಯೊಂದಿಗಿನ ಸಂಬಂಧಗಳು ಸಾಮಾನ್ಯವೆಂಬಂತೆ ಕಾಣಸಿಗುತ್ತದೆ.

  ವಜ್ರದ ಉಂಗುರ ಕೊಟ್ಟು ಪ್ರಪೋಸ್ ಮಾಡಿದ್ದ ಕುಂದ್ರಾ: ಶಿಲ್ಪಾ ನಿರಾಸೆಯಾಗಿದ್ರು!ವಜ್ರದ ಉಂಗುರ ಕೊಟ್ಟು ಪ್ರಪೋಸ್ ಮಾಡಿದ್ದ ಕುಂದ್ರಾ: ಶಿಲ್ಪಾ ನಿರಾಸೆಯಾಗಿದ್ರು!

  ಮದುವೆ ಆಗಿರುವ ಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವುದು, ಆಮೇಲೆ ಆ ವ್ಯಕ್ತಿ ತನ್ನ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು ಪ್ರೇಯಸಿಯನ್ನು ಮದುವೆಯಾಗುವುದು. ಇಂತಹ ಘಟನೆಗಳು ಬಿಗ್ ಇಂಡಸ್ಟ್ರಿಯಲ್ಲಿ ಹೆಚ್ಚು ವರದಿಯಾಗಿದೆ. ಈಗ ಅದಕ್ಕೆ ತಾಜಾ ಉದಾಹರಣೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ. ಹೌದು, ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್ ಕುಂದ್ರಾಗೆ ಎರಡನೇ ಪತ್ನಿ. ಹಾಗಾದ್ರೆ, ಶಿಲ್ಪಾ ಶೆಟ್ಟಿ ಸೇರಿದಂತೆ ಯಾವೆಲ್ಲಾ ನಟಿಯರು ವಿವಾಹಿತ ಪುರುಷರೊಂದಿಗೆ ಮದುವೆ ಆದರು? ಮುಂದೆ ಓದಿ....

  ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ

  ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ

  ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾ. ಆಕೆಗೆ ಡಿವೋರ್ಸ್ ಕೊಟ್ಟ ನಂತರ ಶಿಲ್ಪಾ ಶೆಟ್ಟಿ ಜೊತೆ ಕುಂದ್ರಾ ವಿವಾಹವಾಗಿದ್ದರು. ಶಿಲ್ಪಾ ಶೆಟ್ಟಿ ಮದುವೆಗೂ ಮುಂಚೆ ರಾಜ್ ಕುಂದ್ರಾಗೆ ವಿವಾಹವಾಗಿರುವ ವಿಷಯ ತಿಳಿದಿತ್ತು. ಆದರೂ ಕುಂದ್ರಾ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಈ ಕಡೆ ಶಿಲ್ಪಾ ಶೆಟ್ಟಿ ಜೊತೆ ರಾಜ್ ಕುಂದ್ರಾ ಸುತ್ತಾಡುತ್ತಿದ್ದ ವಿಚಾರ ತಿಳಿದ ಕವಿತಾ ಬಹಿರಂಗವಾಗಿ ನಟಿ ವಿರುದ್ಧ ದೂರಿದ್ದರು. ನನ್ನ ಸಂಸಾರ ಹಾಳಾಗಲು ಶಿಲ್ಪಾ ಶೆಟ್ಟಿ ಕಾರಣ ಎಂದು ಆರೋಪಿಸಿದರು. ಅದ್ಯಾಗೋ, ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಶಿಲ್ಪಾ ಶೆಟ್ಟಿ ಜೊತೆ ಹೊಸ ಜೀವನ ಆರಂಭಿಸಿದ್ದರು ರಾಜ್ ಕುಂದ್ರಾ.

  ಆದಿತ್ಯ ಪಾಂಚೋಲಿ ಜೊತೆ ಕಂಗನಾ ಲವ್?

  ಆದಿತ್ಯ ಪಾಂಚೋಲಿ ಜೊತೆ ಕಂಗನಾ ಲವ್?

  ಬಾಲಿವುಡ್ ನಟಿ ಕಂಗನಾ ರಣಾವತ್, ನಟ ಆದಿತ್ಯ ಪಾಂಚೋಲಿ ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ಆದಿತ್ಯ ಪಾಂಚೋಲಿಗೆ ಅದಾಗಲೇ ಮದುವೆ ಆಗಿತ್ತು. ಜರೀನಾ ವಾಹಬ್ ಜೊತೆ ಮದುವೆ ಆಗಿದ್ದರೂ, ಕಂಗನಾ ಜೊತೆ ಸಂಬಂಧದಲ್ಲಿದ್ದರು. 2019ರಲ್ಲಿ ನಟಿ ಕಂಗನಾ ರಣಾವತ್, ಆದಿತ್ಯ ಪಾಂಚೋಲಿ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಮಾಡಿ ದೂರು ದಾಖಲಿಸಿದರು. ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದರು ಎಂದು ಸಹ ದೂರಿನಲ್ಲಿ ತಿಳಿಸಿದ್ದರು.

  ಶ್ರೀದೇವಿ ಮತ್ತು ಬೋನಿ ಕಪೂರ್

  ಶ್ರೀದೇವಿ ಮತ್ತು ಬೋನಿ ಕಪೂರ್

  ಬಾಲಿವುಡ್ ಎವರ್‌ಗ್ರೀನ್ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಕುರಿತು ಎಲ್ಲರಿಗೂ ತಿಳಿದಿರುವ ಸಂಗತಿ. ಬೋನಿ ಕಪೂರ್ ಮತ್ತು ಶ್ರೀದೇವಿ ಪ್ರೀತಿಸುತ್ತಿದ್ದ ಸಮಯದಲ್ಲಿ ಅದಾಗಲೇ ಬೋನಿ ಕಪೂರ್‌ಗೆ ಮೋನಾ ಜೊತೆ ವಿವಾಹವಾಗಿತ್ತು. ನಂತರ ತನ್ನ ಪತ್ನಿಗೆ ಡಿವೋರ್ಸ್ ನೀಡಿದ ಬೋನಿ ಕಪೂರ್, ಶ್ರೀದೇವಿಯನ್ನು ಮದುವೆಯಾದರು. ಅದಕ್ಕೂ ಮುಂಚೆ ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ಗುಟ್ಟಾಗಿ ವಿವಾಹವಾಗಿದ್ದರು ಎಂಬ ಸುದ್ದಿಗಳು ಚರ್ಚೆಯಲ್ಲಿದ್ದವು.

  ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ

  ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ

  ನಿರ್ಮಾಪಕ ಆದಿತ್ಯ ಚೋಪ್ರಾ ಮತ್ತು ರಾಣಿ ಮುಖರ್ಜಿ 2014ರಲ್ಲಿ ಮದುವೆಯಾದರು. ಅದಕ್ಕೂ ಮುಂಚೆ ಆದಿತ್ಯ ಚೋಪ್ರಾಗೆ ವಿವಾಹವಾಗಿತ್ತು. ಪಾಯಲ್ ಖನ್ನಾ ಮತ್ತು ಆದಿತ್ಯ ಚೋಪ್ರಾ ದಾಂಪತ್ಯ ಮುರಿದು ಬೀಳಲು ರಾಣಿ ಮುಖರ್ಜಿ ಕಾರಣ ಎಂದು ಹೇಳಲಾಯಿತು. ನಂತರ ಮೊದಲ ಪತ್ನಿಯೊಂದ ಡಿವೋರ್ಸ್ ಪಡೆದುಕೊಂಡ ಆದಿತ್ಯ ಚೋಪ್ರಾ, ರಾಣಿ ಮುಖರ್ಜಿ ಅವರನ್ನೇ ವಿವಾಹವಾದರು.

  ಧರ್ಮೇಂದ್ರ ಮತ್ತು ಹೇಮಾ ಮಾಲಿನಿ

  ಧರ್ಮೇಂದ್ರ ಮತ್ತು ಹೇಮಾ ಮಾಲಿನಿ

  ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಸಂಬಂಧವೂ ಇದೇ ಹಾದಿಯಲ್ಲಿದೆ. ಹೇಮಾ ಮಾಲಿನಿ ಜೊತೆ ಪ್ರೀತಿಯಲ್ಲಿದ್ದ ಧರ್ಮೇಂದ್ರಗೆ ಅದಾಗಲೇ ಮದುವೆ ಆಗಿತ್ತು. ಬಳಿಕ, ತನ್ನ ಪತ್ನಿ ಡಿವೋರ್ಸ್ ಕೊಡಲು ನಿರಾಕರಿಸಿದ ಕಾರಣ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಧರ್ಮೇಂದ್ರ ಆಮೇಲೆ ಹೇಮಾ ಮಾಲಿನಿ ಅವರನ್ನು ವಿವಾಹವಾಗಿದರು.

  English summary
  From Kangana Ranaut to Shilpa Shetty: List of Bollywood actresses who fell in love with married men.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X