ಸಾಹಸಸಿಂಹ ವಿಷ್ಣುವರ್ಧನ್‌ಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಿತ್ರಗಳ ಪಟ್ಟಿ

List of films which brought Karnataka state award for Vishnuvardhan

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದೂ ಮರೆಯಲಾಗದಂತಹ ಹಲವು ನಟರುಗಳ ಪೈಕಿ ವಿಷ್ಣುವರ್ಧನ್ ಅವರೂ ಸಹ ಓರ್ವರು. 1972ರಲ್ಲಿ ತೆರೆಕಂಡ ವಂಶವೃಕ್ಷ ಎಂಬ ಸಿನಿಮಾದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ವಿಷ್ಣುವರ್ಧನ್ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದರು. ಬಳಿಕ ಅದೇ ವರ್ಷ ತೆರೆಕಂಡ ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ್ ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚಿದರು. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ಈ ಚಿತ್ರ ಅಂದಿಗೂ, ಇಂದಿಗೂ, ಮುಂದೆಂದಿಗೂ ಸಹ ಸೆನ್ಸೇಷನ್.

ಈ ಚಿತ್ರದಲ್ಲಿ ರಾಮಾಚಾರಿ ಪಾತ್ರದಲ್ಲಿ ಮಿಂಚಿದ ವಿಷ್ಣುವರ್ಧನ್ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿ 'ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್' ಅನ್ನು ಪಡೆದುಕೊಂಡರು. ಹೀಗೆ ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲೇ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡ ವಿಷ್ಣುವರ್ಧನ್ ಬಳಿಕ ಹಲವಾರು ಪ್ರಶಸ್ತಿಗಳಿಗೆ ಭಾಜನರಾದರು ಹಾಗೂ ಅನೇಕ ಬಿರುದುಗಳನ್ನು ಪಡೆದುಕೊಂಡರು.

ನಾಗರಹಾವು ಸೇರಿದಂತೆ ವಿಷ್ಣುವರ್ಧನ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ತಂದುಕೊಟ್ಟ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

1972 - ನಾಗರಹಾವು - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
1977 - ಹೊಂಬಿಸಿಲು - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
1984 - ಬಂಧನ - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
1990 - ಲಯನ್ ಜಗಪತಿರಾವ್ - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
1997 - ಲಾಲಿ - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
1998 - ವೀರಪ್ಪ ನಾಯಕ - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ
2009 - ಆಪ್ತರಕ್ಷಕ - ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ

More from Filmibeat

English summary
List of films which brought Karnataka state award for Vishnuvardhan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X