twitter
    For Quick Alerts
    ALLOW NOTIFICATIONS  
    For Daily Alerts

    ಕಳೆದ 5 ತಿಂಗಳಲ್ಲಿ 'ಕೆಜಿಎಫ್ 2' ಬಿಟ್ಟು ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ ಕನ್ನಡ ಸಿನಿಮಾಗಳ್ಯಾವುವು ಗೊತ್ತಾ?

    |

    ಕನ್ನಡ ಚಿತ್ರರಂಗ ಇತ್ತೀಚಿಗೆ ರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೆ ಕನ್ನಡದ ಸಿನಿಮಾಗಳಿಗೆ ರಾಷ್ಟ್ರೀಯ ಮಟ್ಟದಲ್ಲೂ ಮಾರುಕಟ್ಟೆಗಳು ಓಪನ್ ಆಗಿದ್ದು, ಇದರಿಂದ ಹಲವು ನಟ ನಟಿಯರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ.

    ಇದಷ್ಟೇ ಅಲ್ಲದೆ ಕನ್ನಡದ ಸಿನಿಮಾ 'ಕೆಜಿಎಫ್‌ 2' ಚಿತ್ರ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗುತ್ತಿದೆ. ಇದರ ಪರಿಣಾಮ ಕನ್ನಡ, ಕನ್ನಡ ಚಿತ್ರರಂಗವನ್ನು ಕಡೆಗಣಿಸುತ್ತಿದ್ದವರಿಗೆ ಇದು ತಕ್ಕ ನಿದರ್ಶನವಾಗಿದೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಎಲ್ಲಾ ಸ್ಟಾರ್ ಸಿನಿಮಾಗಳು ಬಾಕ್ಸಾಫೀಸ್‌ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.

     'ಜೇಮ್ಸ್' 7ನೇ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ವಿಶ್ವದಾದ್ಯಂತ ಗಳಿಸಿದ್ದೆಷ್ಟು? 'ಜೇಮ್ಸ್' 7ನೇ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ವಿಶ್ವದಾದ್ಯಂತ ಗಳಿಸಿದ್ದೆಷ್ಟು?

    2022ರ ಆರಂಭದಲ್ಲೇ ಕನ್ನಡದ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಜನವರಿಯಿಂದ ಏಪ್ರಿಲ್‌ವರೆಗೂ ರಿಲೀಸ್‌ ಆದ ಸ್ಟಾರ್‌ ಸಿನಿಮಾಗಳು ಎಷ್ಟೆಷ್ಟು ಕಲೆಕ್ಷನ್ ಮಾಡಿಕೊಂಡಿದೆ ಎಂಬುದರ ಸಂಪೂರ್ಣ ವರದಿ ಇಲ್ಲಿದೆ.

     ಥಿಯೇಟರ್‌ನಲ್ಲಿ 'ಲವ್ ಮಾಕ್ಟೆಲ್ 2' ಸೌಂಡ್

    ಥಿಯೇಟರ್‌ನಲ್ಲಿ 'ಲವ್ ಮಾಕ್ಟೆಲ್ 2' ಸೌಂಡ್

    ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ಲವ್ ಸ್ಟೋರಿ ಸಿನಿಮಾ 'ಲವ್ ಮಾಕ್ಟೆಲ್ 2' ಫೆಬ್ರವರಿ 11 ರಂದು ರಿಲೀಸ್‌ ವಿಶ್ವಾದಾದ್ಯಂತ ರಿಲೀಸ್ ಆಗಿತ್ತು. ಈ ಹಿಂದೆ ಕೊರೊನಾ ಲಾಕ್‌ ಡೌನ್‌ ಸಮಯದಲ್ಲಿ ತೆರೆ ಕಂಡಿದ್ದ 'ಲವ್ ಮಾಕ್ಟೆಲ್‌ ' ಸಿನಿಮಾದ ಮುಂದುವರೆದ ಭಾಗವನ್ನೇ ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಲಾಕ್‌ಡೌನ್‌ ಸಮಯದಲ್ಲಿ 'ಲವ್ ಮಾಕ್ಟೆಲ್‌' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಂತೆ ಎರಡನೇ ಭಾಗದ ಮೇಲೂ ಜನರ ನಿರೀಕ್ಷೆ ಹೆಚ್ಚಾಗಿತ್ತು. ಆ ನಿರೀಕ್ಷೆಯನ್ನಿಟ್ಟುಕೊಂಡು ರಿಲೀಸ್ ಆದ 'ಲವ್‌ ಮಾಕ್ಟೇಲ್ 2' ಬ್ಲಾಕ್‌ಬಸ್ಟರ್ ಹಿಟ್ ಆಯ್ತು. ಈ ಸಿನಿಮಾ ಕರ್ನಾಟಕದಲ್ಲಿ ಬಾಕ್ಸಾಫೀಸ್‌ನಲ್ಲಿ ಒಟ್ಟು ₹13.78 ಕೋಟಿ ಗಳಿಕೆ ಮಾಡಿತ್ತು. ಇನ್ನು ವಿಶ್ವದಾದ್ಯಂತ ₹16.05 ಕೋಟಿ ಗಳಿಸುವ ಮೂಲಕ ಸಿನಿಮಾ ಸೂಪರ್ ಸಕ್ಸಸ್ ಕಂಡಿದ್ದಲ್ಲದೆ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದೆ.

    ಒಟಿಟಿಗೆ 'ಏಕ್ ಲವ್ ಯಾ': ಯಾವಾಗ ಬಿಡುಗಡೆ? ಯಾವ ಒಟಿಟಿ?ಒಟಿಟಿಗೆ 'ಏಕ್ ಲವ್ ಯಾ': ಯಾವಾಗ ಬಿಡುಗಡೆ? ಯಾವ ಒಟಿಟಿ?

     ಸಿನಿಮಾ ಓಕೆ, ಕಲೆಕ್ಷನ್ ಡಲ್

    ಸಿನಿಮಾ ಓಕೆ, ಕಲೆಕ್ಷನ್ ಡಲ್

    ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ಫೆಬ್ರವರಿ 24 ರಂದು ರಾಜ್ಯಾದ್ಯಂತ ರಿಲೀಸ್‌ ಆಗಿತ್ತು. ಮೊದಲ ದಿನವೇ ಅದ್ಧೂರಿಯಾಗಿ ಓಪನ್ ಆದ ಸಿನಿಮಾ ಬಜೆಟ್‌ಗೆ ತಕ್ಕನಾಗೆ ಕಲೆಕ್ಷನ್ ಮಾಡಿಕೊಂಡಿದೆ. ಹಾಡುಗಳಿಂದಲೇ ಪ್ರೇಕ್ಷಕರನ್ನು ಸೆಳೆದಿದ್ದ ಸಿನಿಮಾಗೆ ಫುಲ್ ಮಾರ್ಕ್ ಕೊಟ್ಟಿದ್ದರು. ಹೊಸ ಮುಖಗಳ ಸಿನಿಮಾವಾದರೂ ಸಹ ಸಿನಿಮಾ ಉತ್ತಮ ಪ್ರದರ್ಶನ ನೀಡಿತ್ತು. ಅದರಲ್ಲಿ ನಟಿ ರಚಿತಾ ರಾಮ್ ಅಭಿನಯವೂ ಕೂಡ ಸಿನಿ ಪ್ರೇಕ್ಷಕರನ್ನು ರಂಜಿಸಿತ್ತು. ಹೀಗಾಗಿ ಸಿನಿಮಾ ಒಟ್ಟಾರೆ ₹3.4 ಕೋಟಿ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಸೂಪರ್ ಹಿಟ್ ಆಯಿತು.

     ದಾಖಲೆ ಸೃಷ್ಟಿಸಿದ 'ಜೇಮ್ಸ್'

    ದಾಖಲೆ ಸೃಷ್ಟಿಸಿದ 'ಜೇಮ್ಸ್'

    ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ಅಭಿನಯಿಸಿದ್ದ 'ಜೇಮ್ಸ್‌' ಚಿತ್ರವನ್ನು ಮಾರ್ಚ್ 17 ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗಿತ್ತು. ಅಪ್ಪು ಇಲ್ಲದ ನೆನಪಲ್ಲೇ ಅಪಾರ ಅಭಿಮಾನಿಗಳು 'ಜೇಮ್ಸ್ ' ಚಿತ್ರವನ್ನು ವೀಕ್ಷಣೆ ಮಾಡಿದ್ದರು. ಮೊದಲ ಒಂದು ವಾರ ಎಲ್ಲಾ ಕಡೆ ಜೇಮ್ಸ್' ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿತು. ರಿಲೀಸ್ ಆದ ಮೊದಲ ದಿನ ಬರೋಬ್ಬರಿ 15 ರಿಂದ 18 ಕೋಟಿ ಗಳಿಕೆ ಮಾಡಿಕೊಳ್ಳುವ ಮೂಲಕ ಕನ್ನಡದ ಎಲ್ಲಾ ಸಿನಿಮಾ ದಾಖಲೆಗಳನ್ನು ಜೇಮ್ಸ್ ಮುರಿದಿತ್ತು. ಕಳೆದ ಒಂದೂವರೆ ತಿಂಗಳಲ್ಲಿ 'ಜೇಮ್ಸ್‌' ಚಿತ್ರ ₹127 ಕೋಟಿ ಗಳಿಕೆ ಮಾಡಿಕೊಳ್ಳುವ ಮೂಲಕ ಈ ವರ್ಷದ ಮತ್ತೊಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್‌ಗೆ ಸೇರಿದೆ.

    '3 ಈಡಿಯಟ್ಸ್' ಚಿತ್ರದ ಕನ್ನಡ ರಿಮೇಕ್‌ನಲ್ಲಿ ನಟಿಸಬೇಕಿತ್ತು ಪುನೀತ್ ರಾಜ್‌ಕುಮಾರ್!'3 ಈಡಿಯಟ್ಸ್' ಚಿತ್ರದ ಕನ್ನಡ ರಿಮೇಕ್‌ನಲ್ಲಿ ನಟಿಸಬೇಕಿತ್ತು ಪುನೀತ್ ರಾಜ್‌ಕುಮಾರ್!

     ಎಲ್ಲಾ ದಾಖಲೆಗಳನ್ನು ಮುರಿದ 'ಕೆಜಿಎಫ್ 2'

    ಎಲ್ಲಾ ದಾಖಲೆಗಳನ್ನು ಮುರಿದ 'ಕೆಜಿಎಫ್ 2'

    'ಕೆಜಿಎಫ್‌ 2' ರಿಲೀಸ್‌ ಆದ ದಿನದಿಂದ ಇಲ್ಲಿಯವರೆಗೂ ಭರ್ಜರಿಯಾಗಿ ಪ್ರದರ್ಶನ ಕಂಡಿದೆ. ಎಲ್ಲಾ ಭಾಷೆಗಳಲ್ಲೂ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಾಲಿವುಡ್‌ನಲ್ಲಿ ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿ ಬಾಲಿವುಡ್ ಬಾಕ್ಸಾಫೀಸ್‌ನ್ನು ಸಹ ಧೂಳೀಪಟ ಮಾಡಿದೆ. ಒಟ್ಟಾರೆ ಈವರೆಗೆ 1200 ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತದಲ್ಲಿ ಹೆಚ್ಚು ಕಲೆಕ್ಷನ್ ಮಾಡಿಕೊಂಡ ಎರಡನೇ ಸಿನಿಮಾವಾಗಿ 'ಕೆಜಿಎಫ್‌ 2' ಹೊರ ಹೊಮ್ಮಿದೆ. ಈಗಲೂ ಕೂಡ ನಿಲ್ಲದೆ ತನ್ನ ಓಟವನ್ನು ಮುಂದುವರೆಸಿದೆ.

    English summary
    List Of Kannada Movies That declared as Box Office Hit from Last Five Months.
    Tuesday, May 24, 2022, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X