ಇಂದು ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ: ನಿಮ್ಮ ಆಯ್ಕೆ ಯಾವುದು?

ಮತ್ತೊಂದು ಶುಕ್ರವಾರ ಬಂದಿದೆ. ಹೊಸ ಹೊಸ ಸಿನಿಮಾಗಳನ್ನು ಹೊತ್ತು ತಂದಿದೆ. ಕಳೆದ ಶುಕ್ರವಾರ ಬಹುತೇಕ ಎಲ್ಲ ಚಿತ್ರರಂಗಗಳ ಪಾಲಿಗೂ ಡಲ್ ಶುಕ್ರವಾರವಾಗಿತ್ತು. ಆದರೆ ಈ ಶುಕ್ರವಾರ ಹಾಗಿಲ್ಲ.

ಕಳೆದ ಶುಕ್ರವಾರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಯಾವ ಸ್ಟಾರ್ ನಟರ ಸಿನಿಮಾಗಳೂ ಸಹ ಬಿಡುಗಡೆ ಆಗಿರಲಿಲ್ಲ. ಅಷ್ಟೋಂದು ಒಳ್ಳೆಯ ಸಿನಿಮಾಗಳು ಸಹ ಚಿತ್ರಮಂದಿರಕ್ಕೆ ಬಂದಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಇದೆ.

ಈ ಶುಕ್ರವಾರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಮುಖವಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಸ್ಟಾರ್ ನಟರ ಸಿನಿಮಾಗಳೇ ಚಿತ್ರಮಂದಿರಕ್ಕೆ ಕಾಲಿಡುತ್ತಿವೆ. ಯಾವ ಯಾವ ಭಾಷೆಯ ಯಾವ ಯಾವ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ? ಇಲ್ಲಿದೆ ಪಟ್ಟಿ.

ಅಪ್ಪು ಸಿನಿಮಾ ತೆರೆಗೆ ಬಂದಿದೆ, ಜೊತೆಗೆ ಇನ್ನೊಂದಿಷ್ಟು ಸಿನಿಮಾಗಳು

ಅಪ್ಪು ಸಿನಿಮಾ ತೆರೆಗೆ ಬಂದಿದೆ, ಜೊತೆಗೆ ಇನ್ನೊಂದಿಷ್ಟು ಸಿನಿಮಾಗಳು

ನಟ ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಲಕ್ಕಿಮ್ಯಾನ್' ಸಿನಿಮಾ ಈ ಶುಕ್ರವಾರ ತೆರೆಗೆ ಬರುತ್ತಿದೆ. ಅಪ್ಪುವನ್ನು ಕೊನೆಯ ಬಾರಿ ನಟನಾಗಿ ದೊಡ್ಡ ಪರದೇಯ ಮೇಲೆ ಕಣ್ತು ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಈ ಸಿನಿಮಾವು ತಮಿಳಿನ 'ಓ ಮೈ ಕಡವುಲೆ' ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ. ಈ ಸಿನಿಮಾದ ಹೊರತಾಗಿ ಕನ್ನಡ '9 ಸುಳ್ಳು ಕತೆಗಳು' ಹೆಸರಿನ ಸಿನಿಮಾ ತೆರೆಗೆ ಬಂದಿದೆ. ಜೊತೆಗೆ 'ನಾನ್ ರೌಡಿ' ಹೆಸರಿನ ಸಿನಿಮಾ ಸಹ ತೆರೆಗೆ ಬಂದಿದೆ.

ತೆಲುಗಿನ ಐದು ಸಿನಿಮಾಗಳು ಬಿಡುಗಡೆ

ತೆಲುಗಿನ ಐದು ಸಿನಿಮಾಗಳು ಬಿಡುಗಡೆ

ತೆಲುಗಿನಲ್ಲಿ ಶರ್ವಾನಂದ ನಟಿಸಿರುವ 'ಒಕೆ ಒಕ ಜೀವಿತಂ' ಸಿನಿಮಾ ತೆರೆಗೆ ಬಂದಿದೆ. ಸಿನಿಮಾದಲ್ಲಿ ಶರ್ವಾನಂದ ಜೊತೆಗೆ ನಾಗಾರ್ಜುನ ಪತ್ನಿ ಅಮಲಾ ಸಹ ನಟಿಸಿದ್ದಾರೆ. ಇದರ ಹೊರತಾಗಿ 'ಕೊತ್ತ ಕೊತ್ತಗ' ಹೆಸರಿನ ಯುವಕರ ಕತೆಯುಳ್ಳ ಸಿನಿಮಾ ತೆರೆಗೆ ಬಂದಿದೆ. 'ರಹಸ್ಯ' ಹೆಸರಿನ ಥ್ರಿಲ್ಲರ್ ಸಿನಿಮಾ. 'ಅಮೃತ' ಹಾಗೂ 'ಶ್ರೀರಂಗಪುರಂ' ಹೆಸರಿನ ಸಿನಿಮಾಗಳು ಸಹ ತೆರೆಗೆ ಬಂದಿವೆ.

ತಮಿಳಿನಲ್ಲಿ ಯಾವ ಸಿನಿಮಾಗಳು?

ತಮಿಳಿನಲ್ಲಿ ಯಾವ ಸಿನಿಮಾಗಳು?

ಸ್ಟಾರ್ ನಟ ಆರ್ಯ ನಟಿಸಿರುವ 'ಕ್ಯಾಪ್ಟನ್' ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾವು ವಿಚಿತ್ರ ಜೀವಿಗಳ ಭೇಟಿಯಾಡುವ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಸೈನ್ಯಾಧಿಕಾರಿ ಆರ್ಯ ಹಾಗೂ ಅವನ ತಂಡ ವಿಚಿತ್ರ ಜೀವಿಗಳ ಭೇಟೆಗೆ ತೆರಳುತ್ತಾರೆ. ಭೇಟೆಯಾಡುತ್ತಾರಾ? ಅವರೇ ಭೇಟೆ ಆಗುತ್ತಾರಾ ಎಂಬುದು ಸಿನಿಮಾದ ಕತೆ. 'ನೋ ನೆಟ್‌ವರ್ಕ್' ಹೆಸರಿನ ಕ್ರೈಂ ಥ್ರಿಲ್ಲರ್ ಸಿನಿಮಾ, 'ಕಂಪೆನಿ' ಹೆಸರಿನ ಆಕ್ಷನ್ ಸಿನಿಮಾ, 'ರಿಯಾ' ಹೆಸರಿನ ಹಾರರ್ ಸಿನಿಮಾ, 'ಇದುದಾನ್ ಕಾದಲ್' ಹೆಸರಿನ ಪ್ರೇಮಕತೆಯುಳ್ಳ ಸಿನಿಮಾ, 'ಲಿಲ್ಲಿ ರಾಣಿ' ಹೆಸರಿನ ಮಹಿಳಾ ಪ್ರಧಾನ ಸಿನಿಮಾ ಒಂದು ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಕನ್ನಡತಿ ಛಾಯಾಸಿಂಗ್ ನಾಯಕಿ.

ಮಲಯಾಳಂನಲ್ಲಿ ಯಾವ ಸಿನಿಮಾ?

ಮಲಯಾಳಂನಲ್ಲಿ ಯಾವ ಸಿನಿಮಾ?

ಜಾತಿ ತಾರತಮ್ಯ, ಜೀತಪದ್ಧತಿ ವಿರುದ್ಧ ಕತೆಯುಳ್ಳ 'ಪತ್ತೋನ್‌ಪತ್ತಂ ನೂಟ್ಟಂಡು' ಸಿನಿಮಾ ನಿನ್ನೆ (ಸೆಪ್ಟೆಂಬರ್ 08) ಬಿಡುಗಡೆ ಆಗಿದೆ. ಕೇರಳದಲ್ಲಿ ಶತಮಾನದ ಹಿಂದೆ ನಡೆದ ನಿಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಆಕ್ಷನ್ ಸಿನಿಮಾ 'ಒರು ತಕ್ಕನ್ ತಲ್ಲು ಕೇಸ್' ಸಿನಿಮಾ ಇದೇ ದಿನ ಓಣಂ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಿಮಿಷಾ ಸಜಯನ್, ಬಿಜು ಮೆನನ್, ಪದ್ಮಪ್ರಿಯ ಅವರುಗಳು ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ 'ಒಟ್ಟು' ಇಂದೇ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಖ್ಯಾತ ನಟ ಅರವಿಂದ ಸ್ವಾಮಿ ನಟಿಸಿದ್ದಾರೆ.

ಹಿಂದಿಯಲ್ಲಿ 'ಬ್ರಹ್ಮಾಸ್ತ್ರ' ಬಿಗ್ ರಿಲೀಸ್

ಹಿಂದಿಯಲ್ಲಿ 'ಬ್ರಹ್ಮಾಸ್ತ್ರ' ಬಿಗ್ ರಿಲೀಸ್

ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ ಭಾರಿ ಬಜೆಟ್ ಸಿನಿಮಾ 'ಬ್ರಹ್ಮಸ್ತ್ರ' ಇಂದೇ ಬಿಡುಗಡೆ ಆಗಿದೆ. ಸಿನಿಮಾದ ಮೇಲೆ ಚಿತ್ರತಂಡಕ್ಕೆ ಮಾತ್ರವೇ ಅಲ್ಲದೆ, ಬಾಲಿವುಡ್ಡಿಗರಿಗೂ ಭಾರಿ ನಿರೀಕ್ಷೆ ಇದೆ. ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದು, ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಅವರುಗಳ ಜೊತೆಗೆ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ನಟ ರವಿಕಿಶನ್ ನಟಿಸಿರುವ 'ಸಬ್ ವೇ' ಸಿನಿಮಾ ಸಹ ಇಂದೇ ಬಿಡುಗಡೆ ಆಗಿದೆ.

More from Filmibeat

English summary
List of movie which are releasing on this Friday September 09. Many star actor movies are releasing this Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X