twitter
    For Quick Alerts
    ALLOW NOTIFICATIONS  
    For Daily Alerts

    'ಅಂತರ್ಜಾಲ ಎಂಬ ಅಣ್ವಸ್ತ್ರ': ಚಿಂತೆಗೆ ಹಚ್ಚುವ ಸಿನಿಮಾಗಳ ಪಟ್ಟಿ

    |

    ಅಂತರ್ಜಾಲ ಇಂದು ಹಳ್ಳಿ-ಹಳ್ಳಿಗೂ ತಲುಪಿದೆ. ಇಡೀಯ ಜಗತ್ತನ್ನೇ ಸಣ್ಣ ಹಳ್ಳಿಯನ್ನಾಗಿ ಮಾಡಿದೆ ಅಂತರ್ಜಾಲ. ಮಾನವನ ಅನ್ವೇಷಣೆಯಲ್ಲಿ ಅತಿಮುಖ್ಯದ್ದು ಎಂದು ಕರೆಸುಕೊಳ್ಳುವ ಈ ಅಂತರ್ಜಾಲ ಅಥವಾ ಇಂಟರ್ನೆಟ್‌ ಹೇಗೆ ಮಾನವನ್ನು ಅಡಿಯಾಳಾಗಿಸಿಕೊಳ್ಳುತ್ತಿದೆ ಎಂಬುದು ಹೆಚ್ಚು ಮಂದಿಗೆ ತಿಳಿದಿಲ್ಲ.

    ಅಂತರ್ಜಾಲ, ಸಾಮಾಜಿಕ ಜಾಲತಾಣ ಆ ಮೂಲಕ ವ್ಯಕ್ತಿಗಳ ವ್ಯಕ್ತಿತ್ವವನ್ನೇ ಹೇಗೆ ಕಂಟ್ರೋಲ್ ಮಾಡಲಾಗುತ್ತಿದೆ. ಮಾನವನ ಯೋಚನೆಗಳ ಮೇಲೆ ಪ್ರಭಾವ ಬೀರಲಾಗುತ್ತಿದೆ ಎಂಬ ಬಗ್ಗೆ ನಿಧಾನಕ್ಕೆ ಚರ್ಚೆಗಳು ಆರಂಭವಾಗಿವೆ.

    ಕಾನೂನಿಗೆ ವಿರುದ್ಧವಾಗಿ ಡಾಟಾ (ಮಾಹಿತಿ)ಯ ಸಂಗ್ರಹ, ಸಂಗ್ರಹಿಸಿದ ಮಾಹಿತಿಯ ಮಾರಾಟ, ಮಾಹಿತಿಯಿಂದ ಸಮೂಹದ ಮೇಲೆ ಪ್ರಭಾವ ಬೀರುವ ಕುರಿತಾಗಿ ಕೆಲವಾರು ಸಿನಿಮಾಗಳು ಈಗಾಗಲೇ ಬಂದಿದ್ದು, ಈ ಸಿನಿಮಾಗಳು ನಿಜವಾಗಿಯೂ ನೋಡುಗರನ್ನು ಚಿಂತನೆಗೆ ಹಚ್ಚುತ್ತವೆ, ಭಿನ್ನ ಹಾದಿಯಲ್ಲಿ ಯೋಚಿಸುವಂತೆ ಮಾಡುತ್ತವೆ, ಅಂಥಹಾ ಸಿನಿಮಾಗಳ ಪಟ್ಟಿ ಇಲ್ಲಿದೆ.

    'ದಿ ಗ್ರೇಟ್ ಹ್ಯಾಕ್' ಡಾಕ್ಯುಮೆಂಟರಿ

    'ದಿ ಗ್ರೇಟ್ ಹ್ಯಾಕ್' ಡಾಕ್ಯುಮೆಂಟರಿ

    ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದ ಕೇಂಬ್ರಿಡ್ಜ್ ಅನಾಲೆಟಿಕಾ ದ ಕರ್ಮಕಾಂಡ ಹಾಗೂ ಹೇಗೆ ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳು ಮೂಲಕ ಬಳಕೆದಾರರ ಖಾಸಗಿ ಮಾಹಿತಿಯನ್ನು ಅವರ ಅನುಮತಿ ಇಲ್ಲದೆ ಬಳಸಿಕೊಂಡಿತು ಎಂಬುದನ್ನು ಈ ಡಾಕ್ಯುಮೆಂಟರಿಯಲ್ಲಿ ವಿಶ್ಲೇಷಿಸಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದು ಲಭ್ಯವಿದೆ.

    ದಿ ಸೋಷಿಯಲ್ ಡೆಲಿಮಾ

    ದಿ ಸೋಷಿಯಲ್ ಡೆಲಿಮಾ

    ಇತ್ತೀಚೆಗಷ್ಟೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ ಡಾಕ್ಯುಮೆಂಟರಿ ದಿ ಸೋಷಿಯಲ್ ಡೆಲಿಮಾ ಈಗಾಗಲೇ ದೊಡ್ಡ ಚರ್ಚೆಯನ್ನೇ ಎತ್ತಿದೆ. ಸಾಮಾಜಿಕ ಜಾಲತಾಣಗಳು, ಗೂಗಲ್ ಇನ್ನಿತರ ಸರ್ಚ್ ಎಂಜಿನ್‌ಗಳು ಹೇಗೆ ಬಳಕೆದಾರರನ್ನು ದಾಸರನ್ನಾಗಿ ಮಾಡಿಕೊಳ್ಳುತ್ತಿವೆ ಎಂಬುದನ್ನು ಈ ಡಾಕ್ಯುಮೆಂಟರಿ ಚರ್ಚಿಸುತ್ತದೆ.

    'ಸರ್ಚಿಂಗ್': ಡಿಜಿಟಲ್ ಹೆಜ್ಜೆಗುರುತು

    'ಸರ್ಚಿಂಗ್': ಡಿಜಿಟಲ್ ಹೆಜ್ಜೆಗುರುತು

    ಕೇವಲ ಮೊಬೈಲ್, ಕಂಪ್ಯೂಟರ್ ಸ್ಕ್ರೀನ್ ನಲ್ಲಿಯೇ ನಡೆಯುವ ಸಿನಿಮಾ 'ಸರ್ಚಿಂಗ್' ಕಾಣೆಯಾದ ತನ್ನ ಮಗಳನ್ನು ತಂತ್ರಜ್ಞಾನ ಪರಿಣಿತ ಅಪ್ಪ ಹೇಗೆ ಕೇವಲ ಸಾಮಾಜಿಕ ಜಾಲತಾಣ, ಅಂತರ್ಜಾಲ ಬಳಸಿ ಹುಡುಕುತ್ತಾನೆ ಎಂಬ ಕುತೂಹಲಕಾರಿ ಕತೆಯನ್ನು ಸಿನಿಮಾ ಹೊಂದಿದೆ. ಈ ಸಿನಿಮಾ ವ್ಯಕ್ತಿಗಳ ಡಿಜಿಟಲ್ ಹೆಜ್ಜೆಗುರುತಿನ ಮಹತ್ವದ ಬಗ್ಗೆಯೂ ಮಾತನಾಡುತ್ತದೆ.

    'ಜಮ್ತಾಡಾ' ಹಳ್ಳಿ ಹುಡುಗರ ಹಗರಣ

    'ಜಮ್ತಾಡಾ' ಹಳ್ಳಿ ಹುಡುಗರ ಹಗರಣ

    ಜಾರ್ಖಂಡ್‌ನ ಜಮ್ತಾಡಾ ಎಂಬ ಹಳ್ಳಿಯ ಹುಡುಗರು ಬರೀ ಮೊಬೈಲ್‌ ಕರೆಗಳ ಮೂಲಕ ಲಕ್ಷಾಂತರ ಹಣ ದೋಚಿದ ನಿಜ ಕತೆಯನ್ನು ಆಧರಿಸಿ ನಿರ್ಮಿಸಲಾಗಿರುವ ವೆಬ್ ಸೀರೀಸ್ 'ಜಮ್ತಾಡಾ'. ಬ್ಯಾಂಕಿಂಗ್ ಸಂಬಂಧಿತ ಕರೆಗಳನ್ನು ಮಾಡಿ ಹೇಗೆ ಅವರ ಖಾತೆಗಳಿಂದ ಹಣ ದೋಚುತ್ತಿದ್ದ ಗ್ಯಾಂಗ್‌ನ ಕತೆಯನ್ನು ಈ ವೆಬ್ ಸರಣಿ ಹೊಂದಿದೆ. ಇದೂ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

    'ಹ್ಯೂಮನ್ಸ್‌' ಎಂಬ ಭವಿಷ್ಯದ ಸಿನಿಮಾ

    'ಹ್ಯೂಮನ್ಸ್‌' ಎಂಬ ಭವಿಷ್ಯದ ಸಿನಿಮಾ

    'ಹ್ಯೂಮನ್ಸ್' ಸಿನಿಮಾ ರೋಬೋಟ್‌ಗಳು ಹಾಗೂ ಮಾನವರ ನಡುವಿನ ಸಂಬಂಧ ಹಾಗೂ ಕೃತಕ ಬುದ್ಧಿಮತ್ತೆ ಹೇಗೆ ಮಾನವನನ್ನು ಮೀರಿ ಬೆಳೆದು ಆತನಿಗೆ ಹಾನಿಕಾರಕವಾಗಬಲ್ಲದು ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ಸಿನಿಮಾದಲ್ಲಿ ಮನುಷ್ಯರನ್ನೇ ಹೋಲುವ ಸ್ವಯಂ ಚಿಂತಿಸಬಲ್ಲ ರೋಬೋಟ್‌ಗಳಿದ್ದಾರೆ.

    ಎಡ್ವರ್ಡ್‌ ಸ್ನೋಡೆನ್ ಸಾಹಸಗಾಥೆಯ ಸಿನಿಮಾ

    ಎಡ್ವರ್ಡ್‌ ಸ್ನೋಡೆನ್ ಸಾಹಸಗಾಥೆಯ ಸಿನಿಮಾ

    ಎಡ್ವರ್ಡ್ ಸ್ನೋಡೆನ್ ಎಂಬ ಮಾಜಿ ಸಿಐಎ ಅಧಿಕಾರಿ ಸಿಐಎ ಯ ಕರ್ಮಕಾಂಡಗಳನ್ನು ಬಯಲು ಮಾಡಿದ ನಿಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ಸಿನಿಮಾ 'ಸ್ನೋಡೆನ್'. ಸರ್ಕಾರಗಳು ಹೇಗೆ ತಂತ್ರಜ್ಞಾನವನ್ನು ಬಳಸಿ ವ್ಯಕ್ತಿಯ ಖಾಸಗಿ ತನದ ಮೇಲೆ ದಾಳಿ ಮಾಡುತ್ತವೆ ಎಂಬುದನ್ನು ಈ ಸಿನಿಮಾ ವಿವರವಾಗಿ ತೋರಿಸಿದೆ.

    Recommended Video

    ಕರುಣೆ ಬರ್ಲಿ ನನ್ ಮೇಲೆ ಅಂತ ನಾನು ಈ ವಿಡಿಯೋ ಮಾಡ್ತಿಲ್ಲ | Anushree | Filmibeat Kannada
    'ಮಿಸ್ಟರ್ ರೋಬೋಟ್'

    'ಮಿಸ್ಟರ್ ರೋಬೋಟ್'

    ಗರ್ಲ್ ವಿತ್ ದಿ ಡ್ರ್ಯಾಗನ್ ಟ್ಯಾಟೂ ನಂಥಹಾ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಡೇವಿಡ್ ಫಿಂಚರ್ ನಿರ್ದೇಶಿಸಿರುವ ಮಿಸ್ಟರ್ ರೋಬೋಟ್ ವೆಬ್ ಸರಣಿ ಥ್ರಿಲ್ಲರ್ ಕತೆಯನ್ನು ಹೊಂದಿದೆ. ಅಂತರ್ಜಾಲ ಬಳಸಿ ದೊಡ್ಡ ಹೇಗೆ ಆರ್ಥಿಕತೆ ಸೇರಿ ಅನೇಕ ಕ್ಷೇತ್ರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಯತ್ನ ಮಾಡಲಾಗುತ್ತದೆ ಎಂಬುದನ್ನು ಈ ವೆಬ್ ಸರಣಿ ತೋರಿಸುತ್ತದೆ. ಈ ವೆಬ್ ಸರಣಿಯ ಟ್ಯಾಗ್‌ಲೈನ್ 'ಪ್ರಜಾಪ್ರಭುತ್ವ ಅಪಾಯದಲ್ಲಿದೆ'.

    English summary
    Here is some list of movies and documentary which talks about social media and data manipulation.
    Friday, October 2, 2020, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X