ಮಾರ್ಚ್‌ನಲ್ಲಿ ರಿಲೀಸ್ ಆಗುತ್ತಿರುವ ಸೌತ್ ಚಿತ್ರಗಳ ಪಟ್ಟಿ ಇಲ್ಲಿದೆ!

ಸದ್ಯ ಕೊರೊನಾ ಕರಿ ನೆರಳು ನಿಧಾನವಾಗಿ ಮಾಯವಾಗುತ್ತಿದೆ. ಹೊಸ ಬೆಳಕು ಮೂಡುತ್ತಿದೆ. ಇದು ಚಿತ್ರ ರಂಗದ ಪಾಲಿಗೆ ಅತಿ ಮುಖ್ಯವಾದ ಸಮಯ. ಹಾಗಾಗಿ ಮಾರ್ಚ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ತಯಾರಾಗಿವೆ. ಸೌತ್‌ ಚಿತ್ರರಂಗದ ಯಾವೆಲ್ಲಾ ಚಿತ್ರಗಳು ಈ ಮಾರ್ಚ್‌ನಲ್ಲಿ ತೆರೆಕಾಣುತ್ತಿವೆ ಎನ್ನುವ ಬಗ್ಗೆ ಮಾಹಿಗಿ ಇಲ್ಲಿದೆ. ಮುಂದೆ ಓದಿ...

ಮಾರ್ಚ್ ಎಂದಾಕ್ಷಣ ಎಲ್ಲರೂ 'ಜೇಮ್ಸ್' ಚಿತ್ರದ ಜಪ ಮಾಡುತ್ತಿದ್ದಾರೆ. ಮೊದಲು ಜೇಮ್ಸ್ ಸಿನಿಮಾ ಬಗ್ಗೆ ಹೇಳುವುದಾದರೆ 'ಜೇಮ್ಸ್' ಮಾರ್ಚ್ 17ಕ್ಕೆ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ದಿನಾಂಕವನ್ನು ಪುನೀತ್‌ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದೇ ನಿಗದಿ ಮಾಡಲಾಗಿದೆ. ಅಪ್ಪು ಅಗಲಿಕೆಯ ನಂತರ ಜೇಮ್ಸ್ ಚಿತ್ರದಲ್ಲಿ ಅವರನ್ನು ನೋಡಬೇಕು ಎಂದು ಎಲ್ಲರೂ ಕಾಯುತ್ತಿದ್ದಾರೆ. ಹಾಗಾಗಿ ಈ ಚಿತ್ರವನ್ನು ವಿಶೇಷವಾಗಿ ಪುನೀತ್‌ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಲಾಗುತ್ತದೆ.

'ಜೇಮ್ಸ್' ಚಿತ್ರ ರಿಲೀಸ್ ಆಗುತ್ತಿರುವ ಕಾರಣಕ್ಕೆ ಮಾರ್ಚ್ 17ರಂದು ಕೇವಲ ಈ ಚಿತ್ರ ಮಾತ್ರ ರಿಲೀಸ್ ಆಗುತ್ತಿದೆ. ಅಪ್ಪುಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಒಂದು ವಾರ ಮತ್ಯಾವುದೇ ಚಿತ್ರ ರಿಲೀಸ್ ಆಗುವುದಿಲ್ಲ. ಅಷ್ಟೇ ಅಲ್ಲಾ ಪರಭಾಷೆಯ ಸಿನಿಮಾ ಪ್ರದರ್ಶನ ಕೂಡ ಇರುವುದಿಲ್ಲ. ಹಾಗಾಗಿ ಮಾರ್ಚ್ ಎರಡನೇ ವಾರದಲ್ಲಿ ಬಳಿಕ ಕೇವಲ ಜೇಮ್ಸ್ ಅಬ್ಬರ ಮಾತ್ರವೇ ಇರುತ್ತದೆ.

ಜೇಮ್ಸ್‌ಗೂ ಮುನ್ನ ಬರಲಿದೆ 'ಯೆಲ್ಲೋ ಬೋರ್ಡ್'!

ಜೇಮ್ಸ್‌ಗೂ ಮುನ್ನ ಬರಲಿದೆ 'ಯೆಲ್ಲೋ ಬೋರ್ಡ್'!

ಮಾರ್ಚ್ 17ರಿಂದ 'ಜೇಮ್ಸ್' ಚಿತ್ರದ ಹವಾ ಶುರುವಾಗುತ್ತದೆ. ಹಾಗಾಗಿ ಅದಕ್ಕೂ ಮುನ್ನ ಕನ್ನಡದ ಮತ್ತೊಂದು ಚಿತ್ರ ರಿಲೀಸ್ ಆಗುತ್ತಿದೆ. ಮಾರ್ಚ್ 4ರಂದು 'ಯೆಲ್ಲೋ ಬೋರ್ಡ್' ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಟ ಪ್ರದೀಪ್ ನಾಯಕನಾಗಿ, ಟ್ಯಾಕ್ಸಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಒಂದು ಹಾಡಿಗೆ ನಟ ಪುನೀತ್‌ ರಾಜ್‌ಕುಮಾರ್ ದನಿಯಾಗಿದ್ದಾರೆ. ಈಗಾಗಲೇ ಆ ಹಾಡು ಮತ್ತು ಚಿತ್ರದ ಟ್ರೇಲರ್, ಟೀಸರ್ ವೈರಲ್ ಆಗಿದೆ.

ಮಾರ್ಚ್ 3ಕ್ಕೆ ಮಮ್ಮುಟಿ, ದುಲ್ಕರ್ ಸಲ್ಮಾನ್ ಚಿತ್ರಗಳು!

ಮಾರ್ಚ್ 3ಕ್ಕೆ ಮಮ್ಮುಟಿ, ದುಲ್ಕರ್ ಸಲ್ಮಾನ್ ಚಿತ್ರಗಳು!

ಮಾರ್ಚ್ 3ಕ್ಕೆ ಮಲಯಾಳಂ ಮತ್ತು ತಮಿಳಿನ ಎರಡು ನಿರೀಕ್ಷಿತ ಚಿತ್ರಗಳು ತೆರೆಗೆ ಬರುತ್ತಿದೆ. ತಮಿಳಿನಲ್ಲಿ ರೊಮ್ಯಾಂಟಿಕ್ ಕಥಾಹಂದರಯುಳ್ಳ ಚಿತ್ರದ 'ಹೇ ಸಿನಾಮಿಕಾ' ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ನೃತ್ಯ ನಿರ್ದೇಶಕಿ ಬೃಂದಾ, ದುಲ್ಕರ್ ಸಲ್ಮಾನ್, ಅದಿತಿ ರಾವ್ ಹೈದರಿ ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ದಿನದಂದು ಮಮ್ಮುಟ್ಟಿ ಅಭಿನಯದ ಮಲಯಾಳಂ ಆಕ್ಷನ್ ಚಿತ್ರ 'ಭೀಷ್ಮ ಪರ್ವಂ' ರಿಲೀಸ್ ಆಗುತ್ತಿದೆ.

ಮಾರ್ಚ್ 4ರಂದು ರಶ್ಮಿಕಾ ಚಿತ್ರ ತೆರೆಗೆ!

ಮಾರ್ಚ್ 4ರಂದು ರಶ್ಮಿಕಾ ಚಿತ್ರ ತೆರೆಗೆ!

ಮಾರ್ಚ್ 4ರಂದು ತೆಲುಗಿನ ನಿರೀಕ್ಷಿತ ಚಿತ್ರ 'ಆಡವಾಳು ಮೀಕು ಜೋಹಾರ್ಲು' ಚಿತ್ರ ತೆರೆಕಾಣಲಿದೆ. ಈ ಚಿತ್ರ ಕೌಟುಂಬಿಕ ಅಂಶಗಳನ್ನು ಒಳಗೊಂಡಿದ್ದು ಲವ್ ಮತ್ತು ಕಾಮಿಡಿ ಸಿನಿಮಾದಲ್ಲಿ ಇದೆ. ಚಿತ್ರದಲ್ಲಿ ಶರ್ವಾನಂದ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಸೀರೆಯುಟ್ಟು ಸರಳವಾದ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್, ಹಾಡುಗಳು ಗಮನ ಸೆಳೆದಿವೆ.

RRR, ರಾಧೆ ಶ್ಯಾಮ್ ಅಬ್ಬರ!

RRR, ರಾಧೆ ಶ್ಯಾಮ್ ಅಬ್ಬರ!

ಈ ಚಿತ್ರಗಳನ್ನು ಬಿಟ್ಟರೆ ಮಾರ್ಚ್ 11ರಂದು ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಚಿತ್ರ ತೆರೆಗೆ ಬರಲಿದೆ. ರಾಧೆ ಶ್ಯಾಮ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲೂ ಕೂಡ ತೆರೆಗೆ ಬರುತ್ತಿದೆ. ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇದ್ದೆ ಇದೆ. ಇನ್ನು ಮಾರ್ಚ್ ಅಂತ್ಯಕ್ಕೆ ಭಾರತ ಚಿತ್ರರಂಗದ ಬಹುನೀಕ್ಷೆಯ ಚಿತ್ರ 'RRR' ತೆರೆಗೆ ಬರುತ್ತಿದೆ. ಈ ಚಿತ್ರ ಮಾರ್ಚ್ 25ಕ್ಕೆ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆ. ಇದಿಷ್ಟು ಚಿತ್ರಗಳು ಸದ್ಯ ಮಾರ್ಚ್‌ ತಿಂಗಳಲ್ಲಿ ತೆರೆಗೆ ಬರಲು ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿವೆ.

More from Filmibeat

English summary
Here Is The List Of South Movies Releasing 2022 March,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X