ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ; ಜಾಗತಿಕ ಭೂಪಟದಲ್ಲಿ ಭಾರತದ ಭವ್ಯತೆ-ಪರಂಪರೆಯನ್ನು ಬಿಂಬಿಸಿದ ಅದ್ಧೂರಿ ವಿವಾಹ
ನಾವು ಎಲ್ಲರೂ ಮದುವೆಗಳನ್ನು ನೋಡಿರುತ್ತೇವೆ .. ಕೆಲವು ಆತ್ಮೀಯವಾದ ಸಮಾರಂಭಗಳಾದರೆ, ಇನ್ನು ಕೆಲವು ಕಣ್ಮನ ಸೆಳೆಯುವಂತಹ ವಿವಾಹ ಮಹೋತ್ಸವಗಳು . ಆದರೆ 2024ರಲ್ಲಿ ನಡೆದ ಒಂದು ಮದುವೆಯನ್ನು ಮಾತ್ರ ಜಗತ್ತು ನಿಬ್ಬೇರಗಾಗಿ ನೋಡಿತ್ತು. ಈ ಮದುವೆ ಜಾಗತಿಕ ಮಟ್ಟದಲ್ಲಿ ಭಾರತದ ಛಾಪು ಮೂಡಿಸಿತ್ತು. ಆ ಮದುವೆ ಬೇರೆ ಯಾರದು ಅಲ್ಲ ಬದಲಿಗೆ ಭಾರತದ ನಂಬರ್ 1 ಶ್ರೀಮಂತ ಮತ್ತು ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮತ್ತು ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಮಗಳು ರಾಧಿಕಾ ಅವರದ್ದು.
ಈ ಮದುವೆ ಕೇವಲ ಅದ್ಧೂರಿತನದಿಂದ ಮಾತ್ರ ಕೂಡಿರಲಿಲ್ಲ. ಕೇವಲ ಅಂಬಾನಿ ಮನೆತನದ ಹಬ್ಬ ಮಾತ್ರವಾಗಿರಲಿಲ್ಲ. ಬದಲಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಪ್ರತಿಬಿಂಬದಂತೆ ಇತ್ತು. ಭಾರತದ ಭವ್ಯತೆ ಪರಂಪರೆಗೆ ಕೈಗನ್ನಡಿಯಂತೆ ಇತ್ತು. ಪೂರ್ವಜರು ತೋರಿಸಿದ ಹಾದಿಯ ಪರಿಚಯವನ್ನು ಕೂಡ ಈ ಮದುವೆ ಸಮಾರಂಭದಲ್ಲಿ ಮಾಡಲಾಗಿತ್ತು. ಈ ಮದುವೆ ಮೂಲಕ ಭಾರತೀಯರ ಆಚರಣೆ, ಮೌಲ್ಯ ಮತ್ತು ಸಂಪ್ರದಾಯ ಎಂತಹದ್ದು ಎನ್ನುವುದು ವಿಶ್ವಕ್ಕೆ ಗೊತ್ತಾಯ್ತು.

ಇನ್ನು ದಶಕಗಳ ಕಾಲ ಪ್ಯಾರಿಸ್ ಫ್ಯಾಷನ್‌ಗೆ, ಮಿಲಾನ್ ವಿನ್ಯಾಸಕ್ಕೆ ಮತ್ತು ನ್ಯೂಯಾರ್ಕ್ ಸೆಲೆಬ್ರಿಟಿಗಳಿಗೆ ಹೆಸರಾಗಿತ್ತು. ಆದರೆ ಜುಲೈ 12, 2024ರಂದು ವಿಶ್ವದ ದೃಷ್ಟಿ ಭಾರತದತ್ತ ತಿರುಗಿತು. ಮುಂಬೈ ಹೊಸ 'ಮೊನಾಕೋ'ದಂತೆ ಮತ್ತು ಜಾಮ್‌ನಗರ್ ಹೊಸ 'ಸೈಂಟ್ ಟ್ರೋಪೆಜ್'ನಂತೆ ಭಾಸವಾಗಿತ್ತು.
ಈ ಮದುವೆ ಭಾರತದಲ್ಲಿ ನಡೆದರು ಕೂಡ ಆತಿಥ್ಯ .. ಸಂಸ್ಕೃತಿ .. ಅದ್ಧೂರಿತನದ ಮೂಲಕ ಜಗತ್ತಿನೆಲ್ಲರ ಗಮನ ಸೆಳೆಯಿತು. ಭಾರತದ ಪರಂಪರೆಯ ಜೊತೆ ಆಧುನಿಕ ಕಾಲದ ಡ್ರೋನ್‌ನಂತಹ ತಂತ್ರಜ್ಞಾನವನ್ನು ಕೂಡ ಒಳಗೊಂಡಿದ್ದ ಈ ಮದುವೆ ಸಮಾರಂಭ ಭಾರತ ಯಾವುದರಲ್ಲಿಯೂ ಹಿಂದೆ ಇಲ್ಲ ಎನ್ನುವ ಸಂದೇಶವನ್ನು ಕೂಡ ರವಾನೆ ಮಾಡಿತ್ತು.

ಭಾರತ ವಿಶ್ವ ವೇದಿಕೆಯಾದಾಗ
ರಾಜಕೀಯಕ್ಕೆ ಅಥವಾ ಸಿನಿಮಾಗೆ ಅಲ್ಲ. ವಿಶ್ವದೆಲ್ಲೆಡೆ ಹೆಸರು ಮಾಡಿದ ಜಗದ್ವಿಖ್ಯಾತರೆಲ್ಲ ಅಂಬಾನಿ ಕುಟುಂಬದ ಈ ಹಬ್ಬದಲ್ಲಿ ಭಾಗವಹಿಸಿದ್ದರು. ಈ ಮೊದಲು ಇಂತಹದ್ದೊಂದು ಅಭೂತಪೂರ್ವ ಘಳಿಗೆಯನ್ನು ಯಾರು ನೋಡಿರಲಿಲ್ಲ. ಜಾಗತಿಕ ಐಕಾನ್‌ಗಳನ್ನು ಭಾರತ ಹಿಂದೆಂದೂ ಹೀಗೆ ಸ್ವಾಗತಿಸಿರಲಿಲ್ಲ.
ರಿಹಾನ್ನಾ ಪ್ರೀ-ವೆಡ್ಡಿಂಗ್ ಇವೆಂಟ್‌ನಲ್ಲಿ ಹಾಡಿದರು. ಮಾರ್ಕ್ ಝುಕರ್ಬರ್ಗ್, ಬಿಲ್ ಗೇಟ್ಸ್, ಇವಾಂಕಾ ಟ್ರಂಪ್, ಕಾರ್ಲಿ ಕ್ಲೋಸ್ ಭಾರತೀಯ ಸಂಪ್ರದಾಯದ ಉಡುಗೆಗಳಲ್ಲಿ ಭಾಗವಹಿಸಿದರು. ಕಿಮ್ ಮತ್ತು ಖ್ಲೋ ಕಾರ್ಡಾಶಿಯನ್ ಲೆಹೆಂಗಾ ಧರಿಸಿ ಮದುವೆಗೆ ಹಾಜರಾದರು. ಹಾಲಿವುಡ್ ನಿರ್ಮಾಪಕರು, ಸಿಲಿಕಾನ್ ವ್ಯಾಲಿ ಉದ್ಯಮಿಗಳು, ರಾಜ ಮನೆತನದ ಕುಟುಂಬಗಳು ಎಲ್ಲರೂ ಒಂದೇ ಮದುವೆಯ ಮಂಟಪದಲ್ಲಿ ಕಾಣಿಸಿಕೊಂಡರು. ಭಾರತ ಅತಿಥಿಗಳನ್ನು ಆತಿಥ್ಯ ಮಾಡಿದಷ್ಟೇ ಅಲ್ಲ, ಭಾರತವೇ ಜಾಗತಿಕ ವೇದಿಕೆಯಲ್ಲಿ ಅತಿಥಿಯಾಗಿತ್ತು.

ಈ ಹಿಂದೆ ರಾಜಮನೆತನದ ಇತಿಹಾಸದಲ್ಲಿ ನಡೆದ ಮದುವೆ ಸಮಾರಂಭ, ಮದುವೆಯ ಸಮಾರಂಭಕ್ಕೂ ಮುನ್ನ ನಡೆದ ಉತ್ಸವ, ಆಚರಣೆ, ಎಲ್ಲವನ್ನು ಮರೆಯುವಂತೆ ಮಾಡಿ ಅಂಬಾನಿ ಹೊಸ ಇತಿಹಾಸ ಬರೆದರು.
ಜಾಮ್‌ನಗರದಲ್ಲಿ ಅರಮನೆಯ ಥೀಮ್ ಹೊಂದಿರುವ ದೃಶ್ಯ, ಅಲ್ಲಿ ನಡೆದ ಪವಿತ್ರ ಆಚರಣೆಗಳು ಸ್ವರ್ಗ ಲೋಕವನ್ನೇ ಧರೆಗಿಳಿಸಿದಂತೆ ಇತ್ತು. ಐಷಾರಾಮಿ ಕ್ರೂಸ್‌ನಲ್ಲಿ ಇಟಲಿಯಿಂದ ಫ್ರಾನ್ಸ್‌ಗೆ ಪ್ರಯಾಣ, ಸೆಲೆಬ್ರಿಟಿಗಳ ಬಹುದೊಡ್ಡ ದಂಡೇ ಮದುವೆಯಲ್ಲಿ ಭಾಗವಹಿಸಿತ್ತು. ಈ ವೇಳೆ ಒಂದೇ ಒಂದು ಫೋಟೊ ಸೋರಿಕೆಯಾಗದಂತೆ ನೋಡಿಕೊಂಡ ರೀತಿ, ಜಾಗತಿಕ ಮಾಧ್ಯಮಗಳಲ್ಲಿ ಸದ್ದು ಮಾಡಿತು.
ಫ್ಯಾಷನ್ ಪ್ಯಾರಿಸ್ ಅನ್ನು ಅನುಸರಿಸಲಿಲ್ಲ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಭಾರತದ ಕರಕುಶಲತೆ, ಉಡುಪು ಫ್ಯಾಷನ್ ವೀಕ್ಸ್‌ಗಿಂತ ಹೆಚ್ಚು ಗಮನ ಸೆಳೆಯಿತು.
ರಾಧಿಕಾ ಮರ್ಚೆಂಟ್ ಹೂವಿನ ಉಡುಪುಗಳಲ್ಲಿ ಎಲ್ಲರ ಗಮನ ಸೆಳೆದರು. ಇಶಾ ಅಂಬಾನಿ ವಂಶಪಾರಂಪರ್ಯ ವಸ್ತ್ರ ಮತ್ತು ವಜ್ರಗಳಲ್ಲಿ ಭಾರತದ ಪರಂಪರೆ ಸಾರಿದರು.ಜಾಗತಿಕ ಫ್ಯಾಷನ್ ಐಕಾನ್‌ಗಳು ಅತ್ಯಂತ ಗೌರವದಿಂದ ಬಾಂಧನಿ, ರೇಷ್ಮೆ, ಜರ್ಡೋಸಿ ಕಸೂತಿಯನ್ನು ಹೊಂದಿರುವ ವಸ್ತ್ರಗಳನ್ನು ಹೆಮ್ಮೆಯಿಂದ ಧರಿಸಿದ್ದರು.

ಬಾಲಿವುಡ್ ಮತ್ತು ಜಾಗತಿಕ ಗ್ಲಾಮರ್
ಶಾರುಖ್ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್ ಸೇರಿ ಭಾರತೀಯ ಚಿತ್ರರಂಗದ ಅನೇಕ ಸ್ಟಾರ್‌ಗಳು, ಸಿಲಿಕಾನ್ ವ್ಯಾಲಿ ಸಿಇಒಗಳು, ಅಂತರರಾಷ್ಟ್ರೀಯ ಪಾಪ್ ಐಕಾನ್‌ಗಳೊಂದಿಗೆ ಬೇರೆ ಎಲ್ಲಿ ಪ್ರದರ್ಶನ ನೀಡಬಹುದು? ಕ್ರಿಕೆಟಿಗರು, ಹಾಲಿವುಡ್ ತಾರೆಯರು, ರಾಜಮನೆತನದವರು ಮತ್ತು ಶತಕೋಟ್ಯಾಧಿಪತಿಗಳು ಎಲ್ಲರೂ ಒಂದೇ ಬಾರಾತ್‌ನಲ್ಲಿ ನೃತ್ಯ ಮಾಡಿದಾಗ, ಇದು ಮದುವೆ ಅಲ್ಲ ಹೊಸ ಇತಿಹಾಸ ಎನ್ನುವುದು ಸ್ಪಷ್ಟವಾಗಿತ್ತು.
ಜಾಗತಿಕ ಮದುವೆ ಶ್ರೀಮಂತಿಕೆಗೆ ಮರುವ್ಯಾಖ್ಯಾನ
ಕಾಶಿಯಿಂದ ಪ್ರೇರಿತ ಅಲಂಕಾರ, ಪ್ರಸಿದ್ದ ವಿನ್ಯಾಸಕ ಪ್ರೆಸ್ಟನ್ ಬೈಲಿ ಅವರ ನೇತೃತ್ವದಲ್ಲಿ ರೂಪಗೊಂಡ ಪ್ರತಿಯೊಂದು ಸ್ಥಳವು ಒಂದೊಂದು ಕಥೆಯನ್ನು ಹೇಳಿತು. ಕಾಡಿನ ಉತ್ಸವಗಳಿಂದ ಕಾಲುವೆ ಪಕ್ಕದ ಮಂಟಪಗಳವರೆಗೆ ಕೇವಲ ಅಲಂಕಾರವಾಗಿರಲಿಲ್ಲ. ಅದೊಂದು ಸಿನಿಮೀಯ ರೂಪದಲ್ಲಿ ಗೋಚರಿಸುತ್ತಿತ್ತು.
ಮಿಲಾನ್ ಮತ್ತು ಟೋಕಿಯೊದಲ್ಲಿನ ಡಿಸೈನ್ ಬ್ಲಾಗ್‌ಗಳು ಇನ್ನೂ "ಅಂಬಾನಿ ಸೌಂದರ್ಯಶಾಸ್ತ್ರ"ವನ್ನು ಉಲ್ಲೇಖಿಸುತ್ತವೆ. ಯಾಕೆಂದರೆ, ಭಾರತ ಕೇವಲ ಸುಂದರವಾಗಿಲ್ಲ. ಅದು ದಾರ್ಶನಿಕ ಎಂದು ಮೊದಲ ಬಾರಿಗೆ ಜಗತ್ತು ಕೂಡ ಒಪ್ಪಿಕೊಂಡಿತು.
ಪೌರಾಣಿಕತೆಯನ್ನು ನೆನಪಿಸುವಂತಹ ದೃಶ್ಯ ವೈಭೋಗ
ರಾಧಿಕಾ ಮರ್ಚೆಂಟ್ ಮದುವೆಯ ಮಂಟಪದತ್ತ ಕೇವಲ ನಡೆದು ಬರಲಿಲ್ಲ. ಅವರು ನವಿಲಿನ ಆಕಾರದ ದೋಣಿಯಲ್ಲಿ ತೇಲಿ ಬಂದಿದ್ದು ವಿಶೇಷವಾಗಿತ್ತು. ಶ್ರೇಯಾ ಘೋಷಾಲ್ ಸಂಗೀತ ಸಂಜೆ ಸಂಗೀತ ಪ್ರಿಯರನ್ನು ಸಂಗೀತದ ಅಲೆಯಲ್ಲಿ ತೇಲಿಸಿತ್ತು. ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ರಾಜಮಹಲ್ ಶೈಲಿಯ ಎಂಟ್ರಿ, ಸಬ್ಯಸಾಚಿ ಕೈ ಚಳಕದಲ್ಲಿ ಸಿದ್ಧವಾಗಿದ್ದ ಶೆರ್ವಾನಿಯಲ್ಲಿ ಮಹಾರಾಜನಂತೆ ಅನಂತ್ ಅಂಬಾನಿ ಕಂಗೊಳಿಸಿದರು.

ವಿಶ್ವ ಮರೆಯದ ಮದುವೆ
ಚಿತ್ರರಂಗ ಇರಲಿ, ಫ್ಯಾಷನ್ ಇರಲಿ ಅಥವಾ ರಾಜಕೀಯ ಇರಲಿ ಯಾವ ಕ್ಷೇತ್ರ ಕೂಡ ಮಾಡದಂತಹ ಕಾರ್ಯಕ್ರಮವನ್ನು ಅಂಬಾನಿ ಮನೆತನ ಅನಂತ್ ಮತ್ತು ರಾಧಿಕಾ ಮದುವೆ ಮೂಲಕ ಮಾಡಿ ತೋರಿಸಿತು. ಪೂರ್ವ ಮತ್ತು ಪಶ್ಚಿಮವನ್ನು ಒಂದು ಮಾಡಿದ್ದಲ್ಲದೇ ಆಧುನಿಕತೆ, ಸಂಪ್ರದಾಯವನ್ನು ಒಟ್ಟಿಗೆ ತಂದಿದ್ದು ವಿಶೇಷವಾಗಿತ್ತು.
ಇದು ಶತಮಾನದ ಅತ್ಯಂತ ಅದ್ದೂರಿ ವಿವಾಹವಾಗಿರಲಿಲ್ಲ, ಮದುವೆ ಮೌಲ್ಯಗಳನ್ನು, ನಂಬಿಕೆಗಳನ್ನು ಮರು ವ್ಯಾಖ್ಯಾನಿಸಿತು. ಜಗತ್ತಿನ ಹಲವರು ಅತಿಥಿಗಳಾಗಿ ಅಲ್ಲ, ಅಭಿಮಾನಿಗಳಾಗಿ ಈ ಭವ್ಯ ಮದುವೆಯನ್ನು ಕಣ್ತುಂಬಿಕೊಂಡರು.
ನಿಜ ಹೇಳಬೇಕು ಅಂದರೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಕೇವಲ ಆಚರಣೆಯಲ್ಲ, ಆದರೆ, ಶತಮಾನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಅತ್ಯದ್ಭುತವಾದ ಕ್ಷಣವಾಗಿತ್ತು. ಇಂತಹ ಭವ್ಯವಾದ ಮದುವೆಯನ್ನು ಮುಂದಿನ 1000 ವರ್ಷಗಳಲ್ಲಿ ಜಗತ್ತು ವೀಕ್ಷಿಸದೇ ಇರಬಹುದು


Click it and Unblock the Notifications











