Mahesh Babu:ತಂದೆ ಆಸ್ತಿ ಕೊಡದಿದ್ರು, ಮಹೇಶ್ ಬಾಬು ಕುಬೇರನಾಗಿದ್ದೇಗೆ? ಪ್ರಿನ್ಸ್ ಬಳಿ ಎಷ್ಟು ಸಾವಿರ ಕೋಟಿ ಆಸ್ತಿಯಿದೆ ಗೊತ್ತಾ?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಡಗರ ಹೆಚ್ಚಿಸಲು 'ಗುಂಟೂರು ಖಾರಂ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಲಿದೆ. ಚಿತ್ರವೊಂದಕ್ಕೆ 50 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುವ ಮಹೇಶ್ ಬಾಬು ದಕ್ಷಿಣದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.
ಮಹೇಶ್ ಬಾಬು 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೂಪರ್ ಹಿಟ್ ಬ್ಯುಸಿನೆಸ್‌ಮ್ಯಾನ್ ಸಿನಿಮಾ ಹೊಸ ರೂಪದಲ್ಲಿ ರೀ ರಿಲೀಸ್ ಆಗಿ ಸದ್ದು ಮಾಡ್ತಿದೆ. ಇನ್ನು ಸಿನಿಮಾ ಮಾತ್ರವಲ್ಲ ಜಾಹೀರಾತುಗಳಿಂದಲೂ ಮಹೇಶ್ ಬಾಬು ಹತ್ತಾರು ಕೋಟಿ ಸಂಪಾದಿಸುತ್ತಿದ್ದಾರೆ. ಗಳಿಸಿದ ಹಣವನ್ನು ಉದ್ಯಮಗಳಲ್ಲಿ ತೊಡಗಿಸಿ ಲಾಭ ಗಳಿಸುತ್ತಿದ್ದಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಟಾಲಿವುಡ್ ಪ್ರಿನ್ಸ್ ಆಸ್ತಿ ಮೌಲ್ಯ ಹೆಚ್ಚುತ್ತಲೇಯಿದೆ. ಕಳೆದ ವರ್ಷವಷ್ಟೇ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ವಿಧಿವಶರಾದರು. ತಂದೆಯಿಂದ ಮಹೇಶ್ ಬಾಬುಗೆ ಯಾವುದೇ ಆಸ್ತಿ ಸಿಗಲಿಲ್ಲ ಎನ್ನಲಾಗುತ್ತದೆ.

ಘಟ್ಟಮನೇನಿ ಕೃಷ್ಣ ತಮ್ಮ ಆಸ್ತಿಯನ್ನೆಲ್ಲಾ ಮೊಮ್ಮಕ್ಕಳ ಹೆಸರಿಗೆ ಬರೆದಿದ್ದಾರೆ ಎನ್ನುವ ಮಾತಿದೆ. ತಂದೆಯಿಂದ ಯಾವುದೇ ಆಸ್ತಿ ಪಡೆಯದಿದ್ದರೂ ವಾರಸತ್ವವನ್ನು ಪಡೆದುಕೊಂಡ ಮಹೇಶ್ ಬಾಬು ಸೂಪರ್ ಸ್ಟಾರ್ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಮಹೇಶ್ ಮುಂದೆ 1999ರಲ್ಲಿ ಹೀರೊ ಆಗಿ ಪರಿಚಿತರಾದ್ದರು. ಸ್ಪುರದ್ರೂಪಿ ನಟ ತಮ್ಮದೇ ವಿಭಿನ್ನ ಸ್ಟೈಲ್, ಮ್ಯಾನರಿಸಂ ಹಾಗೂ ಅಭಿನಯದಿಂದ ಅಭಿಮಾನಿಗಳ ಮನಗೆದ್ದರು.
ಭಾರೀ ಮೊತ್ತದ ವರದಕ್ಷಿಣೆ
ಆಗಸ್ಟ್ 9, 1975ರಲ್ಲಿ ಮಹೇಶ್ ಬಾಬು ಮದ್ರಾಸ್‌ನಲ್ಲಿ ಹುಟ್ಟಿ ಬೆಳೆದರು. ಬಾಲ್ಯದಲ್ಲೇ ತಂದೆ ಜೊತೆ ಜೊತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಹಾಲಿವುಡ್ ನಟನಂತ ಲುಕ್‌ನಿಂದ ಮಹಿಳಾ ಅಭಿಮಾನಿಗಳ ದಿಲ್ ಕದ್ದ ಮಹೇಶ್ 2005ರಲ್ಲಿ ನಟಿ ನಮ್ರತಾ ಶಿರೋಡ್ಕರ್ ಕೈಹಿಡಿದರು. ವರದಕ್ಷಿಣೆ ರೂಪದಲ್ಲೂ ಭಾರೀ ಮೊತ್ತ ಸಿಕ್ಕಿದೆ ಎನ್ನಲಾಗುತ್ತದೆ. ಮುಂಬೈ ಮೂಲದ ನಮ್ರತಾ ಶಿರೋಡ್ಕರ್ ಕೂಡ ಶ್ರೀಮಂತರ ಮನೆಮಗಳು. ಹಾಗಾಗಿ 2000 ಕೋಟಿ ರೂ.ವರೆಗೆ ಆಕೆಯ ಆಸ್ತಿ ಮಹೇಶ್ ಫ್ಯಾಮಿಲಿಗೆ ಸೇರಿದೆ ಎನ್ನಲಾಗುತ್ತದೆ.

ದೊಡ್ಡಮೊತ್ತದ ಸಂಭಾವನೆ
ನಟ ಮಹೇಶ್ ಬಾಬು ತೆಲುಗು ಚಿತ್ರರಂಗದ ನಂಬರ್ ವನ್ ಸ್ಟಾರ್‌ಗಳ ಪಟ್ಟಿಯಲ್ಲಿ ನಿಲ್ಲುತ್ತಾರೆ. ಚಿತ್ರವೊಂದಕ್ಕೆ 60ರಿಂದ 70 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಲಕ್ಷಗಳಿಂದ ಸಂಭಾವನೆ ಪಡೆಯಲು ಶುರು ಮಾಡಿದ ಪ್ರಿನ್ಸ್, ಇವತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟರ ಸಾಲಿನಲ್ಲಿ ನಿಂತಿದ್ದಾರೆ. ಕೆಲವೊಮ್ಮೆ ಸಂಭಾವನೆ ಬದಲು ಲಾಭದಲ್ಲಿ ಪಾಲು ಕೂಡ ಪಡೆಯುತ್ತಾರೆ. ಮುಂದೆ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸ್ತಿದ್ದು ಅದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಜೇಬಿಗಿಳಿಸುವ ಸಾಧ್ಯತೆಯಿದೆ.
ಮಲ್ಟಿಪ್ಲೆಕ್ಸ್, ರಿಯಲ್ ಎಸ್ಟೇಟ್
ನಟ ಮಹೇಶ್ ಬಾಬು ಬರೀ ಸಿನಿಮಾ, ಜಾಹೀರಾತುಗಳಿಂದ ಮಾತ್ರವಲ್ಲ ವ್ಯಾಪಾರ ವಹಿವಾಟು ನಡೆಸುವ ಮೂಲಕವೂ ಪ್ರತಿ ವರಷ ಕೋಟಿ ಕೋಟಿ ಕೂಡಿಟ್ಟಿದ್ದಾರೆ. ಎಂಬಿ ಮಲ್ಟಿಪೆಕ್ಸ್‌ನಲ್ಲೂ ಮಹೇಶ್ ಬಾಬು ಶೇರ್ ಇದೆ. ಇನ್ನು ಆಸ್ಪತ್ರೆ, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಹಣ ಹೂಡಿಕೆ ಮಾಡಿದ್ದಾರೆ. ಐಷಾರಾಮಿ ಬಂಗಲೆ, ದುಬಾರಿ ಕಾರುಗಳು ಮಹೇಶ್ ಬಾಬು ಬಳಿಯಿದೆ. ಹೈದರಾಬಾದ್‌ನಲ್ಲಿರುವ ಬಂಗಲೆಯ ಇವತ್ತಿನ ಮೌಲ್ಯ 40 ಕೋಟಿ ರೂ. ಎನ್ನಲಾಗುತ್ತದೆ. ಜಿಮ್, ಸ್ವಿಮ್ಮಿಂಗ್ ಪೂಲ್ ಹೀಗೆ ಎಲ್ಲಾ ಸೌಕರ್ಯಗಳು ಈ ಮನೆಯಲ್ಲಿದೆ. ಬೆಂಗಳೂರಿನಲ್ಲೂ ಮಹೇಶ್ ಬಾಬು ಆಸ್ತಿ ಇದೆ ಎನ್ನುವ ಮಾಹಿತಿ ಇದೆ.
ಒಟ್ಟು ಆಸ್ತಿ ಮೌಲ್ಯ ₹13000 ಕೋಟಿ?
ಇತ್ತೀಚೆಗಷ್ಟೆ ಮಹೇಶ್ ಬಾಬು 5.4 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ್ದರು. ಆಡಿ ಇಟ್ರಾನ್, ಬಿಎಂ ಡಬ್ಲೂ, ಮರ್ಸಿಡೀಸ್ ಬೆಂಜ್, ಲ್ಯಾಂಬೊರ್ಗನಿ, ಟೊಯೋಟೊ ಲ್ಯಾಂಡ್ ಕ್ರೂಸರ್ ಸೇರಿದಂ ಹಲವು ದುಬಾರಿ ಕಾರುಗಳು ಟಾಲಿವುಡ್ ಪ್ರಿನ್ಸ್ ಬಳಿಯಿದೆ. ತೆಲುಗು ಏಷ್ಯಾನೆಟ್ ನ್ಯೂಸ್ ವರದಿ ಪ್ರಕಾರ ಟಾಲಿವುಡ್ ಸೂಪರ್ ಸ್ಟಾರ್ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 13 ಸಾವಿರ ಕೋಟಿ ರೂ. ಎನ್ನಲಾಗ್ತಿದೆ. ದಂಪತಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ.


Click it and Unblock the Notifications











