ಇತಿಹಾಸ ಸೃಷ್ಟಿಸಿದ 'ಡಿಡಿಎಲ್‌ಜೆ'ಗೆ ಶಾರುಖ್ ಖಾನ್ ಮೊದಲ ಆಯ್ಕೆ ಆಗಿರಲಿಲ್ಲ; ಆದಿತ್ಯ ಚೋಪ್ರಾ ಲಿಸ್ಟ್‌ನಲ್ಲಿದ್ದವರೇ ಬೇರೆ!
ಬಾಲಿವುಡ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಸಿನಿಮಾ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ'. ಭಾರತೀಯ ಚಿತ್ರರಂಗದಲ್ಲಿ ರೊಮ್ಯಾಂಟಿಕ್ ಸಿನಿಮಾಗಳಿಗೆ ಹೊಸ ಇಮೇಜ್ ಕೊಟ್ಟ ಸಿನಿಮಾವಿದು. ಯಶ್ ಚೋಪ್ರಾ, ಆದಿತ್ಯ ಚೋಪ್ರಾ, ಕಾಜೋಲ್, ಶಾರುಖ್ ಖಾನ್, ಅಂಬರೀಶ್ ಪುರಿ, ಅನುಪಮ್ ಖೇರ್ ಅಂತಹ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದರು. ಇಂದಿಗೂ 'ಡಿಡಿಎಲ್‌ಜೆ'ಗೆ ದೊಡ್ಡ ಅಭಿಮಾನಿ ಬಳಗವಿದೆ.
ಈ ಸಿನಿಮಾ ಶಾರುಖ್ ಖಾನ್, ಕಾಜೋಲ್ ಹಾಗೂ ಆದಿತ್ಯ ಚೋಪ್ರಾಗೆ ಬಾಲಿವುಡ್‌ನಲ್ಲಿ ಹೊಸ ಇಮೇಜ್ ಕೊಟ್ಟಿತ್ತು. ಇಂದು ಶಾರುಖ್ ಖಾನ್ ಬಾಲಿವುಡ್‌ನಲ್ಲಿ ಕಿಂಗ್ ಅಂತೆ ಮೆರೆಯೋಕೆ 'ಡಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸಿನಿಮಾದ ಪಾತ್ರದ ಬಹಳ ದೊಡ್ಡದಿದೆ. ಯಾಕಂದ್ರೆ, ಈ ಸಿನಿಮಾ ಬರುವವರೆಗೂ ಶಾರುಖ್ ಖಾನ್ ಹೆಚ್ಚು ನೆಗೆಟಿವ್ ಶೇಟ್‌ಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೊಂದು ಸಿನಿಮಾ ಆ ಇಮೇಜ್ ಅನ್ನೇ ಬದಲಿಸಿಬಿಟ್ಟಿತ್ತು.

ಇನ್ನೊಂದು ಕಡೆ ನಿರ್ದೇಶಕ ಆದಿತ್ಯ ಚೋಪ್ರಾಗೆ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಮೊದಲ ಸಿನಿಮಾ ಆಗಿತ್ತು. ಈ ಸಿನಿಮಾ ಆದಿತ್ಯ ಚೋಪ್ರಾಗೆ ಗೆಲ್ಲಲೇ ಬೇಕಿತ್ತು. ಈ ಸಿನಿಮಾದ ಸ್ಕ್ರಿಪ್ಟ್ ಮಾಡಿದಾಗ, ಆದಿತ್ಯ ಚೋಪ್ರಾ ಮನಸ್ಸಿನಲ್ಲಿ ಶಾರುಖ್ ಖಾನ್ ಇರಲಿಲ್ಲ. ವಿಶ್ವದ ದುಬಾರಿ ನಟನನ್ನು ಪ್ರಮುಖ ಪಾತ್ರದಲ್ಲಿ ಹಾಕಿಕೊಳ್ಳಬೇಕು ಅನ್ನೋ ಆಸೆಯಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆದಿತ್ಯ ಚೋಪ್ರಾ ಐಡಿಯಾವನ್ನು ತಂದೆ ಯಶ್ ಚೋಪ್ರಾ ಒಪ್ಪಲಿಲ್ಲ. ಹಾಗಿದ್ರೆ, ಡಿಡಿಎಲ್‌ಜೆಗಾಗಿ ಯಾವ್ಯಾವ ಹೀರೊಗೆ ಅಪ್ರೋಚ್ ಮಾಡಲಾಗಿತ್ತು. ತಿಳಿಯುವುದಕ್ಕೆ ಮುಂದೆ ಓದಿ.
ಟಾಮ್ ಕ್ರೋಸ್
'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸ್ಕ್ರಿಪ್ಟ್ ಮಾಡಿದಾಗ, ಆದಿತ್ಯ ಚೋಪ್ರಾ ತಲೆಯಲ್ಲಿ ಶಾರುಖ್ ಖಾನ್ ಇರಲಿಲ್ಲ. ಹಾಲಿವುಡ್ ನಟ ಟಾಮ್ ಕ್ರೂಸ್ ಅನ್ನು ಹೀರೊ ಆಗಿ ಹಾಕಿಕೊಳ್ಳಬೇಕು ಅಂತ ಬಯಸಿದ್ದರು. ಆದರೆ, ಯಶ್ ಚೋಪ್ರಾ ಈ ನಿರ್ಧಾರವನ್ನು ಒಪ್ಪಿಕೊಳ್ಳಿಲ್ಲ. ತದನಂತರ ಟಾಮ್ ಕ್ರೂಸ್ ಅವರನ್ನು ಈ ಸಿನಿಮಾದಿಂದ ಕೈ ಬಿಡಲಾಗಿತ್ತು. ಆಗಲೇ ಯಶ್ ಚೋಪ್ರಾ ಅಂದು ನೆಗಟಿವ್ ಪಾತ್ರಗಳಿಂದ ಸದ್ದು ಮಾಡಿದ್ದ ಶಾರುಖ್ ಖಾನ್ ಹೆಸರನ್ನು ಸೂಚಿಸಿದ್ದರು.

ಸೈಫ್ ಅಲಿ ಖಾನ್
ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ಹೆಸರನ್ನು ಡಿಡಿಎಲ್‌ಜೆಯಿಂದ ಕಿತ್ತಾಕಿದ ಬಳಿಕ ಆದಿತ್ಯ ಚೋಪ್ರಾ ಮನಸ್ಸಿನಲ್ಲಿ ಹುಟ್ಟುಕೊಂಡ ಮತ್ತೊಂದು ಸೈಫ್ ಅಲಿ ಖಾನ್. ಕಿಂಗ್ ಖಾನ್ ಬಳಿಕ ಸೈಫ್ ಅಲಿ ಖಾನ್ ಅನ್ನು ಅಪ್ರೋಚ್ ಅನ್ನು ಮಾಡಲಾಗಿತ್ತು. ಆದರೆ,'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಸಿನಿಮಾಗೆ ಸೈಫ್ ಅಲಿ ಖಾನ್ ಹೆಸರು ಸೂಚಿಸಲಾಗಿತ್ತು. ಆದ ಅಂದು ಸೈಫ್ ಅಲಿ ಖಾನ್ ಕೂಡ ಸಿನಿಮಾ ಮಾಡಲು ನಿರಾಕರಿಸಿದ್ದರು.
ಸಲ್ಮಾನ್ ಖಾನ್- ಆಮಿರ್ ಖಾನ್
ಸೈಫ್ ಅಲಿ ಖಾನ್ ಕೂಡ ಈ ಸಿನಿಮಾವನ್ನುತಿರಸ್ಕರಿಸಿದ್ದರಿಂದ ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅನ್ನು ಅಪ್ರೋಚ್ ಮಾಡಲಾಗಿತ್ತು. ಅದೂ ಕೂಡ ವರ್ಕ್ ಆಗಲಿಲ್ಲ. ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಕೂಡ ಡಿಡಿಎಲ್‌ಜೆ ಸಿನಿಮಾ ಮಾಡೋದಿಲ್ಲ ಅಂತ ಹೇಳಿದ್ದರು. ಆ ಬಳಿಕವೇ ಆದಿತ್ಯ ಚೋಪ್ರಾ ಮತ್ತೆ ಶಾರುಖ್ ಖಾನ್ ಬಳಿ ತೆರಳಿ ಇನ್ನೊಮ್ಮೆ ಕಥೆ ಹೇಳಿದ್ದರು. ಆಗ ಆದಿತ್ಯ ಚೋಪ್ರಾ ನರೇಷನ್‌ಗೆ ಶಾರುಖ್ ಖಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಶಾರುಖ್ ಖಾನ್
ಆದಿತ್ಯ ಚೋಪ್ರಾ ಒಂದಿಷ್ಟು ಸ್ಟಾರ್ ಮನೆಗಳಿಗೆ ಅಲೆದಾಡಿ ಸುಸ್ತಾಗಿದ್ದರು. ಆ ವೇಳೆ ತಂದೆ ಹೇಳಿದಂತೆ ಶಾರುಖ್ ಖಾನ್ ಅನ್ನೇ ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದರು. ಈ ವೇಳೆ ಶಾರು ಖಾನ್ ಒಂದು ಷರತ್ತು ಹಾಕಿದ್ದರು.. ಈ ಸಿನಿಮಾದಿಂದ ನಿಮಗೆ ಹೊಸ ಇಮೇಜ್ ಸಿಗುತ್ತೆ ಎಂದು ಭರವಸೆ ಮೂಡಿದ ಮೇಲೆನೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅಂದು ಸಿನಿಮಾ ಕೈ ಬಿಟ್ಟಿರೊ ತಾರೆಯರು ಸ್ಟಾರ್ ಆಗಿದ್ದಾರೆ. 'ಡಿಡಿಎಲ್'ಯಲ್ಲಿ ನಟಿಸಿದ್ದರೆ, ಅವರಿಗೆ ಹೊಸ ಇಮೇಜ್ ಸಿಗುತ್ತಿತ್ತು. ಆದ್ರೀಗ ಶಾರುಖ್ ಖಾನ್ ಬಿಟ್ಟು ಬೇರೆಯವರನ್ನು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ.


Click it and Unblock the Notifications











