twitter
    For Quick Alerts
    ALLOW NOTIFICATIONS  
    For Daily Alerts

    ದೇಶದ ಖ್ಯಾತ ನಟರು ರಾಜ್‌ಕುಮಾರ್ ಅವರಿಂದ ಪಡೆದ ಲಾಭ ಕಡಿಮೆಯಲ್ಲ

    |

    ಡಾ.ರಾಜ್‌ಕುಮಾರ್ ಅವರಷ್ಟು ಸಕ್ಸಸ್ ರೇಟ್ ಕಂಡ ಮತ್ತೊಬ್ಬ ಭಾರತೀಯ ನಾಯಕ ನಟ ಇಲ್ಲ. ಅವರ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿದ್ದು ವಿರಳಾತಿವಿರಳ. ಅದಕ್ಕೆ ಅವರಿಗೆ ಬಹಳ ಬೇಡಿಕೆ ಇತ್ತು. ದಶಕಗಳ ವರೆಗೆ ರಾಜ್‌ಕುಮಾರ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು.

    ರಾಜ್‌ಕುಮಾರ್ ನಟಿಸಿದ್ದ 14 ಸಿನಿಮಾಗಳು ಒಂದೇ ವರ್ಷದಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದವು. ಎರಡು ಬಾರಿ ಒಂದೇ ವರ್ಷದಲ್ಲಿ 14 ಸಿನಿಮಾಗಳು ಬಿಡುಗಡೆ ಆಗಿದ್ದು ವಿಶೇಷ. ಈ ಕಾಲದಲ್ಲಿ ನಾಯಕ ನಟನೊಬ್ಬನ 14 ಸಿನಿಮಾಗಳು ವರ್ಷದಲ್ಲಿ ಬಿಡುಗಡೆ ಆಗುವುದನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ.

    ಅದು ಮಾತ್ರವೇ ಅಲ್ಲದೆ ರಾಜ್‌ಕುಮಾರ್ ನಟಿಸಿರುವ ಹಲವಾರು ಸಿನಿಮಾಗಳು ಬೇರೆ ಭಾಷೆಗೆ ರೀಮೇಕ್ ಆಗಿದ್ದವು. ರಾಜ್‌ಕುಮಾರ್ ಎಂದೂ ಬೇರೆ ಭಾಷೆಯಲ್ಲಿ ನಟಿಸಲಿಲ್ಲವಾದರೂ ಅವರ ನಟನೆಯ ಸಿನಿಮಾಗಳನ್ನು ಪರಭಾಷೆಯ ಸೂಪರ್ ಸ್ಟಾರ್ ನಟರು ನಾ ಮುಂದು-ತಾ ಮುಂದು ಎಂದು ಹಕ್ಕುಗಳನ್ನು ಪಡೆದು ನಟಿಸಿ ಹಣ, ಖ್ಯಾತಿ ಮಾಡಿಕೊಂಡರು.

    ತಮಿಳಿನ ಎಂಜಿಆರ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ರಜನೀಕಾಂತ್, ಮುತ್ತುರಾಮ್. ತೆಲುಗಿನ ಎನ್‌ಟಿಆರ್, ಅಕ್ಕಿನೇನಿ ನಾಗೇಶ್ವರರಾವ್, ಸೂಪರ್ ಸ್ಟಾರ್ ಕೃಷ್ಣ, ಶೋಬನ್ ಬಾಬು, ಚಿರಂಜೀವಿ, ಜಿ.ರಾಮಕೃಷ್ಣ. ಬಾಲಿವುಡ್‌ನ ಅಮಿತಾಬ್ ಬಚ್ಚನ್, ರಾಜೇಶ್ ಖನ್ನ, ಧರ್ಮೇಂದ್ರ, ಸಂಜೀವ್ ಕುಮಾರ್, ಅನಿಲ್ ಕಪೂರ್, ಗೋವಿಂದ. ಮಲಯಾಳಂನ ಪ್ರೇಮ್ ನಜೀರ್ ಹೀಗೆ ದೊಡ್ಡ ದೊಡ್ಡ ನಟರೆಲ್ಲರೂ ರಾಜ್‌ಕುಮಾರ್ ನಟಿಸಿರುವ ಸಿನಿಮಾಗಳನ್ನು ರೀಮೇಕ್ ಮಾಡಿ ಹಿಟ್ ಪಡೆದವರೇ. ಗಮನಿಸಬೇಕಾಗಿರುವುದೆಂದರೆ ಎನ್‌ಟಿಆರ್, ಎಂಜಿಆರ್, ಎಎನ್‌ಆರ್, ರಾಜೇಶ್ ಖನ್ನಾ ಆದ ನಂತರ ಬಂದ ಚಿರಂಜೀವಿ, ರಜನೀಕಾಂತ್, ಅನಿಲ್ ಕಪೂರ್, ಗೋವಿಂದ ಅವರುಗಳಂಥ ಎರಡನೇ ತಲೆಮಾರು ನಟರು ಸಹ ಅಣ್ಣಾವ್ರ ಸಿನಿಮಾಗಳನ್ನು ರೀಮೇಕ್ ಮಾಡಿ ಹಿಟ್ ಪಡೆದರು. ಆದರೆ ಅಣ್ಣಾವ್ರು ಮಾತ್ರ ಅಚಲವಾಗಿ ಉಳಿದರು.

    ರಾಜ್‌ಕುಮಾರ್ ನಟಿಸಿದ ಸಿನಿಮಾಗಳಲ್ಲಿ ತೆಲುಗಿನ ಎನ್‌ಟಿಆರ್

    ರಾಜ್‌ಕುಮಾರ್ ನಟಿಸಿದ ಸಿನಿಮಾಗಳಲ್ಲಿ ತೆಲುಗಿನ ಎನ್‌ಟಿಆರ್

    ತೆಲುಗಿನ ಖ್ಯಾತ ನಟ, ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ ಎನ್‌ಟಿ ರಾಮರಾವ್‌ ಅವರು ರಾಜ್‌ಕುಮಾರ್ ನಟಿಸಿರುವ ಮೂರು ಸಿನಿಮಾಗಳ ತೆಲುಗು ರೀಮೇಕ್‌ನಲ್ಲಿ ನಟಿಸಿದ್ದರು. 'ಕುಲಗೌರವ' ಸಿನಿಮಾದ ತೆಲುಗು ರೀಮೇಕ್ 'ಕುಲಗೌರವಂ'. 'ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ' ಸಿನಿಮಾದ ರೀಮೇಕ್ 'ಶ್ರೀ ಕೃಷ್ಣ ತುಲಾಭಾರಂ', 'ಗಂಧದ ಗುಡಿ' ಸಿನಿಮಾದ ರೀಮೇಕ್ 'ಅಡವಿ ರಾಮುಡು' ಸಿನಿಮಾದಲ್ಲಿ ನಟಿಸಿದ್ದರು ಎನ್‌ಟಿಆರ್. ಈ ಇಬ್ಬರಿಗೂ ಅಪರಿಮಿತ ಸ್ನೇಹ-ಪ್ರೀತಿ-ಗೌರವಗಳಿತ್ತು. ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು ಎನ್‌ಟಿಆರ್ ಆದರೆ ವಿನಮ್ರದಿಂದ ಆಹ್ವಾನವನ್ನು ನಿರಾಕರಿಸಿ ಕೊನೆಯವರೆಗೂ ಕೇವಲ ನಟರಾಗಿಯಷ್ಟೆ ಉಳಿದರು ರಾಜ್‌ಕುಮಾರ್.

    ಅಣ್ಣಾವ್ರ ಎರಡು ಸಿನಿಮಾಗಳ ರೀಮೇಕ್‌ನಲ್ಲಿ ನಟಿಸಿದ್ದ ಎಂಜಿಆರ್‌

    ಅಣ್ಣಾವ್ರ ಎರಡು ಸಿನಿಮಾಗಳ ರೀಮೇಕ್‌ನಲ್ಲಿ ನಟಿಸಿದ್ದ ಎಂಜಿಆರ್‌

    ತಮಿಳಿನ ಖ್ಯಾತ ನಟ, ತಮಿಳುನಾಡು ಮಾಜಿ ಸಿಎಂ ಎಂಜಿಆರ್‌ ಅವರು ಅಣ್ಣಾವ್ರ ಎರಡು ಸಿನಿಮಾಗಳ ತಮಿಳು ರೀಮೇಕ್‌ನಲ್ಲಿ ನಟಿಸಿದ್ದಾರೆ. ಅಣ್ಣಾವ್ರು ನಟಿಸಿದ್ದ 'ಬೀದಿ ಬಸವಣ್ಣ' ಸಿನಿಮಾದ ರೀಮೇಕ್‌ 'ತೇಡಿ ವಂದ ಮಾಪಿಳ್ಳೈ' ಹಾಗೂ 'ಬಾಳು ಬೆಳಗಿತು' ಸಿನಿಮಾದ ರೀಮೇಕ್‌ 'ಊರುಕ್ಕು ಉಳೈಪವನ್' ಸಿನಿಮಾದಲ್ಲಿ ಎಂಜಿಆರ್ ನಟಿಸಿದ್ದರು.

    ಅಮಿತಾಬ್ ಬಚ್ಚನ್-ಧರ್ಮೇಂದ್ರ-ರಾಜೇಶ್ ಖನ್ನಾ

    ಅಮಿತಾಬ್ ಬಚ್ಚನ್-ಧರ್ಮೇಂದ್ರ-ರಾಜೇಶ್ ಖನ್ನಾ

    ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ರಾಜ್‌ಕುಮಾರ್ ಅವರು ನಟಿಸಿದ್ದ ಶಂಕರ್-ಗುರು ಸಿನಿಮಾದ ಹಿಂದಿ ರೀಮೇಕ್‌ 'ಮಹಾನ್‌'ನಲ್ಲಿ ನಟಿಸಿದ್ದರು. ಬಾಲಿವುಡ್‌ ನಟ ಧರ್ಮೇಂದ್ರ, ಗಂಧದ ಗುಡಿ ಸಿನಿಮಾದ ರೀಮೇಕ್ 'ಕರ್ತವ್ಯ' ಹಾಗೂ 'ತಾಯಿಗೆ ತಕ್ಕ ಮಗ' ಸಿನಿಮಾದ ರೀಮೇಕ್ 'ಮೇ ಇಂತಿಕಾಮ್ ಲೂಂಗಾ' ಸಿನಿಮಾದಲ್ಲಿ ನಟಿಸಿದ್ದರು. ರಾಜೇಶ್ ಖನ್ನಾ ಅವರು, 'ಬಾಳು ಬೆಳಗಿತು' ಸಿನಿಮಾದ ಹಿಂದಿ ರೀಮೇಕ್ 'ಹಮ್‌ಷಕಲ್' ಸಿನಿಮಾದಲ್ಲಿ ನಟಿಸಿದ್ದರು.

    ಶಿವಾಜಿ ಗಣೇಶನ್-ಜೆಮಿನಿ ಗಣೇಶನ್

    ಶಿವಾಜಿ ಗಣೇಶನ್-ಜೆಮಿನಿ ಗಣೇಶನ್

    'ಕಸ್ತೂರಿ ನಿವಾಸ' ಸಿನಿಮಾದ ರೀಮೇಕ್ 'ಅವಂದಾ ಮನಿದನ್' ಹಾಗೂ 'ಶಂಕರ್-ಗುರು' ಸಿನಿಮಾದ ರೀಮೇಕ್ 'ತ್ರಿಶೂಲಂ' ನಲ್ಲಿ ಶಿವಾಜಿ ಗಣೇಶನ್ ನಟಿಸಿದ್ದರು. 'ಗಂಗೆ-ಗೌರಿ' ಸಿನಿಮಾದ ರೀಮೇಕ್ 'ಗಂಗಾ-ಗೌರಿ'ಯಲ್ಲಿ ಜೆಮಿನಿ ಗಣೇಶನ್ ನಟಿಸಿದ್ದರು. ತಮಿಳಿನ ಮತ್ತೊಬ್ಬ ಖ್ಯಾತ ನಟ ಆರ್.ಮುತ್ತುರಾಮನ್ ಅವರು 'ಕಣ್ತೆರದು ನೋಡು' ಸಿನಿಮಾದ ರೀಮೇಕ್ 'ದೇವಿ'ಯಲ್ಲಿ ನಟಿಸಿದ್ದರು.

    ಅಕ್ಕಿನೇನಿ ನಾಗೇಶ್ವರ್‌ ರಾವ್, ಕೃಷ್ಣ

    ಅಕ್ಕಿನೇನಿ ನಾಗೇಶ್ವರ್‌ ರಾವ್, ಕೃಷ್ಣ

    ತೆಲುಗಿನ ಅಕ್ಕಿನೇನಿ ನಾಗೇಶ್ವರ ರಾವ್ ಅವರು 'ಬಾಳು ಬೆಳಗಿತು' ಸಿನಿಮಾದ ರೀಮೇಕ್ 'ಮಂಚಿವಾಡು'. 'ಭಕ್ತ ಕುಂಬಾರ' ಸಿನಿಮಾದ ರೀಮೇಕ್ 'ಚಕ್ರಧಾರಿ'ಯಲ್ಲಿ ನಟಿಸಿದ್ದರು. ಇನ್ನು ಸೂಪರ್ ಸ್ಟಾರ್ ಕೃಷ್ಣ ಅವರು, 'ಶಂಕರ್-ಗುರು' ಸಿನಿಮಾದ ರೀಮೇಕ್ 'ಕುಮಾರ ರಾಜ'. 'ಭಾಗ್ಯದ ಲಕ್ಷ್ಮಿ ಬಾರಮ್ಮ' ಸಿನಿಮಾದ ರೀಮೇಕ್ 'ಮಹಾರಾಜಶ್ರಿ ಮಾಯಗಾಡು' ಸಿನಿಮಾದಲ್ಲಿ ನಟಿಸಿದ್ದರು. ಇದು ಪೂರ್ಣ ರೀಮೇಕ್ ಅಲ್ಲದಿದ್ದರು ಅದೇ ಸಿನಿಮಾದಲ್ಲಿ ಸ್ಪೂರ್ತಿ ಪಡೆದು ನಿರ್ಮಿಸಲಾದ ಸಿನಿಮಾ.

    ಶೋಬನ್ ಬಾಬು, ಕೃಷ್ಣಂ ರಾಜು, ರಾಮಕೃಷ್ಣ

    ಶೋಬನ್ ಬಾಬು, ಕೃಷ್ಣಂ ರಾಜು, ರಾಮಕೃಷ್ಣ

    ತೆಲುಗಿನ ಶೋಬನ್ ಬಾಬು ಅವರು 'ಚಲಿಸುವ ಮೋಡಗಳು' ಸಿನಿಮಾದ ರೀಮೇಕ್ 'ರಾಜಕುಮಾರ' ಹಾಗೂ 'ಸನಾದಿ ಅಪ್ಪಣ್ಣ' ಸಿನಿಮಾದ ರೀಮೇಕ್ 'ಸನ್ನಾಯಿ ಅಪ್ಪಣ್ಣ'ನಲ್ಲಿ ನಟಿಸಿದ್ದರು. ತೆಲುಗಿನ ಮತ್ತೊಬ್ಬ ನಟ ಕೃಷ್ಣಂ ರಾಜು ಅವರು 'ತಾಯಿಗೆ ತಕ್ಕ ಮಗ' ಸಿನಿಮಾದ ರೀಮೇಕ್ 'ಪುಲಿ ಬಿಡ್ಡ' ಸಿನಿಮಾದಲ್ಲಿ ನಟಿಸಿದ್ದರು. ತೆಲುಗಿನ ಮತ್ತೊಬ್ಬ ಖ್ಯಾತ ನಟ ರಾಮಕೃಷ್ಣ ಅವರು, 'ಎರಡು ಕನಸು' ಸಿನಿಮಾದ ರೀಮೇಕ್ 'ಪೂಜಾ'ನಲ್ಲಿ ನಟಿಸಿದ್ದರು.

    ಮಲಯಾಳಂನಲ್ಲೂ ಅಣ್ಣಾವ್ರ ಸಿನಿಮಾ ರೀಮೇಕ್ ಆಗಿದೆ

    ಮಲಯಾಳಂನಲ್ಲೂ ಅಣ್ಣಾವ್ರ ಸಿನಿಮಾ ರೀಮೇಕ್ ಆಗಿದೆ

    ಹಿಂದಿಯ ಸಂಜೀವ್ ಕುಮಾರ್ ಅವರು 'ಕಸ್ತೂರಿ ನಿವಾಸ' ಸಿನಿಮಾದ ರೀಮೇಕ್ 'ಶಾಂದಾರ್‌'ನಲ್ಲಿ ನಟಿಸಿದರು. ಮಲಯಾಳಂನ ಪ್ರೇಮ್ ನಜೀರ್ ಅವರು 'ಕಣ್ತೆರದು ನೋಡು' ಸಿನಿಮಾದ ರೀಮೇಕ್ 'ಕಾವ್ಯಮೇಲ' ನಲ್ಲಿ ನಟಿಸಿದರು.

    ಹೊಸ ತಲೆಮಾರಿನ ರಜನೀಕಾಂತ್-ಚಿರಂಜೀವಿಗೂ ಅಣ್ಣಾವ್ರ ಸಿನಿಮಾ

    ಹೊಸ ತಲೆಮಾರಿನ ರಜನೀಕಾಂತ್-ಚಿರಂಜೀವಿಗೂ ಅಣ್ಣಾವ್ರ ಸಿನಿಮಾ

    ಅಣ್ಣಾವ್ರ ಅಭಿಮಾನಿ ಆಗಿದ್ದ ನಟ ರಜನೀಕಾಂತ್ ಅವರು 'ಪ್ರೇಮದ ಕಾಣಿಕೆ' ಸಿನಿಮಾದ ರೀಮೇಕ್ 'ಪೊಲ್ಲಾದವನ್', 'ನಾ ನಿನ್ನ ಮರೆಯಲಾರೆ' ಸಿನಿಮಾದ ರೀಮೇಕ್ 'ಪುದು ಕವಿತೈ'. 'ಅನುರಾಗ ಅರಳಿತು' ಸಿನಿಮಾದ ರೀಮೇಕ್ 'ಮನ್ನನ್' ನಲ್ಲಿ ನಟಿಸಿದರು. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರ ಸೂಪರ್-ಡೂಪರ್ ಹಿಟ್ ಸಿನಿಮಾ 'ಗರಾನಾ ಮೊಗುಡು' ಅಣ್ಣಾವ್ರ 'ಅನುರಾಗ ಅರಳಿತು' ಸಿನಿಮಾದ ರೀಮೇಕ್.

    Recommended Video

    ಅನಾರೋಗ್ಯ ಸಮಸ್ಯೆಯಿಂದ ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ | Filmibeat Kannada
    ಅನಿಲ್ ಕಪೂರ್-ಗೋವಿಂದ ಸಹ ಅಣ್ಣಾವ್ರ ಸಿನಿಮಾ ರೀಮೇಕ್‌ನಲ್ಲಿ ನಟಸಿದ್ದಾರೆ

    ಅನಿಲ್ ಕಪೂರ್-ಗೋವಿಂದ ಸಹ ಅಣ್ಣಾವ್ರ ಸಿನಿಮಾ ರೀಮೇಕ್‌ನಲ್ಲಿ ನಟಸಿದ್ದಾರೆ

    ಬಾಲಿವುಡ್ ನಟ ಅನಿಲ್ ಕಪೂರ್, 'ನಾ ನಿನ್ನ ಮರೆಯಲಾರೆ' ಸಿನಿಮಾದ ರೀಮೇಕ್ 'ಪ್ಯಾರ್ ಕಿಯಾ ಹೈ ಪ್ಯಾರ್ ಕರೇಂಗೆ'. 'ಅನುರಾಗ ಅರಳಿತು' ಸಿನಿಮಾದ ರೀಮೇಕ್ 'ಲಾಡ್ಲಾ'ದಲ್ಲಿ ನಟಿಸಿದ್ದಾರೆ. ಮತ್ತೊಬ್ಬ ಸ್ಟಾರ್ ನಟ ಗೋವಿಂದ, 'ಬಂಗಾರದ ಪಂಜರ' ಸಿನಿಮಾದ ರೀಮೇಕ್ 'ಜಿಸ್ ದೇಶ್‌ ಮೆ ಗಂಗಾ ರೆಹತೀ ಹೈ' ಸಿನಿಮಾದಲ್ಲಿ ನಟಿಸಿದ್ದಾರೆ.

    (ಮಾಹಿತಿ: ವಿಕಿಪೀಡಿಯಾ, ಫೇಸ್‌ಬುಕ್, ಸಂತೋಶ್)

    English summary
    Many top heroes like NTR, ANR, MGR, Amitabh Bachchan, Rajinikanth, Chiranjeevi and many acted in remake of Dr Rajkumar's Kannada movies.
    Friday, April 16, 2021, 21:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X