ಅಮೀರ್ ಖಾನ್ ಜೊತೆ ಅಭಿನಯಿಸಿದ್ದ ಈ ನಾಯಕಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇಕೆ..? ಬದುಕುಳಿದಿದ್ಹೇಗೆ..?

ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಶಮಾ ಸಿಖಂದರ್.

ಹೌದು, ಶಮಾ ಸಿಖಂದರ್.. ಒಂದ್ಕಾಲದಲ್ಲಿ ಅಮೀರ್ ಖಾನ್ ಜೊತೆ ''ಮನ್'' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ನಾಯಕಿ. ''ಮನ್'' ಆದ ನಂತರ ಸರಿ ಸುಮಾರು ಒಂದು ಡಜನ್ ಚಿತ್ರಗಳಲ್ಲಿ ನಾಯಕಿಯಾಗಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡ ಶಮಾ ಸಿಖಂದರ್‌ಗೆ ಗೆಲುವು ಎನ್ನುವುದು ಚಿತ್ರರಂಗದಲ್ಲಿ ಮರಿಚೀಕೆಯಾಗಿ ಉಳಿದಿತ್ತು. ಸತತ ಪ್ರಯತ್ನ ಮಾಡಿದರೂ ಸೋಲು ಎದುರಾಗುತ್ತಿತ್ತು.

Meet Aamir s heroine a TV star who faced setbacks and mental health struggles including a suicide

ಆದರೂ ಶಮಾ ಸೋಲು ಒಪ್ಪಿಕೊಳ್ಳಲಿಲ್ಲ. ಒಂದಾದ ಮೇಲೊಂದು ಚಿತ್ರ ಮಾಡಿದರು. ಇವತ್ತಲ್ಲ ನಾಳೆ ಗೆದ್ದೇ ಗೆಲ್ತೀನಿ ಎಂದು ಪ್ರಯತ್ನವನ್ನು ಮಾಡಿದರು. ಆದರೆ, ಫಲಿತಾಂಶ ಶೂನ್ಯ. ಹತ್ ಹತ್ರ ಹದಿನೈದು ಚಿತ್ರಗಳನ್ನು ಮಾಡಿದರು ಕೂಡ ಶಮಾಗೆ ಗೆಲುವು ಸಿಗಲಿಲ್ಲ. ಅಂದುಕೊಂಡ ಜನ ಮನ್ನಣೆಯಾಗಲಿ ಪ್ರೀತಿ ಸಿಗಲಿಲ್ಲ.ಇದರಿಂದ ಮನ ನೊಂದ ಶಮಾ ಸಿಖಂದರ್ ದಿನಗಳು ಉರುಳಿದಂತೆ ಸಂಪೂರ್ಣ ಕುಗ್ಗಿ ಹೋಗಿದ್ದರು. ಹತಾಶೆಗೊಳಾಗಾದರು. ಖಿನ್ನತೆಗೆ ಕೂಡ ಜಾರಿದರು.

ದಿನಗಳು ಉರುಳಿದಂತೆ ಬದುಕಿನ ಮೇಲೆ ನಂಬಿಕೆಯನ್ನೇ ಕಳೆದುಕೊಂಡ ಶಮಾ ಸಿಖಂದರ್, ಅದೊಂದು ದಿನ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ನಿರ್ಧಾರವನ್ನು ಕೂಡ ಮಾಡಿದರು. ಸಾಕಷ್ಟು ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿದರು. ಗುಳಿಗೆಯನ್ನು ನುಂಗಿದ ನಂತರ ತಮ್ಮ ಸಹೋದರನಿಗೆ ತಮ್ಮ ಎಲ್ಲ ಬ್ಯಾಂಕ್ ವಿವರಗಳನ್ನು ಮೆಸೇಜ್ ಮೂಲಕ ಕಳುಹಿಸಿದ್ದರು.

Meet Aamir s heroine a TV star who faced setbacks and mental health struggles including a suicide

ಆದರೆ, ಅದೃಷ್ಟವಶಾತ್ ಅದೆಲ್ಲೋ ಅದ್ಯಾರದ್ದೋ ಮದುವೆಯಲ್ಲಿದ್ದ ಶಮಾ ಅವರ ಸಹೋದರನಿಗೆ ಅಕ್ಕನ ಈ ಮೆಸೇಜ್‌ಗಳನ್ನು ನೋಡಿ ಅನುಮಾನ ಬಂತು. ತನ್ನ ಅಕ್ಕ ತನ್ನ ಬ್ಯಾಂಕ್ ವಿವರಗಳನ್ನು ತನಗೆ ಯಾಕೆ ಕಳುಹಿಸಿದ್ದಾಳೆ ಎನ್ನುವ ಪ್ರಶ್ನೆ ಮೂಡಿತು. ಕೂಡಲೇ ತಡಮಾಡದ ಆತ ಕುರಾನ್ ಓದುತ್ತಾ ಕುಳಿತಿದ್ದ ಅಮ್ಮನಿಗೆ ಕರೆ ಮಾಡಿದ. ಮನೆಗೆ ಓಡೋಡಿ ಬಂದ. ಬಂದು ನೋಡಿದಾಗ ಶಮಾ ನಿದ್ರೆ ಮಾತ್ರೆಯನ್ನು ನುಂಗಿ ಮಲಗಿದ್ದರು. ತಕ್ಷಣವೇ ಶಮಾ ಅವರನ್ನು ಎತ್ತುಕೊಂಡ ಸಹೋದರ ಅಲ್ಲಿಯೇ ಹತ್ತಿರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಆತ್ಮಹತ್ಯೆಯ ಪ್ರಯತ್ನ ಮಾಡಿರುವ ಕಾರಣಕ್ಕೆ ಆಸ್ಪತ್ರೆಯ ವೈದ್ಯರು ಶಮಾ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಹೀಗಾಗಿ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದ ಅವರ ಸಹೋದರ ಕೊನೆಗೆ ಹಾಗೂ ಹೀಗೂ ಶಮಾ ಅವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ತಮ್ಮ ಬದುಕಿನ ಈ ಕರಾಳ ಅಧ್ಯಾಯವನ್ನು ''ಬಾಲಿವುಡ್‌ ಬಬಲ್‌''ಗೆ ನೀಡಿದ ಸಂದರ್ಶನದಲ್ಲಿ ಮೆಲುಕು ಹಾಕಿರುವ ಶಮಾ ಸಿಖಂದರ್, 15 ವರ್ಷಗಳ ಹಿಂದೆ ನಾನು ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದೆ, ನನಗೆ ತೀವ್ರ ಖಿನ್ನತೆ, ಬೈಪೋಲಾರ್ ಡಿಸಾರ್ಡರ್ ಇತ್ತು ಎಂದು ಹೇಳಿದ್ದಾರೆ. ನನ್ನ ಅಜ್ಜಿಯಿಂದ ನನಗೆ ಅದು ವರದಾನದ ಮೂಲಕ ಸಿಕ್ಕಿತ್ತು ಎಂದು ಹೇಳಿದ್ದಾರೆ. ಈಗ ಅದೆಲ್ಲದರಿಂದ ಆಚೆ ಬಂದಿದ್ದೇನೆ, ಬದುಕಿನಲ್ಲಿ ಏನೆಲ್ಲ ಸಿಕ್ಕಿದೆಯೋ ಅದರಿಂದ ನಾನು ಸದ್ಯಕ್ಕೆ ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ ಶಮಾ ಸಿಖಂದರ್.

ಅಂದ್ಹಾಗೇ ನಟನೆಯಿಂದ ಕಳೆದ ಆರು ವರ್ಷಗಳಿಂದ ಅಂತರವನ್ನು ಕಾಪಾಡಿಕೊಂಡಿರುವ ಶಮಾ ಸಿಖಂದರ್ ತಮ್ಮದೇ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಡಿ ''ಅಬ್ ದಿಲ್ ಕಿ ಸುನ್'' ಎಂಬ ವೆಬ್ ಸರಣಿಯನ್ನು ಕೂಡ ನಿರ್ಮಾಣ ಮಾಡಿದ್ಧಾರೆ. ಇದರ ಜೊತೆ ತಮ್ಮದೇ ''ಸೈಶಾ'' ಎಂಬ ಬಟ್ಟೆಯ ಬ್ರ್ಯಾಂಡ್‌ ಕೂಡ ಹುಟ್ಟು ಹಾಕಿದ್ದಾರೆ ಶಮಾ ಸಿಖಂದರ್.

More from Filmibeat

Read more about: suicide actress bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X