ಬಾಲಿವುಡ್‌ನಲ್ಲಿ ಮಿಂಚದ ಈ ವಿಶ್ವಸುಂದರಿಗೆ ಕಿರುಕುಳ ನೀಡಿದ್ದ ಗಂಡ...!

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್‌ನ ನಾಯಕಿ ಯುಕ್ತಾ ಮುಖಿ ಮತ್ತೊಂದು ಉದಾಹರಣೆ.

ಹೌದು, ಯುಕ್ತಾ ಮುಖಿ .. 25 ವರ್ಷಗಳ ಹಿಂದೆ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಚೆಲುವೆ. ಮಿಸ್ ವರ್ಲ್ಡ್ ಆಗಿ ಹೊರ ಹೊಮ್ಮಿದ ನಾಲ್ಕನೇ ಬೆಡಗಿ ಇವರು. ಲಂಡನ್‌ನಲ್ಲಿ ನಡೆದಿದ್ದ ವರ್ಣರಂಜಿತ ಈ ಸೌಂದರ್ಯ ಸ್ಫರ್ಧೆಯಲ್ಲಿ ಇವರು ಭಾಗಿಯಾಗಿದ್ದಾಗ ಇವರಿಗೆ ಕೇವಲ 20ರ ಹರೆಯ. ಆ ನಂತರ ಎಲ್ಲರಂತೆ ಚಿತ್ರರಂಗಕ್ಕೆ ಬಂದ ಯುಕ್ತಾ ಮುಖಿ ಪ್ಯಾಸಾ ಚಿತ್ರದ ಮೂಲಕ ಅನೇಕರ ಹೃದಯವನ್ನು ಗೆದ್ದರು. ಮೊದಲ ಚಿತ್ರದಲ್ಲಿಯೇ ಗೆಲುವಿನ ರುಚಿಯನ್ನು ನೋಡಿದರು. ಆದರೆ, ಆ ನಂತರ ಇವರು ಒಪ್ಪಿಕೊಂಡಿದ್ದ ಕಬ್ ಕ್ಯೂ ಕಹಾ ಮತ್ತು ಹಮ್ ತೀನ್ ಚಿತ್ರಗಳು ಅರ್ಧಕ್ಕೆ ನಿಂತು ಹೋದವು. ಮಾರ್ಕೆಟ್ ಮತ್ತು ಇನ್ಸಾಫ್ ದಿ ಜಸ್ಟೀಸ್‌ ಚಿತ್ರಗಳನ್ನು ಒಪ್ಪಿಕೊಂಡರಾದರೂ ಇವೆರಡು ಚಿತ್ರಗಳಿಂದ ಇವರನ್ನು ಹೊರ ಹಾಕಲಾಯಿತು.

Meet an actress and former beauty queen who struggled in Bollywood and endured an abusive marriage

ಆ ನಂತರದ ದಿನಗಳಲ್ಲಿ ಕಿರುಚಿತ್ರಕ್ಕೆ ಸೀಮಿತವಾದ ಯುಕ್ತಾ ಮುಖಿ ಭೋಜಪುರಿ ಮತ್ತು ಓಡಿಸಾ ಚಿತ್ರರಂಗದಲ್ಲಿ ಕೂಡ ಒಂದು ಸುತ್ತು ಹಾಕಿಕೊಂಡು ಬಂದರು. ಆದರೆ, ಅಲ್ಲಿಯೂ ಗೆಲುವು ಸಿಗಲಿಲ್ಲ. ಹೆಚ್ಚಿನ ಅವಕಾಶಗಳು ಕೂಡ ಸಿಗಲಿಲ್ಲ. ಈ ಕಾರಣಕ್ಕೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಯುಕ್ತಾ ಮುಖಿ ಸೆಪ್ಟೆಂಬರ್ 7 2008 ರಂದು, ಮುಂಬೈನ ಗ್ರ್ಯಾಂಡ್ ಮರಾಠಾದಲ್ಲಿ ನ್ಯೂಯಾರ್ಕ್‌ ಮೂಲದ ಉದ್ಯಮಿ ಪ್ರಿನ್ಸ್ ತುಲಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆ ನಂತರ ಮುಂದಿನ ಎರಡು ತಿಂಗಳಿನಲ್ಲಿ ಮದ್ವೆಯಾದರು. ನವೆಂಬರ್ ಎರಡರಂದು ನಾಗಪುರದ ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದ ಪ್ರಕಾರ ಸಪ್ತಪದಿಯನ್ನು ತುಳಿದರು. ಆ ನಂತರ ಒಂದು ಮಗುಗೆ ಜನ್ಮವನ್ನು ನೀಡಿದರು.

ಆದರೆ.. ಯುಕ್ತಾ ಮುಖಿಗೆ ಸಂಸಾರದ ಸುಖ ಸಿಗಲಿಲ್ಲ. ಬದಲಿಗೆ ದಿನ ನಿತ್ಯ ನರಕ ಅನುಭವಿಸುವಂತಾಯಿತು. ಪತಿಯಿಂದಲೇ ಲೈಂಗಿಕ ಕಿರುಕುಳಕ್ಕೊಳಗಾದ ಯುಕ್ತಾ ಮುಖಿ 2013ರಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪ ಮಾಡಿದರು. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ (ಕ್ರೌರ್ಯ ಮತ್ತು ಕಿರುಕುಳ) ಮತ್ತು ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿ*ತೆ) ಅಡಿಯಲ್ಲಿ ದೂರನ್ನು ದಾಖಲಿಸಿದರು. 2014ರಲ್ಲಿ ವಿಚ್ಛೇದನ ಪಡೆದು ತಮ್ಮ ಪತಿಯಿಂದ ದೂರವಾದರು.

ಅಲ್ಲಿಂದ ತಮ್ಮ ಮಗನ ಜೊತೆ ಭಾರತದಲ್ಲಿ ವಾಸ ಮಾಡಲು ಶುರು ಮಾಡಿದ ಯುಕ್ತಾ ಮುಖಿ 2019ರಲ್ಲಿ ಬಾಲಿವುಡ್‌ಗೆ ಮರಳುವ ಪ್ರಯತ್ನವನ್ನು ಮಾಡಿದರು. ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಅಭಿನಯದ ಗುಡ್ ನ್ಯೂಸ್ ಚಿತ್ರದಲ್ಲಿ ಚಿಕ್ಕದಾದ ಪಾತ್ರವನ್ನು ನಿರ್ವಹಿಸಿದ್ದರು. ಇಂಥಾ ಯುಕ್ತಾ ಮುಖಿ
ಸದ್ಯ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. HIV/AIDS ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಅಭಿಯಾನಗಳನ್ನು ಮಾಡುತ್ತಿದ್ದಾರೆ. ಬಾಲಕಾರ್ಮಿಕರ ವಿರುದ್ಧ ಧ್ವನಿಯನ್ನು ಹಿಂದೆ ಎತ್ತಿದ್ದ ಯುಕ್ತಾ ಶ್ರವಣ ದೋಷ ಹೊಂದಿರುವ ಬಡವರಿಗೆ ಸಹಾಯವನ್ನು ಮಾಡಿದ್ದಾರೆ. ಅರಣ್ಯ ನಾಶ ತಡೆಗಟ್ಟಲು ಹತ್ತಾರು ಅಭಿಯಾನ ಮಾಡಿರುವ ಯುಕ್ತಾ ಮುಖಿ ಮೆಟ್ರೋಗಾಗಿ ಮರ ಕಡಿಯುವುದನ್ನು ವಿರೋಧ ಮಾಡಿದ್ದರು.

ಒಟ್ನಲ್ಲಿ ವಿಶ್ವಸುಂದರಿಯಾಗಿ ಹೊರ ಹೊಮ್ಮಿದರೂ ಯುಕ್ತಾ ಮುಖಿ ಅವರನ್ನು ಬಾಲಿವುಡ್‌ ಒಪ್ಪಿಕೊಳ್ಳಲಿಲ್ಲ. ಪ್ರೇಕ್ಷಕರು ಕೂಡ ಕೈ ಹಿಡಿಯಲಿಲ್ಲ. ಆಶೀರ್ವಾದ ಮಾಡಲಿಲ್ಲ. ಯುಕ್ತಾ ಮುಖಿಗೆ ಸಂಸಾರದಲ್ಲಿ ಕೂಡ ಸುಖ ಸಿಗಲಿಲ್ಲ. ನೆಮ್ಮದಿ ಸಿಗಲಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X