ಎಷ್ಟು ದೊಡ್ಡವನಾಗಿದ್ದಾನೆ ಗೊತ್ತಾ 'KGF' ಚಿತ್ರದ ಜ್ಯೂನಿಯರ್ ರಾಕಿ ಭಾಯ್?

ಕನ್ನಡದಲ್ಲಿ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಿನಿಮಾ 'KGF'. ಪ್ರಶಾಂತ್ ನೀಲ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ದೊಡ್ಡ ಹೆಸರು ತಂದುಕೊಟ್ಟಿತ್ತು. ಬಹುತೇಕ ಕನ್ನಡ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದರು.

2018ರಲ್ಲಿ ಬಂದ ಚಾಪ್ಟರ್‌-1 ಬರೋಬ್ಬರಿ 250 ಕೋಟಿ ರೂ. ಗಳಿಕೆ ಕಂಡು ದಾಖಲೆ ಬರೆದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿತ್ತು. ಹಾಗಾಗಿ ಸಹಜವಾಗಿಯೇ 2ನೇ ಭಾಗದ ಮೇಲೆ ನಿರೀಕ್ಷೆ ಮೂಡಿತ್ತು. ಅದಕ್ಕೆ ತಕ್ಕಂತೆ ಮತ್ತಷ್ಟು ಅದ್ಧೂರಿಯಾಗಿ ತೆರೆಗೆ ಬಂದ ಸಿನಿಮಾ 1150 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು.

Meet Anmol vijay bhatkal KGF s child actor is now all grown up

'KGF' ಸರಣಿಯಲ್ಲಿ ನಟಿಸಿದ ಪ್ರತಿ ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಚಿತ್ರದಲ್ಲಿ ರಾಕಿಭಾಯ್ ಚಿಕ್ಕಂದಿನ ಪಾತ್ರದಲ್ಲಿ ಬಾಲನಟ ಅನ್ಮೋಲ್ ಭಟ್ಕಳ್ ನಟಸಿದ್ದ. ಜ್ಯೂ. ರಾಕಿ ಭಾಯ್ ಆಗಿ ಆತನ ನಟನೆ ಕೂಡ ಸಿನಿರಸಿಕರಿಗೆ ಇಷ್ಟವಾಗಿತ್ತು. ಚಿಕ್ಕಂದಿನಿಂದಲೇ ರಾಕಿ ಎಷ್ಟು ಮಹತ್ವಾಕಾಂಕ್ಷಿ, ಧೈರ್ಯವಂತ ಎನ್ನುವುದನ್ನು ಆತನ ಮೂಲಕ ನೀಲ್ ತೋರಿಸಿದ್ದರು.

ಈಗ ಕೂಡ ಎಲ್ಲೇ ಹೋದರೂ ಜನ ಜ್ಯೂ. ರಾಕಿ ಭಾಯ್ ಅಂತ್ಲೇ ಆತನನ್ನು ಗುರ್ತಿಸುತ್ತಾರೆ. ಅಷ್ಟರಮಟ್ಟಿಗೆ ಆತ ಮೋಡಿ ಮಾಡಿದ್ದಾನೆ. ಅಂದಹಾಗೆ 'KGF' ಸರಣಿಯಲ್ಲಿ ಬಾಲನಟನಾಗಿದ್ದ ಅನ್ಮೋಲ್ ಈಗ ಡಿಗ್ರಿ ಓದುತ್ತಿದ್ದಾರೆ. ಆದರೆ ಪ್ರೇಕ್ಷಕರಿಗೆ ಮಾತ್ರ ಇನ್ನು ಆತ ಬಾಲನಟನಾಗಿಯೇ ನೆನಪಿನಲ್ಲಿ ಉಳಿದಿದ್ದಾನೆ. ಖುದ್ದು ಅನ್ಮೋಲ್ ಹೇಳಿದಂತೆ 'KGF'-1 ಚಿತ್ರೀಕರಣ ಶುರುವಾದಾಗ 8ನೇ ತರಗತಿ ಓದುತ್ತಿದ್ದ. ಚಾಪ್ಟರ್‌-2 ಬಿಡುಗಡೆ ವೇಳೆಗೆ ದ್ವಿತೀಯ ಪಿಯುಸಿ ಮುಗಿಸಿದ್ದರು.

ಚಿಕ್ಕಂದಿನಿಂದ ಡ್ಯಾನ್ಸ್‌ ಕಲಿಯುತ್ತಿರುವ ಅನ್ಮೋಲ್ ಭಟ್ಕಳ್ ಕೆಲ ಸಿನಿಮಾಗಳಲ್ಲಿ ಹಿಂಬದಿ ಡ್ಯಾನ್ಸರ್‌ ಆಗಿ ಕಾಣಿಸಿಕೊಂಡಿದ್ದರು. ಚಾಮರಾಜ್ ಮಾಸ್ಟರ್ ಎಂಬುವವರ ಬಳಿ 14 ವರ್ಷಗಳ ಕಾಲ ಡ್ಯಾನ್ಸ್ ಕಲಿತಿದ್ದಾರೆ. ಅದೇ ಚಾಮರಾಜ್ ಮಾಸ್ಟರ್ 'KGF' ಚಿತ್ರಕ್ಕಾಗಿ ಆತನನ್ನು ನಿರ್ದೇಶಕ ಪ್ರಶಾಂತ್ ನೀಲ್‌ಗೆ ಪರಿಚಯಿಸಿದ್ದರು. ಬಳಿಕ ಆಡಿಷನ್ ಕೊಟ್ಟು ರಾಕಿ ಅಲಿಯಾಸ್ ರಾಜಾ ಕೃಷ್ಣಪ್ಪ ಬಾರ್ಯಾ ಪಾತ್ರಕ್ಕೆ ಆಯ್ಕೆ ಆಗಿದ್ದ.

Meet Anmol vijay bhatkal KGF s child actor is now all grown up

ಎರಡು ಭಾಗಗಳಾಗಿ 'KGF' ಸಿನಿಮಾ ನಿರ್ಮಾವಾಗಿತ್ತು. ಒಂದು ವರ್ಷ ಕಾಲ ತರಬೇತಿ ಪಡೆದು ಬಳಿಕ ಅನ್ಮೋಲ್ ನಟಿಸಿದ್ದರು. ಒಟ್ಟಿಗೆ ಆತನ ದೃಶ್ಯಗಳ ಚಿತ್ರೀಕರಣವಾಗಿತ್ತು. ಆದರೆ ಮೊದಲ ಭಾಗದಲ್ಲಿ ಕೊಂಚ ವಿಷ್ಯುವಲ್ಸ್ ಬಳಸಲಾಗಿತ್ತು. 2ನೇ ಭಾಗದಲ್ಲಿ ಫ್ಲ್ಯಾಶ್‌ಬ್ಯಾಕ್ ರೀತಿ ಉಳಿದ ದೃಶ್ಯಗಳನ್ನು ತೋರಿಸಲಾಗಿತ್ತು.

ಪಾತ್ರಕ್ಕಾಗಿ ಸಾಕಷ್ಟು ತರಬೇತಿ ಪಡೆದು ಅನ್ಮೋಲ್ 'KGF' ಚಿತ್ರದಲ್ಲಿ ನಟನೆ ಮಾಡಿದ್ದರು. ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಎಲ್ಲರಿಂದಲೂ ಭೇಷ್ ಎನಿಸಿಕೊಂಡರು. ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸಿಂಗ್ ಚಾಂಪಿಯನ್' ಟ್ರೋಫಿ ಕೂಡ ಗೆದ್ದಿದ್ದರು. ಇದೀಗ ಅನ್ಮೋಲ್ ವಯಸ್ಸು 20 ದಾಟಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಡ್ಯಾನ್ಸ್ ಸಹ ಮುಂದುವರೆಸಿದ್ದಾರೆ. ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುವ ತುಡಿತ ಇದೆ.

ಡಾನ್ಸ್‌ ಜೊತೆಗೆ ಅನ್ಮೋಲ್ ಜಿಮ್ನಾಸ್ಟಿಕ್‌, ಆಕ್ಟಿಂಗ್ ಟ್ರೈನಿಂಗ್ ಸಹ ಪಡೆದುಕೊಳ್ಳುತ್ತಿದ್ದಾರೆ. 'ಕ್ವಾಟ್ಲೆ ಸತೀಶ' ಚಿತ್ರದಲ್ಲಿ ಹಿಂಬದಿ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. 'ಮಿಸ್‌ ನಂದಿನಿ', 'ಬ್ರಹ್ಮಚಾರಿ', 'ಬಿಚ್ಚುಗತ್ತಿ', ಪದಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Meet Anmol vijay bhatkal, the actor who played the character of jr Rocky in KGF
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X