ಪವನ್ ಕೈ ಹಿಡಿದು ಹಿಂದೂ ಸಂಸ್ಕೃತಿಯ ಆಚಾರ ವಿಚಾರ ಅಳವಡಿಸಿಕೊಂಡ ರಷ್ಯನ್ ಮಾಡೆಲ್ ಅನ್ನಾ
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಜನಸೇನಾ ಪಕ್ಷವನ್ನು ಗೆಲ್ಲಿಸಿ ಡಿಸಿಎಂ ಪಟ್ಟ ಅಲಂಕರಿಸಿದ್ದಾರೆ. ಮೂರ್ಮೂರು ಮದುವೆ ಆಗಿರುವ ಪವನ್ ಕಲ್ಯಾಣ್ ಇದೇ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿತ್ತು. ಇಬ್ಬರಿಗೆ ಡಿವೋರ್ಸ್ ಕೊಟ್ಟು ರಷ್ಯನ್ ಮಾಡೆಲ್ ಅನ್ನಾ ಲೆಜ್ನೆವಾ ಕೈ ಹಿಡಿದಿದ್ದಾರೆ.
ಮೊದಲಿಗೆ ನಂದಿನಿ ಎಂಬಾಕೆಯನ್ನು ಮದುವೆ ಆಗಿದ್ದ ನಟ ಪವನ್ ಕಲ್ಯಾಣ್ ಬಳಿಕ ಆಸೆ ಡಿವೋರ್ಸ್ ನೋಡಿ ಸಹ ನಟಿ ರೇಣು ದೇಸಾಯಿ ಕೈ ಹಿಡಿದರು. ಬಳಿಕ ಅನ್ನಾ ಲೆಜ್ನೆವಾ ಜೊತೆ ಡೇಟಿಂಗ್ ನಡೆಸಿ, 2ನೇ ಪತ್ನಿಗೂ ಡಿವೋರ್ಸ್ ಕೊಟ್ಟು ದೂರಾಗಿದ್ದರು. 2013ರಲ್ಲಿ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ಅನ್ನಾ ಜೊತೆ ಪವನ್ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ ಆಕೆ ರಷ್ಯಾದಿಂದ ಹೈದರಾಬಾದ್ ಶಿಫ್ಟ್ ಆಗಿದ್ದರು.

ಆರಂಭದಲ್ಲಿ ಪವನ್ ಕಲ್ಯಾಣ್ ಜೊತೆ ಅನ್ನಾ ಪಾರ್ಟಿ, ಟ್ರಿಪ್ ಎಂದು ಸುತ್ತಾಡುತ್ತಿದ್ದರು. ಆದರೆ ಅದಕ್ಕೆ ಸಂಬಂಧಿಸಿ ಫೋಟೊ, ವಿಡಿಯೋ ಯಾವುದು ಹೊರ ಬರುತ್ತಿರಲಿಲ್ಲ. ಬಳಿಕ ನಿಧಾನವಾಗಿ ಕಾಟನ್ ಸೀರೆ, ಸಲ್ವಾರ್ ಧರಿಸಿ ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಭಾಗಿ ಆಗಲು ಆರಂಭಿಸಿದರು. ಚಿರು ಪುತ್ರಿ ಶ್ರೀಜಾ ಎರಡನೇ ಮದುವೆ ಸಮುಯದಲ್ಲಿ ಅನ್ನಾ ಕುಟುಂಬದ ಸದಸ್ಯರ ಜೊತೆ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು.
ಪವನ್ ಕಲ್ಯಾಣ್ ಈ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರು. ಬಳಿಕ ಮನೆಗೆ ಬಂದ ಪತಿಗೆ ಅನ್ನಾ ಆರತಿ ಬೆಳಗಿ ತಿಲಕವಿಟ್ಟ ವಿಡಿಯೋ ವೈರಲ್ ಆಯಿತು. ಜೊತೆಗೆ ಎನ್‌ಡಿಎ ಮೈತ್ರಿ ಕೂಡದ ಸಭೆಗೆ ಪವನ್ ಕಲ್ಯಾಣ್ ಹಾಜರಾಗಿದ್ದರು. ಈ ವೇಳೆ 3ನೇ ಪತ್ನಿ ಅನ್ನಾ ಹಾಗೂ ಪುತ್ರ ಅಕಿರಾ ನಂದನ್‌ನನ್ನು ಕರೆದೊಯ್ದು ಪ್ರಧಾನಿ ಮೋದಿಗೆ ಭೇಟಿ ಮಾಡಿಸಿದ್ದರು. ಆ ಫೋಟೊಗಳು ವೈರಲ್ ಆಗಿತ್ತು. ಇನ್ನು ಪವನ್ ಕಲ್ಯಾಣ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅನ್ನಾ ಭಾಗಿ ಆಗಿದ್ದರು. ಆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡು ಆಕೆಯ ಮನತುಂಬಿ ಬಂದಿತ್ತು.

ಪವನ್ ಕಲ್ಯಾಣ್ ನಟನೆಯ 'ತೀನ್‌ಮಾರ್' ಚಿತ್ರದಲ್ಲಿ ಅನ್ನಾ ಲೆಜ್ನೆವಾ ನಟಿಸಿದ್ದರು. ಇದೇ ಸಮಯದಲ್ಲಿ ಇಬ್ಬರೂ ಹತ್ತಿರವಾಗಿದ್ದರು. ಲಿವ್ ಇನ್ ರಿಲೇಷನ್‌ಶಿಪ್ ಆರಂಭಿಸಿದ್ದರು. ಅನ್ನಾಗೆ ಅದಾಗಲೇ ಒಂದು ಮದುವೆ ಆಗಿತ್ತು. ಆತನಿಗೆ ಡಿವೋರ್ಸ್ ಕೊಟ್ಟು ಪವನ್ ಕೈ ಹಿಡಿದರು. ಬಳಿಕ ಮದುವೆ ಆಗಲು ನಿಶ್ಚಯಿಸಿದ್ದರು. ಆಕೆ ಕ್ರಿಶ್ಚಿಯನ್. ಪವನ್ ಕಲ್ಯಾಣ್ ಹಿಂದೂ. ಆದರೆ ಮದುವೆ ಬಳಿಕ ಅನ್ನಾ ಸಂಪೂರ್ಣ ಬದಲಾದರು. ಭಾರತದ ಸಂಸ್ಕ್ರೃತಿ ರೀತಿ ರಿವಾಜುಗಳನ್ನು ಆಕೆ ಅರಿತುಕೊಂಡರು.
ಪವನ್, ಅನ್ನಾ ದಂಪತಿಗೆ ಮಾರ್ಕ್ ಶಂಕರ್ ಪವನೋವಿಚ್ 2017 ರಲ್ಲಿ ಜನಿಸಿದನು. ಅನ್ನಾ ಪತಿಯಿಂದ ಅನ್ನಾಗೆ ಒಬ್ಬ ಮಗಳಿದ್ದಾಳೆ. ಆಕೆಯ ಹೆಸರು ಅಂಜನಾ ಪಾವ್ನೋವಾ. ಇನ್ನು ಅನ್ನಾ ಆಸ್ತಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ರಷ್ಯಾ ಮೂಲದ ಆಕೆಗೆ ಸಾವಿರಾರು ಕೋಟಿ ರೂ. ಆಸ್ತಿ ಇದೆ ಎನ್ನಲಾಗ್ತಿದೆ. ಇತ್ತೀಚೆಗೆ ಪವನ್ ಕಲ್ಯಾಣ್ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರ ನೀಡಿದ್ದರು. ಆದರೆ ವಿದೇಶದಲ್ಲಿರುವ ಆಸ್ತಿ ಮಾಹಿತಿ ನೀಡಲಿಲ್ಲ ಎಂದು ಕೆಲವರು ಹೇಳಿದ್ದರು.
ಶ್ರೀಮಂತರ ಮನೆಯಿಂದ ಬಂದ ಅನ್ನಾ ಲೆಜ್ನೆವಾ ಹೆಸರಲ್ಲಿ 1800 ಕೋಟಿ ರೂ. ಆಸ್ತಿ ಇದೆ ಎನ್ನುವ ಮಾತಿದೆ. ಸಿಂಗಾಪುರ, ಅಮೇರಿಕಾರದಲ್ಲಿ ರೆಸ್ಟೋರೆಂಟ್ಸ್ ಚೈನ್ ಇದೆ. ಸಿಂಗಾಪುರದಲ್ಲಿ ಪತ್ನಿ ಹೆಸರಿನಲ್ಲಿ ಒಂದು ಮಾಲ್ ಸಹ ಪವನ್ ಕಲ್ಯಾಣ್ ಖರೀದಿಸಿದ್ದಾರೆ ಎನ್ನಲಾಗುತ್ತದೆ. ಅನ್ನಾ ಸಾಕಷ್ಟು ವ್ಯಾಪಾರ ವ್ಯವಹಾರದಲ್ಲಿ ಹಣ ತೊಡಗಿಸಿದ್ದಾರೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿದೆ.
ಚುನಾವಣೆಯಲ್ಲಿ ಗೆದ್ದ ಬಳಿಕ ಪವನ್ ಕಲ್ಯಾಣ್ ಅಣ್ಣ ಚಿರಂಜೀವಿ ಆಶೀರ್ವಾದ ಪಡೆಯಲು ಮನೆಗೆ ಹೋಗಿದ್ದರು. ಈ ವೇಳೆ 3ನೇ ಪತ್ನಿ ಅನ್ನಾ ಸಹ ಹಿಂಬಾಲಿಸಿದ್ದರು. ಪವನ್ ಚಪ್ಪಲಿ ಬಿಟ್ಟು ತಾಯಿಯ ಕಾಲಿಗೆ ಎರಗಿದ್ದರು. ಈ ವೇಳೆ ಪತ್ನಿ ಅನ್ನಾ ಆತನ ಚಪ್ಪಲಿಗಳನ್ನು ಎತ್ತಿಕೊಂಡು ಪಕ್ಕಕ್ಕೆ ಹೋಗಿ ನಿಂತ ವೀಡಿಯೋ ವೈರಲ್ ಆಗುತ್ತಿದೆ. ರಷ್ಯಾದಲ್ಲಿ ಹುಟ್ಟಿದರೂ ಆಕೆ ಹಿಂದೂ ಸಂಸ್ಕೃತಿಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ ನೋಡಿ ಎಂದು ಅಭಿಮಾನಿಗಳು ವೀಡಿಯೋ ತೇಲಿ ಬಿಟ್ಟಿದ್ದರು.


Click it and Unblock the Notifications











