ಕಾಸ್ಟ್ಲಿ ಲವ್ ಸ್ಟೋರಿ!; ಪೋಷಕರ ವಿರೋಧದ ನಡುವೆ ನಡೆದಿತ್ತು 'ಜನುಮದ ಜೋಡಿ' ಕಲ್ಯಾಣ

ಕನ್ನಡ ಚಿತ್ರಗಳಲ್ಲಿ ಪರಭಾಷೆಯ ಸಾಕಷ್ಟು ನಟಿಯರು ನಟಿಸಿದ್ದಾರೆ. ಎಷ್ಟೋ ಜನ ಕನ್ನಡದವರೇ ಇನ್ನುವಷ್ಟರಮಟ್ಟಿಗೆ ತೆರೆಮೇಲೆ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದಾರೆ. 'ಜನುಮದ ಜೋಡಿ' ಸೇರಿ ಹಲವು ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸಿದ ಮಲಯಾಳಂ ನಟಿ ಚಿಪ್ಪಿ, ಕನ್ನಡ ಪ್ರೇಕ್ಷಕರಿಗೆ ಮಾತ್ರ ಶಿಲ್ಪಾ ಎಂದೇ ಚಿರಪರಿಚಿತ.

ಸುಧಾರಾಣಿ, ಶ್ರುತಿ, ಪ್ರೇಮಾ ಹೀಗೆ ಎಲ್ಲರ ಕೈತಪ್ಪಿ 'ಜನುಮದ ಜೋಡಿ' ಚಿತ್ರದ ನಾಯಕಿ ಪಾತ್ರಕ್ಕೆ ಚಿಪ್ಪಿ ಆಯ್ಕೆ ಆಗಿದ್ದರು. ಅದಾಗಲೇ ಶಿವಣ್ಣ ನಟನೆಯ 'ಮುದ್ದಿನ ಕಣ್ಮಣಿ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸುತ್ತಿದ್ದ ಚಿಪ್ಪಿ ಏಕಾಏಕಿ 'ಜನುಮದ ಜೋಡಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಚಿಪ್ಪಿ ಮುಂದೆ ಶಿಲ್ಪಾ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ನಿಜ ಹೇಳಬೇಕು ಅಂದ್ರೆ ಆ ಚಿತ್ರದಲ್ಲಿ ಶಿಲ್ಪಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇತ್ತು. ಅದ್ಭುತವಾಗಿ ನಟಿಸಿ ಗೆದ್ದಿದ್ದರು.

Meet Janumada jodi actress Shilpa Her love story marriage and more

'ಜನುಮದ ಜೋಡಿ' ಬಳಿಕ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಶಿಲ್ಪಾ ನಟಿಸಿದರು. ಕನ್ನಡದ ನಟಿ ಇನ್ನುವಷ್ಟರಮಟ್ಟಿಗೆ ತಮ್ಮ ಪಾತ್ರಗಳ ಮೂಲಕ ಮೋಡಿ ಮಾಡಿದ್ದರು. 'ಲಕ್ಷ್ಮಿ ಮಹಾಲಕ್ಷ್ಮಿ', 'ಚಿಕ್ಕ', 'ಸುವ್ವಿ ಸುವ್ವಾಲಿ', 'ಭೂಮಿ ತಾಯಿಯ ಚೊಚ್ಚಲ ಮಗ', 'ಪ್ರೇಮಾಚಾರಿ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. 2004ರಲ್ಲಿ ಬಂದ 'ಪಾಂಡವ' ಆಕೆ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ.

ಅಂದಹಾಗೆ 'ಜನುಮದ ಜೋಡಿ' ಸಿನಿಮಾ ಸಮಯದಲ್ಲೇ ಚಿಪ್ಪಿ ನಿಜ ಜೀವನದ ಜೋಡಿ ಕೂಡ ಸಿಕ್ಕಿದ್ದರು. ಹಿಂದೆ ಮಲಯಾಳಂ ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿ, ಮದುವೆ ಬಗ್ಗೆ ಶಿಲ್ಪಾ ಮಾತನಾಡಿದ್ದರು. ಮದುವೆ ಬಳಿಕ ಶಿಲ್ಪಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದರು. ಇತ್ತೀಚೆಗೆ ಮಲಯಾಳಂ, ತಮಿಳು ಕಿರಿತೆರೆಯಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ 'ಜನುಮದ ಜೋಡಿ' ಸಿನಿಮಾ ಸಮಯದಲ್ಲೇ ಮಲಯಾಳಂನಲ್ಲಿ 'ಕಲ್ಯಾಣ ಸೌಗಂಧಿಕಂ' ಎನ್ನುವ ಚಿತ್ರದಲ್ಲಿ ಚಿಪ್ಪಿ ನಟಿಸುತ್ತಿದ್ದರು. ಆ ಚಿತ್ರದ ಪ್ರೊಡಕ್ಷನ್ ಕಂಟ್ರೋಲರ್ ಆಗಿ ರಂಜಿತ್ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಗಲ್ಫ್‌ ಶೋವೊಂದರಲ್ಲಿ ಇಬ್ಬರು ಕೆಲಸ ಮಾಡುವಂತಾಯಿತು.

Meet Janumada jodi actress Shilpa Her love story marriage and more

ಆಗ ಮತ್ತಷ್ಟು ಹತ್ತಿರವಾಗಿದ್ದೆವು. ಆಗಷ್ಟೆ ಮೊಬೈಲ್ ಫೋನ್ ಬರುತ್ತಿದ್ದ ಕಾಲ ಅದು. 1998-99ರ ಸಮಯ. ಆಗ ಇನ್‌ಕಮ್ಮಿಂಗ್ ಕಾಲ್‌ಗೂ ಹಣ ಪಾವತಿಸಬೇಕಿತ್ತು. ಅದೇ ಸಮಯದಲ್ಲಿ ಇಬ್ಬರೂ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದೆವು. ನಮ್ಮದು ಒಂದರ್ಥದಲ್ಲಿ ಕಾಸ್ಟ್ಲಿ ಲವ್‌ ಸ್ಟೋರಿ ಎಂದು ಶಿಲ್ಪಾ ನಕ್ಕಿದ್ದರು.

ರಂಜಿತ್ ಜೊತೆ ಮದುವೆ ಆಗುತ್ತೇನೆ ಎಂದಾಗ ಮನೆಯಲ್ಲಿ ಒಪ್ಪಲಿಲ್ಲ. ಆತ ಸಿನಿಮಾ ರಂಗದಲ್ಲಿ ಮಾತ್ರ ಗೊತ್ತು. ಅದು ಬಿಟ್ಟು ಆತನ ಬಗ್ಗೆ ಹೆಚ್ಚು ನಮಗೆ ಗೊತ್ತಿಲ್ಲ. ಯಾವ ಧೈರ್ಯದಲ್ಲಿ ಮದುವೆ ಮಾಡಿ ಕೊಡೋದು ಎಂದರು. ಬಳಿಕ ನಾವಿಬ್ಬರು ಹೋಗಿ ಮದುವೆ ಆಗಿಬಿಟ್ಟಿವೆ. ಬಳಿಕ ಪೋಷಕರು ಬಂದು ಎಲ್ಲಾ ಸುಖಾಂತ್ಯವಾಯಿತು. ನಾನು ಹೋಗಿ ಮದುವೆ ಆಗಿದ್ದನ್ನು ನೋಡಿ ನಮ್ಮಿಬ್ಬರು ಎಷ್ಟು ಗಾಢವಾಗಿ ಪ್ರೀತಿಸುತ್ತಿದ್ದೆವು ಎನ್ನುವುದು ಎಲ್ಲರಿಗೂ ಅರ್ಥವಾಗಿತ್ತು ಎಂದಿದ್ದರು.

ಚಿಪ್ಪಿ- ರಂಜಿತ್ ದಂಪತಿಗೆ ಅವಂತಿಕಾ ಎನ್ನುವ ಮಗಳು ಇದ್ದಾಳೆ. ಮಗಳ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದ್ದು, ಧಾರಾವಾಹಿಗಳನ್ನು ನಿರ್ಮಿಸುತ್ತಾರೆ. ತಮ್ಮ ಬ್ಯಾನರ್ ಪ್ರಾಜೆಕ್ಟ್‌ಗಳಲ್ಲಿ ಚಿಪ್ಪಿ ನಟಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಯಾವುದೇ ಕಿರುತೆರೆ ಕಾರ್ಯಕ್ರಮದಲ್ಲಿ ಆಕೆ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು ಫೋಟೊ, ವೀಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

More from Filmibeat

English summary
Do you remember Shilpa from janumada jodi? Here's what the actress is doing now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X