ಐಶ್ವರ್ಯ ರೈ ಬಚ್ಚನ್ ಅವರನ್ನೇ ಹೋಲುವ ಈ ಚೆಲುವೆ ಯಾರು ? ಧ್ವನಿ ಕೂಡ ಸೇಮ್ ಟು ಸೇಮ್..!
ಮಣಿರತ್ನಂ ಅವರ ಇರುವರ್ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದವರು ಐಶ್ವರ್ಯ ರೈ. ಆ ನಂತರ ಐಶ್ವರ್ಯ ಹಿಂದೆ ತಿರುಗಿ ನೋಡಲಿಲ್ಲ. ಅತ್ಯಲ್ಫ ಅವಧಿಯಲ್ಲಿಯೇ ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಐಶ್ವರ್ಯ ಹೊರ ಹೊಮ್ಮಿದರು. ನೇಮು, ಫೇಮನ್ನು ಗಳಿಸಿದರು. ಹಿಂದಿ ಉದ್ಯಮವನ್ನು ಅಕ್ಷರಶಃ ಆಳಿದರು.
ಇಂಥಾ ಐಶ್ವರ್ಯ ರೈ ಅವರನ್ನು ಹೋಲುವ ಅನೇಕರು ಇಲ್ಲಿಯವರೆಗೆ ಗಮನ ಸೆಳೆದಿದ್ದಾರೆ. ಆ ಪೈಕಿ ಸ್ನೇಹಾ ಉಲ್ಲಾಳ್ ಮತ್ತು ಮಾನಸಿ ನಾಯ್ಕ್ ಚಿತ್ರರಂಗದವರಾದರೆ ಮಹ್ಲಾಘಾ ಜಬೇರಿ ಇರಾನ್‌ನಲ್ಲಿ ಮಾಡೆಲ್ ಆಗಿ ಹೆಸರು ಮಾಡಿದವರು. ಆಮ್ನಾ ಇಮ್ರಾನ್ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಮತ್ತು ಬ್ಲಾಗರ್ ಆಗಿ ಪ್ರಸಿದ್ದಿಯನ್ನು ಪಡೆದವರು. ಈ ಸಾಲಿನಲ್ಲಿ ಈಗ ಇನ್ನೊಬ್ಬ ಚೆಲುವೆ ಸೇರಿಕೊಂಡಿದ್ದಾರೆ. ಅವರ ಹೆಸರು ಕನ್ವಾಲ್ ಚೀಮಾ. ವಿಶೇಷ ಅಂದರೆ ಇವರು ಕೂಡ ಪಾಕಿಸ್ತಾನದ ಪ್ರಜೆ.

ನೋಡಲು ಥೇಟ್ ಐಶ್ವರ್ಯ ರೈ ಅವರಂತೆಯೇ ಕಾಣುವ ಕನ್ವಾಲ್ ಚೀಮಾ, ಪಾಕಿಸ್ತಾನದ ಐಶ್ವರ್ಯ ರೈ ಎಂದೇ ಚಿರಪರಿಚಿತರಾಗಿದ್ದಾರೆ. ಐಶ್ವರ್ಯ ರೈ ಅವರಂತೆಯೇ ಅದೇ ಕಣ್ಣು, ಅದೇ ಮೂಗು, ಅದೇ ನಗುವನ್ನು ಹೊಂದಿರುವ ಕನ್ವಾಲ್ ಅವರನ್ನು ಕಂಡ ಯಾರೇ ಆದರೂ ಇವರು ಐಶ್ವರ್ಯ ರೈ ಅವರೇನಾ ಒಂದು ಕ್ಷಣ ಗೊಂದಲಕ್ಕೀಡಾಗುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಸಾಮ್ಯತೆ ಇದೆ. ಇಷ್ಟೇ ಯಾಕೆ ಐಶ್ವರ್ಯ ರೈ ಮತ್ತು ಕನ್ವಾಲ್ ಅವರ ಧ್ವನಿ ಕೂಡ ಸೇಮ್ To ಸೇಮ್ ಇದೆ.
ಅಂದ್ಹಾಗೇ ಐಶ್ವರ್ಯ ರೈ ಅವರಂತೆ ಚಿತ್ರರಂಗದಲ್ಲಿ ಹೆಸರು ಮಾಡದ ಕನ್ವಾಲ್ ಚೀಮಾ, ಪಾಕಿಸ್ತಾನದಲ್ಲಿ ಯಶಸ್ವಿ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಜನಿಸಿದ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಅಲ್ಲಿಯೇ ಶಿಕ್ಷಣವನ್ನು ಪಡೆದ ಕನ್ವಾಲ್ ಆ ನಂತರ ತಮ್ಮ ತಂದೆ ಮತ್ತು ತಾಯಿ ಜೊತೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ಗೆ ತೆರಳಿದರು. ಅಲ್ಲಿನ ಅಮೆರಿಕನ್ ಮತ್ತು ಬ್ರಿಟಿಷ್ ಶಾಲೆಯಲ್ಲಿ ತಮ್ಮ ವ್ಯಾಸಂಗ ಪೂರ್ಣಗೊಳಿಸಿದರು. ಆ ನಂತರ ಮತ್ತೆ ಪಾಕಿಸ್ತಾನಕ್ಕೆ ಮರಳಿದರು.
ಇನ್ನನು ಐಶ್ವರ್ಯ ರೈ ಅವರ ಜೊತೆ ತಮ್ಮ ಹೋಲಿಕೆಯ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕನ್ವಾಲ್ ಚೀಮಾ, ಐಶ್ವರ್ಯ ರೈ ಅವರ ಜೊತೆ ನನ್ನ ಹೋಲಿಕೆ ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನೋಡಲು ನಾನು ಐಶ್ವರ್ಯ ರೈ ಅವರಂತೆಯೇ ಕಾಣಿಸುತ್ತೇನೆ ಎನ್ನುವ ಕಾರಣಕ್ಕೆ ನೀವು ಅವರ ಬಗ್ಗೆಯೇ ನನ್ನ ಬಳಿ ಪ್ರಶ್ನೆ ಮಾಡುತ್ತೀರಾ, ನನ್ನ ವ್ಯೆಯಕ್ತಿಕ ಸಾಧನೆ ಮತ್ತು ನನ್ನ ಜೀವನದ ಕುರಿತು ನೀವು ಮಾತನಾಡುವುದಿಲ್ಲ ಹೀಗಾಗಿ ನಾನು ಐಶ್ವರ್ಯ ರೈ ಅವರ ಕುರಿತು ಹೆಚ್ಚೇನು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದರು. ಹಾಗಂಥ ನಾನು ಐಶ್ವರ್ಯ ರೈ ಅವರನ್ನು ಅವಮಾನ ಮಾಡುತ್ತಿಲ್ಲ ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ ಎಂದು ಕೂಡ ಕನ್ವಾಲ್ ಚೀಮಾ ಹೇಳಿದ್ದರು.
ಇನ್ನುಳಿದಂತೆ ಐಶ್ವರ್ಯ ರೈ ಸದ್ಯ ತಮ್ಮ ದಾಂಪತ್ಯ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಐಶ್ವರ್ಯ ರೈ ಅವರಿಗೆ ಅಭಿಷೇಕ್ ಬಚ್ಚನ್ ವಿಚ್ಛೇದನ ನೀಡಲಿದ್ದಾರೆ ಎಂದು ಮುಂಬೈನ ಮಾಧ್ಯಮಗಳು ದಿನನಿತ್ಯ ವರದಿಯನ್ನು ಮಾಡುತ್ತಿವೆ. ಇನ್ನು ಈ ವಿಚ್ಛೇದನದ ವದಂತಿಗಳ ನಡುವೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆಯಲ್ಲಿ ಮೊನ್ನೆ ಕಾಣಿಸಿಕೊಂಡಿದ್ದು ಇಬ್ಬರು ಸೇರಿ ಚಿತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಸದ್ಯ ಕೇಳಿ ಬರುತ್ತಿದೆ.


Click it and Unblock the Notifications











