ಮತ್ತೆ 'ಯಾಮಿನಿ' ಗುಂಗು ಹಿಡಿಸಿದ ಕರ್ನಾಟಕ ಜೋಡಿ ಹಿನ್ನೆಲೆ ಏನು? ಲವ್ ಸ್ಟೋರಿ ಗೊತ್ತಾ?

ಇತ್ತೀಚೆಗೆ ಕರ್ನಾಟಕ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ. ಅರೇ ಯಾವುದು ಆ ಜೋಡಿ? ಅಂತ ನಿಮಗೂ ಈಗಾಗಲೇ ಫೋಟೊಗಳನ್ನು ನೋಡಿ ಗೊತ್ತಾಗಿರಬಹುದು. ದಿಢೀರನೆ 'ಯಾಮಿನಿ ಯಾಮಿನಿ' ಹಾಡಿನ ಗುಂಗು ಹಿಡಿಸಿರುವ ಜೋಡಿ ಇದು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ವೀಡಿಯೋಗಳ ಮೂಲಕ ಈ ಜೋಡಿ ಮಾಡಿರುವ ಮೋಡಿ ಅಷ್ಟಿಷ್ಟಲ್ಲ.

ಗೋವಿಂದರಾಜ್ ಹಾಗೂ ವೈಲಾ ದಂಪತಿ ಇದೀಗ ಕರ್ನಾಟಕ ಜೋಡಿ ಅಂತ್ಲೇ ನೆಟ್ಟಿಗರಿಗೆ ಹೆಚ್ಚು ಪರಿಚಿತರಾಗಿಬಿಟ್ಟಿದ್ದಾರೆ. ಸೂಪರ್ ಹಿಟ್ ಸಿನಿಮಾ ಗೀತೆಗಳಿಗೆ ಡ್ಯಾನ್ಸ್ ಮಾಡುತ್ತಾ, ರೀಲ್ಸ್ ಮಾಡುತ್ತಾ ಈ ಜೋಡಿ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ. ಸಾಮಾನ್ಯವಾಗಿ ಯುವಕ-ಯುವತಿಯರು ಸೋಶಿಯಲ್ ಮೀಡಿಯಾ ಗೀಳು ಹೆಚ್ಚು. ಇನ್ನು ಇನ್‌ಸ್ಟಾ ರೀಲ್ಸ್ ಕ್ರೇಜ್ ವಿಚಾರದಲ್ಲೂ ಅವರೇ ಮುಂದಿದಿದ್ದಾರೆ. ಇದಕ್ಕೆ ಅಪವಾದ ಎನ್ನುವಂತೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಾರೆ.

Meet karnataka jodi couple who goes viral with Yamini Yaramma Neenu song cover version

'ಕದಂಬ' ಚಿತ್ರದ 'ಯಾರಮ್ಮ ನೀನು ಯಾಮಿನಿ' ಸಾಂಗ್‌ ಸೂಪರ್ ಹಿಟ್ ಆಗಿದ್ದು ಗೊತ್ತೇತಿದೆ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಭಾನುಪ್ರಿಯಾ ಜೋಡಿ ಸಿಂಪಲ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದರು. ದೇವಾ ಸಂಗೀತದಲ್ಲಿ ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದ ಈ ಹಾಡಿಗೆ ಎಸ್‌. ಪಿ ಬಾಲಸುಬ್ರಮಣ್ಯಂ ಹಾಗೂ ಕೆ. ಎಸ್ ಚಿತ್ರಾ ದನಿಯಾಗಿದ್ದರು. ಇದೀಗ ಈ ಹಾಡು ಮತ್ತೊಮ್ಮೆ ಸದ್ದು ಮಾಡೋಕೆ ಕಾರಣ ಗೋವಿಂದರಾಜ್- ವೈಲಾ ಜೋಡಿಯ ಕವರ್ ವರ್ಷನ್.

ಗೋವಿಂದರಾಜ್- ವೈಲಾ ಕಾಣಿಸಿಕೊಂಡಿದ್ದ 'ಯಾಮಿನಿ ಯಾರಮ್ಮ ನೀನು ಯಾಮಿನಿ' ಸಾಂಗ್ ವೀಡಿಯೋ ಸಖತ್ ವೈರಲ್ ಆಗಿತ್ತು. ಇನ್‌ಸ್ಟಾದಲ್ಲಿ ಈ ವೀಡಿಯೋವನ್ನು ಕೆಲವರು ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಕೂಡ ಹಂಚಿಕೊಂಡಿದ್ದರು. ಹಾಡಿಗೆ 50ರ ಹರೆಯದ ಜೋಡಿಯ ಸ್ಟೆಪ್ಸ್, ಹಾವಭಾವ ನೋಡಿದವರು ಫಿದಾ ಆಗಿದ್ದರು. ಮುಖ್ಯವಾಗಿ ಕ್ಯಾಮರಾ ವರ್ಕ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು.

Meet karnataka jodi couple who goes viral with Yamini Yaramma Neenu song cover version

ಈ ಹಿಂದೆ ಹಲವು ರೀಲ್ಸ್, ಸಾಂಗ್ ಕವರ್ ವರ್ಷನ್‌ನಲ್ಲಿ ಕರ್ನಾಟಕ ಜೋಡಿ ಕಾಣಿಸಿಕೊಂಡಿದ್ದರು ಈ ವಿಡಿಯೋ ಬಹಳ ಜನಪ್ರಿಯತೆ ತಂದುಕೊಟ್ಟಿದ್ದು ಸುಳ್ಳಲ್ಲ. ಈ ವೀಡಿಯೊ ಹಿಟ್ ಆದ ಬಳಿಕ ನೆಟ್ಟಿಗರ ಜೋಡಿಯ ಬೇರೆ ವೀಡಿಯೋಗಳನ್ನು ನೋಡಲು ಆರಂಭಿಸಿದರು. ಬಳಿಕ ಅವರ ಹಿನ್ನೆಲೆ ತಿಳಿಯಲು ಹುಡುಕಾಟ ನಡೆಸಿದ್ದರು. ಇದೀಗ ಯೂಟ್ಯೂಬ್ ಚಾನಲ್ ಆರಂಭಿಸಿರುವ ಜೋಡಿ ತಮ್ಮ ಹಿನ್ನೆಲೆ, ಲೈಫ್‌ ಸ್ಟೋರಿ ಬಿಚ್ಚಿಟ್ಟಿದೆ.

ಪ್ರೀತಿಸಿ ಮದುವೆ ಆಗಿರುವ ಗೋವಿಂದರಾಜ್- ವೈಲಾ ಜೋಡಿ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸೋತು, ಗೆದ್ದರೆ ಜೀವನ ಸುಖದಾಯಕವಾಗಿರುತ್ತದೆ ಎನ್ನುವ ಜೋಡಿ ತಮ್ಮ ಲವ್ ಸ್ಟೋರಿಯನ್ನು ಇದೀಗ ಹಂಚಿಕೊಂಡಿದೆ. 26 ವರ್ಷಗಳ ಹಿಂದೆ ವೈಲಾ ಅವರನ್ನು ಮೊದಲ ಬಾರಿ ನೋಡಿದಾಗಲೇ ಗೋವಿಂದರಾಜ್ ಪ್ರೀತಿಲಿ ಬಿದ್ದಿದ್ದರಂತೆ.

ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಗೋವಿಂದರಾಜ್‌ಗೆ ಪ್ರೀತಿ ಆಗಿತ್ತು. ಆದರೆ ವೈಲಾ ಅವರಿಗೆ ಈ ವಿಚಾರ ಹೇಳಿದಾಗ ಆಕೆ ಒಪ್ಪಿರಲಿಲ್ಲವಂತೆ. ಬಳಿಕ ಆಕೆಯನ್ನು ಸಾಕಷ್ಟು ಕಾಡಿ ನಂತರ ಮನೆಯವರನ್ನು ಒಪ್ಪಿಸಿ ಮದುವೆ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಇಬ್ಬರು ಮದುವೆ ಆಗಿ ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದಾರೆ.

ಸಾಕಷ್ಟು ಜನ ಗೋವಿಂದರಾಜ್- ವೈಲಾ ಸಂಪತಿ ವಯಸ್ಸು ಎಷ್ಟು ಎಂದು ಕೇಳುತ್ತಿರುತ್ತಾರಂತೆ. ಆ ಬಗ್ಗೆ ಕೂಡ ವೀಡಿಯೋದಲ್ಲಿ ದಂಪತಿ ಮಾತನಾಡಿದ್ದಾರೆ. ಗೋವಿಂದರಾಜ್ ಅವರಿಗೆ 50 ವಯಸ್ಸು ಇನ್ನು ವೈಲಾ ಅವರಿಗರ 48 ವರ್ಷ ಎಂದು ಹೇಳಿದ್ದಾರೆ. ಕರ್ನಾಟಕ ಜೋಡಿ ಹೆಸರಿನ ಇವರಿಬ್ಬ ಇನ್‌ಸ್ಟಾ ಪೇಜ್‌ಗೆ 2 ಲಕ್ಷ 78 ಸಾವಿರ ಫಾಲೋವರ್ಸ್ ಇದ್ದಾರೆ. ಸಾವಿರಕ್ಕೂ ಅಧಿಕ ಪೋಸ್ಟ್‌ಗಳನ್ನು ಮಾಡಿದ್ದಾರೆ.

More from Filmibeat

English summary
Social media influencers karnataka jodi love stroy, biography.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X