Vickypedia: 'ನಾನು ನಂದಿನಿ' ಎನ್ನುತ್ತಲೇ ಸಾಮಾಜಿಕ ಸಂದೇಶ ಹರಡುವ 'ವಿಕಿಪೀಡಿಯಾ' ಬಗ್ಗೆ ನಿಮಗೆಷ್ಟು ಗೊತ್ತು?

'ನಾನು ನಂದಿನಿ' ಹಾಡು ಯಾರಿಗೆ ಗೊತ್ತಿಲ್ಲ ಹೇಳಿ...ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು, ಸಿನಿಮಾ ಸೆಲಬ್ರಿಟಿಗಳು, ಕಿರುತೆರೆ ತಾರೆಯರು ಕೂಡ ಈ ಹಾಡಿಗೆ ಸೊಂಟ ಬಳುಕಿಸಿದ್ರು. ಹಾಗಂತ ಇದೇನು ಸಿನಿಮಾ ಹಾಡಲ್ಲ... ವಿಕಿಪೀಡಿಯಾ ಎನ್ನುವ ಇನ್‌ಸ್ಟಾಗ್ರಾಮ್ ಪೇಜಲ್ಲಿ ಹಾಕಿದ್ದ ಹಾಡು. ಎಸ್...ಈ ಹಾಡು ಇಡೀ ಸಕತ್ ವೈರಲ್ ಕೂಡ ಆಗಿತ್ತು. ಹಾಗಾದ್ರೆ ಈ ಹಾಡಿನ ಸೂತ್ರದಾರರು ಯಾರು ಅಂತ ಹುಡುಕುತ್ತಾ ಹೋದರೆ ಸಿಗೋದು ವಿಕಾಸ್...ಅಂದ್ರೆ ವಿಕಿಪೀಡಿಯಾ...!

ಫ್ಯಾನ್ಸ್, ಫಾಲೋವರ್ಸ್‌ಗೆ ಮುದ್ದು ಕುಮಾರ... ಅಂಬಿಕಾ... ನಂದಿನಿ....ಸೇರಿ ಹಲವು ಹೆಸರುಗಳಿಂದ ಗೊತ್ತಿರುವ ವಿಕಿಪೀಡಿಯಾ ಅವರ ನಿಜವಾದ ಹೆಸರು ವಿಕಾಸ್ ಸಂಗಮ್. ತಮ್ಮ ವಿಡಿಯೋಗಳಿಂದ ಹೆಚ್ಚು ಜನರಿಗೆ ತಲುಪುತ್ತಿರುವ ಇವರು ಕೇವಲ ಹಾಸ್ಯವನ್ನಷ್ಟೇ ಜನರಿಗೆ ನೀಡುತ್ತಿಲ್ಲ. ಅದರರ ಜೊತೆಗೆ ಕಳಕಳಿಯ, ಸಾಮಾಜಿಕ ಸಂದೇಶಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

Meet Naanu Nandini fame Content Creator Vikas aka Vickypedia

ಎಂಜಿನಿಯರ್ ಆಗಿದ್ದವ ವಿಕಿಪೀಡಿಯಾ ಆದ ಕಥೆ

ಇತರೆ ಕಂಟೆಂಟ್ ಕ್ರಿಯೇಟರ್‌ಗಳಿಗಿಂತ ವಿಷಯದ ಆಯ್ಕೆಯಲ್ಲಿ ಹೆಚ್ಚು ವಿಭಿನ್ನವಾಗಿ ನಿಲ್ಲುತ್ತಾರೆ ವಿಕಾಸ್. ನಗಿಸುವ ಮೂಲಕವೇ ಹಲವು ವಿಚಾರಗಳನ್ನು ಜನರಿಗೆ ತಿಳಿಸುತ್ತಾರೆ. ಇದು ವರ್ಕ್ ಆಗಿದೆ ಎನ್ನುವುದು ಅವರ ವಿಡಿಯೋಗಳಿಗೆ ಸಿಗುವ ವೀವ್ಸ್ ಮತ್ತು ಲೈಕ್‌ಗಳಿಂದ ತಿಳಿಯುತ್ತದೆ. ಕ್ಯಾಮರಾ ವರ್ಕ್‌ನಿಂದ ಹಿಡಿದು ನಟನೆಯವರೆಗೆ ಅವರ ಎಲ್ಲಾ ಕೆಲಸಗಳನ್ನು ಫ್ಯಾನ್ಸ್ ಮೆಚ್ಚುಕೊಂಡಿದ್ದಾರೆ.

ಕಂಟೆಂಟ್ ಕ್ರಿಯೇಟರ್ ಆಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸುವ ಮೊದಲು ವಿಕಾಸ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2013 ರಲ್ಲಿ ಎಂಜಿನಿರಿಂಗ್ ಮುಗಿಸಿದ್ದ ಅವರು ದಿನ 9 ಟು 6 ಕೆಲಸ ಮಾಡಲು ಇಷ್ಟವಾಗದೆ, ತಾವು ಇಷ್ಟಪಡುವ ಕ್ಷೇತ್ರದಲ್ಲಿ ಕಲಿಯಲು ಮತ್ತು ಉತ್ತಮ ಸಾಧನೆ ಕೈಯಲ್ಲಿದ್ದ ಕೆಲಸ ಬಿಟ್ಟು, ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು.

ವಿಕಾಸ್ 2021ರ ಮೇ 29 ರಂದು ತಮ್ಮ ವಿಕಿಪೀಡಿಯಾ ಕನ್ನಡ ಚಾನೆಲ್‌ನೊಂದಿಗೆ ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ವೀಡಿಯೊದ ಹೆಸರು ಹೌಸ್‌ಮೇಡ್ ಕೇವಲ 13,295 ವೀವ್ಸ್ ಪಡೆದಿತ್ತು. ಆದರೆ ದೃತಿಗೆಡದ ಅವರು, ಮತ್ತಷ್ಟು ವಿಡಿಯೋಗಳ ಮೂಲಕ ಜನರ ಮುಂದೆ ಬಂದರು. ಅವರ ಕಂಟೆಂಟ್ ಮತ್ತು ನಟನೆಯಿಂದ ವಿಡಿಯೋಗಳು ಜನರನ್ನು ತಲುವುದು ಕೂಡ ವಿಳಂಬವಾಗಲಿಲ್ಲ.

ಆನ್‌ಲೈನ್ ಜೂಜಿನ ದುಷ್ಪರಿಣಾಮಗಳ ಬಗ್ಗೆ ಮಾಡಿದ ವಿಡಿಯೋದಲ್ಲಿನ 'ಮುದ್ದುಕುಮಾರ' ಅವತಾರ ಸೋಷಿಯಲ್ ಮಿಡೀಯಾದಲ್ಲಿ ಸಕತ್ ವೈರಲ್ ಆಯಿತು. ಬಳಿಕ ಅವರ ಒಂದೊಂದೆ ಪಾತ್ರಗಳು ಜನರ ಮನದಲ್ಲಿ ಜಾಗ ಪಡೆಯಲಾರಂಭಿಸಿದವು. ಅಂಬಿಕಾ, ನಂದಿನಿ, ಮಾಲತಿಯಂತಹ ಸ್ತ್ರೀ ಪಾತ್ರಗಳು ಅವರನ್ನು ಮತ್ತಷ್ಟು ಜನಪ್ರಿಯರನ್ನಾಗಿಸಿದವು.

Meet Naanu Nandini fame Content Creator Vikas aka Vickypedia

ಕಳೆದ ವರ್ಷದ ರೀಲ್ಸ್‌ನಲ್ಲಿ ಸಕತ್ ವೈರಲ್ ಆಗಿದ್ದು, ನಾನು ನಂದಿನಿ ಹಾಡು. ಇದು ಇಂಗ್ಲೀಷ್‌ನ ಆ ಎ ಬಾಬಿ ಗರ್ಲ್ ಹಾಡಿನ ಕನ್ನಡ ರಿಮೇಕ್ ಆಗಿತ್ತು. ಇದು ತಮ್ಮ ಊರುಗಳನ್ನು ಬಿಟ್ಟು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬಂದು ಪಿಜಿಯಲ್ಲಿ ಇರುವ ಎಷ್ಟೋ ಜನರನ್ನು ತಾಗಿತ್ತು.

ತಮ್ಮದೇ ಕಥೆಯನ್ನು ಹೇಳುತ್ತಿದ್ದಾರೆ ಎನಿಸುವಂತಿತ್ತು. ಹಾಗಾಗಿ ಹೆಚ್ಚು ಜನರನ್ನು ಇದು ತಲುಪಿತ್ತು. ಇನ್ನು, ವಿಕಿಪೀಡಿಯಾಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2023ರ 'ಬೆಸ್ಟ್ ಸೋಶಿಯಲ್ ಮೀಡಿಯಾ ಎಂಟಟೈನರ್' ಪ್ರಶಸ್ತಿ ದೊರೆತಿದೆ.

More from Filmibeat

English summary
Know more about Content creator Vikas aka Vickypedia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X