ಬಿಂಕದಕಟ್ಟಿಯಿಂದ ಬಣ್ಣದ ಲೋಕಕ್ಕೆ, ಸ್ಟಾರ್ ಫೋಟೋಗ್ರಾಫರ್ ಪಚ್ಚಿ

By ದಿವ್ಯಶ್ರೀ. ವಿ, ಬೆಂಗಳೂರು

ಚಿತ್ರರಂಗದಲ್ಲಿ ಪ್ರಶಾಂತ್ ಪಚ್ಚಿ ಎಂದರೆ ತಕ್ಷಣವೆ ನೆನಪಾಗುವುದು ಇವರು ಕ್ಲಿಕ್ಕಿಸಿದ ಅದ್ಭುತ ಫೋಟೋಗಳು, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ಯಾರಿಗೂ ಕ್ಲಿಕ್ಕಿಸಲಾಗದ ಅದ್ಭುತ ಅಚ್ಚರಿಯ ಫೋಟೋಗಳು ಇವರ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇವರು ಒಬ್ಬ ಮಾಂತ್ರಿಕ ಛಾಯಾಗ್ರಾಹಕ ಎಂದರೆ ತಪ್ಪಲ್ಲ, ಇವರು ಕ್ಲಿಕ್ಕಿಸಿದ ಎಲ್ಲಾ ಫೋಟೋಗಳು ಭಾರಿ ಪ್ರಮಾಣದಲ್ಲಿ ವೈರಲ್ ಆಗುತ್ತದೆ, ಸ್ಟಾರ್ ಗಳ ಫೇವರಿಟ್ ಫೋಟೋಗ್ರಾಫರ್ ಈ ನಮ್ಮ ಉತ್ತರ ಕರ್ನಾಟಕದ ಹೈದ.

ಈ ಫೋಟೋಗಳ ಜಾದೂಗಾರ ಮೂಲತಃ ಗದಗ ಜಿಲ್ಲೆಯ ಬಿಂಕದಕಟ್ಟಿ ಎಂಬ ಹಳ್ಳಿಯವರು, ಇವರ ಜನನ ಅಕ್ಟೋಬರ್ 11/ 1994, ಇವರ ತಂದೆ ಬಸವರಾಜ್ ಮಲಗವಿ, ತಾಯಿ ಲಕ್ಷ್ಮವ್ವ, ಇವರು ಮನೆಯ ಕಿರಿಯ ಪುತ್ರ, ಇವರ ಸಹೋದರರು ರಾಜು ಮತ್ತು ಚೇತನ್. ಕಷ್ಟವನ್ನು ಮೆಟ್ಟಿ,ಯಶಸ್ಸಿನ ಶಿಖರ ಏರಿದ ಉತ್ತರಕರ್ನಾಟಕದ ಹುಡುಗನ ಸಿನಿ ಫೋಟೋಗ್ರಾಫಿ ಜರ್ನಿ ಮುಂದೆ ಓದಿ...

ಎಸೆಸೆಲ್ಸಿ ಓದುವಾಗಲೇ ಮನೆ ಜವಾಬ್ದಾರಿ, ಕೆಲಸ

ಎಸೆಸೆಲ್ಸಿ ಓದುವಾಗಲೇ ಮನೆ ಜವಾಬ್ದಾರಿ, ಕೆಲಸ

ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಹೆಗಲ ಮೇಲೆ ಹೊತ್ತು, ತಾನು ಎಸೆಸೆಲ್ಸಿ ಓದುವಾಗಲೇ ಕೆಲಸ ಮಾಡುವುದಕ್ಕೆ ಶುರುಮಾಡಿದ್ದರು, ಇವರ ಕುಟುಂಬ ಆರ್ಥಿಕವಾಗಿ ಉತ್ತಮವಾಗಿ ಇರಲಿಲ್ಲ, ಕಷ್ಟದ ನಡುವೆ ಜೀವನವನ್ನು ನೋಡಿ ಬೆಳೆದು ಇವರು ಜೀವನೋಪಾಯಕ್ಕಾಗಿ ಅಡುಗೆ ಕೆಲಸದವರಾಗಿ ಬೆಂಗಳೂರಿಗೆ ಬಂದರು.

ಕ್ಯಾಟರಿಂಗ್ ಸರ್ವೀಸ್ ಸೇರಿಕೊಂಡರು

ಕ್ಯಾಟರಿಂಗ್ ಸರ್ವೀಸ್ ಸೇರಿಕೊಂಡರು

ಹೌದು ಬೆಂಗಳೂರಿಗೆ ಬಂದವರೇ ಒಂದು ಕ್ಯಾಟರಿಂಗ್ ಸರ್ವೀಸ್ ಸಂಸ್ಥೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ಮೊದಮೊದಲು ಇಂತಹ ದೊಡ್ಡ ಬೆಂಗಳೂರಿನಲ್ಲಿ ಕೆಲಸ ಮಾಡಿ ಬೇಸತ್ತು ಪ್ರಯೋಜನವಿಲ್ಲವೆಂದು ಮರಳಿ ತಮ್ಮ ಊರಿಗೆ ವಾಪಸ್ಸಾದರು, ಊರಲ್ಲಿರುವ ತನ್ನ ತಂದೆಯ ಚಿಕ್ಕ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಅದರ ಜೊತೆಗೆ ಓದುತ್ತಾ ಜೀವನ ಕಳೆಯುತ್ತಿದ್ದರು, ಈಗಲೂ ಇವರ ತಂದೆ ಊರಿನಲ್ಲಿ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.

ಪಿಯುಸಿಯಲ್ಲಿ ಫೇಲಾದರೂ ಜೀವನದಲ್ಲಿ ಗೆದ್ದರು

ಪಿಯುಸಿಯಲ್ಲಿ ಫೇಲಾದರೂ ಜೀವನದಲ್ಲಿ ಗೆದ್ದರು

ಪ್ರಶಾಂತ್ ಅವರು ವಿದ್ಯೆಯಲ್ಲಿ ಬುದ್ಧಿವಂತ ರಾಗಿರಲಿಲ್ಲ, ಪಿಯುಸಿಯಲ್ಲಿ ಫೇಲಾದರೂ, ಫೇಲಾದ ಬಳಿಕ ಜೀವನಕ್ಕೆ ಏನು ಮಾಡಬೇಕು ಎಂದು ತಿಳಿಯದ ಇವರು ತಮ್ಮ ಬಡ ಕುಟುಂಬವನ್ನು ನೋಡುತ್ತಾ ಜೀವನದಲ್ಲಿ ಏನಾದರೂ ಮಾಡಲೇಬೇಕು ಹೇಗಾದರೂ ಮಾಡಿ ಒಂದು ಒಳ್ಳೆ ಹೆಸರು ಮಾಡಲೇಬೇಕು ಎಲ್ಲಾದರೂ ಕೆಲಸ ಮಾಡುತ್ತಾ ಜೀವನ ನಡೆಸಬೇಕು ಎಂದು ಛಲದಿಂದ ಜೀವನ ರೂಪಿಸಿಕೊಂಡರು.

ಸ್ಟುಡಿಯೋದಲ್ಲಿ ಕ್ಲೀನರ್ ಆಗಿದ್ದರು

ಸ್ಟುಡಿಯೋದಲ್ಲಿ ಕ್ಲೀನರ್ ಆಗಿದ್ದರು

ಇವರ ಸಹೋದರ ಬೆಂಗಳೂರಿನಲ್ಲಿ ಒಂದು ಸ್ಟುಡಿಯೋದಲ್ಲಿ ವಿಡಿಯೋ ಎಡಿಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು, ಆದರಿಂದ ಇವರ ಅಣ್ಣ ಇವರನ್ನು ತನ್ನ ಊರಿನಲ್ಲಿ ಇರುವ ಹೂವಿನ ಹಡಗಲಿ ಎಂಬ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿಸಿದರು, ಮೂರು ತಿಂಗಳುಗಳ ಕಾಲ ಸ್ಟುಡಿಯೋದಲ್ಲಿ ಪ್ರಶಾಂತ್ ಅವರು ಕಸಗುಡಿಸಿ, ಸ್ಟುಡಿಯೋ ಕ್ಲೀನ್ ಮಾಡುವ ಕೆಲಸವನ್ನು ಮಾಡುತ್ತಿದ್ದರು.

ಫಂಕ್ಷನ್ ಗಳಿಗೆ ಛಾಯಾಗ್ರಾಹಕರಾಗಿದ್ದರು

ಫಂಕ್ಷನ್ ಗಳಿಗೆ ಛಾಯಾಗ್ರಾಹಕರಾಗಿದ್ದರು

ಕಂಪ್ಯೂಟರ್ ಅನ್ನು ಹೇಗೆ ಉಪಯೋಗಿಸಬೇಕು ಎನ್ನುವ ಅರಿವಿಲ್ಲದ ಇವರು ದಿನೇದಿನೇ ಬೇರೆಯವರನ್ನು ನೋಡಿ ಬೇರೆಯವರಿಂದ ಸ್ವಲ್ಪ ಸ್ವಲ್ಪ ಕಂಪ್ಯೂಟರ್ ಬಳಕೆಯನ್ನು ಕಲಿತುಕೊಂಡರು, ಆ ಸ್ಟುಡಿಯೋ ಮಾಲೀಕರೆ ಇವರಿಗೆ ಆಶ್ರಯವನ್ನು ಸಹ ಕೊಟ್ಟಿದ್ದರು, ದಿನಕಳೆದಂತೆ ಕ್ಯಾಮರಾದ ಬಗ್ಗೆ ಮತ್ತು ಫೋಟೋ ತೆಗೆಯುವುದನ್ನು ಸಹ ಇವರು ಕಲಿತುಕೊಂಡರು ನಂತರ ಚಿಕ್ಕ-ಚಿಕ್ಕ ಫಂಕ್ಷನ್ ಗಳಿಗೆ ಛಾಯಾಗ್ರಾಹಕನಾಗಿ ಹೋಗುತ್ತಿದ್ದರು

ಛಾಯಾಗ್ರಾಹಕ ವೃತ್ತಿಯನ್ನು ಆರಿಸಿಕೊಂಡರು

ಛಾಯಾಗ್ರಾಹಕ ವೃತ್ತಿಯನ್ನು ಆರಿಸಿಕೊಂಡರು

ಹೀಗೆ ಕೆಲವು ತಿಂಗಳುಗಳ ಕಾಲ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದರು, ನಂತರ ಇನ್ನು ಏನಾದರೂ ಮಾಡಬೇಕು ಎಂದು ಮತ್ತೆ 2015ರಲ್ಲಿ ಬೆಂಗಳೂರಿನ ಕಡೆಗೆ ತಮ್ಮ ಸಹೋದರನ ಸಹಾಯದಿಂದ ಬಂದರು, ಬೆಂಗಳೂರಿಗೆ ಬಂದಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬೇರೆ ಯಾರದೋ ರೂಮಿನಲ್ಲಿ ಆಶ್ರಯ ಪಡೆದು ಹಗಲು-ರಾತ್ರಿಯೆನ್ನದೆ ತಮ್ಮ ಕ್ಯಾಮರಾವನ್ನು ನಂಬಿ ಛಾಯಾಗ್ರಾಹಕ ವೃತ್ತಿಯನ್ನು ಮಾಡುತ್ತಿದ್ದರು, ಇವರ ಕೈಗೆ ಕ್ಯಾಮೆರಾ ಸಿಕ್ಕರೆ ಸಾಕು ಎಲ್ಲರ ಮನಸ್ಸನ್ನು ಸೆಳೆಯುವ ಫೋಟೋ ಇವರು ತೆಗೆಯುತ್ತಾರೆ.

ಸೆಲೆಬ್ರಿಟಿಗಳ ಇವೆಂಟ್ ಕವರೇಜ್

ಸೆಲೆಬ್ರಿಟಿಗಳ ಇವೆಂಟ್ ಕವರೇಜ್

ಹೀಗೆ ಕೆಲಸ ಮಾಡುತ್ತಾ ಮಾಡುತ್ತಾ ತಮ್ಮ ವೃತ್ತಿಯಲ್ಲಿ ಮದುವೆ ಸಮಾರಂಭಗಳಿಗೆ ಫೋಟೋ ತೆಗೆಯುವ ಜೊತೆಗೆ ಸೆಲೆಬ್ರಿಟಿಗಳ ಈವೆಂಟ್ ಗಳು, ಮಾಡಲಿಂಗ್ ಗಳಿಗೆ ಫೋಟೋಗ್ರಾಫರ್ ಆಗಿ ಹೋಗಲು ಆರಂಭಿಸಿ ಯಶಸ್ಸನ್ನು ಕಂಡರು, ಒಂದು ಚಿಕ್ಕ ಸ್ಟುಡಿಯೋ ಇಂದ ಆರಂಭಿಸಿದ ಇವರ ವೃತ್ತಿ ಇವತ್ತು ಎಲ್ಲಾ ಸೆಲೆಬ್ರಿಟಿಗಳ ಫೇವರಿಟ್ ಫೋಟೋಗ್ರಾಫರ್ ಆಗಿ ಬೆಳೆದಿದ್ದಾರೆ

ಚಿತ್ರರಂಗದ ತಾರೆಯರ ಚಿತ್ರಗಳು

ಚಿತ್ರರಂಗದ ತಾರೆಯರ ಚಿತ್ರಗಳು

ಸ್ಟಾರ್ಸ್ ಗಳಾದ ಶಿವಣ್ಣ, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಪ್ರಭಾಸ್, ತಮನ್ನಾ, ಕರೀನಾ ಕಪೂರ್, ಇನ್ನು ಮುಂತಾದ ಸ್ಟಾರ್ಸ್ ಗಳ ಅದ್ಭುತವಾದ ಫೋಟೋವನ್ನು ಕ್ಲಿಕ್ಕಿಸಿದ್ದಾರೆ, ಇವರು ತೆಗೆದಿರುವ ಫೋಟೋವನ್ನು ಇಷ್ಟಪಟ್ಟು ಸ್ಟಾರ್ ಗಳೆ ಇವರ ಜೊತೆ ಸೆಲ್ಫಿ ಅನ್ನು ಕೂಡ ತೆಗೆದುಕೊಂಡಿದ್ದಾರೆ.

ಫೋಟೋಗ್ರಫಿ ದಿನದಂದೇ ಮದುವೆ

ಫೋಟೋಗ್ರಫಿ ದಿನದಂದೇ ಮದುವೆ

ನಮ್ಮ ಪ್ರಶಾಂತ್ ಅವರು ಫೋಟೋಗ್ರಫಿಯನ್ನು ಎಷ್ಟರಮಟ್ಟಿಗೆ ಇವರು ಇಷ್ಟಪಡುತ್ತಾರೆ ಎಂದರೆ ಆಗಸ್ಟ್ 19 ವರ್ಲ್ಡ್ ಫೋಟೋಗ್ರಫಿ ದಿನದಂದೇ ತನ್ನ ಪ್ರೇಯಸಿ ಚೈತ್ರಾಳ ಜೊತೆ ವೈವಾಹಿಕ ಜೀವನವನ್ನು ಸಹ ಆರಂಭಿಸಿದ್ದಾರೆ, ಈಗ ಪುಟ್ಟ ಮಗುವಿನೊಂದಿಗೆ ಇವರ ಕುಟುಂಬ ಸಂತೋಷದಿಂದ ಕೂಡಿದೆ.

ಕ್ಯಾಮೆರಾ, ಹೆಂಡತಿ ಮತ್ತು ಮಗು ನನ್ನ ಆಸ್ತಿ

ಕ್ಯಾಮೆರಾ, ಹೆಂಡತಿ ಮತ್ತು ಮಗು ನನ್ನ ಆಸ್ತಿ

ಕ್ಯಾಮೆರಾ, ಹೆಂಡತಿ ಮತ್ತು ಮಗು ನನ್ನ ಆಸ್ತಿ ಎಂದು ಹೇಳುವ ಪ್ರಶಾಂತ್ ಪಚ್ಚಿ ಅವರು ಯಶಸ್ಸನ್ನು ಕಂಡರು, ಸ್ಟಾರ್ಸ್ ಗಳ ಜೊತೆ ಕೆಲಸ ಮಾಡಿದರು, ಸೆಲೆಬ್ರಿಟಿಗಳ ಫೇವರಿಟ್ ಫೋಟೋಗ್ರಾಫರ್ ಎಂಬ ಬಿರುದು ಇದ್ದರು ಯಾವುದೇ ಅಹಂ ಇಲ್ಲದೆ ಬಹಳ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಹೀಗೆ 8 ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ನಮ್ಮ ಛಾಯಾಗ್ರಹಕ ಪ್ರಶಾಂತ್ ಪಚ್ಚಿ ಇನ್ನು ಎತ್ತರಕ್ಕೆ ಬೆಳೆಯಲಿ ಇನ್ನು ಹೆಚ್ಚು ಮಟ್ಟದಲ್ಲಿ ಇವರ ಫೋಟೋಗಳು ವೈರಲ್ ಆಗಲಿ ಎಂದು ಆಶಿಸೋಣ.

More from Filmibeat

English summary
Meet Star Photographer Prashanth Pachi from Binkadakatti, Gadag who is making name for himself in Kannada Film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X