ಚಿತ್ರರಂಗಕ್ಕೆ ಗುಡ್ ಬೈ ಹೇಳಿ ತಬ್ಲಿಘಿ ಜಮಾತ್‌ನ ಮೌಲಾನಾ ಆದ ನಟ..!

ಬದುಕೆಂದರೆ ಹಾಗೆಯೇ. ಎಲ್ಲವೂ ಇರುತ್ತೆ, ಆದರೂ ಏನೂ ಇಲ್ಲ ಎಂಬ ಕೊರಗು ಕಾಡುತ್ತಿರುತ್ತೆ. ಕೇವಲ ಜನಸಾಮಾನ್ಯರಲ್ಲಿ ಮಾತ್ರ ಅಲ್ಲ ಚಿತ್ರರಂಗದಲ್ಲಿ ಕೂಡ ತೃಪ್ತಿ ಎನ್ನುವುದು ಮರಿಚೀಕೆ. ಇಲ್ಲಿ ಹಣ-ಅಂತಸ್ತು-ಹೆಸರು-ಕೀರ್ತಿ ಎಲ್ಲವೂ ಇರುತ್ತೆ ಆದರೆ ನೆಮ್ಮದಿ ಮಾತ್ರ ಇರಲ್ಲ. ಹೀಗಾಗಿಯೇ ಇಲ್ಲಿ ಅನೇಕರು ಎಲ್ಲವನ್ನು ತೊರೆದು ಆಧ್ಯಾತ್ಮದತ್ತ ವಾಲುತ್ತಾರೆ. ಭಗವಂತನ ನಾಮಸ್ಮರಣೆಯಿಂದ ಶಾಂತಿ-ನೆಮ್ಮದಿಯನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ ಆರಿಫ್ ಖಾನ್.

ಹೌದು, ಅದು 1991ರ ಸಮಯ. ಪೂಲ್ ಔರ್ಕಾಂಟೆ ಚಿತ್ರದ ಮೂಲಕ ಅಜಯ್ ದೇವಗನ್ ಅವರ ರಂಗ ಪ್ರವೇಶವಾಗಿತ್ತು. ಈ ಚಿತ್ರದ ಮೂಲಕವೇ ಮತ್ತೊಬ್ಬ ವ್ಯಕ್ತಿ ಚಿತ್ರರಂಗಕ್ಕೆ ಬಂದಿದ್ದರು. ಅವರೇ ಈ ಆರಿಫ್ ಖಾನ್. ನೋಡಲು ಸ್ಪುರದ್ರೂಪಿಯಾಗಿದ್ದ ಆರಿಫ್ ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯದ ಮೂಲಕ ಅನೇಕರ ಗಮನ ಸೆಳೆದರು. ಖಳನಾಯಕನ ಪಾತ್ರದಲ್ಲಿ ಮಿಂಚಿದರು. ಆ ನಂತರ ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಅಭಿನಯದ ಮೊಹ್ರಾ. ಸಲ್ಮಾನ್ ಖಾನ್ ಅಭಿನಯದ ವೀರ್‌ಗತಿ, ಮಿಥುನ್ ಚಕ್ರವರ್ತಿ ಮತ್ತು ಆದಿತ್ಯ ಪಾಂಚೋಲಿ ಅಭಿನಯದ ಜಂಗ್ ಚಿತ್ರದಲ್ಲಿ ಕೂಡ ಆರಿಫ್ ಕಾಣಿಸಿಕೊಂಡರು.

Meet the actor who debuted with Ajay Devgn and later quit acting to become a Maulana

ಆದರೆ, ಆರಿಫ್‌ಗೆ ಸೀರಿಯಲ್ ಪ್ರಪಂಚದಲ್ಲಿ ಗೆಲುವು ಸಿಗಲಿಲ್ಲ. ಸಿಗಬೇಕಿದ್ದ ಮನ್ನಣೆ ಕೂಡ ಸಿಗಲಿಲ್ಲ. ಇನ್ನು ಆ ಕಾಲದಲ್ಲಿಯೇ ಆರಿಫ್ ಖಾನ್ ಹಾಲಿವುಡ್‌ ಚಿತ್ರರಂಗದಲ್ಲಿ ಕೂಡ ಬಣ್ಣ ಹಚ್ಚಿದ್ದರು. 2007ರಲ್ಲಿ ಏಂಜಲೀನಾ ಜೋಲಿ ಅಭಿನಯಿಸಿದ್ದ ಚಿತ್ರದಲ್ಲಿ ಟ್ಯಾಕ್ಸಿ ಡ್ರೈವರ್ ಪಾತ್ರವನ್ನು ಆರಿಫ್ ಖಾನ್ ನಿರ್ವಹಿಸಿದ್ದರು.

ಹೀಗೆ ಹಂತ ಹಂತವಾಗಿ ಚಿತ್ರರಂಗದಲ್ಲಿ ನೆಲೆಯೂರಿದ್ದ ಆರಿಫ್ ಬಳಿ ಆಗ ಎಲ್ಲವೂ ಇತ್ತು. ಆದರೆ, ಸುಖ, ಶಾಂತಿ, ನೆಮ್ಮದಿ ಮಾತ್ರ ಇರಲಿಲ್ಲ. ಆರಿಫ್ ಮನಸು ಚಡಪಡಿಸಲು ಶುರು ಮಾಡಿತ್ತು. ನಾನ್ಯಾರು ? ಚಿತ್ರರಂಗಕ್ಕೆ ನಾನ್ಯಾಕೆ ಬಂದೆ ? ಎಂಬ ಪ್ರಶ್ನೆಗಳೆಲ್ಲ ಆರಿಫ್ ತಲೆಯಲ್ಲಿ ಗಿರಕಿ ಹೊಡೆಯತೊಡಗಿದವು. ಇದರ ಜೊತೆ ದೊಡ್ಡ ದೊಡ್ಡ ಚಿತ್ರಗಳಲ್ಲಿ ಅವಕಾಶ ಸಿಗದ ಹಿನ್ನೆಲೆ ಮನಸು ಇನ್ನು ವಿಚಲಿತಗೊಂಡಿತ್ತು.

ಹೀಗಾಗಿಯೇ ಕೊನೆಗೊಂದು ದಿನ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ತೀರ್ಮಾನಕ್ಕೆ ಬಂದ ಆರಿಫ್ ಖಾನ್ ಆ ನಂತರ ಆಧ್ಯಾತ್ಮದತ್ತ ವಾಲಿದರು. ಸುನ್ನಿ ಇಸ್ಲಾಮಿಕ್ ಮಿಷನರಿ ಚಳುವಳಿಯಾದ ತಬ್ಲಿಘಿ ಜಮಾತ್ ಸೇರಿಕೊಂಡರು. ಸದ್ಯ ಚಿತ್ರರಂಗದಿಂದ ದೂರವಾಗಿ ಗುರುತು ಸಿಗದಂತೆ ಬದಲಾಗಿರುವ ಆರಿಫ್ ಖಾನ್ ತಬ್ಲಿಘಿ ಜಮಾತ್‌ನಲ್ಲಿ ಮೌಲಾನಾ ಆಗಿದ್ದಾರೆ. ತಮ್ಮ ಧರ್ಮದ ಪ್ರಚಾರವನ್ನು ಮಾಡುತ್ತಿದ್ದಾರೆ.

ಇನ್ನುಳಿದಂತೆ ಚಿತ್ರರಂಗದಿಂದ ದೂರವಾಗಿರುವ ಆರಿಫ್ ಸದ್ಯ ಸರಳವಾದ ಜೀವನ ನಡೆಸುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮಾಜಿ ಬಾಲಿವುಡ್ ನಟ, ಜೀವನೋತ್ಸಾಹ ತುಂಬುವ ಭಾಷಣಕಾರ ಎಂದು ಬರೆದುಕೊಂಡಿರುವ ಆರಿಫ್ ತಮ್ಮದೇ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಇದರ ಜೊತೆಯಲ್ಲಿ ಪಾನಿ ಕಾಮ್ ಚಾಯ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇವರನ್ನು ಸದ್ಯ 94,336 ಜನ ಫಾಲೋ ಮಾಡುತ್ತಿದ್ದಾರೆ. ತಬ್ಲಿಘಿ ಜಮಾತ್‌ನ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಇವರು ಇಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ ತಮ್ಮ ಹಳೆಯ ಚಿತ್ರದ ಕ್ಲಿಪಿಂಗ್‌ಗಳ ಜೊತೆ ತಮ್ಮ ಈಗಿನ ಫೋಟೊಗಳನ್ನು ಹಾಕಿ ವಿಡಿಯೋ ಶೇರ್ ಮಾಡುತ್ತಿರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X