ಹೆಂಗೆಂಗೆಲ್ಲಾ ಫೇಮಸ್ ಆಗ್ತಾರಪ್ಪಾ? ಈಗ ಸೋಶಿಯಲ್ ಮೀಡಿಯಾ ತುಂಬಾ ಈಕೆಯದ್ದೇ ಹವಾ
ಸೋಶಿಯಲ್ ಮೀಡಿಯಾದಲ್ಲಿ ಯಾವ ಫೋಟೊ, ಯಾವ ವೀಡಿಯೋ ಯಾವಾಗ ಟ್ರೆಂಡ್ ಆಗುತ್ತದೆ ಹೇಳೋಕ್ಕಾಗಲ್ಲ. ಟ್ರೋಲ್, ಮೀಮ್ ಅಂತೆಲ್ಲಾ ಏನೇನೋ ವೈರಲ್ ಆಗಿ ರಾತ್ರೋರಾತ್ರಿ ಯರ್ಯಾರೋ ಫೇಮಸ್ ಆಗಿ ಬಿಡುತ್ತಾರೆ. ಇಂಟರ್‌ನೆಟ್ ಪುಣ್ಯದಿಂದ ಹಳೇ ಹಿಟ್ ಸಾಂಗ್‌ಗಳೆಲ್ಲಾ ಈಗ ಟ್ರೆಂಡ್ ಹುಟ್ಟುಹಾಕುವಂತಾಗಿದೆ.
'ಉಪೇಂದ್ರ' ಚಿತ್ರದ 'ಏನಿಲ್ಲಾ ಏನಿಲ್ಲಾ', 'ನಾನು ನಂದಿನಿ', 'ಚಟಪಟ ರಾಹುಲ್ಲಾ' ಹೀಗೆ ಏನೇನೊ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಗೊತ್ತೇಯಿದೆ. ಕೊನೆಗೆ 'ಶೆಡ್ಡಿಗೆ ಹೋಗೋಣ ಬಾ ಕುಂಟೆ ಬಿಲ್ಲೆ ಹಾಡೋಣ ಬಾ' ಅನ್ನೋದು ವೈರಲ್ ಆಯಿತು. ಸಾಕಷ್ಟು ರೀಲ್ಸ್ ಮಾಡಿ ಎಂಜಾಯ್ ಮಾಡಿದರು. ವೀವ್ಸ್, ಲೈಕ್ಸ್ ಅಂತ ಭಾರೀ ವ್ಯವಹಾರವೇ ನಡೀತಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋಕೆ ಒಬ್ಬೊರದ್ದು ಒಂದೊಂದು ವೇಷ. ಕೆಲವರು ಬಿದ್ದಂತೆ, ನೀರಿನಲ್ಲಿ ಮುಳುಗಿದಂತೆ ಹೀಗೆ ಏನೇನೋ ಸರ್ಕಸ್ ಮಾಡ್ತಾರೆ. ಇನ್ನು ತುಂಡು ಬಟ್ಟೆ ತೊಟ್ಟು ಮೈಮಾಟ ಪ್ರದರ್ಶಿಸಿ ವೀವ್ಸ್, ಲೈಕ್ಸ್ ಗಿಟ್ಟಿಸಿಕೊಳ್ಳುವವರು ಇದ್ದಾರೆ. ಕೆಲಸ ಇಲ್ಲದವರು, ಟೀನೇಜರ್ಸ್, ಯೂತ್ಸ್ ಅಂತ ಅಲ್ಲದೇ ವಯಸ್ಕರು, ವಯಸ್ಸಾದವರು ರೀಲ್ಸ್ ಪ್ರಪಂಚದಲ್ಲಿ ಸದ್ದು ಮಾಡುತ್ತಿರುತ್ತಾರೆ.
ವೀವ್ಸ್, ಲೈಕ್ಸ್‌ಗಾಗಿ ಹೀಗೆ ನಾನಾ ವೇಷ ಹಾಕುವವರು ನಡುವೆ ಶ್ರೀ ನವಲ್ ಕಿಶೋರಿ ಎಂಬ ಯುವತಿ ತನ್ನ ವಿಭಿನ್ನ ರೀಲ್ಸ್‌ನಿಂದ ಗಮನ ಸೆಳೆಯುತ್ತಿದ್ದಾಳೆ. ಯಾವುದೇ ಮೈಮಾಟ ಪ್ರದರ್ಶನ ಇಲ್ಲದೇ ಈಕೆ ಮಾಡುವ ರೀಲ್ಸ್ ನೆಟ್ಟಿಗರ ಗಮನ ಸೆಳೆದಿದೆ. ಕಡಿಮೆ ಅವಧಿಯಲ್ಲಿ ಯುವತಿಗೆ ಭಾರೀ ಫಾಲೋಯಿಂಗ್ ಶುರುವಾಗಿದೆ. ಇವತ್ತಿನ ಪೀಳಿಗೆಯ ಹುಡುಗಿಯರಿಗಿಂತ ಸಂಪೂರ್ಣ ಭಿನ್ನವಾಗಿ ಆಕೆ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾಳೆ. ಸಾಂಪ್ರದಾಯಿಕವಾಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾಳೆ.

ಹಿಟ್ ಸಾಂಗ್ಸ್ ಹಿಂದೆ ಹೋಗದೇ ಶ್ರೀ ನವಲ್ ಕಿಶೋರಿ ಶ್ಲೋಕಗಳು, ಭಕ್ತಿ ಗೀತೆಗಳ ರೀಲ್ಸ್ ಮಾಡುತ್ತಿದ್ದಾಳೆ. ಇನ್ ಸ್ಟಾಗ್ರಾಂನಲ್ಲಿ ಎಷ್ಟೇ ಹಾಟ್ ಸುಂದರಿಯರಿದ್ದರೂ ಹುಡುಗರು ಈ ಹುಡುಗಿಯನ್ನು ತಮ್ಮ ಕ್ರಶ್ ಎಂದೇ ಕರೆಯುತ್ತಾರೆ. ಹಣೆಗೆ ಉದ್ದನೆಯ ನಾಮ, ಹುಬ್ಬಿನ ಮೇಲೆ ಚಿತ್ತಾರ ಬಿಡಿಸಿದಂತೆ ಆಕೆ ಬಹಳ ವಿಭಿನ್ನವಾಗಿ ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ದೇವರ ಕೀರ್ತನೆಗಳಿಗೆ ವಿಭಿನ್ನವಾಗಿ ಎಕ್ಸ್‌ಪ್ರೆಶನ್ ಕೊಡುತ್ತಾ ರೀಲ್ಸ್ ಮಾಡುತ್ತಿದ್ದಾಳೆ.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಶ್ರೀ ನವಲ್ ರೀಲ್ಸ್ ಮಾತ್ರವಲ್ಲ, ಇನ್‌ಸ್ಟಾಗ್ರಾಮ್, ಯೂಟ್ಯೂಬ್‌ನಂತಹ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹಳ ಬೇಗ ಜನಪ್ರಿಯತೆ ಸಾಧಿಸಿದ್ದಾರೆ. ಆಕೆಯ ವೀಡಿಯೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ನೆಟ್ಟಿಗರು ಆಕೆಯ ವೀಡಿಯೋಗಳನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಕನ್ನಡಿಗರು ಇದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 297 ಪೋಸ್ಟ್ ಮಾಡಿರುವ ಶ್ರೀ ನವಲ್ ಕಿಶೋರಿಗೆ 20 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ವರ್ಷದ ಹಿಂದೆ ಆಕೆ ಇನ್‌ಸ್ಟಾಗ್ರಾಂ ಅಕೌಂಟ್ ಕ್ರಿಯೇಟ್ ಮಾಡಿದ್ದಳು. ಇಷ್ಟು ಬೇಗ 20 ಲಕ್ಷ ಜನ ಫಾಲೋವರ್ಸ್ ಸಂಪಾದಿಸಿರುವುದು ವಿಶೇಷ. ವಿಪರ್ಯಾಸ ಎಂದರೆ ಕೆಲವರು ಈಕೆಯನ್ನು ಟ್ರೋಲ್ ಮಾಡಿ ಒಂದಷ್ಟು ರೀಲ್ಸ್ ಮಾಡುತ್ತಿದ್ದಾರೆ.


Click it and Unblock the Notifications











