"ಆಪಲ್, ಆಪಲ್", "ಬಟರ್‌ಫ್ಲೈ ಬಟರ್‌ಫ್ಲೈ" ರೈಮ್ಸ್‌ ಸೃಷ್ಟಿಕರ್ತ ಸರ್ಕಾರಿ ಶಾಲಾ ಶಿಕ್ಷಕ

ಇದು ಸೋಶಿಯಲ್ ಮೀಡಿಯಾ ಜಮಾನ ಕಣ್ರೀ. ಇಲ್ಲಿ ಯಾವುದು, ಯಾವಾಗ? ಯಾಕೆ ಟ್ರೆಂಡ್ ಆಗುತ್ತದೆ ಎಂದು ಹೇಳೋಕ್ಕಾಗಲ್ಲ. 25 ವರ್ಷಗಳ ಹಿಂದೆ ಬಂದಿದ್ದ 'ಓನಲ್ಲ ನೀನಲ್ಲ' ಇತ್ತೀಚೆಗೆ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ನಾನಾ ರೂಪಗಳಲ್ಲಿ ವೈರಲ್ ಆಗುತ್ತಲೇ ಇದೆ.

'ಕರಿಮಣಿ ಮಾಲೀಕ' ಜೊತೆ 'ರಾಹುಲ್ಲಾ' ಸೇರಿ ಚಟ ಪಟ ಚಟ ಪಟ ಅಂತ ಸದ್ದು ಮಾಡ್ತಾನೇ ಇದ್ದಾನೆ. ಇನ್‌ಸ್ಟಾ, ಫೇಸ್‌ಬುಲ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್‌ಗಳಲ್ಲಿ ಹೀಗೆ ಲಕ್ಷ ಲಕ್ಷ ವಿಡಿಯೋಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಹಳೇದು, ಹೊಸದು ಯಾವ್ದು ಅನ್ನೋದನ್ನು ಹೇಳೊಕ್ಕಾಗಲ್ಲ. ದಿಢೀರನೆ ವೈರಲ್ ಆಗಿ ಟ್ರೆಂಡ್ ಕ್ರಿಯೇಟ್ ಆಗಿಬಿಡುತ್ತದೆ. ನಮ್ಮದು ಒಂದಿರಲಿ ಅಂತ ಕೆಲವರು ಅಂತ ರೀಲ್ಸ್‌ ರೀ-ಕ್ರಿಯೇಟ್ ಮಾಡಿ ಪೋಸ್ಟ್ ಮಾಡ್ತಾರೆ.

Meet trending apple butterfly rhymes video creator govt school teacher

ಇತ್ತೀಚೆಗೆ ವೈರಲ್ ಆಗಿರುವ ಮತ್ತೆರಡು ರೀಲ್ಸ್ ಅಂದ್ರೆ ಒಂದು "ಆಪಲ್, ಆಪಲ್, ರೆಡ್ ರೆಡ್ ಆಪಲ್" ಹಾಗೂ "ಬಟರ್‌ಫ್ಲೈ ಬಟರ್‌ಫ್ಲೈ ವೇರ್ ಆರ್‌ ಯೂ ಗೋಯಿಂಗ್" ರೈಮ್ಸ್ ವೀಡಿಯೋಗಳು. ಕನ್ನಡ ಕಿರುತೆರೆ ನಟಿಯರು ಕೂಡ "ಬಟರ್‌ಫ್ಲೈ ಬಟರ್‌ಫ್ಲೈ" ಎಂದು ಹೆಜ್ಜೆ ಹಾಕುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ವೀಡಿಯೋಗಳು ಸದ್ದು ಮಾಡುತ್ತಿವೆ. ಅಂದಹಾಗೆ ಈ ರೀಲ್ಸ್ ಹಿಂದಿನ ಸೃಷ್ಟಿಕರ್ತ ಆಂಧ್ರಪ್ರದೇಶದ ಸರ್ಕಾರಿ ಶಾಲೆ ಶಿಕ್ಷಣ ಎನ್ನುವುದು ವಿಶೇಷ.

ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗ ಮಂಡಲದ ಎಂಪಿಪಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿಕ್ಕಿ ಶ್ರೀನಿವಾಸುಲು ಈ ಈ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆದರೆ ಈಗ ಅವು ವೈರಲ್ ಆಗಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ. ಬಿಕ್ಕಿ ಶ್ರೀನಿವಾಸುಲು ಶಾಲಾ ಮಕ್ಕಳಿಗೆ ಹಾಡು, ಅಭಿನಯದ ಮೂಲಕ ಇಂಗ್ಲಿಷ್ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಲ್ಕು ಗೋಡೆಗಳ ನಡುವೆ ಮಕ್ಕಳನ್ನು ಓದುವಂತೆ ಒತ್ತಡ ಹೇರಬಾರದು. ಆಟ, ಪಾಠದ ಮೂಲಕ ಮಕ್ಕಳಿಗೆ ಕಲಿಸಬೇಕು ಎಂದು ಎಲ್ಲಾ ಶಿಕ್ಷಕರು ಅಂದುಕೊಳ್ಳುತ್ತಾರೆ. ಇದೇ ರೀತಿಯ ಆಲೋಚನೆಯಿಂದ ಬಿಕ್ಕಿ ಶ್ರೀನಿವಾಸುಲು ಮಕ್ಕಳಿಂದ ಈ ರೀತಿ ಇಂಗ್ಲೀಷ್ ಪದ್ಯಗಳನ್ನು ಕಲಿಸಲು ಮುಂದಾಗಿದ್ದರು.

Meet trending apple butterfly rhymes video creator govt school teacher

ತಮ್ಮದೇ ಹೆಸರಿನಲ್ಲಿ ಬಿಕ್ಕಿ ಶ್ರೀನಿವಾಸುಲು ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ತಮ್ಮ ಶಾಲೆಯ ಮಕ್ಕಳು ಇಂಗ್ಲೀಷ್, ತೆಲುಗು ರೈಮ್ಸ್‌(ಪದ್ಯಗಳು) ಹೇಳುವ ವಿಡಿಯೋಗಳನ್ನು ಚಿತ್ರೀಕರಿಸಿ ಅಪ್‌ಲೋಡ್ ಮಾಡುತ್ತಿದ್ದಾರೆ. ಸದ್ಯ ಆ ಚಾನಲ್‌ಗೆ 50 ಲಕ್ಷಕ್ಕೂ ಅಧಿಕ ಸಬ್‌ಸ್ಕೈಬರ್ಸ್ ಇದ್ದಾರೆ. 6 ವರ್ಷಗಳ ಹಿಂದೆ ಪೋಸ್ಟ್ ಮಾಡಿದ್ದ 'ಆಪಲ್ ಆಪಲ್' ಸಾಂಗ್ 180 ಕೋಟಿ ವೀವ್ಸ್ ಸಾಧಿಸಿದೆ.

ಇನ್ನು 4 ವರ್ಷಗಳ ಹಿಂದೆ ಪೋಸ್ಟ್ ಮಾಡಿದ್ದ "ಬಟರ್‌ಫ್ಲೈ ಬಟರ್‌ಫ್ಲೈ" ರೈಮ್ಸ ವಿಡಿಯೋ 1 ಕೋಟಿ 30 ಲಕ್ಷಕ್ಕೂ ಅಧಿಕ ವೀವ್ಸ್ ಗಳಿಸಿದೆ. ಸರ್ಕಾರಿ ಶಾಲಾ ಮಕ್ಕಳು ಈ ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಸಿಂಪಲ್ ಸ್ಟೆಪ್ಸ್ ಹಾಕಿದ್ದಾರೆ. ಬರೀ ಡ್ಯಾನ್ಸ್ ವೀಡಿಯೋಗಳನ್ನು ಮಾತ್ರವಲ್ಲ ಪ್ರಾಥಮಿಕ ಶಾಲೆ ಮಕ್ಕಳಿಗೆ ಹೇಳಿಕೊಡುವ ಪಾಠಗಳ ವಿಡಿಯೋಗಳನ್ನು ಯೂಟ್ಯೂಬ್‌ ಚಾನಲ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

50 ಲಕ್ಷಕ್ಕೂ ಅಧಿಕ ಸಬ್‌ಸ್ಕೈಬರ್ಸ್, ಕೋಟಿ ಕೋಟಿ ವೀವ್ಸ್ ಸಾಧಿಸುತ್ತಿರುವ ವೀಡಿಯೋಗಳು. ಇದರಿಂದ ಶಿಕ್ಷಕ ಬಿಕ್ಕಿ ಶ್ರೀನಿವಾಸುಲು ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಒಟ್ನಲ್ಲಿ ಮಕ್ಕಳಿಗೆ ಇಷ್ಟವಾಗುವಂತೆ ಪಾಠ ಹೇಳಿಕೊಡುವ ಶಿಕ್ಷಕನ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
How Much income eran apple, butterfly rhymes video creator.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X