ಸ್ಟಾರ್‌ಡಂ ಬದಿಗಿಟ್ಟು 'ಗೇ' ಪಾತ್ರದಲ್ಲಿ ಕಾಣಿಸಿಕೊಂಡ ಮೆಗಾಸ್ಟಾರ್‌ ಮಮ್ಮುಟ್ಟಿ, ಸ್ಟಾರ್ ನಟರಿಗೆ ನೀಡಿದ ಸ್ಪಷ್ಟ ಸಂದೇಶವೇನು?

ಸಿನಿಮಾ ಕೇವಲ ಮನರಂಜನೆಯಲ್ಲ ಅದೊಂದು ಶಿಕ್ಷಣದ ಕ್ರಮ ಎಂದು ನಂಬುವ ನಿರ್ದೇಶಕರು, ನಟರು ನಮ್ಮೊಂದಿಗಿದ್ದಾರೆ. ತಾವು ಮಾಡುವ ಸಿನಿಮಾಗಳ ಮೂಲಕ ಜನರಿಗೆ ಮನರಂಜನೆ ಜೊತೆಗೆ ಆದಷ್ಟು ಶಿಕ್ಷಣ ನೀಡುವುದಕ್ಕೆ ಒತ್ತು ನೀಡುವ ನಿರ್ದೇಶಕರ ತಂಡವಿದೆ. ಇದಕ್ಕೆ ಬೆಂಬಲ ನೀಡುವ ಸೂಪರ್ ಸ್ಟಾರ್‌ಗಳು ಸೇರಿಕೊಂಡರೆ ಅದರ ಗಮ್ಮತ್ತೆ ಬೇರೆ. ಇಂತಹ ಪ್ರಯತ್ನಕ್ಕೆ ಮಲಯಾಳಂ ಸಿನಿರಂಗ ಯಾವತ್ತಿಗೂ ಮುಂದೆ.

ಇಂತಹದ್ದೆ ವಿಭಿನ್ನ ಕಥೆಯ ಮೂಲಕ ನಿರ್ದೇಶಕ ಜಿಯೋ ಬೇಬಿ ಹೊಸ ಸಿನಿಮಾವನ್ನು ಸಿನಿಪ್ರೇಕ್ಷರ ಮುಂದಿಟ್ಟು ಸೈ ಎನಿಸಿಕೊಂದಿದ್ದಾರೆ. ಅದರಲ್ಲೂ ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿಯದ್ದೇ ಈ ಸಿನಿಮಾ. ಸ್ಟಾರ್‌ಡಂ ಎಂಬ ಭ್ರಮೆಯನ್ನು ಕಳಚಿಟ್ಟು ಸಲಿಂಗಿಯಾಗಿ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ.

mammootty-s-gay-appearance-in-kaathal-the-core

ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿಯ ಹೊಸ ಪ್ರಯೋಗಕ್ಕೆ ಜೈ ಎಂದ ಪ್ರೇಕ್ಷಕರು!

ಜಿಯೋ ಬೇಬಿ ನಿರ್ದೇಶನದ ಮಮ್ಮುಟ್ಟಿ ಮತ್ತು ನಟಿ ಜ್ಯೋತಿಕಾ ಅಭಿನಯದ ಮಲಯಾಳಂ ಸಿನಿಮಾ 'ಕಾಥಲ್- ದಿ ಕೋರ್' ಸಲಿಂಗಿಯಾಗಿರುವ ಗಂಡೊಬ್ಬ ಅನುಭವಿಸುವ ಆತಂಕ, ತೊಳಲಾಟ, ತಲ್ಲಣದ ಕುರಿತದ್ದು. 72 ವರ್ಷದ ಮೆಗಾಸ್ಟಾರ್ ಮಮ್ಮುಟ್ಟಿ ತಮ್ಮ ಸ್ಟಾರ್‌ಡಂ ಹೊರಗಿಟ್ಟು ಅಭಿನಯಿಸಿದ್ದಾರೆ.

ಲೈಂಗಿಕತೆಯಂತಹ ಸೂಕ್ಷ್ಮ ವಿಷಯದ ಕುರಿತ ಸಿನಿಮಾದಲ್ಲಿ ಸಲಿಂಗಿಯಾಗಿ ನಟಿಸಿರುವ ಮಮ್ಮುಟ್ಟಿ ಅವರ ದೃಢವಾದ ಆಯ್ಕೆಯನ್ನು ಸಿನಿ ಪ್ರೇಕ್ಷಕರು ಮೆಚ್ಚಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಚರ್ಚೆಯ ವಿಷಯವಾಗಿದೆ. ಒಬ್ಬ ನಟ ತನ್ನ ಅಭಿಮಾನಿಗಳನ್ನು ಖುಷಿ ಪಡಿಸುವ, ತನ್ನ ಇಮೇಜ್‌ಗೆ ಧಕ್ಕೆ ಬರದಂತೆ ನಟಿಸುವ ಎಚ್ಚರ ವಹಿಸುತ್ತಾನೆ. ಆದರೆ, ತಾನು ಮಾಡುವ ಸಿನಿಮಾಗಳನ್ನು ತನ್ನ ಫ್ಯಾನ್ಸ್ ಒಪ್ಪಿಕೊಂಡು ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇರುವಂತಹ ನಟ ಮಾತ್ರವೇ ಇಂತಹ ಪಾತ್ರ ಮಾಡಲು ಸಾಧ್ಯ ಎನ್ನುತ್ತಾರೆ ನೆಟ್ಟಿಗರು.

ಕಾಲ ಕಾಲಕ್ಕೆ ಸಮಾಜದ ಸಮಸ್ಯೆಗಳು, ಲೈಂಗಿಕತೆ, ಮನುಷ್ಯರ ನಡುವಿನ ತಲ್ಲಣ, ತೊಳಲಾಟಗಳನ್ನು ಸಿನಿಮಾಗಳ ಮೂಲಕ ಜನರಿಗೆ ತಲುಪಿಸುವಲ್ಲಿ ದೊಡ್ಡ ದೊಡ್ಡ ನಟರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಅವರಲ್ಲಿ ಎಷ್ಟು ಮಂದಿಗೆ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸಿನಿಮಾ ಮಾಡುವ ಮತ್ತು ಜನರ ಮುಂದಿಡುವ ಧೈರ್ಯವಿದೆ ಎಂಬುದು ಇಲ್ಲಿ ಮುಖ್ಯ. ಜಿಯೋ ಬೇಬಿಯಂತಹ ನಿರ್ದೇಶಕ ಮತ್ತು ಮಮ್ಮುಟ್ಟಿಯಂತಹ ಮೆಗಾಸ್ಟಾರ್ ಇಂತಹ ಸಿನಿಮಾಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿರುವುದು ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಹಬ್ಬಿಸಿದೆ.

mammootty-s-gay-appearance-in-kaathal-the-core

ವಯಸ್ಸು ಹೆಚ್ಚಾದಂತೆ ಮಾಗುತ್ತಿರುವ ನಟ ಮಮ್ಮುಟಿ

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಮುಖ್ಯವಾಹಿನಿಯ ಸಿನಿಮಾದಲ್ಲಿ ನಟಿಸುವ ಒಬ್ಬ ಸೂಪರ್ ಸ್ಟಾರ್ 'ಕ್ವೀರ್' ನಾಯಕನ ಪಾತ್ರವನ್ನು ನಿರ್ವಹಿಸುವುದು ಒಬ್ಬ ನಟನಿಗೆ ಆರ್ಥಿಕವಾಗಿ ಅಪಾಯಯವೇ ಸರಿ. ದಶಕಗಳಿಂದ ಗಳಿಸಿದ ಖ್ಯಾತಿ ಮತ್ತು ಅಭಿಮಾನಿಗಳು, ಸಂಪ್ರದಾಯವಾದಿ ಸಿನಿ ಪ್ರೇಕ್ಷಕರು ಅವರನ್ನು ಬಿಟ್ಟುಬಿಡಬಹುದು. ಅವರ ಸಿನಿಮಾಗಳನ್ನು ಬಹಿಷ್ಕರಿಸಬಹುದು. ಇಂತಹ ಭಯದಲ್ಲಿಯೂ ಕೂಡ ಮಮ್ಮುಟ್ಟಿಯವರ ಸೂಪರ್‌ಸ್ಟಾರ್‌ ಸೂಕ್ಷ್ಮ ಸಿನಿಮಾಗಳಲ್ಲಿ ನಟಿಸುವುದನ್ನು ಆಯ್ಕೆ ಮಾಡಿಕೊಂಡು ಒಂದು ಮಾದರಿಯನ್ನು ಸಿನಿರಂಗಗಳಿಗೆ ನೀಡುತ್ತಿದ್ದಾರೆ.

ಮಮ್ಮುಟ್ಟಿಯವರ 2001 ರ ಮಲಯಾಳಂ ಚಲನಚಿತ್ರ 'ರಾಕ್ಷಸ ರಾಜವು' ಸಿನಿಮಾದಲ್ಲಿ ಪೋಲೀಸ್ ಪಾತ್ರ ಮಾಡುತ್ತಿದ್ದ ಮಮ್ಮುಟ್ಟಿ "ಪ್ರಚೋದನಕಾರಿ ಬಟ್ಟೆಗಳನ್ನು" ಧರಿಸಿದ್ದಕ್ಕಾಗಿ ನಾಯಕಿಯನ್ನು ಟೀಕಿಸುತ್ತಾರೆ. ಅದರೆ, ಈಗ ಅವರು ಒಬ್ಬ 'ಗೇ' ಆಗಿ ಪಾತ್ರ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿರುವುದು ಹೀಗೆ, "ಮಮ್ಮುಟ್ಟಿ ನಟನಾಗಿ ಮುನ್ನಡೆದ ರೀತಿ ಆಶ್ಚರ್ಯಕರವಾಗಿದೆ. 'ರಾಕ್ಷಸ ರಾಜವು' ಸಿನಿಮಾದ ಪಾತ್ರಗಳನ್ನು ದಾಟಿ ಕಾತಲ್ - ದಿ ಕೋರ್‌ನಲ್ಲಿ ಮ್ಯಾಥ್ಯೂ ಪಾತ್ರದವರೆಗೆ ನಡೆದಿರುವ ಅವರ ಪಯಣ ಅದ್ಭುತ" ಎಂದಿದ್ದಾರೆ.

More from Filmibeat

English summary
Mammootty’s gay appearance in Kaathal - The Core.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X