For Quick Alerts
  ALLOW NOTIFICATIONS  
  For Daily Alerts

  ಇಂಗ್ಲೆಂಡ್ ರಾಜಮನೆತನದ ಕರಾಳ ಮುಖ ಬಿಚ್ಚಿಟ್ಟ ನಿರ್ಗಮಿತ ರಾಜ-ರಾಣಿ

  |

  ಇಂಗ್ಲೆಂಡ್ ನ ರಾಜಮನೆತನಕ್ಕೆ ಬಹುದೊಡ್ಡ ಇತಿಹಾಸವಿದೆ. ವಿಶ್ವಕ್ಕೆ ಆಧುನಿಕತೆಯ ಪಾಠ ಮಾಡಿದ ವಂಶವದು. ಸೂರ್ಯಮುಳುಗದ ನಾಡು ಕಟ್ಟಿದ ಕುಟುಂಬವದು. ವಿಶ್ವವನ್ನೇ 'ಪಾಲಿಸಿದ' (?!) ಕುಟುಂಬವದು ಎನ್ನಲಾಗುತ್ತದೆ.

  ಆದರೆ ಅಂಥಹಾ ದೊಡ್ಡ ರಾಜಮನೆತನದಲ್ಲಿನ 'ಸಣ್ಣತನಗಳು' ಈಗ ಜಗಜ್ಜಾಹೀರಾಗಿವೆ. ರಾಜಮನೆತನದಿಂದ ನಂಟು ಕಡಿದು ಕೊಂಡ ರಾಜ ಹ್ಯಾರಿ ಮತ್ತು ಅವರ ಪತ್ನಿ ಮೆಗಾನ್ ಮಾರ್ಕೆಲ್ ಅವರುಗಳು ಅರಮನೆಯ ಐಶಾರಾಮಿತನದ ಹಿಂದಿರುವ ಉಸಿರುಗಟ್ಟುವ ವಾತಾವರಣದ ಬಗ್ಗೆ ಮಾತನಾಡಿದ್ದಾರೆ.

  ಚಾರ್ಲ್ಸ್ ಹಾಗೂ ಮೆಗಾನ್ ಮಾರ್ಕೆಲ್ ಅವರುಗಳು ಖ್ಯಾತ ಸಂದರ್ಶನಕಾರ್ತಿ ಓಪ್ರಾ ವಿನ್‌ಫ್ರೆ ಜೊತೆಗಿನ ಸಂದರ್ಶನದಲ್ಲಿ ರಾಜಮನೆತನದ, ಅರಮನೆಯ ಹಳವಂಡಗಳನ್ನು ಹೊರಗೆಡವಿದ್ದು, ಇಂಗ್ಲೆಂಡ್ ಇತಿಹಾಸದಲ್ಲಿ ಈ ಸಂದರ್ಶನ ಐತಿಹಾಸಿಕ ಸಂದರ್ಶನವಾಗಿ ಇತಿಹಾಸದ ಪುಟ ಸೇರಿಹೋಗಲಿದೆ.

  'ನಾನು ಮೊದಲ ಬಾರಿಗೆ ಗರ್ಭಿಣಿ ಆಗಿದ್ದಾಗ ನನ್ನ ಮಗನಿಗೆ ರಾಜಮನೆತನದ ಗುರುತು, ಹೆಸರು ನೀಡುವುದಿಲ್ಲ ಎಂದು ನನ್ನ ಪತಿಯ ಬಳಿ ಚರ್ಚೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ನನ್ನ ಮಗು ಬಿಳಿಯನಾಗಿ ಹುಟ್ಟುವುದಿಲ್ಲ ಎಂಬುದನ್ನೂ ಸಹ ಚರ್ಚಿಸಲಾಗಿತ್ತು' ಎಂದಿದ್ದಾರೆ ಮೆಗಾನ್. ಈ ಉತ್ತರ ಕೇಳಿ ಒಪ್ರಾ ವಿನ್‌ಫ್ರಿ ಹೌಹಾರಿದ್ದಾರೆ.

  ಇಷ್ಟೋಂದು ತಿರಸ್ಕಾರವಿದೆಯೇ?

  ಇಷ್ಟೋಂದು ತಿರಸ್ಕಾರವಿದೆಯೇ?

  ಇಡೀಯ ಯೂರೋಪ್‌ಗೆ ಸಂದೇಶ ನೀಡುವ, ಮಾನವೀಯತೆ ಬಗ್ಗೆ ಭಾಷಣ ನೀಡುವ ಅರಮನೆ ಕುಟುಂಬದಲ್ಲಿ ಬಿಳಿಯವರಲ್ಲದ ಬಗ್ಗೆ ಇಷ್ಟೋಂದು ತಿರಸ್ಕಾರ ಇದೆಯೇ ಎಂಬುದು ಮೆಗಾನ್ ಮಾತಿನಿಂದ ಜಗಜ್ಜಾಹೀರಾಗಿದೆ.

  'ಕುಟುಂಬ ಗೌರವದ ಹೆಸರಲ್ಲಿ ಮಾನಸಿಕ ಚಿಕಿತ್ಸೆ ನೀಡಿರಲಿಲಲ್ಲ'

  'ಕುಟುಂಬ ಗೌರವದ ಹೆಸರಲ್ಲಿ ಮಾನಸಿಕ ಚಿಕಿತ್ಸೆ ನೀಡಿರಲಿಲಲ್ಲ'

  'ನಾನು ಮಾನಸಿಕ ಒತ್ತಡದಿಂದ ನರಳುತ್ತಿದ್ದೆ. ಮಾಧ್ಯಮಗಳ ಸತತ ಋಣಾತ್ಮಕ ವರದಿಗಳು, ಸುಳ್ಳು ಸುದ್ದಿಗಳು ಮನಸ್ಸನ್ನು ಹಾಳು ಮಾಡಿದ್ದವು. ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ. ನನಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂಬುದು ನನಗೆ ಗೊತ್ತಾಯಿತು. ಈ ವಿಷಯವನ್ನು ಮನೆತನದ ಹಿರಿಯರಿಗೆ ಹೇಳಿದೆ. ಆದರೆ ಮಾನಸಿಕ ಸಮಸ್ಯೆ ಬಗ್ಗೆ ಹೊರಗೆ ಗೊತ್ತಾದರೆ ಮನೆತನದ ಗೌರವಕ್ಕೆ ಧಕ್ಕೆ ಎಂಬ ಕಾರಣಕ್ಕೆ ನನಗೆ ಚಿಕಿತ್ಸೆಯನ್ನು ನಿರಾಕರಿಸಿದರು' ಎಂದಿದ್ದಾರೆ ಮೆಗಾನ್.

  ಎಲ್ಲವೂ ಪ್ರಾರಂಭವಾಗಿದ್ದು ಆ ಒಂದು ಘಟನೆಯಿಂದ: ಮೆಗಾನ್

  ಎಲ್ಲವೂ ಪ್ರಾರಂಭವಾಗಿದ್ದು ಆ ಒಂದು ಘಟನೆಯಿಂದ: ಮೆಗಾನ್

  ಮೆಗಾನ್-ಪ್ರಿನ್ಸ್ ಹ್ಯಾರಿಯ ಮದುವೆಗೆ ಕೆಲವು ದಿನಗಳ ಮುಂಚೆ ಹ್ಯಾರಿಯ ಅಣ್ಣನ ಪತ್ನಿ ಕೇಟ್ ಮಿಡಲ್‌ಟನ್‌ ಳ ಜೊತೆಗೆ ಮದುವೆಯಲ್ಲಿ ವಧುವಿನ ಹಿಂದೆ ಬರುವ ಹುಡುಗಿಯರು ಧರಿಸುವ ಬಟ್ಟೆಯ ವಿಚಾರಕ್ಕೆ ಅಳಿಸಿಬಿಟ್ಟಿದ್ದಳು ಎಂಬ ಸುದ್ದಿ ಬಹುವಾಗಿ ಹರಿದಾಡಿತ್ತು. ಈ ಬಗ್ಗೆ ಪ್ರಶ್ನಿಸಿದ ಒಪ್ರಾ ಗೆ ಉತ್ತರಿಸಿದ ಮೆಗನನ್, 'ಅದು ಉಲ್ಟಾ ಆಗಿತ್ತು. ಕೇಟ್ ನನ್ನನ್ನು ಬಹಳವಾಗಿ ಅಳಿಸಿದಳು. ಅರಮನೆಯಲ್ಲಿ ನನಗಾದ ಮೊದಲ ಅತ್ಯಂತ ಕೆಟ್ಟ ಅನುಭವ ಅದು, ಎಲ್ಲವೂ ಅಲ್ಲಿಂದಲೇ ಪ್ರಾರಂಭವಾಯಿತು' ಎಂದರು ಮೆಗಾನ್.

  ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸುಳ್ಳು ಹೇಳಿದರು: ಮೆಗಾನ್

  ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಸುಳ್ಳು ಹೇಳಿದರು: ಮೆಗಾನ್

  'ನನ್ನ ವ್ಯಕ್ತಿತ್ವನ್ನು ಕೊಲ್ಲುವ ಪ್ರಯತ್ನವನ್ನು ರಾಯಲ್ ಕುಟುಂಬ ಮಾಡಿತು. ಎಲ್ಲರಿಗೂ ಸತ್ಯ ಏನು ಎಂಬುದು ಗೊತ್ತಿತ್ತು. ಆದರೆ ಯಾರೂ ಅದನ್ನು ಬಹಿರಂಗಗೊಳಿಸಲಿಲ್ಲ. ಅಷ್ಟೇ ಅಲ್ಲ ಸಳ್ಳು ಮಾತಾಡಿದರು. ಬೇರೆಯವರ ವ್ಯಕ್ತಿತ್ವವನ್ನು ಹಾಳು ಮಾಡಲೆಂದು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹೇಳಿದರು' ಎಂದರು ಮೆಗಾನ್.

  ನನ್ನ ತಂದೆ ನನ್ನನ್ನು ಬಿಟ್ಟುಕೊಟ್ಟರು: ರಾಜ ಹ್ಯಾರಿ

  ನನ್ನ ತಂದೆ ನನ್ನನ್ನು ಬಿಟ್ಟುಕೊಟ್ಟರು: ರಾಜ ಹ್ಯಾರಿ

  ರಾಜ ಹ್ಯಾರಿ ಸಹ ಸಂದರ್ಶನದಲ್ಲಿ ಮಾತನಾಡಿದ್ದು, 'ನನ್ನ ತಂದೆಯಿಂದ ನನಗೆ ಬಹುವಾಗಿ ಮೋಸವಾಯಿತು, ಆತ ನನ್ನನ್ನು ಬಿಟ್ಟುಕೊಟ್ಟುಬಿಟ್ಟ' ಎಂದಿದ್ದಾರೆ. ಹ್ಯಾರಿ ತಂದೆ ವೇಲ್ಸ್‌ನ ರಾಜ ಚಾರ್ಲ್ಸ್. ಬ್ರಿಟನ್‌ನ ಪರಮೋಚ್ಛ ರಾಣಿ ಎಲಿಜಿಬೆತ್ 2 ರ ಮಗ , ಮತ್ತು ಡಯಾನಾರ ಮಾಜಿ ಪತಿ. 'ನಾನು ಅನುಭವಿಸುತ್ತಿರುವ ನೋವು ಆತನಿಗೂ ಗೊತ್ತಿದೆ. ಆತನನ್ನೂ ಕೆಲವರು ಮೋಸ ಮಾಡಿದ್ದಾರೆ' ಎಂದಿದ್ದಾರೆ ರಾಜ ಹ್ಯಾರಿ.

  ನಾವು ಅಲ್ಲಿಂದ ಬದುಕಿ ಬಂದಿದ್ದೇವೆ: ಪ್ರಿನ್ಸ್ ಹ್ಯಾರಿ

  ನಾವು ಅಲ್ಲಿಂದ ಬದುಕಿ ಬಂದಿದ್ದೇವೆ: ಪ್ರಿನ್ಸ್ ಹ್ಯಾರಿ

  'ನಾನು ಮತ್ತು ಪತ್ನಿ ಮೆಗಾನ್ ರಾಜಮನೆತನದಲ್ಲಿಯೇ ಉಳಿದುಕೊಳ್ಳಲು ಬಹಳ ಪ್ರಯತ್ನ ಮಾಡಿದೆವು ಆದರೆ ಸಾಧ್ಯವಾಗಲಿಲ್ಲ. ನನ್ನ ಸಹೋದರ ಹಾಗೂ ನನ್ನ ತಂದೆ ಆ ಅರಮೆಯಲ್ಲಿ 'ಸಿಕ್ಕಿಹಾಕಿಕೊಂಡಿದ್ದಾರೆ'. ಹೊರಗೆ ಬರಬೇಕೆಂದುಕೊಂಡರೂ ಅವರು ಬರಲಾರರು' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಪ್ರಿನ್ಸ್ ಹ್ಯಾರಿ. 'ನಾವು ಅಲ್ಲಿಂದ 'ಪಾರಾಗಿ' ಬಂದಿದ್ದೇವೆ, ಈಗ ಚೆನ್ನಾಗಿ ಬದುಕುತ್ತಿದ್ದೇವೆ' ಎಂದಿದ್ದಾರೆ ಹ್ಯಾರಿ.

  English summary
  Meghan Markle and Prince Harry told Oprah Winfrey in a interview that what problems they faced in Royal family and why they came out of the family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X