Meghana Raj: "ಚಿರು ಡೆಲಿವರಿ ರೂಮ್‌ನಲ್ಲಿ ಇರ್ಲೇಬೇಕು ಎಂದಿದ್ದೆ.. ರಾಯನ್ ಹುಟ್ಟಿದ ತಕ್ಷಣ ವೈದ್ಯರು ನನ್ನ ಕೈಗೆ ಕೊಡ್ಲಿಲ್ಲ"
'ತತ್ಸಮ ತದ್ಬವ' ಸಿನಿಮಾ ಮೂಲಕ ಮೇಘನಾ ರಾಜ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇನ್ನು ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಮೇಘನಾ ಮಾತನಾಡುತ್ತಿದ್ದಾರೆ. ತಮಿಳು ಸಂದರ್ಶನವೊಂದರಲ್ಲಿ ವಿಶೇಷ ಫೋಟೊಗಳನ್ನು ನೋಡಿ ಅದರ ಸುತ್ತಲಿನ ಸಂಗತಿಗಳನ್ನು ಹೇಳಿದ್ದಾರೆ.
ಇದು ರಾಯನ್ ಮತ್ತು ಚಿರು ಮೊದಲ ಫೋಟೊ. ಇದು ಆಸ್ಪತ್ರೆಯಲ್ಲಿ ಹೆರಿಗೆಯ ಸಮಯದಲ್ಲಿ ಹೆರಿಗೆ ಆದ ತಕ್ಷಣ ಕ್ಲಿಕ್ಕಿಸಿದ್ದು. ನಾನು, ನಮ್ಮ ಡಾಕ್ಟರ್ ಮಾಧುರಿಗೆ ಹೇಳಿದ್ದೆ.ಚಿರು ಆಪರೇಷನ್ ಥಿಯೇಟರ್‌ನಲ್ಲಿ ಇರಬೇಕು, ಅವರು ಡೆಲಿವರಿ ರೂಮ್‌ನಲ್ಲಿ ಇರಬೇಕು ಅಂತ ಪ್ರತ್ಯೇಕವಾಗಿ ತಿಳಿಸಿದ್ದೆ. ಚಿರು ಫೋಟೊ ಅಲ್ಲಿರಬೇಕು ಎಂದೆ"

"ಮಗು ಹುಟ್ಟಿದ ತಕ್ಷಣ ಅವರು ಏನು ಮಾಡಿದ್ರು ಅಂದ್ರೆ, ಮಗುನ ನನಗೆ ಕೊಡಬೇಕಿತ್ತು. ಆದರೆ ಕೊಡಲಿಲ್ಲ, ನನಗೆ ಮಗುನ ತೋರಿಸಿದರು ಅಷ್ಟೇ. ತಕ್ಷಣ ಚಿರು ಬಳಿ(ಫೋಟೊ) ತಗೊಂಡೊದ್ರು. ನನಗೆ ಅನಿಸುತ್ತೆ, ಅವರಿಗೆ ಅದೇ ಸರಿ ಅಂತ ಅನ್ನಿಸಿರಬೇಕು. ಇದು ಚಿರು- ರಾಯನ್ ಮೊದಲ ಫೋಟೊ, ಎಂದು ಮೇಘನಾ ರಾಜ್ ಆ ವಿಶೇಷ ಫೋಟೊ ಬಗ್ಗೆ ವಿವರಿಸಿದ್ದಾರೆ.
ರಾಯನ್ ನಾಮಕರಣದ ಫೋಟೊ ಬಗ್ಗೆ ಕೂಡ ಮೇಘನಾ ಮಾತನಾಡಿದ್ದಾರೆ. "ಇದು ರಾಯನ್ ನಾಮಕರಣದ ದಿನ ಕ್ಲಿಕ್ಕಿಸಿದ ಫೋಟೊ. ಚಿರು ಅದಾಗಲೇ ತೊಟ್ಟಿದ್ದ ರೀತಿಯಲ್ಲೇ ರಾಯನ್ ಬಟ್ಟೆ ಇರಬೇಕು ಎಂದುಕೊಂಡಿದ್ದೆ. ಪನ್ನಗ ಭರಣ ಮಡದಿ ಡಿಸೈನ್ ಮಾಡಿದ ಕಾಸ್ಟ್ಯೂಮ್ ಅದು. ಸೇಮ್ ಚಿರು ತೊಟ್ಟಿದ್ದ ರೀತಿಯಲ್ಲೇ ಅದು ಇತ್ತು."

"ಚಿರು ದೈಹಿಕ ಉಪಸ್ಥಿತಿ ಅಷ್ಟೇ ಇಲ್ಲ. ಆದರೆ ನನಗೆ ಸಾಕಷ್ಟು ವಿಚಾರ ಚಿರು ಇದ್ದರೆ ಹೇಗೆ ನಡೆಯುತ್ತಿತ್ತೋ ಅದೇ ರೀತಿ ನಡೆಯುತ್ತಿದೆ. ಚಿರು ಇದ್ದಿದ್ದರೆ 'ತತ್ಸಮ ತದ್ಬವ' ಸಿನಿಮಾ ಇದೇ ರೀತಿ ಮೂಡಿ ಬರುತ್ತಿತ್ತು. ಅವರು ಹಾಗೆ ಪ್ಲ್ಯಾನ್ ಮಾಡುತ್ತಿದ್ದರು. ಹಾಗೇ ಮೂಡಿ ಬರುತ್ತಿತ್ತು. ನನಗೆ ಅನ್ನಿಸುತ್ತೆ ಅದು ದೈವಿಕ ಉಪಸ್ಥಿತಿ ಎಂದು"
ಸೀಮಂತದ ಸಖತ್ ವೈರಲ್ ಆಗಿದ್ದ ಫೋಟೊ ಬಗ್ಗೆ ಕೂಡ ಮೇಘನಾ ರಾಜ್ ಮಾತನಾಡಿದ್ದಾರೆ. "ಈ ಫೋಟೊ ಸ್ಪೆಷಾಲಿಟಿ ಎಂದು ಅಂದರೆ ಚಿರು ನನ್ನ ಪಕ್ಕ ನಿಂತಿದ್ದಾರೆ. ಇದು ಮಾರ್ಪ್ ಮಾಡಿರೋ ಫೋಟೊ ಅಲ್ಲ. ಇದು ಚಿರು ಲೈಫ್ ಸೈಝ್ ಕಟೌಟ್. ನಾನು ಚಿರುನ ಮಿಸ್ ಮಾಡಿಕೊಳ್ಳಬಾರದು ಎಂದು ನನ್ನ ಸ್ನೇಹಿತರು ಈ ಕಟೌಟ್ ಮಾಡಿಸಿದ್ದರು. ದೈಹಿಕ ಉಪಸ್ಥಿತಿ ಇಲ್ಲದಿದ್ದರೂ ದೈವಿಕ ಉಪಸ್ಥಿತಿ ಇರಲಿ. ಜೊತೆಗೆ ದೈಹಿಕ ಉಪಸ್ಥಿತಿ ಬೇಕು ಎಂದು ಈ ರೀತಿ ಮಾಡಿಸಿದ್ದರು. ಫೋಟೊ ಸಖತ್ ವೈರಲ್ ಆಗಿತ್ತು.
ವಿಶಾಲ್ ಆತ್ರೇಯಾ ನಿರ್ದೇಶನದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ 'ತತ್ಸಮ ತದ್ಬವ' ಟ್ರೈಲರ್ ಗಮನ ಸೆಳೆದಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಕೂಡ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದಾರೆ. ದೇವರಾಜ್, ಬಾಲಾಜಿ ಮನೋಹರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರದಲ್ಲಿ ಆರಿಕಾ ಎನ್ನುವ ಗೃಹಣಿ ಪಾತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.
ತನ್ನ ಹುಟ್ಟುಹಬ್ಬದ ದಿನವೇ ಕಾಣೆಯಾದ ಪತಿ ಸಂಜಯ್‌ಗಾಗಿ ಆರಿಕಾ ಹುಡುಕಾಟ ಶುರುವಾಗುತ್ತದೆ. ಪೊಲೀಸರು ಆಕೆಯ ಮೇಲೆ ಕೂಡ ಸಂಶಯ ಪಡುತ್ತಾರೆ. ಅಷ್ಟಕ್ಕೂ ಸಂಜಯ್ ಕಾಣೆ ಆಗಿದ್ದು ಹೇಗೆ? ಆ ಪ್ರಕರಣವನ್ನು ಅರವಿಂದ್ ಅಶ್ವತ್ಥಾಮ ಹೇಗೆ ಬಗೆಹರಿಸುತ್ತಾನೆ ಅನ್ನೋದು ಸಿನಿಮಾ ಕಥೆ. ಪನ್ನಗಾ ಭರಣ, ಅನಿಲ್ ಹಾಗೂ ಚೇತನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











