Meghana Raj: "ಧ್ರುವ ನನ್ನ ನೋಡ್ಕೊಳ್ಳೋದು, ಮಾಡೋದು ಅನ್ನುವ ಪದ ಯೂಸ್ ಮಾಡ್ಬಾರ್ದು"
ಮೇಘನಾ ರಾಜ್ ನಟನೆಯ 'ತತ್ಸಮ ತದ್ಭವ' ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ವಿಶಾಲ್ ಆತ್ರೇಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಕ್ರೈಂ ಇನ್‌ವೆಸ್ಟಿಗೇಷನ್ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಆಫಿಸರ್ ಆಗಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ ಕೊನೆಗೆ ಸಿನಿಮಾ ರಿಲೀಸ್ ಆಗುತ್ತಿದೆ.
ಚಿರು ಅಗಲಿಕೆಯ ಬಳಿಕ ಮೇಘನಾ ರಾಜ್ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಧ್ರುವ ಸರ್ಜಾ ಸೇರದಂತೆ ಇಡೀ ಕುಟುಂಬ ಆಕೆಯ ಬೆಂಬಲಕ್ಕೆ ನಿಂತಿದೆ. ಇದೀಗ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. ಇನ್ನು ಧ್ರುವ ಜೊತೆಗಿನ ಬಾಂಧವ್ಯದ ಬಗ್ಗೆ ಫಿಲ್ಮಿಬೀಟ್ ಸಂದರ್ಶನದಲ್ಲಿ ನಟ ಮೇಘನಾ ರಾಜ್ ಮಾತನಾಡಿದ್ದಾರೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಇಬ್ಬರ ಒಡನಾಟ, ಮಾತುಕತೆ ಹೇಗಿರುತ್ತದೆ ಎಂದು ಬಿಚ್ಚಿಟ್ಟಿದ್ದಾರೆ.

"ಧ್ರುವ ಸರ್ಜಾ ನನ್ನನ್ನು ನೋಡಿಕೊಳ್ತಾರೆ ಅನ್ನೋದೆಲ್ಲ ಸರಿಯಲ್ಲ. ನಾವೆಲ್ಲಾ ದೊಡ್ಡವರಾಗಿದ್ದೀವಿ. ನಮ್ಮನ್ನು ಯಾರು ನೋಡಿಕೊಳ್ಳಬೇಕು? ನಾನು ಧ್ರುವನ ನೋಡಿಕೊಳ್ಳುವುದು, ಧ್ರುವ ನನ್ನು ನೋಡಿಕೊಳ್ಳೋದು ಅನ್ನೋದೆಲ್ಲಾ ಹೊರಗಿನವರು ಹೇಳುವ ಮಾತು. ನಾವೆಲ್ಲಾ ಬೆಳೆದು ದೊಡ್ಡವಾಗಿದ್ದೀವಿ. ನಮ್ಮ ನಮ್ಮ ಕಾಲಮೇಲೆ ನಿಂತಿದ್ದೀವಿ. ನೋಡಿಕೊಳ್ಳೋದು, ಮಾಡೋದು ಅನ್ನುವ ಪದಗಳನ್ನು ಬಳಸಬಾರದು. ಧ್ರುವ ನನ್ನ ಸಹೋದರ. ಕೆಲವೊಮ್ಮೆ ನನಗೆ ಏನಾದರೂ ಹಂಚಿಕೊಳ್ಳಬೇಕು ಅಂದರೆ ಧ್ರುವಗೆ ಕರೆ ಮಾಡಿ ಮಾತನಾಡ್ತೀನಿ. ಅದೇ ರೀತಿ ಧ್ರುವನಿಗೆ ಅನ್ನಿಸಿದರೆ ಕರೆ ಮಾಡಿ ಮಾತನಾಡುತ್ತಾನೆ"
"ಮೊದಲು ಹೇಗಿದ್ದೆವೋ ಈಗಲೂ ಹಾಗೆಯೇ ಇದ್ದೀವಿ. ಆ ಘಟನೆಯಿಂದ ಮತ್ತೊಂದು ಆಪ್ತರಾಗಿದ್ದೀವಿ ಅಷ್ಟೆ. ಖಂಡಿತ ಧ್ರುವ ನನಗೆ ದೊಡ್ಡ ಸಪೋರ್ಟ್. ನಾವಿಬ್ಬರು ಹೆಚ್ಚು ಮಾತನಾಡುವುದು ನಮ್ಮ ಮಕ್ಕಳ ಬಗ್ಗೆ. ಇನ್ನು ನನ್ನದು ಧ್ರುವದು ಸಿಕ್ಕಾಪಟ್ಟೆ ಮಾತು ಇರುತ್ತದೆ ಅದನ್ನು ಹೇಳೋಕ್ಕಾಗಲ್ಲ. ಇತ್ತೀಚೆಗೆ ನಾನು, ಧ್ರುವ ಯಾವುದೋ ಸಾಂಗ್ ನೋಡುತ್ತಿದ್ವಿ. ಆದರ ಧ್ರುವ ಹೀರೊಯಿನ್ ಚೆನ್ನಾಗಿದ್ದಾಳಲ್ಲ ಅಂದ. ನೀವೇನಂತೀರಾ? ಎಂದು ನನ್ನ ಕೇಳಿದ್ರು. ಅದಕ್ಕೆ ರೇಟಿಂಗ್ ಕೊಡೋದು ಹೀಗೆ ನಮ್ಮಿಬ್ಬರ ಮಾತುಕತೆ ಇರುತ್ತದೆ"
"ಮಕ್ಕಳ ಸುತ್ತಾ ಹೆಚ್ಚು ಮಾತುಕತೆ ಇರುತ್ತದೆ. ನಿಮ್ಮ ಮಗಳು ರಾತ್ರಿಯಲ್ಲ ಮಲಗುತ್ತಿದ್ದಾಳಾ? ಅಂತ ನಾನು ಕೇಳಿದ್ರೆ. ಶಿಷ್ಯ ಸ್ಕೂಲ್‌ಗೆ ಹೋಗ್ತಿದ್ದಾನಾ? ಅಂತ ಧ್ರುವ ಕೇಳ್ತಾರೆ. ಹೀಗೆ ಅವರಿಬ್ಬರ ಬಗ್ಗೆಯೇ ಹೆಚ್ಚು ಮಾತನಾಡುತ್ತೇವೆ" ಎಂದು ಮೇಘನಾ ರಾಜ್ ಹೇಳಿದ್ದಾರೆ.
"ಅಭಿಮಾನಿಗಳು ಮತ್ತೆ ಸಿನಿಮಾ ಮಾಡೋದು ಯಾವಾಗ ಎಂದು ಪದೇ ಪದೇ ಕೇಳುತ್ತಿದ್ದರು. ಈಗ ಮಾಡಿದ್ದೀನಿ. ಸಿನಿಮಾ ಮಾಡಿದ್ರೆ, ನೋಡ್ತೀರಾ? ಎಂದು ನಾನು ಕೇಳುತ್ತಿದ್ದೆ. ಕೋಟ್ಯಾಂತರ ಜನ ಕಂಡಿತ ನೋಡ್ತೀವಿ ಎಂದಿದ್ದರು. ಖಂಡಿತ ಸಿನಿಮಾ ಚೆನ್ನಾಗಿರುತ್ತದೆ. ನಮ್ಮ ಸ್ನೇಹಿತರಿಗಾಗಿ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ ತತ್ಸಮ ತದ್ಭವ. ಎಲ್ಲರೂ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಬಂದು ಸಿನಿಮಾ ನೋಡಿ" ಎಂದು ಮೇಘನಾ ರಾಜ್ ಮನವಿ ಮಾಡಿದ್ದಾರೆ.
ಪನ್ನಗ ಭರಣ, ಸ್ಪೂರ್ತಿ ಅನಿಲ್, ಚೇತನ್ ನಂಜುಂಡಯ್ಯ 'ತತ್ಸಮ ತದ್ಭವ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮೇಘನಾ ರಾಜ್, ಪ್ರಜ್ವಲ್ ಜೊತೆಗೆ ಅರವಿಂದ್ ಅಯ್ಯರ್, ನಾಗಾಭರಣ, ದೇವರಾಜ್, ಬಾಲಾಜಿ ಮನೋಹರ್ ಚಿತ್ರದ ತಾರಾಗಣದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ ಚಿತ್ರಕ್ಕಿದೆ. ಸೆಪ್ಟೆಂಬರ್ 25ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ 'ತತ್ಸಮ ತದ್ಭವ' ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











