ಕ್ರಿಸ್ಮಸ್‌ಗೆ ಸಿಂಪಲ್ ಆಗಿ ಕೇಕ್ ಮಾಡಬೇಕೆ?: ನಟಿ ಮೇಘನಾ ರಾಜ್ ಸ್ಟ್ರಾಬೆರಿ ಚಾಕೊಲೇಟ್ ಕೇಕ್ ರೆಸಿಪಿ ಕೊಟ್ಟಿದ್ದಾರೆ ನೋಡಿ
ವಿಶ್ವದಾದ್ಯಂತ ಸಂತೋಷ ಮತ್ತು ಉಲ್ಲಾಸದಿಂದ ಡಿಸೆಂಬರ್ 25 ರಂದು ಕ್ರಿಸ್ಮಸ್ ಆಚರಿಸಲಾಗುತ್ತಿದೆ. ಏಸುಕ್ರಿಸ್ತರ ಜನ್ಮದಿನದ ನೆನಪಿಗಾಗಿ ಕ್ರೈಸ್ತ ಸಮುದಾಯ ಈ ದಿನವನ್ನು ಆಚರಿಸುತ್ತಾರೆ. ಆದರೆ, ಕಾಲ ಬದಲಾದಂತೆ ಎಲ್ಲಾ ಸಮುದಾಯಗಳಲ್ಲಿ ಈ ಹಬ್ಬವನ್ನು ಸಂಭ್ರಮಿಸಲಾಗುತ್ತದೆ. ಕ್ರಿಸ್ಮಸ್ ಎಂದರೆ ಮೊದಲ ನೆನಪಾಗುವುದೇ ಕೇಕ್.
ಎಸ್...ಕ್ರಿಸ್ಮಸ್ ಕೇಕ್ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ಮನೆಯಲ್ಲಿ ಮಾಡಿದ ಕೇಕ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೀವು ಕೂಡ ಈ ಹಬ್ಬಕ್ಕೆ ಮನೆಯಲ್ಲೇ ಕೇಕ್ ಮಾಡುವ ಯೊಚನೆಯಲ್ಲಿದ್ದರೇ, ನಟಿ ಮೇಘನಾ ರಾಜ್ ಸಿಂಪಲ್ ಆಗಿ ಸ್ಟ್ರಾಬೆರಿ ಚಾಕೊಲೇಟ್ ಕೇಕ್ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನೋಡಿ.

ಸ್ಟ್ರಾಬೆರಿ ಚಾಕೊಲೇಟ್ ಕೇಕ್ ಹೀಗೆ ಮಾಡಿ
ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಇತ್ತೀಚೆಗಷ್ಟೇ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಬರಿ ಸಿಹಿ ನೆನಪುಗಳನ್ನು ಮೂಟೆ ಕಟ್ಟಿಕೊಂಡು ಮಗನ ಜೊತೆಗೆ ಜೀವನ ನಡೆಸುತ್ತಿದ್ದಾರೆ. ಮಗನಿಗಾಗಿಯೇ ಬದುಕು ಮೀಸಲಿಟ್ಟಿರುವ ಅವರು, ಮಗನಿಗಾಗಿ ವಿಶೇಷ ಕ್ರಿಸ್ಮಸ್ ಕೇಕ್ ತಯಾರಿಸಿ ಎಲ್ಲರಿಗಾಗಿ ರೆಸಿಪಿ ಹಂಚಿಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ 'ಮೇಘನಾ ರಾಜ್'ನಲ್ಲಿ ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕ್ರಿಸ್ಮಸ್ ಹಬ್ಬದ ಕಾರಣ ಮನೆಯಲ್ಲಿ ಹಬ್ಬಕ್ಕೆ ಮಾಡಿರುವ ಸಿದ್ಧತೆ ಮತ್ತು ಸಿಂಪಲ್ ಆಗಿ, ಸ್ಟ್ರಾಬೆರಿ ಚಾಕೊಲೇಟ್ ಕೇಕ್ ಮಾಡುವುದು ವಿಡಿಯೋ ಮಾಡಿ ತಮ್ಮ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಸ್ಟ್ರಾಬೆರ್ರಿ ಚೊಕೊಲೇಟ್ ಕೇಕ್‌ಗೆ ಬೇಕಿರುವ ಸಾಮಗ್ರಿಗಳು
* 170 ಗ್ರಾಂ ಮೈದಾ ಹಿಟ್ಟು
* 3 ಟೇಬಲ್ ಚಮಚ ಕೋಕೋ ಪೌಡರ್
* 2 ಟೇಬಲ್ ಚಮಚ ಬೇಕಿಂಗ್ ಪೌಡರ್
* 220 ಗ್ರಾಂ ಸಕ್ಕರೆ
* 2 ಸ್ಪೋನ್ಸ್ ವೆನಿಲಾ ಅಸೆನ್ಸ್
* ಮುಕ್ಕಾಲು ಕಪ್ ಹಾಲು
* ಮುಕ್ಕಾಲು ಕಪ್ ಕರಗಿಸಿರುವ ಬೆಣ್ಣೆ (ಡಬಲ್ ಬಾಯ್ಲಿಂಗ್ ಮೆತೆಡ್‌ನಲ್ಲಿ ಮಾಡುವುದು)
* 2 ಮೊಟ್ಟೆ ... ಇದು ಕೇಕ್ ಮಾಡಲು ಬೇಕಾದ ಸಾಮಗ್ರಿಗಳು

ಫ್ರಾಸ್ಟಿಂಗ್ ಮಾಡಲು ಏನು ಏನು ಬೇಕು..?
* ಫ್ರೆಶ್ ಕ್ರೀಮ್
* 160 ಗ್ರಾಂ ಬೆಣ್ಣೆ
* 3 ಕಪ್ ಪೌಡರ್ ಮಾಡಿರುವ ಸಕ್ಕರೆ
* ಅರ್ಧ ಕಪ್ ಸಕ್ಕರೆ ರಹಿತ ಕೋಕೋ ಪೌಡರ್
* ಒಂದೂವರೆ ಚಮಚ ವೆನಿಲಾ ಎಕ್ಟ್ರ್ಯಾಕ್
* 4 ರಿಂದ 5 ಚಮಚ ಉಗುರು ಬೆಚ್ಚಗಿನ ಹಾಲು
ಸ್ಟ್ರಾಬೆರ್ರಿ ಚೊಕೊಲೇಟ್ ಕೇಕ್ ಮಾಡುವ ವಿಧಾನ
ಮೊದಲಿಗೆ ಮೈದಾ, ಸಕ್ಕರೆ, ಕೋಕೋ ಪೌಡರ್ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಹಾಲು, ವೆನಿಲ್ಲಾ ಅಸೆನ್ಸ್ ಮತ್ತು ಕರಗಿದ ಬೆಣ್ಣೆಯ ಮಿಶ್ರಣ ಹಾಕಿ ಚೆನ್ನಾಗಿ ಕಲಸಬೇಕು. ಚಾಕಲೇಟ್ ಚಂಕ್ ಮಿಕ್ಸ್ ಮಾಡಬೇಕು. ನಂತರ ಮೈಕ್ರೋವೇವ್ನಲ್ಲಿ ಈ ಮಿಶ್ರಣವನ್ನು 5 ರಿಂದ 7 ನಿಮಿಷ ಬೇಯಲು ಇಡಬೇಕು. ಅದರ ಮೇಲೆ ಫ್ರಾಸ್ಟಿಂಗ್ಗೆ ಇಟ್ಟ ಸಾಮಗ್ರಿ ಮಿಕ್ಸ್ ಮಾಡಿ ಚೆನ್ನಾಗಿ ಕವರ್ ಮಾಡಬೇಕು. ಬಳಿಕ ಸ್ಟ್ರಾಬರಿಗಳನ್ನು ಚಂದವಾಗಿ ಕಟ್ ಮಾಡಿ ಅದನ್ನು ಡೆಕೋರೆಟ್ ಮಾಡಿದರೇ ಸಿಂಪಲ್ ಆದ ಸ್ಟ್ರಾಬೆರ್ರಿ ಚೊಕೊಲೇಟ್ ಕೇಕ್ ರೆಡಿಯಾಗುತ್ತದೆ.


Click it and Unblock the Notifications











