Michael Jackson Birth Anniversary: ರಾಜನಂತೆ ಮೆರೆದ ಮೈಕೆಲ್ ಜಾಕ್ಸನ್ ಬಿಟ್ಟು ಹೋದ ಆಸ್ತಿಯ ಮೌಲ್ಯವೆಷ್ಟು?

ಮೈಕೆಲ್ ಜಾಕ್ಸನ್.. ಈ ಹೆಸರನ್ನು ಕೇಳದ ಕಲಾ ರಸಿಕರು ಯಾರೂ ಇಲ್ಲ ಎಂದೇ ಹೇಳಬಹುದು. ಪಾಪ್ ಸಂಗೀತ ಲೋಕದ ದೊರೆ ಎಂದೇ ಖ್ಯಾತಿಯನ್ನು ಪಡೆದಿದ್ದ ಮೈಕೆಲ್ ಜಾಕ್ಸನ್ ಜಗತ್ತಿನಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದರು ಹಾಗೂ ಮೈಕೆಲ್ ಜಾಕ್ಸನ್ ಇಹಲೋಕ ತ್ಯಜಿಸಿ ದಶಕವೇ ಉರುಳಿದರೂ ಇಂದಿಗೂ ಸಹ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾದ ಗ್ಯಾರಿಯಲ್ಲಿ‌ 1958ರ ಆಗಸ್ಟ್ 29ರಂದು ಜನಿಸಿದ ಮೈಕೆಲ್ ಜಾಕ್ಸನ್ 2009ರ ಜೂನ್ 25ರಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನಲ್ಲಿ ಹೃದಯಸ್ತಂಭನದಿಂದ ಹಠಾತ್ ನಿಧನ ಹೊಂದಿದ್ರು. ಮೈಕೆಲ್ ಜಾಕ್ಸನ್ ಸಾವಿನ ಸುದ್ದಿ ಇಡೀ ವಿಶ್ವವನ್ನೇ ಶಾಕ್‌ಗೆ ದೂಡಿತ್ತು. ಮೈನಲ್ಲಿ ಮೂಳೆಯೇ ಇಲ್ಲದ ಹಾಗೆ ನರ್ತಿಸುತ್ತಿದ್ದ ಮೈಕೆಲ್ ಜಾಕ್ಸನ್ ಹೃದಯಾಘಾತದಿಂದ ಸಾವಿನ್ನಪ್ಪಿದ್ರು ಎಂಬ ಸುದ್ದಿಯನ್ನು ಯಾರೂ ಸಹ ನಂಬಲು ಸಾಧ್ಯವೇ ಇರಲಿಲ್ಲ. ಮೈಕೆಲ್ ಜಾಕ್ಸನ್ ಸಾವಿನ ಸುದ್ದಿಯನ್ನು ಜಗತ್ತಿನಾದ್ಯಂತ ಹುಡುಕಾಡಿದ್ದ ಪರಿಣಾಮ ಅಂದು ಅಂತರ್ಜಾಲ ಕೆಲ ಕಾಲ ಸ್ಥಗಿತಗೊಂಡಿತ್ತು.

Michael Jackson: What was the net worth of Michael Jackson at the time of his death?

ಇಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಹಾಗೂ ಜನಪ್ರಿಯತೆಯನ್ನು ಗಳಿಸಿದ್ದ ಮೈಕೆಲ್ ಜಾಕ್ಸನ್ ಕುರಿತು ಹಲವಾರು ಭಿನ್ನ ವಿಭಿನ್ನ ಅಭಿಪ್ರಾಯಗಳೂ ಸಹ ಇದ್ದವು. ಮೈಕೆಲ್ ಜಾಕ್ಸನ್ ಯಾರು, ಆತ ಪುರುಷನಾ ಅಥವಾ ಮಹಿಳೆಯಾ, ಆತ ಕಪ್ಪಾಗಿದ್ನಾ ಅಥವಾ ಬಿಳಿ ಬಣ್ಣದವ್ನಾ ಎಂದು ಕುತೂಹಲದಿಂದ ಹುಡುಕಿದವರೂ ಸಹ ಇದ್ದಾರೆ. ಇಂದಿಗೂ ಸಹ ಇಂತಹ ಹುಡುಕಾಟಗಳು ಗೂಗಲ್‌ನಲ್ಲಿ ದಿನನಿತ್ಯವೂ ನಡೆಯುತ್ತಲೇ ಇರುತ್ತದೆ.

ಇನ್ನು ತಾನು ನಿಧನ ಹೊಂದಿದರೂ ಸಹ ತನ್ನ ಹಾಡುಗಳು ಹಾಗೂ ಡಾನ್ಸ್ ವಿಡಿಯೊಗಳ ಮೂಲಕ ಸದಾ ಜೀವಂತವಾಗಿ ಉಳಿದುಕೊಂಡಿರುವ ಮೈಕೆಲ್ ಜಾಕ್ಸನ್ ಆಗರ್ಭ ಶ್ರೀಮಂತ ಎಂಬುದು ತಿಳಿದಿರುವ ವಿಷಯವೇ. ಈ ಕುರಿತೂ ಸಹ ಅಂತರ್ಜಾಲದಲ್ಲಿ ದೊಡ್ಡ ಮಟ್ಟದ ಹುಡುಕಾಟವೇ ನಡೆದಿದೆ. ಮೈಕೆಲ್ ಜಾಕ್ಸನ್ ಆಸ್ತಿ ಎಷ್ಟಿತ್ತು ಹಾಗೂ ಆತ ನಿಧನ ಹೊಂದಿದ ಬಳಿಕ ಅದು ಯಾರ ಪಾಲಾಯಿತು ಎಂದೆಲ್ಲಾ ನೆಟ್ಟಿಗರು ಸರ್ಚ್ ಮಾಡಿದ್ದಾರೆ.

ಅಂದಹಾಗೆ ಮೈಕೆಲ್ ಜಾಕ್ಸನ್ ನಿಧನ ಹೊಂದುವ ಸಂದರ್ಭದಲ್ಲಿ ಬರೋಬ್ಬರಿ 500 ಮಿಲಿಯನ್ ಯುಎಸ್ ಮೌಲ್ಯದ ಒಡೆಯನಾಗಿದ್ದರು. ಅವರು ನಿಧನ ಹೊಂದಿದ ಬಳಿಕ ಅವರ ಆಸ್ತಿಯೆಲ್ಲಾ ಅವರ ತಾಯಿ ಕ್ಯಾಥರಿನ್ ಎಸ್ತರ್ ಜಾಕ್ಸನ್ ಪಾಲಾಯಿತು.

More from Filmibeat

English summary
Michael Jackson: What was the net worth of Michael Jackson at the time of his death?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X