For Quick Alerts
  ALLOW NOTIFICATIONS  
  For Daily Alerts

  ಶಬರಿಯಂತೆ ಕಾದಿದ್ದ ಅಭಿಮಾನಿ ಮನೆಗೆ ಹೋದ ಬಾಬು ಗಳಗಳನೆ ಕಣ್ಣೀರಿಟ್ಟಿದ್ದರು

  |

  ತೆಲುಗು ಹಿರಿಯ ನಟ ಮೋಹನ್ ಬಾಬು ಮನೆಯ ಮುಂದೆ ಸದಾ ಅಭಿಮಾನಿಗಳ ದಂಡೇ ನೆರೆದಿರುತ್ತದೆ. ಅಂತಾ ಅಭಿಮಾನಿಗಳಲ್ಲಿ ಒಬ್ಬ ವಿಶೇಷ ಅಂತಲೇ ಹೇಳಬಹುದು. ಅಂತಾವ್ನೊಬ್ಬ ಅಭಿಮಾನಿ ಪ್ರತಿದಿನ ಬೆಳಿಗ್ಗೆ ಹೀರೋ ಮನೇಲಿರಲಿ ಇಲ್ಲದೇ ಇರಲಿ ಪ್ರತೀ ದಿನ ತಪ್ಪದೇ ಅವರ ಮನೆ ಮುಂದೆ ಬಂದು ಸ್ವಲ್ಪ ಹೊತ್ತು ಇದ್ದು ಮೋಹನ್ ಬಾಬು ಕಂಡ್ರೆ ಅವರನ್ನ ಹತ್ತಿರದಿಂದಲೋ ದೂರದಿಂದಲೋ ಒಟ್ಟಿನಲ್ಲಿ ಅವರ ದರ್ಶನ ಪಡೆದು ಹೋಗ್ತಿರ್ತಿದ್ದ.

  ಹೀರೋ ಮನೆಯ ಸೆಕ್ಯೂರಿಟಿ, ಡ್ರೈವರ್ರು ಆ ಅಭಿಮಾನಿ ಬರೋದನ್ನ ಕಾಯೋದನ್ನ ಹೋಗೋದನ್ನ ಸದಾ ಗಮನಿಸ್ತಾ ಇರ್ತಾರೆ. ಈ ಕುರಿತು ಒಮ್ಮೆ ಮೋಹನ್ ಬಾಬು ಅವರಿಗೆ ತಿಳಿಸುತ್ತಾರೆ. ಎಲ್ಲರ ಥರ ಇವನೂ ಒಬ್ಬ ಫ್ಯಾನು ಅಂತ ಈ ವಿಷಯವನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಒಮ್ಮೆ ಮೋಹನ್ ಬಾಬು ಡ್ರೈವರ್ ತನ್ನ ಕುತೂಹಲ ತಡಿಯಕ್ಕಾಗದೇ ಆ ಅಭಿಮಾನಿಯನ್ನು ಫಾಲೋ ಮಾಡ್ಕೊಂಡು ಹೋಗಿ ಅವನ ಮನೆ ಒಳಗೆ ಹೋಗಿ ನೋಡ್ತಾನೆ. ಒಂದು ಕ್ಷಣ ಅಚ್ಚರಿ ಆಗುತ್ತದೆ. ಮುಂದೆ ಓದಿ..

  ಎನ್‌ಟಿಆರ್ ಎದುರು ಕಾಲ್‌ ಮೇಲೆ ಕಾಲ್ ಹಾಕಿ ಕೂತಿದ್ದ ಮೋಹನ್ ಬಾಬು, ರೇಗಾಡಿದ ನಿರ್ದೇಶಕಎನ್‌ಟಿಆರ್ ಎದುರು ಕಾಲ್‌ ಮೇಲೆ ಕಾಲ್ ಹಾಕಿ ಕೂತಿದ್ದ ಮೋಹನ್ ಬಾಬು, ರೇಗಾಡಿದ ನಿರ್ದೇಶಕ

  ಡ್ರೈವರ್‌ಗೆ ಅಚ್ಚರಿ

  ಡ್ರೈವರ್‌ಗೆ ಅಚ್ಚರಿ

  ಮನೆಯ ತುಂಬಾ ಮೋಹನ್ ಬಾಬು ಫೋಟೋಗಳು. ಒಂದಿಂಚೂ ಜಾಗ ಬಿಡದಂಗೆ ಎಲ್ಲಾ ಕಡೇನೂ ಮೋಹನ್ ಬಾಬು ಅವರ ತರಹೇವಾರಿ ಫೋಟೋಗಳು, ಚಿತ್ರಗಳ ಹೆಸರುಗಳು ಸಂದರ್ಶನದ ಪ್ರತಿಗಳು ಹೀಗೆ ಎಲ್ಲಾ ಕಡೇನೂ ಅಂಟಿಸಿರುತ್ತಾನೆ. ಈ ವಿಚಾರವನ್ನು ಡ್ರೈವರ್ ಬಂದು ಮೋಹನ್ ಬಾಬು ಅವರಿಗೆ ತಿಳಿಸುತ್ತಾನೆ.

  ಡಾ.ರಾಜ್‌ಕುಮಾರ್ ಬಗ್ಗೆ ಎಎನ್‌ಆರ್ ಆಡಿದ್ದ ಮುತ್ತಿನಂಥ ಮಾತುಗಳುಡಾ.ರಾಜ್‌ಕುಮಾರ್ ಬಗ್ಗೆ ಎಎನ್‌ಆರ್ ಆಡಿದ್ದ ಮುತ್ತಿನಂಥ ಮಾತುಗಳು

  ಅಭಿಮಾನಿ ಮನೆಗೆ ಭೇಟಿ ಕೊಟ್ಟ ಮೋಹನ್ ಬಾಬು

  ಅಭಿಮಾನಿ ಮನೆಗೆ ಭೇಟಿ ಕೊಟ್ಟ ಮೋಹನ್ ಬಾಬು

  ಡ್ರೈವರ್ ಹೇಳಿದ್ದನ್ನು ಕೇಳಿ ಆ ಅಭಿಮಾನಿಯ ಮನೆಯನ್ನು ನೋಡಬೇಕು ನಿರ್ಧರಿಸಿದ ಮೋಹನ್ ಬಾಬು ಒಮ್ಮೆ ಸರ್ಪ್ರೈಸಾಗಿ ಅವನ ಮನೆಗೆ ಭೇಟಿ ನೀಡುತ್ತಾರೆ. ಅವನ ಹುಚ್ಚು ಅಭಿಮಾನವನ್ನು ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಜೊತೆಗೆ ಖುಷಿಯಾಗುತ್ತದೆ. ತನ್ನ ನೆಚ್ಚಿನ ಹೀರೋ ತನ್ನ ಮನೆ ಬಾಗಿಲಿಗೆ ಬಂದಿರೋದನ್ನ ನೋಡಿ ಅವನಿಗೆ ಸ್ವರ್ಗದ ಅನುಭವವಾಗುತ್ತದೆ. ತುಂಬು ಮನಸ್ಸಿನಿಂದ ಉಪಚರಿಸುತ್ತಾನೆ. ಆತಿಥ್ಯ ಸ್ವೀಕರಿಸಿದ ಮೋಹನ್ ಬಾಬು ಇವನ ಕುಟುಂಬದವರ ಬಗ್ಗೆ ಕೇಳಿದಾಗ ಇಲ್ಲ ಸಾರ್ ಅವರೆಲ್ಲಾ ಹಳ್ಳೀಲಿದಾರೆ ನಾನು ನಿಮ್ಮ ಮೇಲಿನ ಅಭಿಮಾನಕ್ಕೆ ಹೈದರಾಬಾದ್‌ಗೆ ಬಂದೆ, ಈಗ ಇಲ್ಲಿ ಕೆಲಸ ಮಾಡ್ಕೊಂಡಿದೀನಿ ಅಂತಾನೆ.

  ಮದ್ವೆ ಆಗದೇ ಜೀವನ ಮಾಡ್ತಿದ್ದ

  ಮದ್ವೆ ಆಗದೇ ಜೀವನ ಮಾಡ್ತಿದ್ದ

  ನೀನು ಮದುವೆ ಆಗಿಲ್ವಾ ಅಂತ ಕೇಳಿದಾಗ, ಇಲ್ಲ ಸಾರ್ ಆಗಿಲ್ಲಾ ಅಂತಾನೆ. ಅದಕ್ಕೆ ಮೋಹನ್ ಬಾಬು ಆಶ್ಚರ್ಯದಿಂದ ಅಲ್ಲ ಕಣಯ್ಯ ಈಗಾಗ್ಲೇ ನಿನಗೆ ವಯಸ್ಸು ಹತ್ರತ್ರ ಐವತ್ತಾದಂಗಿದೆ, ಇನ್ನೂ ಯಾಕ್ ಮದುವೆ ಆಗಿಲ್ಲ ಅಂತ ವಿಚಾರಿಸಿದಾಗ, ಇಲ್ಲ ಸಾರ್ ನನಗೆ ನೀವು ಅಂದ್ರೆ ದೇವರ ಸಮಾನ ಈ ಮನೆಯಲ್ಲಿ ನಿಮ್ಮನ್ನ ನಾನು ಪೂಜೆ ಮಾಡ್ತೀನಿ. ನಾನು ಮದುವೆ ಆದ್ರೆ ಬರೋವ್ಳು ಇದನ್ನೆಲ್ಲಾ ಇಷ್ಟ ಪಡ್ಲಿಲ್ಲ ಅಂದ್ರೆ ನನಗೆ ತುಂಬಾನೇ ನೋವಾಗುತ್ತೆ ಅದಕ್ಕೇ ನಾನು ಮದುವೇನೆ ಆಗ್ಲಿಲ್ಲ ಅಂತಾನೆ.

  ಭಾವುಕರಾದ ಮೋಹನ್ ಬಾಬು

  ಭಾವುಕರಾದ ಮೋಹನ್ ಬಾಬು

  ಈ ಮಾತನ್ನು ಕೇಳಿ ದಂಗಾದ ಮೋಹನ್ ಬಾಬು ನಿಂತಲ್ಲೇ ಸಣ್ಣಗೆ ನಡುಗುತ್ತಾರೆ, ಕಣ್ಣೀರಿನಿಂದ ಅವರ ಕಣ್ಣು ಮಂಜಾಗುತ್ತದೆ ಎದುರುಗಿದ್ದ ಅವನನ್ನು ಬಾಚಿ ಅಪ್ಪಿಕೊಂಡು ಮಗುವಿನಂತೆ ಗಳಗಳನೆ ಅತ್ತುಬಿಡುತ್ತಾರೆ.

  Recommended Video

  ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada
  ಸ್ನೇಹ ಜೀವಿ ಮೋಹನ್ ಬಾಬು

  ಸ್ನೇಹ ಜೀವಿ ಮೋಹನ್ ಬಾಬು

  ಮೋಹನ್ ಬಾಬು ತನಗೆ ಅನಿಸಿದ್ದನ್ನು ಯಾವುದೇ ಮುಲಾಜಿಲ್ಲದೇ ಹೇಳುಬಿಡುವ ನೇರ ವ್ಯಕ್ತಿತ್ವದ ನುಡಿ. ಕನ್ನಡದಲ್ಲಿ ಅಂಬರೀಶ್ ಇದ್ದಂತೆ ತೆಲುಗಿಗೆ ಮೋಹನ್ ಬಾಬು. ಈ ಇಬ್ಬರು ಆಪ್ತ ಸ್ನೇಹಿತರು. ನಟ, ನಿರ್ದೇಶಕ, ನಿರ್ಮಾಪಕನಾಗಿಯೂ ಯಶಸ್ಸು ಕಂಡವರು. ಸಮಕಾಲಿನ ಕಲಾವಿದರ ಜೊತೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಂಡಿರುವ ನಟ.

  English summary
  Once Telugu actor Mohan Babu went to a fan home, teared after hearing his story of fondness.
  Saturday, May 29, 2021, 15:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X