'ಲಕ್ಷ್ಮೀ' ರಹಸ್ಯ ಜಗಜ್ಜಾಹೀರು ; ರೂಮ್ ಗೆ ಕರೆದಿದ್ದೇಕೆ..? ನಾಯಿಯಂತೆ ನಿಮ್ಮ ಜೊತೆ ಇರುತ್ತೇನೆ ಎಂದಿದ್ದ ನಟಿ..!

ಪ್ರೀತಿ ಮಧುರ.. ತ್ಯಾಗ ಅಮರ.. ಫೀಲಿಂಗ್ಸ್ ನಿತ್ಯ ನಿರಂತರ. ಈ ಪ್ರೀತಿ ಅನ್ನೋದೆ ಹಾಗೇ ಅಳಿಸಲಾಗದ ಬರಹ. ಒಮ್ಮೆ ಬಿದ್ದರೆ ಎದ್ದೇಳುವುದು ಕಷ್ಟ. ಅಪ್ಪಿ ತಪ್ಪಿ ಎದ್ದರೂ ನೆನಪು ಕಾಡುತ್ತೆ. ಮರೆಯಲೆತ್ನಿಸಿದರೂ ಅದು ಮಾಸಲ್ಲ. ಮನದ ಯಾವುದೋ ಒಂದು ಮೂಲೆಯಲ್ಲಿ ಆಗಾಗ ನೆನಪಿನ ಮೆರವಣಿಗೆ ಹೊರಟಿರುತ್ತೆ. ಯಾವುದಾದರೂ ಒಂದು ಸಮಯದಲ್ಲಿ ಮನದ ಮಾತು ಹೊರ ಬರುತ್ತೆ. ಇದಕ್ಕೆ ಒಂದ್ಕಾಲದ ಚಂದನದ ಗೊಂಬೆ 'ಜ್ಯೂಲಿ ಲಕ್ಷ್ಮೀ'ಯವರ ಎರಡನೇ ಪತಿ 'ಮೋಹನ್ ಶರ್ಮ' ಸದ್ಯದ ಉದಾಹರಣೆ.

ಹೌದು, ತನ್ನ ಅಂದ ಚೆಂದ ಅಭಿನಯದಿಂದ ಮನ ಗೆದ್ದ 'ಲಕ್ಷ್ಮೀ' ಅವರ ಸಾಂಸಾರಿಕ ಜೀವನ ಅಷ್ಟಕಷ್ಟೇ ಎಂಬ ವಿಚಾರ ನಿಮಗೆ ಗೊತ್ತು. 1969ರಲ್ಲಿ 'ಭಾಸ್ಕರನ್ ' ಜೊತೆ ಮದುವೆಯಾಗಿದ್ದ 'ಲಕ್ಷ್ಮೀ ' ಆ ನಂತರ, 1974ರಲ್ಲಿ ಅವರಿಂದ ದೂರ ಆದರು. ಆ ನಂತರ 'ಲಕ್ಷ್ಮೀ' ಜೀವನದಲ್ಲಿ ಬಂದಿದ್ದು 'ಮೋಹನ್ ಶರ್ಮಾ'.

Mohan Sharma Reveals Shocking Secret Of Julie Lakshmi

'ಜ್ಯೂಲಿ ಲಕ್ಷ್ಮೀ' ಅವರಂತೆಯೇ ಈ 'ಮೋಹನ್ ಶರ್ಮಾ' ಬಹುಭಾಷಾ 'ನಟ'. ಕನ್ನಡದಲ್ಲಿ 'ಸೇಡಿನ ಹಕ್ಕಿ' ಹಾಗೂ 'ಇಬ್ಬನಿ ಕರಗಿತು' ಚಿತ್ರದಲ್ಲಿಯೂ ಇವರು ನಟಿಸಿದ್ದಾರೆ. ಇಂಥಾ 'ಮೋಹನ್ ಶರ್ಮಾ' ಇದೀಗ 'ಸಂದರ್ಶನ'ವೊಂದರಲ್ಲಿ 'ಲಕ್ಷ್ಮೀ' ಜೊತೆ ಕಳೆದ ಸುಮಧುರ 'ಕ್ಷಣ'ಗಳನ್ನ ಮೆಲುಕು ಹಾಕಿದ್ದಾರೆ. ತಮ್ಮಿಬ್ಬರ 'ಪ್ರೀತಿ' ಹಾಗೂ 'ಮದುವೆ'ಯ ಕುರಿತು ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

'ಮೋಹನ್ ಶರ್ಮಾ' ಖುದ್ದು ಹೇಳಿರುವಂತೆ ಅದು 1974ರ ಸಮಯ. ಆಗಷ್ಟೇ 'ಲಕ್ಷ್ಮೀ 'ಮೊದಲ ಪತಿ 'ಭಾಸ್ಕರನ್ 'ಅವರಿಂದ ದೂರ ಆಗಿದ್ದರು. 'ಚಟ್ಟಕ್ಕರಿ' ಎಂಬ ಮಲಯಾಳಂ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಚಿತ್ರದ ಕಥಾನಾಯಕ ಬೇರೆ ಯಾರು ಅಲ್ಲ ಬದಲಿಗೆ ಇದೇ 'ಮೋಹನ್ ಶರ್ಮಾ'. ಈ ಚಿತ್ರದ ಚಿತ್ರೀಕರಣದ ನೆಪದಲ್ಲಿ ಇವರಿಬ್ಬರ ನಡುವೆ ಆದ ಪರಿಚಯ ಆ ನಂತರ ಸ್ನೇಹಕ್ಕೆ ತಿರುಗಿತು. ವಿಶೇಷ ಅಂದರೆ ಇಬ್ಬರಲ್ಲಿಯೂ ಪ್ರೀತಿಯ ಬೀಜ ಮೊಳಕೆಯೊಡೆಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ.

ಅದೊಂದು ದಿನ 'ಮೋಹನ್ ಶರ್ಮಾ' ಮುಂಬೈನಲ್ಲಿದ್ದಾಗ, 'ಲಕ್ಷ್ಮೀ' ಇವರಿಗೆ ಕರೆ ಮಾಡಿದ್ದರು. 'ಲಕ್ಸ್' ಜಾಹೀರಾತಿಗಾಗಿ ಮುಂಬೈಗೆ ಬಂದಿರುವುದಾಗಿ ತಿಳಿಸಿದ 'ಲಕ್ಷ್ಮೀ', ಆ ನಂತರ ಶಾಪಿಂಗ್ ಮಾಡಲು 'ಮೋಹನ್ ಶರ್ಮಾ' ಅವರ ಸಹಾಯವನ್ನೂ ಕೇಳಿದ್ದರು. 'ಮೋಹನ್ ಶರ್ಮಾ' ಕೂಡ ಒಪ್ಪಿ ತೆರಳಿದರು. ಆ ನಂತರ ಇಬ್ಬರು ಮುಂಬೈನ ಅನೇಕ ಕಡೆ ತಿರುಗಾಡಿದರು. ಒಂದಿಷ್ಟು ವಸ್ತುಗಳನ್ನೂ ಖರೀದಿಸಿದರು. ಇದೇ ಸಮಯದಲ್ಲಿ 'ನಾಯಿ'ಯ ಆಕಾರದಲ್ಲಿದ್ದ 'ಆಫ್ಟರ್ ಶೇವ್ ಲೋಷನ್ ' ತೆಗೆದುಕೊಳ್ಳಬೇಕೆಂಬ ಬಯಕೆ 'ಮೋಹನ್ ಶರ್ಮಾ' ಅವರಿಗೆ ಆಯಿತು. ಆದರೆ ಬೆಲೆ ದುಬಾರಿಯಾದ ಕಾರಣ 'ಮೋಹನ್ ಶರ್ಮಾ' ಅದನ್ನ ತೆಗೆದುಕೊಳ್ಳದೇ ಅಲ್ಲಿಯೇ ಇಟ್ಟರು. ಶಾಪಿಂಗ್ ಮುಗಿಸಿ ಇಬ್ಬರು ಆ ನಂತರ ಇಬ್ಬರು ಟ್ಯಾಕ್ಸಿಯನ್ನೇರಿದರು.

Mohan Sharma Reveals Shocking Secret Of Julie Lakshmi

ಸೀಟಿನ ಮುಂಭಾಗದಲ್ಲಿ 'ಮೋಹನ್ ಶರ್ಮಾ 'ಕುಳಿತಿದ್ದರೆ, ಹಿಂದಿನ ಸೀಟಿನಲ್ಲಿ 'ಲಕ್ಷ್ಮೀ' ಇದ್ದರು. ಇನ್ನೂ ಆ 'ದಿನ' ಹಾಗೂ ಆ 'ಕ್ಷಣ' ಇವತ್ತು ಕೂಡ ಮೋಹನ್ ಶರ್ಮಾಗೆ ಎಷ್ಟರ ಮಟ್ಟಿಗೆ ನೆನಪು ಇದೆ ಎಂದರೆ, ಸಮಯದ ಸಮೇತ ಎಲ್ಲವನ್ನೂ ಇವರು ವಿವರಿಸಿದ್ದಾರೆ.

ಸರಿಯಾಗಿ 'ಒಂಬತ್ತು' ಘಂಟೆಗೆ 'ಲಕ್ಷ್ಮೀ 'ಮಾತನಾಡಿದರು , ನಾನು ನಿಮಗೆ ಏನೋ 'ಕೊಡುತ್ತೇನೆ ' ಎಂದು 'ಲಕ್ಷ್ಮೀ ' ಹೇಳಿದರು ಎಂದಿರುವ ಮೋಹನ್ ಶರ್ಮಾ, ದುಬಾರಿ ಬೆಲೆ ನೋಡಿ, ಅಲ್ಲಿಯೇ ನಾನು ಬಿಟ್ಟಿದ್ದ 'ನಾಯಿ' ಆಕಾರದ ಆಫ್ಟರ್ ಶೇವ್ ಲೋಷನ್ ನ ನನ್ನ ಕೈಗೆ ಇಟ್ಟರು ಅಂದಿದ್ದಾರೆ. ಆ ನಂತರ 'ಲಕ್ಷ್ಮೀ' ನನಗೆ 'ಐ ಲವ್ ಯು' ಅಂದರು ಎಂದು ಹೇಳಿದ್ದಾರೆ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ, ನಿಮ್ಮ ಜೀವನದಲ್ಲಿ ಈ 'ನಾಯಿಯಂತೆ ಇರುತ್ತೇನೆ' ಎಂದು ಕೂಡ 'ಲಕ್ಷ್ಮೀ' ಅವತ್ತು ನನಗೆ ಹೇಳಿದ್ದರು ಎಂದು ನೆನಪುಗಳನ್ನ ಮೆಲುಕು ಹಾಕಿದ್ದಾರೆ 'ಮೋಹನ್ ಶರ್ಮಾ'

'ಲಕ್ಷ್ಮೀ' ಅವರ ಹೃದಯದಾಳದಿಂದ ಬಂದ ಈ ಮಾತುಗಳನ್ನ ಕೇಳಿ, ಇಡೀ ರಾತ್ರಿ ನಾನು 'ನಿದ್ದೆ'ಯನ್ನೇ ಮಾಡಿರಲಿಲ್ಲ ಎಂದಿರುವ 'ಮೋಹನ್ ಶರ್ಮಾ', ಬೆಳ್ಳಿಗ್ಗೆ 'ಲಕ್ಷ್ಮೀ' ಅವರಿಗೆ ಭೇಟಿಯಾಗೋಣ ಎಂದು ಹೇಳಿದ್ದೆ ಅಂದಿದ್ದಾರೆ. ಇನ್ನೂ ಭೇಟಿಯ ನಂತರ 'ಮದುವೆ'ಯ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ ಏನಿದ್ದರೂ ವೃತ್ತಿಯ ಕಡೆ ಗಮನ ಇದೆ ಎಂದು 'ಲಕ್ಷ್ಮೀ'ಗೆ 'ಮೋಹನ್ ಶರ್ಮಾ' ಹೇಳಿದ್ದರಂತೆ. ಆದರೆ 'ಲಕ್ಷ್ಮೀ' ಇದಕ್ಕೆ ಒಪ್ಪಲಿಲ್ಲ. ಬದಲಿಗೆ 'ರೂಮಿ'ಗೆ ಕರೆದೊಯ್ದರು ಎಂದಿರುವ 'ಮೋಹನ್ ಶರ್ಮಾ', ನಾನು ಸಂಪ್ರದಾಯಸ್ಥ ಕುಟುಂಬದಿಂದ ಬಂದವನು. ಮದುವೆ ಆಗದೆ ನಿನ್ನ ಜೊತೆ ಏನೂ ಮಾಡಲಾರೆ, 'ಕುಂಕುಮ' ಇದ್ದರೆ ಕೊಡು ಅಂದೆ. ಲಕ್ಷ್ಮೀ ಕೂಡಲೇ 'ಕುಂಕುಮ' ನೀಡಿದರು. ಬಳಿಕ 'ಹಣೆ'ಗೆ ಇಟ್ಟೆ. ಅದೇ ದಿನ ನನಗೆ ಮೊದಲ ಅನುಭವವಾಯಿತು. ಆ ಮೊದಲ ರಾತ್ರಿ ನಾವು ಗಂಡ ಹೆಂಡ್ತಿಯಾದೆವು. ಚೆನೈಗೆ ಬಂದ ನಂತರ ವಕೀಲರ ಮೂಲಕ ಮಾಧ್ಯಮದವರಿಗೆ ಮದುವೆಯಾಗಿರುವುದಾಗಿ ತಿಳಿಸಿದೆವು ಎಂದಿದ್ದಾರೆ ಮೋಹನ್ ಶರ್ಮಾ

Mohan Sharma Reveals Shocking Secret Of Julie Lakshmi

ಹೀಗೆ ಆರಂಭವಾದ ಇವರ ಇಬ್ಬರ ಪ್ರೀತಿ, ಕೇವಲ ಐದೇ ವರ್ಷದಲ್ಲಿ ಉಸಿರು ಚೆಲ್ಲಿತು. ಆದರೆ ನೆನಪುಗಳು ಇವತ್ತು ಕೂಡ ಉಳಿದಿವೆ. ಆ ನೆನಪಿನ ಬುತ್ತಿಯನ್ನ ಈಗ ಮೋಹನ್ ಶರ್ಮಾ ಸಾರ್ವಜನಿಕವಾಗಿ ಬಿಚ್ಚಿಟ್ಟಿದ್ದಾರೆ. ಸದ್ಯಕ್ಕೆ ಮೋಹನ್ ಶರ್ಮಾ ಅವರ ಮನದ ಈ ಮಾತುಗಳೆಲ್ಲ ಪಕ್ಕದ ಕಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿವೆ. ಸಂದರ್ಶನದ ವಿಡಿಯೋ ವೈರಲ್ ಆಗಿದೆ.

More from Filmibeat

English summary
Mohan Sharma, Former Husband Of Julie Lakshmi Reveals Shocking Secret. Says Actress Invited Him To Room And Latter Both Get Married
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X