ಶ್ರೀದೇವಿ ಇಹಲೋಕ ತ್ಯಜಿಸಿ 6 ವರ್ಷಗಳಾದರೂ ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್ ಫಾಲೋವರ್ಸ್
ಸೋಶಿಯಲ್ ಮೀಡಿಯಾ ಇಂದು ನಮ್ಮ ದೈನಂದಿನ ಜಗತ್ತಿನಲ್ಲಿ ಬಹಳಷ್ಟು ದೊಡ್ಡ ಸ್ಥಾನವನ್ನು ಪಡೆದಿದೆ. ಪ್ರತಿಯೊಂದನ್ನು ಪ್ರತಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹಾಕುವವರ ಗುಂಪು ಒಂದಾದರೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿ ಹೆಚ್ಚೆಚ್ಚು ಫಾಲೋವರ್ಸ್ ಗಳಿಸುವ ಗುಂಪು ಇನ್ನೊಂದು.
ಅದರಲ್ಲೂ ಸಿನಿಮಾ ತಾರೆಯರಂತೂ ಸೋಶಿಯಲ್ ಮೀಡಿಯಾವನ್ನು ಒಂದು ಒಳ್ಳೆಯ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ತಮಗೆ ಫಾಲೋವರ್ಸ್ ಅನ್ನು ಹೆಚ್ಚು ಮಾಡುವುದರ ಮೂಲಕ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ ಅಭಿಮಾನಿಗಳನ್ನು ಪಡೆಯುವುದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ಒಳ್ಳೆಯ ವಿಚಾರದ ಕಡೆಗೆ ಪ್ರೇರೇಪಿಸುವುದು ಇತ್ಯಾದಿ.

ಹಾಗೇ ಇಂದು ಸೋಶಿಯಲ್ ಮೀಡಿಯಾ ಬಹಳಷ್ಟು ಕಾಂಟ್ರವರ್ಸಿಗಳಿಗೂ ಹೆಸರುವಾಗುತ್ತಿದೆ. ಅದೇನೇ ಇರಲಿ, ಇಂದು ಇನ್‌ಸ್ಟಾಗ್ರಾಂ ಎಲ್ಲರ ಪ್ರತಿಭಾ ವೇದಿಕೆಯಾಗಿದೆ ಎಂದರು ತಪ್ಪಾಗಲ್ಲ.
ಹೀಗಿರುವಾಗ ನಟಿ ಶ್ರೀದೇವಿಯವರ ಸೋಶಿಯಲ್ ಮೀಡಿಯಾ ಇಂದಿಗೂ ಆ್ಯಕ್ಟೀವ್ ಇರುವುದಲ್ಲದೆ, ಇಂದಿಗೂ ಲಕ್ಷಾನುಗಟ್ಟಲೆ ಫಾಲೋವರ್ಸ್ ಇರುವುದು ಅಚ್ಚರಿ. ಹೌದು, ನಟಿ ಶ್ರೀದೇವಿಯವರು ಆರು ವರ್ಷಗಳ ಹಿಂದೆ ಆಕಾಲಿಕ ಮರಣವನ್ನು ಹೊಂದಿದರು. ಇದು ಭಾರತ ಸಿನಿಮಾರಂಗಕ್ಕೆ ಬಹಳಷ್ಟು ದೊಡ್ಡ ನಷ್ಟವಾಗಿತ್ತು. ಸತತ ಐವತ್ತು ವರ್ಷಗಳ ಕಾಲ ಸಿಲಿರಂಗದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ಈ ನಟಿ ದುರಾದೃಷ್ಟವಶಾತ್ ಕೊನೆಯಲ್ಲಿ ಅಕಾಲಿಕ ಮರಣವನ್ನು ಹೊಂದಿದರು.

ಪ್ರೀತಿಯ ಪತಿ ಬೋನಿ ಕಪೂರ್ ಅವರು ತಮಿಳಿನಲ್ಲಿ ನಿರ್ಮಾಪಕರಾಗಿ ಬಹಳಷ್ಟು ಹೆಸರು ಮಾಡಿದ್ದಾರೆ. ಅವರು ಇಂದಿಗೂ ಪತ್ನಿಯ ಇನ್ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಹ್ಯಾಂಡಲ್ ಮಾಡುತ್ತಿದ್ದು ಆಗಾಗ ಪತ್ನಿ ಶ್ರೀದೇವಿಯವರ ಹಳೆ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದಿಗೂ ಅವರ ಲಕ್ಷಣಗಟ್ಟಲೆ ಅಭಿಮಾನಿಗಳು ಪೋಸ್ಟ್ ಗೆ ಲೈಕ್ ಹಾಗೂ ಕಮೆಂಟ್ಸ್ ಗಳನ್ನು ಹಾಕುತ್ತಿರುತ್ತಾರೆ. ಅವರ ಫಾಲೋವರ್ಸ್ ಗಳಲ್ಲಿ ಅವರ ಮಕ್ಕಳು ಇರುವುದು ಆಶ್ಚರ್ಯ. ಈ ರೀತಿಯಾಗಿ ನಟಿ ಶ್ರೀದೇವಿಯವರು ಅಭಿಮಾನಿಗಳ ಮನಸ್ಸಲ್ಲಿ ಚಿರಂಜೀವಿಯಾಗಿದ್ದಾರೆ ಎಂದರೆ ತಪ್ಪಾಗಲ್ಲ.


Click it and Unblock the Notifications











