For Quick Alerts
  ALLOW NOTIFICATIONS  
  For Daily Alerts

  2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು

  |

  2020ರಲ್ಲಿ ಎಲ್ಲ ಅಂದುಕೊಂಡಂತೆ ಆಗಲಿಲ್ಲ. ಅನಿರೀಕ್ಷಿತವಾಗಿ ಬಂದ ಕೊರೊನಾ ವೈರಸ್ ಎಲ್ಲ ಯೋಜನೆಯನ್ನು ತಲೆಕೆಳಗಾಗಿಸಿಬಿಡ್ತು. ಕೊವಿಡ್ ಚಿತ್ರರಂಗದ ಮೇಲೂ ಭಾರಿ ಪರಿಣಾಮ ಬೀರಿತು. ಮೊದಲೇ ನಿರ್ಧರಿಸಿದಂತೆ ನಿರೀಕ್ಷೆಯ ಚಿತ್ರಗಳು 2020ರಲ್ಲಿ ಬಿಡುಗಡೆಯಾಗಲಿಲ್ಲ.

  ಬಹುತೇಕ ಎಲ್ಲ ಸ್ಟಾರ್ ನಟರ ಸಿನಿಮಾಗಳು 2021ಕ್ಕೆ ಮುಂದೂಡಿದರು. ಈಗ ಮುಂದಿನ ವರ್ಷ ಸತತ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲಿದೆ. ಚಿತ್ರಪ್ರೇಮಿಗಳಿಗೆ ವರ್ಷವೆಲ್ಲ ಮನರಂಜನೆ ದೊರೆಯಲಿದೆ. ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಶಿವರಾಜ್ ಕುಮಾರ್, ಯಶ್ ಸೇರಿದಂತೆ ಸ್ಟಾರ್ ನಟರ ಸಿನಿಮಾಗಳು 2021ಕ್ಕೆ ಸಜ್ಜಾಗಿದೆ. ಹಾಗಾದ್ರೆ, 2021ರ ನಿರೀಕ್ಷೆಯ ಚಿತ್ರಗಳು ಯಾವುದು?

  ಪುನೀತ್ 'ಯುವರತ್ನ'

  ಪುನೀತ್ 'ಯುವರತ್ನ'

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್‌ನಲ್ಲಿ ಈ ಚಿತ್ರ ತಯಾರಾಗಿದೆ.

  2020 ವರ್ಷದಲ್ಲಿ ಈ ಸಿನಿಮಾಗಳ ಟಿಕೆಟ್‌ಗಳು ಅತಿ ಹೆಚ್ಚು ಸೇಲ್ ಆಗಿವೆ2020 ವರ್ಷದಲ್ಲಿ ಈ ಸಿನಿಮಾಗಳ ಟಿಕೆಟ್‌ಗಳು ಅತಿ ಹೆಚ್ಚು ಸೇಲ್ ಆಗಿವೆ

  ದರ್ಶನ್ 'ರಾಬರ್ಟ್'

  ದರ್ಶನ್ 'ರಾಬರ್ಟ್'

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅವಕಾಶ ಕೊಡ್ತಿದ್ದಂತೆ ರಿಲೀಸ್ ದಿನಾಂಕ ಘೋಷಣೆ ಮಾಡಲು ತೀರ್ಮಾನಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಹಾಗು ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ.

  25 ವರ್ಷದ ಸಂಭ್ರಮ Dubaiನ Burj Khalifa ದಲ್ಲಿ | Phantom Teaser Launch Location | Filmibeat Kannada
  ಧ್ರುವ 'ಪೊಗರು'

  ಧ್ರುವ 'ಪೊಗರು'

  ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರಲು ಎಲ್ಲಾ ತಯಾರಿ ನಡೆದಿದೆ. ಸದ್ಯದಮಾಹಿತಿ ಪ್ರಕಾರ ಜನವರಿ ತಿಂಗಳಲ್ಲೇ ಈ ಸಿನಿಮಾ ಬಿಡುಗಡೆಯಾದರೂ ಅಚ್ಚರಿ ಇಲ್ಲ. ನಂದ ಕಿಶೋರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

  2020 ಮುಕ್ತಾಯ: ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ಯಾವುದು?2020 ಮುಕ್ತಾಯ: ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾ ಯಾವುದು?

  ಕೋಟಿಗೊಬ್ಬ-3 & ಫ್ಯಾಂಟಮ್

  ಕೋಟಿಗೊಬ್ಬ-3 & ಫ್ಯಾಂಟಮ್

  ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿ ರಿಲೀಸ್‌ಗೆ ಕಾಯ್ತಿದೆ. ಇದರ ಹಿಂದೆಯೇ ಫ್ಯಾಂಟಮ್ ಚಿತ್ರ ಸಹ ಸಜ್ಜಾಗುತ್ತಿದೆ. ಮೊದಲು ಕೋಟಿಗೊಬ್ಬ 3 ಬರಲಿದ್ದು, ನಂತರ ಫ್ಯಾಂಟಮ್ ಥಿಯೇಟರ್‌ಗೆ ಎಂಟ್ರಿಯಾಗಲಿದೆ. ಈ ಮೂಲಕ ಸುದೀಪ್ ಅಭಿಮಾನಿಗಳು ಎರಡು ಸಿನಿಮಾ ಸಿಗಲಿದೆ.

  ಯಶ್ 'ಕೆಜಿಎಫ್-2'

  ಯಶ್ 'ಕೆಜಿಎಫ್-2'

  2021ರ ಬಹುನಿರೀಕ್ಷೆಯ ಚಿತ್ರಗಳ ಪೈಕಿ ಹೆಚ್ಚು ನಿರೀಕ್ಷೆ ಇರುವುದು ಕೆಜಿಎಫ್ 2 ಸಿನಿಮಾ ಮೇಲೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಯಶ್ ನಟನೆಯಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಡಿಸೆಂಬರ್‌ನಲ್ಲಿ ಮುಗಿಯಲಿದೆ. 2021ರ ಮೊದಲಾರ್ಧದಲ್ಲಿ ಚಿತ್ರಮಂದಿರಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

  ಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳುಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳು

  ದುನಿಯಾ 'ಸಲಗ'

  ದುನಿಯಾ 'ಸಲಗ'

  ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಸಲಗ. ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್‌ಗೆ ರೆಡಿಯಿದೆ. ಹಾಡುಗಳು ಮೂಲಕ ಸದ್ದು ಮಾಡ್ತಿರುವ ಸಲಗ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

  ಶಿವಣ್ಣನ 'ಭಜರಂಗಿ-2'

  ಶಿವಣ್ಣನ 'ಭಜರಂಗಿ-2'

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸಿರುವ ಭಜರಂಗಿ 2 ಸಿನಿಮಾ ಚಿತ್ರೀಕರಣ ಮುಗಿಸಿದೆ. ಹರ್ಷ ನಿರ್ದೇಶನದ ಈ ಚಿತ್ರ 2021ರ ನಿರೀಕ್ಷೆಯ ಚಿತ್ರಗಳ ಪೈಕಿ ಒಂದಾಗಿದೆ. ಈ ಸಿನಿಮಾದ ಜೊತೆ ಶಿವಪ್ಪ ಸಿನಿಮಾ ಮುಂದಿನ ವರ್ಷದಲ್ಲಿ ಥಿಯೇಟರ್‌ಗೆ ಬರಲಿದೆ.

  ರಾಜವೀರ ಮದಕರಿ ನಾಯಕ

  ರಾಜವೀರ ಮದಕರಿ ನಾಯಕ

  ದರ್ಶನ್ ನಟನೆಯಲ್ಲಿ ಸೆಟ್ಟೇರಿರುವ ರಾಜವೀರ ಮದಕರಿ ನಾಯಕ ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಎರಡನೇ ಹಂತದ ಚಿತ್ರೀಕರಣ ಸಜ್ಜಾಗಿದೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ. ಬಹುಶಃ ಈ ಚಿತ್ರವೂ ಮುಂದಿನ ವರ್ಷ ತೆರೆಗೆ ಬರಬಹುದು ಎನ್ನಲಾಗಿದೆ.

  2021ರ ನಿರೀಕ್ಷೆಯ ಚಿತ್ರಗಳು

  2021ರ ನಿರೀಕ್ಷೆಯ ಚಿತ್ರಗಳು

  ಈ ಚಿತ್ರಗಳ ಜೊತೆ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777, ಶರಣ್ ನಟನೆಯ ಅವತಾರ್ ಪುರುಷ್, ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್, ಸಖತ್, ಗಾಳಿಪಟ 2, ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾಗಳು 2021ರಲ್ಲಿ ಬಿಡುಗಡೆಯಾಗಲಿದೆ.

  English summary
  Most expected kannada movies in 2021: yuvaratna, roberrt, pogaru, salaga, Phantom, Kotigobba 3 movies in the list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X