ಮಾರ್ಚ್ 15ರಿಂದ 30ರವರೆಗೆ ಅತಿಹೆಚ್ಚು ಚರ್ಚಿಸಲ್ಪಟ್ಟ ಸ್ಟಾರ್ಸ್: ತೆಲುಗಿನಲ್ಲಿ ಎನ್‌ಟಿಆರ್, ಕನ್ನಡದಲ್ಲಿ ಯಾರು?

ಟ್ವಿಟರ್.. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಬಳಕೆದಾರರನ್ನು ಹಾಗೂ ಇನ್ನೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ಪ್ರಮುಖ ವೇದಿಕೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಮಾಲೀಕತ್ವದಲ್ಲಿ ಭಾರೀ ಬದಲಾವಣೆಗಳಾಗಿ, ಟ್ವಿಟರ್‌ನ ನೀತಿ, ನಿಯಮಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯಾದರೂ ಈ ಅಪ್ಲಿಕೇಶನ್‌ನ ಕ್ರೇಜ್ ಹಾಗೂ ಇದನ್ನು ಬಳಕೆ ಮಾಡುವವರ ಸಂಖ್ಯೆ ಮಾತ್ರ ಸ್ವಲ್ಪವೂ ತಗ್ಗಿಲ್ಲ. ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ.

ಹೀಗೆ ಹೆಚ್ಚು ಖ್ಯಾತಿಯನ್ನು ಗಳಿಸಿ ಅತಿಮುಖ್ಯ ಅಪ್ಲಿಕೇಶನ್ ಎನಿಸಿಕೊಂಡಿರುವ ಟ್ವಿಟರ್ ಈಗ ಸಿನಿ ರಸಿಕರು ಬಳಸುವ ಕಡ್ಡಾಯವಾದ ಅಪ್ಲಿಕೇಶನ್ ಆಗಿ ಮಾರ್ಪಡುತ್ತಿದೆ. ಯಾವುದೇ ಚಿತ್ರದ ಕುರಿತ ಅಪ್‌ಡೇಟ್‌ಗಳು, ಆ ಚಿತ್ರ ಎಷ್ಟು ಗಳಿಸಿತು ಎಂಬ ಮಾಹಿತಿ ಅತಿವೇಗವಾಗಿ ಉಳಿದ ಎಲ್ಲಾ ಅಪ್ಲಿಕೇಶನ್‌ಗಳಿಗಿಂತ ಈ ಅಪ್ಲಿಕೇಶನ್‌ನಲ್ಲಿಯೇ ಸಿಗಲಿದೆ. ಇನ್ನು ಸಿನಿ ರಸಿಕರು ಮಾತ್ರವಲ್ಲದೇ ಚಿತ್ರತಂಡಗಳೂ ಸಹ ಈ ಟ್ವಿಟರ್ ಉಪಯೋಗಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅಭಿಮಾನಿಗಳಿಗೆ ಮಾಹಿತಿಗಳನ್ನು ಸುಲಭವಾಗಿ ಈ ವೇದಿಕೆಯ ಮೂಲಕ ತಲುಪಿಸಬಹುದಾಗಿದ್ದು, ಸಿನಿ ಮಂದಿ ಈ ಅಪ್ಲಿಕೇಶನ್‌ನಲ್ಲಿ ಸಕ್ರಿಯರಾಗಿದ್ದಾರೆ.

Most mentioned actors on twitter from March 15 to 30; Kiccha Sudeep tops in Kannada

ಇನ್ನು ಸಿನಿಮಾಗಳ ಕುರಿತಾದ ಹಾಗೂ ಯಾವುದೇ ಕಲಾವಿದರ ಕುರಿತಾದ ಸುದ್ದಿಗಳು ಈ ಟ್ವಿಟರ್ ವೇದಿಕೆಯಲ್ಲಿ ಸುಲಭವಾಗಿ ಹಾಗೂ ವೇಗವಾಗಿ ಲಭಿಸಲಿವೆ. ಯಾವುದೇ ಸಿನಿಮಾ ವಿಷಯದ ಸುದ್ದಿಗಳು ಬೇಕೆಂದರೆ ಆ ವಿಷಯದ ಹ್ಯಾಷ್ ಟ್ಯಾಗ್ ಬಳಸಿ ಹುಡುಕಿದರೆ ಸಾಕು ಆ ಕುರಿತಾದ ಸಾಲು ಸಾಲು ಸುದ್ದಿಗಳು ಹಾಗೂ ಮಾಹಿತಿ ಲಭಿಸಿಬಿಡುತ್ತದೆ.

ಇನ್ನು ಸ್ಟಾರ್ ಸಿನಿಮಾಗಳ ವಿಷಯದಲ್ಲಂತೂ ಈ ಟ್ವಿಟರ್ ಅತಿದೊಡ್ಡ ಪಾತ್ರವನ್ನೇ ನಿರ್ವಹಿಸಲಿದೆ ಎನ್ನಬಹುದು. ಹೌದು, ಸ್ಟಾರ್ ನಟರ ಸಿನಿಮಾಗಳು ಸೆಟ್ಟೇರಿದಾಗ ಅಥವಾ ಆ ಚಿತ್ರಗಳ ಕುರಿತ ಯಾವುದೇ ಚಟುವಟಿಕೆಗಳು ನಡೆದಾಗ ಅವುಗಳು ಥಟ್ಟನೆ ಲಭ್ಯವಾಗುವುದು ಇದೇ ಟ್ವಿಟರ್‌ನಲ್ಲಿ. ಅದರಲ್ಲಿಯೂ ಆ ಸ್ಟಾರ್ ನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಚಿತ್ರಗಳ ಯಾವುದೇ ಅಪ್‌ಡೇಟ್ ಬಂದರೂ ಅವುಗಳನ್ನು ವಿಶೇಷ ಹ್ಯಾಷ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ.

ಇನ್ನು ಚಿತ್ರಗಳ ಕುರಿತಾಗಿ ಮಾತ್ರವಲ್ಲದೇ ಸ್ಟಾರ್ ನಟರ ಇತರೆ ವಿಷಯಗಳ ಬಗ್ಗೆಯೂ ಸಹ ಟ್ವಿಟರ್‌ನಲ್ಲಿ ಸುದ್ದಿಗಳು ಹರಿದಾಡಲಿದ್ದು, ಹೆಚ್ಚು ಯಾವ ನಟನನ್ನು ಮೆನ್ಷನ್ ಮಾಡಲಾಗಿದೆ, ಯಾವ ನಟನ ಬಗ್ಗೆ ಹೆಚ್ಚು ಚರ್ಚೆ ನಡೆಸಲಾಗಿದೆ ಹಾಗೂ ಯಾವ ನಟನ ಬಗ್ಗೆ ಹೆಚ್ಚು ಟ್ವೀಟ್‌ಗಳು ಹರಿದುಬಂದಿವೆ ಎಂಬ ಮಾಹಿತಿ ಹದಿನೈದು ದಿನಗಳಿಗೊಮ್ಮೆ ಹೊರಬೀಳುತ್ತಿರುತ್ತದೆ. ಸದ್ಯ ಮಾರ್ಚ್ 15ರಿಂದ 30ರ ತನಕ ಟ್ವಿಟರ್‌ನಲ್ಲಿ ಯಾವ ನಟನ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಹೊರಬಿದ್ದಿದ್ದು, ಈ ಕೆಳಕಂಡಂತಿದೆ..

ಜೂನಿಯರ್ ಎನ್‌ಟಿಆರ್ ಮಾರ್ಚ್ 15ರಿಂದ 30ರ ತನಕ ಟ್ವಿಟರ್‌ನಲ್ಲಿ ಅತಿಹೆಚ್ಚು ಚರ್ಚಿಸಲ್ಪಟ್ಟ ತೆಲುಗು ನಟ ಎನಿಸಿಕೊಂಡಿದ್ದರೆ, ಕನ್ನಡದಲ್ಲಿ ಕಿಚ್ಚ ಸುದೀಪ್ ಈ ಸಮಯದಲ್ಲಿ ಅತಿಹೆಚ್ಚು ಚರ್ಚೆಗೊಳಗಾದ ನಟ ಎನಿಸಿಕೊಂಡಿದ್ದಾರೆ. ಅತ್ತ ತಮಿಳಿನಲ್ಲಿ ದಳಪತಿ ವಿಜಯ್ ಮಾರ್ಚ್ 15ರಿಂದ 30ರ ತನಕ ಟ್ವಿಟರ್‌ನಲ್ಲಿ ಅತಿಹೆಚ್ಚು ಚರ್ಚಿಸಲ್ಪಟ್ಟ ನಟ ಎನಿಸಿಕೊಂಡಿದ್ದಾರೆ. ಇನ್ನು ನಟ ದರ್ಶನ್ ಮಾರ್ಚ್ 15ರಿಂದ 30ರ ತನಕ ಟ್ವಿಟರ್‌ನಲ್ಲಿ ಅತಿಹೆಚ್ಚು ಹ್ಯಾಷ್‌ಟ್ಯಾಗ್ ಟ್ವೀಟ್ ಆಗಿರುವ ಕನ್ನಡದ ನಟ ಎನಿಸಿಕೊಂಡಿದ್ದರೆ, ಹಿಂದಿಯಲ್ಲಿ ಶಾರುಖ್ ಖಾನ್ ಈ ಸಮಯದಲ್ಲಿ ಅತಿಹೆಚ್ಚು ಮೆನ್ಷನ್ ಆದ ಹಿಂದಿ ನಟ ಎನಿಸಿಕೊಂಡಿದ್ದಾರೆ.

More from Filmibeat

English summary
Most mentioned actors on twitter from March 15 to 30; Kiccha Sudeep tops in Kannada. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X