2020 ವರ್ಷದಲ್ಲಿ ಈ ಸಿನಿಮಾಗಳ ಟಿಕೆಟ್‌ಗಳು ಅತಿ ಹೆಚ್ಚು ಸೇಲ್ ಆಗಿವೆ
ವರ್ಷ 2020 ಚಿತ್ರಮಂದಿರಗಳ ಪಾಲಿಗೆ ಅತ್ಯಂತ ನಷ್ಟದ ವರ್ಷ. ತಿಂಗಳಾನುಗಟ್ಟಲೆ ಒಂದು ರೂಪಾಯಿ ಸಹ ಆದಾಯವಿಲ್ಲದೆ ಹೆಣಗಿದ್ದಾವೆ ಚಿತ್ರಮಂದಿರಗಳು.
ಈ ವರ್ಷಾರಂಭದ ಕೆಲವು ತಿಂಗಳುಗಳಲ್ಲಿ ಚಿತ್ರಮಂದಿರಗಳು ತೆರೆದಿದ್ದಾಗ ಕೆಲವು ಸಿನಿಮಾಗಳು ಬಿಡುಗಡೆಯಾಗಿ ಉತ್ತಮ ಪ್ರದರ್ಶನವನ್ನೇ ಕಂಡಿದ್ದವು.
ಈ ವರ್ಷ ಅತಿ ಹೆಚ್ಚು ಟಿಕೆಟ್ ಸೇಲ್ ಆದ ಸಿನಿಮಾಗಳ ಪಟ್ಟಿಯನ್ನು ನೀಡಿದೆ ಸಿನಿಮಾ ಟಿಕೆಟ್ ಮಾರಾಟ ದೈತ್ಯ 'ಬುಕ್‌ಮೈಶೋ'. ಈ ಪಟ್ಟಿ ಬುಕ್‌ಮೈಶೋ ಆಪ್ ಅಥವಾ ವೆಬ್‌ಸೈಟ್ ಬಳಸಿ ಯಾವ ಸಿನಿಮಾಕ್ಕೆ ಹೆಚ್ಚು ಟಿಕೆಟ್ ಖರೀದಿಸಿದ್ದಾರೆ ಎಂಬುದರ ಅಂಕಿ-ಅಂಶವಾಗಿದೆ.

ಮೊದಲ ಸ್ಥಾನದಲ್ಲಿ 'ತಾನಾಜಿ'
ಮೊದಲ ಸ್ಥಾನದಲ್ಲಿ ಹಿಂದಿಯ ತಾನಾಜಿ ಇದೆ. ಅಜಯ್ ದೇವಗನ್ ನಟಿಸಿದ್ದ ಈ ಐತಿಹಾಸಿಕ ಕತೆಯುಳ್ಳ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಿತ್ತು. ಬುಕ್‌ಮೈ ಶೋ ಒಂದರನ್ನೇ 272 ಕೋಟಿ ಗಳಿಸಿದೆ ಈ ಸಿನಿಮಾ.

ಎರಡನೇ ಸಿನಿಮಾ 'ಅಲಾ ವೈಕುಂಟಪುರಂಲೊ'
ಬುಕ್‌ಮೈಶೋ ನಲ್ಲಿ ಅತಿ ಹೆಚ್ಚು ಟಿಕೆಟ್ ಸೇಲ್ ಆದ ಎರಡನೇ ಸಿನಿಮಾ 'ಅಲಾ ವೈಕುಂಟಪುರಂಲೊ'. ಅಲ್ಲು ಅರ್ಜುನ್-ಪೂಜಾ ಹೆಗ್ಡೆ ನಟಿಸಿರುವ ಈ ಸಿನಿಮಾ ಬಿಡುಗಡೆ ಆಗಿದ್ದು ಜನವರಿ 12 ಕ್ಕೆ. ಬುಕ್‌ಮೈಶೋ ಮೂಲಕ ಗಳಿಸಿದ್ದು 108 ಕೋಟಿ.

ರಶ್ಮಿಕಾ ಸಿನಿಮಾಕ್ಕೆ ಮೂರನೇ ಸ್ಥಾನ
ಮೂರನೇ ದೊಡ್ಡ ಸಿನಿಮಾ ರಶ್ಮಿಕಾ ಮಂದಣ್ಣ-ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಸಿನಿಮಾ. ಈ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಿತ್ತು. ಈ ಸಿನಿಮಾ ಬರೋಬ್ಬರಿ 86 ಕೋಟಿ ಗಳಿಸಿದೆ ಬುಕ್‌ಮೈ ಶೋ ನಲ್ಲಿ.

ರಜನೀಕಾಂತ್ ಸಿನಿಮಾಕ್ಕೆ ನಾಲ್ಕನೇ ಸ್ಥಾನ
ರಜನೀಕಾಂತ್ ನಟನೆಯ 'ದರ್ಬಾರ್' ಸಿನಿಮಾಕ್ಕೆ ಅತಿ ಹೆಚ್ಚು ಟಿಕೆಟ್ ಸೇಲ್ ಆದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ. ಈ ಸಿನಿಮಾ ಜನವರಿ 9 ರಂದು ಬಿಡುಗಡೆ ಆಗಿತ್ತು. ಬುಕ್‌ಮೈಶೋ ನಲ್ಲಿ ಈ ಸಿನಿಮಾ 74 ಕೋಟಿ ಗಳಿಸಿದೆ.

ರಶ್ಮಿಕಾ ನಟನೆಯ ಮತ್ತೊಂದು ಸಿನಿಮಾ
ರಶ್ಮಿಕಾ ಮಂದಣ್ಣ-ನಿತಿನ್ ನಟನೆಯ ಕೃಷಿ ಹಾಗೂ ಕಾರ್ಪೊರೇಟ್ ವ್ಯವಸ್ಥೆ ಬಗ್ಗೆ ಕತೆಯುಳ್ಳ ಸಿನಿಮಾ ಆಗಿದ್ದ 'ಭೀಷ್ಮ' ಗೆ ಐದನೇ ಸ್ಥಾನ. ಈ ಸಿನಿಮಾ ಫೆಬ್ರವರಿ 21 ರಂದು ಬಿಡುಗಡೆ ಆಗಿತ್ತು. ಸಿನಿಮಾ ಗಳಿಸಿದ್ದು 32 ಕೋಟಿ. ಹಣ ಗಳಿಸಿದ್ದು ಕಡಿಮೆಯೇ ಆದರು, ಹೆಚ್ಚು ಟಿಕೆಟ್ ಸೇಲ್ ಆಗಿದ್ದವು ಎಂದಿದೆ ಬುಕ್‌ಮೈ ಶೋ.

'ಶುಭ ಮಂಗಲ್ ಜ್ಯಾದಾ ಸಾವಧಾನ್'
ಫೆಬ್ರವರಿ 21 ರಂದು ಬಿಡುಗಡೆ ಆದ ಭಿನ್ನವಾದ ಕತೆ ಹೊಂದಿದ್ದ ಸಿನಿಮಾ ಆಗಿದ್ದ 'ಶುಭ ಮಂಗಲ್ ಜ್ಯಾದಾ ಸಾವಧಾನ್' ಗೆ ಆರನೇ ಸ್ಥಾನ. ಆಯುಷ್ಮಾನ್ ಖುರಾನಾ ನಟಿಸಿದ್ದ ಸಲಿಂಗಕಾಮದ ಕತೆ ಹೊಂದಿದ್ದ ಈ ಸಿನಿಮಾ ಗಳಿಸಿದ್ದು 57 ಕೋಟಿ.

ಭಾಗಿ 3 ಗೆ ಏಳನೇ ಸ್ಥಾನ
ಹಿಂದಿಯ ಭಾಗಿ 3 ಗೆ ಏಳನೇ ಸ್ಥಾನ. ಟೈಗರ್ ಶ್ರಾಪ್, ರಿತೇಶ್ ದೇಶ್‌ಮುಖ್, ಶ್ರದ್ಧಾ ಕಪೂರ್ ನಟನೆಯ ಈ ಸಿನಿಮಾ ಭರ್ಜರಿ ಆಕ್ಷನ್ ಸಿನಿಮಾ ಆಗಿತ್ತು. ಮಾರ್ಚ್ 6 ರಂದು ಬಿಡುಗಡೆ ಆದ ಈ ಸಿನಿಮಾ 80 ಕೋಟಿ ಗಳಿಸಿತು.

'ಸ್ಟ್ರೀಟ್ ಡ್ಯಾನ್ಸರ್ 3'
ಹಿಂದಿಯ ಸ್ಟ್ರೀಟ್ ಡ್ಯಾನ್ಸರ್ 3 ಸಿನಿಮಾದ ಟಿಕೆಟ್‌ಗಳು ಸಹ ದೊಡ್ಡ ಸಂಖ್ಯೆಯಲ್ಲಿಯೇ ಸೇಲ್ ಆಗಿದ್ದವು. ವರುಣ್ ಧವನ್, ಶ್ರದ್ಧಾ ಕಪೂರ್, ಪ್ರಭುದೇವಾ ನಟಿಸಿದ್ದ ನೃತ್ಯದ ಬಗೆಗಿನ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಈ ಸಿನಿಮಾ 66 ಕೋಟಿ ಗಳಿಸಿತ್ತು.

ಮಲಯಾಳಂ ಸಿನಿಮಾ 'ಅಂಜಮ್ ಪತ್ತಿರ'
ಮಲಯಾಳಂ ಸಿನಿಮಾ 'ಅಂಜಮ್ ಪತ್ತಿರ' ಸಿನಿಮಾದ ಸಹ ಸಾಕಷ್ಟು ಹಿಟ್ ಆಗಿತ್ತು. ಇದೊಂದೇ ಮಲೆಯಾಳಂ ಸಿನಿಮಾ ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿದೆ. ಜನವರಿ 10 ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾ ಬುಕ್‌ಮೈಶೋ ನಲ್ಲಿ 19 ಕೋಟಿ ಗಳಿಸಿದೆ.
Recommended Video

ಇಂಗ್ಲಿಷ್ ಸಿನಿಮಾ '1917'
ಪಟ್ಟಿಯಲ್ಲಿ ಕೊನೆಯ ಸಿನಿಮಾ, ಜನವರಿ 17 ರಂದು ಬಿಡುಗಡೆ ಆದ 1917 ಆಂಗ್ಲ ಸಿನಿಮಾವನ್ನು ಸಹ ಜನರು ಮುಗಿಬಿದ್ದು ನೋಡಿದ್ದಾರೆ. ಭಿನ್ನವಾದ ನಿರೂಪಣೆಯುಳ್ಳ ಸಿನಿಮಾ ಇದಾಗಿದ್ದು, ಇಬ್ಬರು ಸೈನಿಕರ ಪಯಣವನ್ನು ಎಲ್ಲಿಯೂ ಕಟ್ ಇಲ್ಲದೆ ಚಿತ್ರಿಸಿರುವುದು ವಿಶೇಷ.


Click it and Unblock the Notifications











