twitter
    For Quick Alerts
    ALLOW NOTIFICATIONS  
    For Daily Alerts

    2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು

    |

    ಟ್ರೋಲ್ ಗಳ ವ್ಯಾಪ್ತಿಗೆ ಸಿಗದ ಕ್ಷೇತ್ರಗಳಲಿಲ್ಲ. ಇತ್ತೀಚಿನ ದಿನಗಳಲ್ಲಿ ಟ್ರೋಲ್ ಗಳಿಗೆ ಆಹಾರವಾಗದವೆ ಇಲ್ಲ. ಅದರಲ್ಲೂ ಸಿನಿಮಾ ಕ್ಷೇತ್ರಕ್ಕೂ ಟ್ರೋಲ್ ಲೋಕಕ್ಕೂ ಅವಿನಾಭಾವ ಸಂಬಂಧ. ಸಿನಿಮಾ ನಟರ ಸ್ಟೈಲ್, ಕಾಸ್ಟ್ಯೂಮ್, ಕೆಲವು ಡೈಲಾಗ್ ಗಳು ಅಥವಾ ಚಿತ್ರದ ಕೆಲ ಸೀನ್ ಗಳು ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಿರುತ್ತವೆ.

    ಸ್ಯಾಂಡಲ್ ವುಡ್ ನಲ್ಲೂ ಸಾಕಷ್ಟು ಚಿತ್ರಗಳು ಟ್ರೋಲ್ ಗಳಿಗೆ ಗುರಿಯಾಗಿದ್ದವೆ. ಪಾಸಿಟೀವ್ ಆಗಿರಬಹುದು ಅಥವಾ ನೆಗೆಟಿವ್ ಎರಡು ವಿಚಾರಗಳಲ್ಲಿ ಅನೇಕ ಸಿನಿಮಾಗಳು ಟ್ರೋಲ್ ಆಗಿ ಸದ್ದು ಮಾಡಿವೆ. ಪೋಸ್ಟರ್ ಗಳು, ಡೈಲಾಗ್ಸ್, ದೃಶ್ಯಗಳಿಂದ ಅತೀ ಹೆಚ್ಚು ಟ್ರೋಲ್ ಆದ ಚಿತ್ರಗಳು ಇಲ್ಲಿವೆ.

    ಕನ್ನಡದಿಂದ ದೂರವಾದರು ಮಲೆಯಾಳಂನ ಈ ನಟಿಯರು ಕನ್ನಡದಿಂದ ದೂರವಾದರು ಮಲೆಯಾಳಂನ ಈ ನಟಿಯರು

    ಸೀತರಾಮ ಕಲ್ಯಾಣ ಚಿತ್ರ

    ಸೀತರಾಮ ಕಲ್ಯಾಣ ಚಿತ್ರ

    ನಿಖಿಲ್ ಕುಮಾರ ಸ್ವಾಮಿ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾ ಇತೀ ಹೆಚ್ಚು ಟ್ರೋಲ್ ಆದ ಸಿನಿಮಾಗಳ ಲಿಸ್ಟ್ ನಲ್ಲಿ ಇದೆ. ವರ್ಷದ ಮೊದಲ ತಿಂಗಳು ತೆರೆಗೆ ಬಂದ ಸಿನಿಮಾವಿದು. ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಇದು ತೆಲುಗು ಸಿನಿಮಾದ ರಿಮೇಕ್ ಇದ್ದ ಹಾಗಿದೆ, ಅಲ್ಲು ಅರ್ಜುನ್ ಚಿತ್ರದ ಫೈಟಿಂಗ್ ದೃಶ್ಯಗಳನ್ನು ಕಾಪಿ ಮಾಡಲಾಗಿದೆ ಎಂದು ಸಾಕಷ್ಟು ಟ್ರೋಲ್ ಮಾಡಲಾಗಿತ್ತು.

    ಬೆಲ್ ಬಾಟಂ

    ಬೆಲ್ ಬಾಟಂ

    ರಿಷಬ್ ಶೆಟ್ಟಿ ಅಭಿನಯದ 'ಬೆಲ್ ಬಾಟಮ್' ಚಿತ್ರದ ಪೋಸ್ಟರ್ ಗಳು ಟ್ರೋಲ್ ಆಗಿದ್ದವು. ಆದರೆ ಈ ಚಿತ್ರ ಪಾಸಿಟೀವ್ ಆಗಿ ಟ್ರೋಲ್ ಆಗಿತ್ತು. ರಿಷಬ್ ಶೆಟ್ಟಿಯ ವಿವಿಧ ಪೋಸ್ಟರ್ ಲುಕ್ ಗಳು ಪಾಸಿಟವ್ ಟ್ರೋಲ್ ಗಳಿಗೆ ಒಳಗಾದವು. ಡಿಟೆಕ್ಟಿವ್ ದಿವಾಕರ್ ನ ಹಲವು ಅವತಾರಗಳು ಹಲವು ಹೊಸ ಹಳೆ ಕಾಲದ ಟ್ರೋಲ್ ಗಳನ್ನು ಸೃಷ್ಟಿಸಿದವು.

    ರಿಮೇಕ್ ರಾಜರು: ಇವರು ಕನ್ನಡದ ರಿಮೇಕ್ ಡೈರೆಕ್ಟರ್ ಗಳುರಿಮೇಕ್ ರಾಜರು: ಇವರು ಕನ್ನಡದ ರಿಮೇಕ್ ಡೈರೆಕ್ಟರ್ ಗಳು

    '99' ಸಿನಿಮಾ

    '99' ಸಿನಿಮಾ

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದ ಗಣೇಶ್ ಪೋಸ್ಟರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಉದ್ದ ದಡಿ ಬಿಟ್ಟಿದ್ದರು. ಆದರೆ ಅದೂ ನಖಲಿ ದಾಡಿ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಗಣೇಶ್ ದಾಡಿಯ ಲುಕ್ ಹೊರಬಿದ್ದಾಗ, ತಮಿಳು ಪ್ರೇಕಕರಿಂದ ಕೆಲ ನೆಗೆಟಿವ್ ಟ್ರೋಲ್ ಗಳು ಬಂದವು.

    'ಐ ಲವ್ ಯೂ' ಸಿನಿಮಾ

    'ಐ ಲವ್ ಯೂ' ಸಿನಿಮಾ

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ಕೂಡ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿತ್ತು. ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ನಟಿ ರಚಿತಾ ರಾಮ್ ಲುಕ್ ಟ್ರೋಲ್ ಆಗಿತ್ತು. ಚಿತ್ರದ ಒಂದು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ರಚಿತಾ ಟ್ರೋಲ್ ಪೋಜ್ ಗಳಿಗೆ ಆಹಾರವಾಗಿದ್ದರು.

    ರಸ್ತುಂ ಸಿನಿಮಾ

    ರಸ್ತುಂ ಸಿನಿಮಾ

    ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಸಿನಿಮಾ ಸಹ ಟ್ರೋಲ್ ಗಳಿಗೆ ಆಹಾರವಾಗಿದೆ. ಶಿವಣ್ಣ ಅಭಿನಯದ ರುಸ್ತುಂ ಚಿತ್ರ ರಿಲೀಸ್ ಗೂ ಮೊದಲು ಉತ್ತಮವಾದ ಪ್ರತಿಕ್ರಿಯೆ ಇತ್ತು. ಶಿವಣ್ಣ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಸಿನಿಮಾ ರಿಲೀಸ್ ಆದ ನಂತರ ಭೋಜಪುರಿ ಚಿತ್ರವೆಂದು ಟ್ರೋಲ್ ಗೆ ಒಳಗಾಯಿತು.

    ಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳುಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳು

    ಕುರುಕ್ಷೇತ್ರ ಚಿತ್ರ

    ಕುರುಕ್ಷೇತ್ರ ಚಿತ್ರ

    ಚಾಲೆಂಜಿಂಗ್ ಸ್ಟಾರ್ ಸೇರಿದಂತೆ ಅನೇಕ ಸ್ಟಾರ್ ಅಭಿನಯಿಸಿರುವ ಕುರುಕ್ಷೇತ್ರ ಸಿನಿಮಾ ಕೂಡ ಸಾಕಷ್ಟು ಟ್ರೋಲ್ ಆಗಿತ್ತು. ಮೊದಲ ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಮುನಿರತ್ನ ಕಥೆ ಎನ್ನುವುದು ಚಿತ್ರದ ಮೇಕಿಂಗ್ ಮತ್ತು ಮೊದಲ ಟ್ರೈಲರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆದರೆ ಸಿನಿಮಾ ರಿಲೀಸ್ ಆದ ನಂತರ ಪಾಸಿಟಿವ್ ಆಗಿ ಟ್ರೋಲ್ ಆದರು, 3ಡಿ ವಿಚಾರವಾಗಿ ಟ್ರೋಲ್ ಆಗಿತ್ತು.

    'ಪೈಲ್ವಾನ್' ಸಿನಿಮಾ

    'ಪೈಲ್ವಾನ್' ಸಿನಿಮಾ

    ಕಿಚ್ಚ ಸುದೀಪ್ ಆಭಿನಯದ ಪೈಲ್ವನ್ ಸಿನಿಮಾದ ಪೋಸ್ಟರ್ ರಿಲೀಸ್ ಆದಾಗ ಟ್ರೋಲ್ ಆಗಿತ್ತು. ಪೋಸ್ಟರ್ ನೋಡಿ ಸುದೀಪ್ ನಿಜಕ್ಕೂ ಬಾಡಿ ಬಿಲ್ಡ್ ಮಾಡಿದ್ದಾರಾ ಅಥವಾ ನಕಲಿನ ಎನ್ನುವುದು ಟ್ರೋಲ್ ಆಗಿತ್ತು. ಜೊತೆಗೆ ಚಿತ್ರದ ಪೋಸ್ಟರ್ ಕಾಪಿ ಮಾಡಿದ್ದಾರೆ ಎನ್ನುವುದು ಟ್ರೋಲ್ ಆಗಿತ್ತು. ರಿಲೀಸ್ ಆದ ನಂತರ ಪಾಸಿಟಿವ್ ರೆಸ್ಪಾನ್ಸ್ ಬಂತು.

    ಪೊಗರು ಸಿನಿಮಾ ಡೈಲಾಗ್

    ಪೊಗರು ಸಿನಿಮಾ ಡೈಲಾಗ್

    ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಿಲೀಸ್ ಗೂ ಮೊದಲೆ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ನಟಿ ರಶ್ಮಿಕಾ ಮಂದಣ್ಣ ಹೇಳುವ ಡೈಲಾಗ್ ಟ್ರೋಲ್ ಆಗಿ ವೈರಲ್ ಆಗಿದೆ. ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.

    English summary
    Seetharama Kalyana, Rustom, 99, Kurukshetra and other Kannada movies most trolled in 2019.
    Friday, December 13, 2019, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X