2020ರಲ್ಲಿ ಅತೀ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ನಟರು: ನಂ.1 ಯಾರು?

ಸೆಲೆಬ್ರಿಟಿಗಳು ಅದರಲ್ಲೂ ಸಿನಿಮಾತಾರೆಯರು ಸಾಮಾಜಿಕ ಜಾಲತಾಣದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳ ನಡುವೆ ಸೇತುವೆಯಾಗಿರುವ ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ಭಾರತದ ಅನೇಕ ಕಲಾವಿದರು ಸಖತ್ ಆಕ್ಟೀವ್ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಅನೇಕ ಕಲಾವಿದರಿದ್ದಾರೆ. ಸೆಲೆಬ್ರಿಟಿಗಳು ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟ್ಟರ್ ಸಹ ಒಂದು. 2020ರಲ್ಲಿ ಅತೀ ಹೆಚ್ಚು ಟ್ವೀಟ್ ಆದ ಭಾರತದ ನಟ-ನಟಿಯರ ಪಟ್ಟಿಯನ್ನು ಟ್ವಿಟ್ಟರ್ ಇಂಡಿಯಾ ಬಿಡುಗಡೆ ಮಾಡಿದೆ. ಅತೀ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ಕಲಾವಿದರ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಕನ್ನಡದ ಒಬ್ಬ ನಟನ ಹೆಸರು ಸಹ ಇಲ್ಲ ಎನ್ನುವುದು ಕನ್ನಡಿಗರ ಬೇಸರ. ಈ ಪಟ್ಟಿಯಲ್ಲಿ ಯಾರೆಲ್ಲ ನಟರ ಹೆಸರಿದೆ, ಇಲ್ಲಿದೆ ವಿವರ..

ನಂ.1 ಸ್ಥಾನದಲ್ಲಿ ಮಹೇಶ್ ಬಾಬು

ನಂ.1 ಸ್ಥಾನದಲ್ಲಿ ಮಹೇಶ್ ಬಾಬು

ತೆಲುಗು ಸಿನಿಮಾರಂಗದ ಖ್ಯಾತ ನಟ ಮಹೇಶ್ ಬಾಬು ಈ ಬಾರಿ ಅತೀ ಹೆಚ್ಚು ಟ್ವೀಟ್ ಆದ ನಟರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸರಿಲೇರು ನೀಕೆವ್ವರು ಸಿನಿಮಾ ಮೂಲಕ ಈ ವರ್ಷ ಪ್ರಾರಂಭದಲ್ಲಿ ಮಹೇಶ್ ಬಾಬು ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿದೆ.

ಪವನ್ ಕಲ್ಯಾಣ್

ಪವನ್ ಕಲ್ಯಾಣ್

ತೆಲುಗು ಸಿನಿಮಾದ ಸ್ಟಾರ್ ನಟ ಮತ್ತ ರಾಜಕಾರಣಿ ಪವನ್ ಕಲ್ಯಾಣ್ ಅತೀ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ನಟರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಪವನ್ ಕಲ್ಯಾಣ್ ಅವರ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ. ಆದರೂ ಅತೀ ಹೆಚ್ಚು ಬಾರಿ ಟ್ವೀಟ್ ಆದ ನಟರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪವನ್ ಕಲ್ಯಾಣ್ ಕೊನೆಯದಾಗಿ ಅಗ್ನಾತವಾಸಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ವಕೀಲ್ ಸಾಬ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ದಳಪತಿ ವಿಜಯ್

ದಳಪತಿ ವಿಜಯ್

ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮೂರನೆ ಸ್ಥಾನದಲ್ಲಿದ್ದಾರೆ. ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಮಾಸ್ಟರ್ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ರಿಲೀಸ್ ಮುಂದಿನ ವರ್ಷಕ್ಕೆ ಮುಂದಕ್ಕೆ ಹೋಗಿದೆ. ಇನ್ನು ವಿಜಯ್ ತಂದೆ ರಾಜಕೀಯ ಪಕ್ಷ ಘೋಷಣೆ ಮಾಡುವ ಮೂಲಕ ವಿಜಯ್ ಕೋಪಕ್ಕೆ ಕಾರಣರಾಗಿದ್ದರು. ತಂದೆಯ ರಾಜಕೀಯ ಪಕ್ಷದ ಬಗ್ಗೆ ವಿಜಯ್ ಬೇಸರ ವ್ಯಕ್ತಪಡಿಸಿದ್ದರು.

ಜೂ.ಎನ್ ಟಿ ಆರ್

ಜೂ.ಎನ್ ಟಿ ಆರ್

ಅತೀ ಹೆಚ್ಚು ಟ್ವೀಟ್ ಆದ ದಕ್ಷಿಣ ಭಾರತದ ನಟರ ಪಟ್ಟಿಯಲ್ಲಿ ಜೂ.ಎನ್ ಟಿ ಆರ್ 4ನೇ ಸ್ಥಾನದಲ್ಲಿದ್ದಾರೆ. ಜೂ.ಎನ್ ಟಿ ಆರ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮೂಲಕವೇ ಜೂ.ಎನ್ ಟಿ ಆರ್ ಹೆಚ್ಚು ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಜೂ.ಎನ್ ಟಿ ಆರ್ ಕೋಮರಂ ಭೀಮ್ ಪಾತ್ರದಲ್ಲಿ ನಟಿಸುತ್ತಿದ್ದು, ಈ ಪಾತ್ರದ ಟೀಸರ್ ರಿಲೀಸ್ ಆಗಿದೆ. ವಿವಾಗಳ ನಡುವೆಯೂ ಕೋಮರಂ ಭೀಮ್ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಟ ಸೂರ್ಯ

ನಟ ಸೂರ್ಯ

ತಮಿಳು ನಟ ಸೂರ್ಯ ಈ ವರ್ಷ ಅತೀ ಹೆಚ್ಚು ಟ್ವೀಟ್ ಅದ ದಕ್ಷಿಣ ಭಾರತದ ನಟರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಸೂರ್ಯ ಈ ವರ್ಷ ಸೂರರೈ ಪೊಟ್ರು ಸಿನಿಮಾ ಮೂಲಕ ಅಬಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಚಿತ್ರಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು, ಒಟಿಟಿಯಲ್ಲಿ ರಿಲೀಸ್ ಆಗಿದೆ.

6 ಮತ್ತು 7ನೇ ಸ್ಥಾನದಲ್ಲಿ ಅಲ್ಲು ಅರ್ಜುನ್- ರಾಮ್ ಚರಣ್

6 ಮತ್ತು 7ನೇ ಸ್ಥಾನದಲ್ಲಿ ಅಲ್ಲು ಅರ್ಜುನ್- ರಾಮ್ ಚರಣ್

6ನೇ ಸ್ಥಾನದಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಇದ್ದಾರೆ. ಅಲ್ಲು ಅರ್ಜುನ್ ಈ ವರ್ಷ ಅಲಾ ವೈಕುಂಠಪುರಂಲೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಚಿತ್ರಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನೂ ನಟ ರಾಮ್ ಚರಣ್ 7ನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Recommended Video

ಕಳೆದು ಹೋದದನ್ನ ಪುನಃ ಪಡೆದುಕೊಂಡ ಮೇಘಾ ಶೆಟ್ಟಿ | Filmibeat Kannada
8, 9 ಮತ್ತು 10ನೇ ಸ್ಥಾನದಲ್ಲಿದ್ದಾರೆ ಈ ನಟರು

8, 9 ಮತ್ತು 10ನೇ ಸ್ಥಾನದಲ್ಲಿದ್ದಾರೆ ಈ ನಟರು

8ನೇ ಸ್ಥಾನದಲ್ಲಿ ನಟ ಧನುಷ್ ಇದ್ದರೆ, 9ನೇ ಸ್ಥಾನದಲ್ಲಿ ಮೋಹನ್ ಲಾಲ್ ಮತ್ತು 10ನೇ ಸ್ಥಾನದಲ್ಲಿ ಮೆಗಾಸ್ಟಾರ್ ಚಿರಂಜೀವಿ ಇದ್ದಾರೆ. ನಟ ಧನುಷ್ ಅಭಿನಯದ ಎರಡು ಸಿನಿಮಾ ಈ ವರ್ಷ ರಿಲೀಸ್ ಆಗಿದೆ. ಅಲ್ಲದೆ ರೌಡಿ ಬೇಬಿ ಹಾಡು ದಾಖಲೆ ನಿರ್ಮಿಸಿದೆ. ಇನ್ನು 9ನೇ ಸ್ಥಾನದಲ್ಲಿರುವ ಮಲಯಾಳಂ ನಟ ಮೋಹನ್ ಲಾಲ್ ಅವರು ಬಿಗ್ ಬ್ರದರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. 10ನೇ ಸ್ಥಾನದಲ್ಲಿರುವ ನಟ ಜಿರಂಜೀವಿ ಈ ವರ್ಷ ಸಾಕಷ್ಟು ಸುದ್ದಿಯಲ್ಲಿರುವ ನಟರಲ್ಲಿ ಒಬ್ಬರಾಗಿದ್ದಾರೆ.

More from Filmibeat

English summary
Most tweeted about South Indian heroes in 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X