For Quick Alerts
  ALLOW NOTIFICATIONS  
  For Daily Alerts

  ವಿಶ್ವದಲ್ಲೇ ಅತಿ ಹೆಚ್ಚು ಜನ ನೋಡಿರುವ ಸಿನಿಮಾ ಯಾವುದು? ಟೈಟ್ಯಾನಿಕ್, ಅವತಾರ್ ಅಲ್ಲ!

  |

  ವಿಶ್ವದೆಲ್ಲೆಡೆ ಸಿನಿಮಾ ಪ್ರೇಮಿಗಳಿದ್ದಾರೆ. ಚಿತ್ರಮಂದಿರಗಳೇ ಇಲ್ಲದ ಏಕೈಕ ದೇಶ ಎಂದು ಖ್ಯಾತಿಯಾಗಿದ್ದ ಸೌದಿ ಅರೆಬಿಯಾದಲ್ಲಿ ಸಹ ಇತ್ತೀಚೆಗೆ ಒಂದು ಚಿತ್ರಮಂದಿರ ನಿರ್ಮಾಣವಾಗಿದೆ.

  ಮಲೇಷಿಯಾದಲ್ಲಿ Brahma ಚಿತ್ರದ ರೊಮ್ಯಾಂಟಿಕ್ ಹಾಡು ತಯಾರಾಗಿದ್ದು ಹೀಗೆ | Romantic Scenes | Filmibeat Kannada

  ವಿಶ್ವದೆಲ್ಲೆಡೆ ಸಿನಿಮಾ ಪ್ರೇಮಿಗಳು ಇದ್ದಾರಾದರೆ ವಿಶ್ವದಲ್ಲೇ ಅತಿ ಹೆಚ್ಚು ಬಾರಿ ವೀಕ್ಷಿಸಿಸಲ್ಪಟ್ಟ ಸಿನಿಮಾ ಯಾವುದು? ಕೆಲವು ಊಹೆಗಳನ್ನು ಸುಲಭವಾಗಿ ಮಾಡಬಹುದು. ಟೈಟ್ಯಾನಿಕ್, ಅವತಾರ್, ಅವೇಂಜರ್ಸ್ ಇತರೆ, ಇತರೆ ಎಂದು ಆದರೆ ಈ ಎಲ್ಲಾ ಊಹೆಗಳು ತಪ್ಪು.

   ಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾ ಬಿಡುಗಡೆ ಆಗದಿದ್ದರೂ ಕೋಟಿಗಟ್ಟಲೆ ಬಾಚಿದ ಸೂರ್ಯಾ ಸಿನಿಮಾ

  ಹೌದು, ಟೈಟ್ಯಾನಿಕ್, ಅವತಾರ್, ಅವೇಂಜರ್ಸ್ ಇತರೆ ಸಿನಿಮಾಗಳು ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳು, ಆದರೆ ಹೆಚ್ಚು ಮಂದಿಯಿಂದ ನೋಡಲ್ಪಟ್ಟ ಸಿನಿಮಾಗಳಲ್ಲ. ಈ ಸಿನಿಮಾಗಳು ಬಿಡುಗಡೆ ಆಗುವ ವೇಳೆಗೆ ಟಿಕೆಟ್ ದರ ದುಬಾರಿಯಾಗಿತ್ತು ಹಾಗಾಗಿ ಹೆಚ್ಚು ಹಣಗಳಿಸಿದ ಸಿನಿಮಾಗಳೇ ವಿನಃ ಹೆಚ್ಚು ಮಂದಿಯಿಂದ ವೀಕ್ಷಣೆಯಾದ ಸಿನಿಮಾಗಳಲ್ಲ.

  ಅತಿ ಹೆಚ್ಚು ಮಂದಿ ಟಿಕೆಟ್ ಖರೀದಿಸಿದ್ದ ಸಿನಿಮಾ

  ಅತಿ ಹೆಚ್ಚು ಮಂದಿ ಟಿಕೆಟ್ ಖರೀದಿಸಿದ್ದ ಸಿನಿಮಾ

  ಹೆಚ್ಚು ಮಂದಿಯಿಂದ ನೋಡಲ್ಪಟ್ಟ ಸಿನಿಮಾ ಗುರುತಿಸುವುದು ತುಸು ಕಷ್ಟವೇ. ಆದರೆ 1939 ರಲ್ಲಿ ಬಿಡುಗಡೆಯಾದ 'ಗಾನ್ ವಿತ್‌ ದಿ ವಿಂಡ್' ಸಿನಿಮಾ ಟಿಕೆಟ್‌ ಅನ್ನು ಹೆಚ್ಚು ಮಂದಿ ಖರೀದಿಸಿದ್ದಿರಂತೆ. ಥಿಯೇಟರ್‌ಗಳು ಕಡಿಮೆಯಿದ್ದಾಗಲೂ ಗಾನ್ ವಿತ್‌ ದಿ ವಿಂಡ್ ಸಿನಿಮಾ ಸೂಪರ್ ಡೂಪರ್ ಹಿಟ್ ಸಿನಿಮಾ. ಚಿತ್ರಮಂದಿರದಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾ ಇದು. ಆದರೆ ಇದು ಅತಿ ಹೆಚ್ಚು ಮಂದಿಯಿಂದ ವೀಕ್ಷಣೆಯಾದ ಸಿನಿಮಾ ಅಲ್ಲ.

  ಕ್ಷಮೆ ಕೇಳಿ ಸಿನಿಮಾ ಪೋಸ್ಟರ್‌ ಹಿಂಪಡೆದ ನೆಟ್‌ಫ್ಲಿಕ್ಸ್: ಅಂಥಹದ್ದೇನಿತ್ತು ಅದರಲ್ಲಿ?ಕ್ಷಮೆ ಕೇಳಿ ಸಿನಿಮಾ ಪೋಸ್ಟರ್‌ ಹಿಂಪಡೆದ ನೆಟ್‌ಫ್ಲಿಕ್ಸ್: ಅಂಥಹದ್ದೇನಿತ್ತು ಅದರಲ್ಲಿ?

  1979 ರಲ್ಲಿ ಬಿಡುಗಡೆಯಾದ ಸಿನಿಮಾ

  1979 ರಲ್ಲಿ ಬಿಡುಗಡೆಯಾದ ಸಿನಿಮಾ

  'ಜೀಸಸ್' ಅತಿ ಹೆಚ್ಚು ಮಂದಿಯಿಂದ ವೀಕ್ಷಣೆಯಾದ ಸಿನಿಮಾ. ಹೌದು 1979 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗುವ ಜೊತೆಗೆ ವಿಎಚ್‌ಎಸ್‌ ಮಾದರಿಯಲ್ಲಿ ಸಹ ಬಿಡುಗಡೆ ಆಯಿತಂತೆ. ವಿಎಚ್‌ಎಸ್‌ಗಳನ್ನು ಉಚಿತವಾಗಿ ಮನೆಗೆ ಹಂಚಲಾಗಿತ್ತಂತೆ.

  1600 ಭಾಷೆಗೆ ತರ್ಜುಮೆ ಮಾಡಲಾಗಿದೆ

  1600 ಭಾಷೆಗೆ ತರ್ಜುಮೆ ಮಾಡಲಾಗಿದೆ

  ಇಷ್ಟಕ್ಕೇ ಮುಗಿಯಲಿಲ್ಲ ಈ ಸಿನಿಮಾವನ್ನು 1600 ಭಾಷೆಗಳಿಗೆ ಭಾಷಾಂತರಿಸಲಾಗಿದೆಯಂತೆ. ಈ ಸಿನಿಮಾವನ್ನು ಆ ವರೆಗೆ 300 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ 2004 ರಲ್ಲಿ ಅಂದಾಜಿಸಿತ್ತು. ಹಾಗಾಗಿ ವಿಶ್ವದಲ್ಲಿ ಅತಿ ಹೆಚ್ಚು ಜನರಿಂದ ನೋಡಲ್ಪಟ್ಟ ಸಿನಿಮಾ 'ಜೀಸಸ್'. ವಿವಿಧ ಭಾಷೆಗಳಲ್ಲಿ ಯೂಟ್ಯೂಬ್‌ನಲ್ಲಿ ಉಚಿತವಾಗಿ ಲಭ್ಯವಿದೆ 'ಜೀಸಸ್' ಸಿನಿಮಾ.

  ಟೈಟ್ಯಾನಿಕ್ ಅತ್ಯಂತ ಜನಪ್ರಿಯ ಸಿನಿಮಾ

  ಟೈಟ್ಯಾನಿಕ್ ಅತ್ಯಂತ ಜನಪ್ರಿಯ ಸಿನಿಮಾ

  ಇನ್ನುಳಿದಂತೆ ಟೈಟ್ಯಾನಿಕ್ ವಿಶ್ವದ ಅತ್ಯಂತ ಜನಪ್ರಿಯ ಸಿನಿಮಾ. ಮತ್ತು ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಸಹ ಅದೇ. ಆ ನಂತರ ಹಣಗಳಿಕೆಯಲ್ಲಿ ಟೈಟ್ಯಾನಿಕ್ ಅನ್ನು ಹಿಂದಕ್ಕಿದವಾದರೂ, 'ಇನ್‌ಫ್ಲೇಶನ್' (ಹಣದ ಮೌಲ್ಯದ ಏರಿಕೆ) ಲೆಕ್ಕ ಹಾಕಿದರೆ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಟೈಟ್ಯಾನಿಕ್.

  'ಮನಿ ಹೈಸ್ಟ್' ಪ್ರಿಯರಿಗೆ ಆಘಾತಕಾರಿ ಸುದ್ದಿ: ಮುಂದಕ್ಕಿಲ್ಲ ಕಳ್ಳ-ಪೊಲೀಸ್'ಮನಿ ಹೈಸ್ಟ್' ಪ್ರಿಯರಿಗೆ ಆಘಾತಕಾರಿ ಸುದ್ದಿ: ಮುಂದಕ್ಕಿಲ್ಲ ಕಳ್ಳ-ಪೊಲೀಸ್

  ಕತೆಯೇ ಇಲ್ಲದ ಸಿನಿಮಾ ಒಂದಿದೆ

  ಕತೆಯೇ ಇಲ್ಲದ ಸಿನಿಮಾ ಒಂದಿದೆ

  ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳ ಪಟ್ಟಿಯಲ್ಲಿ ಭಿನ್ನವಾದ ಸಿನಿಮಾ ಒಂದಿದೆ, ಅದರ ಹೆಸರು 'ಬರಾಕಾ'. ಕತೆ, ಪಾತ್ರಗಳು, ಹಾಡು, ಫೈಟು ಯಾವುದೂ ಇಲ್ಲದ ಈ ಸಿನಿಮಾ ಸಹ ಹೆಚ್ಚು ಜನ ವೀಕ್ಷಿಸಿದ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. 23 ದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.

  ಭಾರತದ ಒಂದು ಸಿನಿಮಾ ಇದೆ

  ಭಾರತದ ಒಂದು ಸಿನಿಮಾ ಇದೆ

  ಐಎಂಬಿಡಿ ಪ್ರಕಾರ, ಚಿತ್ರಮಂದಿರ, ಟಿವಿ, ಸಿಡಿ, ಡಿವಿಡಿ, ವಿಸಿಆರ್‌ ಎಲ್ಲದರಲ್ಲೂ ಒಟ್ಟು ಸೇರಿ ಹೆಚ್ಚು ಬಾರಿ ನೋಡಲ್ಪಟ್ಟ ಸಿನಿಮಾಗಳ ಪಟ್ಟಿಯಲ್ಲಿ ಕೇವಲ ಒಂದು ಭಾರತೀಯ ಸಿನಿಮಾ ಇದೆ. ಹೌದು, ಹೆಚ್ಚು ಬಾರಿ ನೋಡಲ್ಪಟ್ಟ ಸಿನಿಮಾಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಹೇಮಾಮಾಲಿನಿ, ಜಯಾ ಬಚ್ಚನ್ ನಟನೆಯ ಶೋಲೆ ಸಿನಿಮಾ ಇದೆ.

  ಹೆಚ್ಚು ಜನರಿಂದ ನೋಡಲ್ಪಟ್ಟ ಇತರ ಸಿನಿಮಾಗಳು

  ಹೆಚ್ಚು ಜನರಿಂದ ನೋಡಲ್ಪಟ್ಟ ಇತರ ಸಿನಿಮಾಗಳು

  ಸ್ಟಾರ್ ವಾರ್ಸ್‌: ಎಪಿಸೋಡ್ 5, ಎಕ್ಸ್ಟಾ ಟೆರಿಟೊರಿ (ಇಟಿ), ದಿ ವಿಜರ್ಡ್ ಆಫ್ ಓಜಿ, ಲಾರ್ಡ್ ಆಫ್‌ ದಿ ರಿಂಗ್ಸ್, ಟರ್ಮಿನೇಟರ್, ದಿ ಗಾಡ್‌ಫಾದರ್, ಜುರಾಸಿಕ್ ಪಾರ್ಕ್, ಗಾಡ್ಜಿಲ್ಲಾ, ಹ್ಯಾರಿ ಪಾಟರ್, ಅವತಾರ್, ಅವೇಂಜರ್ಸ್, ಜಾಸ್‌ ಇನ್ನೂ ಹಲವು ಸಿನಿಮಾಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

  English summary
  Here is the list of most watched movie of all time. One Indian movie is also in the IMBD list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X