twitter
    For Quick Alerts
    ALLOW NOTIFICATIONS  
    For Daily Alerts

    ಇನ್ನು ಮುಂದೆ ಹಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ 'ಹಸಿಬಿಸಿ' ದೃಶ್ಯಗಳು ಇರುವುದಿಲ್ಲವೇ?

    |

    ಕೊರೊನಾ ವೈರಸ್ ಸೋಂಕು ಚಿತ್ರರಂಗದ ದೆಸೆಯನ್ನೇ ಬದಲಿಸುವ ಸಾಧ್ಯತೆಯಿದೆ. ಚಿತ್ರೀಕರಣ ನಡೆಯದೆ ಮನರಂಜನಾ ಉದ್ಯಮದಲ್ಲಿ ನೀರವತೆ ಮೂಡಿದೆ. ಬಿಡುಗಡೆಗೆ ಸಿದ್ಧವಾಗಿದ್ದ ಅನೇಕ ಸಿನಿಮಾಗಳು ಸಂಕಷ್ಟದ ಸಮಯ ದೂರವಾಗುತ್ತಿದ್ದಂತೆಯೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಕಾದಿವೆ. ಅರ್ಧಕ್ಕೆ ಚಿತ್ರೀಕರಣ ನಿಂತ ಸಿನಿಮಾಗಳು ಮತ್ತೆ ಶುರುವಾಗಲು ಹಾಗೂ ಹೊಸ ಸಿನಿಮಾಗಳು ಸೆಟ್ಟೇರಲು ಇನ್ನೂ ಹಲವು ತಿಂಗಳುಗಳು ಬೇಕಾಗಬಹುದು.

     ಲಾಕ್‌ಡೌನ್ ನಡುವೆಯೂ ಶೂಟಿಂಗ್ ಮಾಡಿದ ಯೋಗರಾಜ್ ಭಟ್! ಲಾಕ್‌ಡೌನ್ ನಡುವೆಯೂ ಶೂಟಿಂಗ್ ಮಾಡಿದ ಯೋಗರಾಜ್ ಭಟ್!

    ಕೊರೊನಾ ವೈರಸ್ ಕಾರಣದಿಂದ ಜನರು ಇತರರ ಜತೆ ಸೇರಲು ಭಯಪಡುವ ಸ್ಥಿತಿ ಉಂಟಾಗಿದೆ. ವೈರಸ್ ಹೇಗೆ ಹರಡುತ್ತದೆ ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಎಲ್ಲರೂ ಗುಣಮುಖರಾಗಿ ಸೋಂಕಿನ ಭೀತಿ ದೂರವಾದ ಬಳಿಕವೂ ಈ ಆತಂಕ ಮುಂದುವರಿಯಲಿದೆ. ಇದು ಚಿತ್ರರಂಗಕ್ಕೂ ತಟ್ಟಿದೆ. ಅದರಲ್ಲಿಯೂ ಹೆಚ್ಚು ಹಸಿಬಿಸಿ ದೃಶ್ಯಗಳನ್ನು ಮುಲಾಜಿಲ್ಲದೆ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಿದ್ದ ನಿರ್ದೇಶಕರ ತಲೆಬಿಸಿ ಜೋರಾಗಿದೆ. ಮುಂದೆ ಓದಿ...

    ಸೆಕ್ಸ್ ದೃಶ್ಯಗಳಿಗೆ ಕತ್ತರಿ?

    ಸೆಕ್ಸ್ ದೃಶ್ಯಗಳಿಗೆ ಕತ್ತರಿ?

    ಕೊರೊನಾ ವೈರಸ್ ಭೀತಿಯ ಸಂಕಟ ದೂರವಾದ ಬಳಿಕ ಸಿನಿಮಾಗಳಲ್ಲಿ ಸೆಕ್ಸ್ ಸಂಬಂಧಿತ ದೃಶ್ಯಗಳು ಇರುವುದಿಲ್ಲವೇ? ಹೀಗೊಂದು ಪ್ರಶ್ನೆ ಎದುರಾಗಿದೆ. ಬಾಲಿವುಡ್ ಮಾತ್ರವಲ್ಲ, ಹಾಲಿವುಡ್‌ನಲ್ಲಿಯೂ ಈ ರೀತಿಯ ಚರ್ಚೆ ನಡೆಯುತ್ತಿದೆ.

    ಹಾಲಿವುಡ್ ಕಲಾವಿದರ ಹಿಂಜರಿಕೆ

    ಹಾಲಿವುಡ್ ಕಲಾವಿದರ ಹಿಂಜರಿಕೆ

    ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಮುಗಿದ ಬಳಿಕವೂ ಹಾಲಿವುಡ್‌ನಲ್ಲಿ ಅನೇಕ ನಟ, ನಟಿಯರು ಇಂಟಿಮೇಟ್ ದೃಶ್ಯಗಳು ಅಥವಾ ಚುಂಬನದ ಸನ್ನಿವೇಶಗಳಲ್ಲಿ ನಟಿಸುವುದರ ಬಗ್ಗೆ ಈಗಲೇ ಹಿಂಜರಿಕೆ ವ್ಯಕ್ತಪಡಿಸುತ್ತಿದ್ದಾರಂತೆ. ಸ್ಟಾರ್‌ಗಳು ಮತ್ತು ಪ್ರೊಡಕ್ಷನ್ ಸಿಬ್ಬಂದಿ ಚಿತ್ರೀಕರಣ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ತಪಾಸಣೆಗೆ ಒಳಪಡಬೇಕು ಎಂಬ ನಿಯಮ ಹಾಲಿವುಡ್‌ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಮನರಂಜನಾ ಉದ್ಯಮದ ಪ್ರಮುಖ ಹೂಡಿಕೆದಾರರು ನಿಯಮಗಳನ್ನು ರೂಪಿಸುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

    ಅಡುಗೆ ಮಾಡಿಕೊಂಡು ತಿನ್ನಿ, ಆದರೆ ಅದನ್ನು ಪ್ರದರ್ಶಿಸಬೇಡಿ: ನೆಟ್ಟಿಗರ ಮೇಲೆ ಖುಷ್ಬೂ ಕಿಡಿಅಡುಗೆ ಮಾಡಿಕೊಂಡು ತಿನ್ನಿ, ಆದರೆ ಅದನ್ನು ಪ್ರದರ್ಶಿಸಬೇಡಿ: ನೆಟ್ಟಿಗರ ಮೇಲೆ ಖುಷ್ಬೂ ಕಿಡಿ

    ಶೂಟಿಂಗ್ ವೇಳೆ ಸುರಕ್ಷತೆಗೆ ಆದ್ಯತೆ

    ಶೂಟಿಂಗ್ ವೇಳೆ ಸುರಕ್ಷತೆಗೆ ಆದ್ಯತೆ

    ದೊಡ್ಡ ಸ್ಟಾರ್‌ಗಳು ಇನ್ನು ಮುಂದೆ ಯಾವುದೇ ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಿರ್ಮಾಣ ಸಂಸ್ಥೆಯಿಂದ ಸುರಕ್ಷತೆಯ ಖಾತರಿ ಪಡೆದುಕೊಳ್ಳಲಿದ್ದಾರೆ. ಚಿತ್ರೀಕರಣದ ವೇಳೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಾಗೂ ಸುರಕ್ಷಾ ಕ್ರಮಗಳನ್ನು ಅನುಸರಿಸುವುದಕ್ಕೆ ಆದ್ಯತೆ ನೀಡಲಿದ್ದಾರೆ. ಆದರೆ ಇಲ್ಲಿ ಸಮಸ್ಯೆ ಎದುರಾಗಿರುವುದು ಕೆಲವು ಸನ್ನಿವೇಶಗಳದ್ದು. ಹಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳು ಸರ್ವೇಸಾಮಾನ್ಯ. ಆದರೆ ಇನ್ನು ಮುಂದೆ ಕಿಸ್ಸಿಂಗ್ ಸನ್ನಿವೇಶಗಳಿಗೂ ಹಿಂದೆ ಮುಂದೆ ಯೋಚಿಸುವ ಸ್ಥಿತಿ ಬಂದಿದೆ.

    ಹೂವಿಗೆ ಮುತ್ತು ಕೊಡಿಸಬೇಕಷ್ಟೇ

    ಹೂವಿಗೆ ಮುತ್ತು ಕೊಡಿಸಬೇಕಷ್ಟೇ

    ಇತ್ತೀಚೆಗೆ 'ವಿಕ್ಕಿ ಡೋನರ್', 'ಪಿಕು' ಚಿತ್ರಗಳ ಖ್ಯಾತಿಯ ನಿರ್ದೇಶಕ ಶೂಜಿತ್ ಸರ್ಕಾರ್, ತಮ್ಮ ಸಿನಿಮಾಗಳಲ್ಲಿ ಇನ್ನು ಲವ್ ಮೇಕಿಂಗ್ ಸನ್ನಿವೇಶಗಳಿರುವುದಿಲ್ಲ. ಹಿಂದಿನ ಕಾಲದಂತೆ ಹೂವಿಗೆ ಮುತ್ತು ನೀಡುವ ದೃಶ್ಯಗಳಿಗೆ ಹೋಗುತ್ತೇನೆ ಅಥವಾ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಇಂಟಿಮೇಟ್ ಸನ್ನಿವೇಶಗಳನ್ನು ಮಾಡುತ್ತೇನೆ. ಈ ಸಂದರ್ಭದಲ್ಲಿ ಎಲ್ಲವೂ ಅನಿಶ್ಚಿತವಾಗಿದೆ. ಹೀಗಾಗಿ ನನ್ನ ಸಿನಿಮಾಗಳಲ್ಲಿ ಇನ್ನು ಅಂತಹ ದೃಶ್ಯಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇನ್ನು ನಾಯಕ ನಾಯಕಿ ದೂರ ದೂರ

    ಇನ್ನು ನಾಯಕ ನಾಯಕಿ ದೂರ ದೂರ

    'ಸಿನಿಮಾಗಳಲ್ಲಿ ಇಂಟಿಮೇಟ್ ಸನ್ನಿವೇಶಗಳು ಹೇಗೆ ಕಾಣಬೇಕು ಮತ್ತು ಹೇಗೆ ರೂಪಿಸಬೇಕು ಎಂಬ ಚಿತ್ರೀಕರಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಈಗ ಅದೆಲ್ಲವೂ ಮುಗಿಯಿತು. ಚುಂಬನ/ಅಪ್ಪಿಕೊಳ್ಳುವ ಸನ್ನಿವೇಶಗಳ ಕಥೆ ಇನ್ನಿಲ್ಲ. ಎಷ್ಟು ಹತ್ತಿರ, ಎಷ್ಟು ದೂರ... ಅಂತಹ ಇಂಟಿಮೇಟ್ ಸನ್ನಿವೇಶಗಳಲ್ಲಿ ಕೆಲವೊಮ್ಮೆ ವಂಚಿಸಬೇಕಾಗುತ್ತದೆ' ಎಂದು ಶೂಜಿತ್ ಹೇಳಿದ್ದರು.

    ಕೊರೊನಾ ವೈರಸ್ ಗೆದ್ದು ಬಂದ ಬಾಲಿವುಡ್‌ನ ಈ ಕುಟುಂಬ ಮಾಡುತ್ತಿದೆ ಜನಮೆಚ್ಚುವ ಕಾರ್ಯಕೊರೊನಾ ವೈರಸ್ ಗೆದ್ದು ಬಂದ ಬಾಲಿವುಡ್‌ನ ಈ ಕುಟುಂಬ ಮಾಡುತ್ತಿದೆ ಜನಮೆಚ್ಚುವ ಕಾರ್ಯ

    ದಿಯಾ ಮಿರ್ಜಾ ಹೇಳಿದ್ದೇನು?

    ದಿಯಾ ಮಿರ್ಜಾ ಹೇಳಿದ್ದೇನು?

    'ಇಡೀ ಸಿನಿಮಾ ನಿರ್ಮಾಣ ಪ್ರಕ್ರಿಯೆಯೇ ಇಂಟಿಮೇಟ್ ಆಗಿರುತ್ತದೆ. ಹೀಗಾಗಿ ಎಲ್ಲ ಜನರೂ ಒಟ್ಟಾಗಿ ಬಂದು ಒಂದರ ನಂತರ ಮತ್ತೊಂದು ಸನ್ನಿವೇಶಗಳನ್ನು ಜತೆಯಾಗಿ ಸೃಷ್ಟಿಸುತ್ತೇವೆ. ನೀವು ಇಂಟಿಮೇಟ್ ಸೀನ್‌ಗಳ ಬಗ್ಗೆ ಮಾತನಾಡುತ್ತೀರಿ. ಆದರೆ ಅದು ಹೇಗೆ ಬದಲಾಗುತ್ತದೆ? ನಾವು ಶೂಟಿಂಗ್ ವೇಳೆ ಮಾಸ್ಕ್ ಮತ್ತು ಗ್ಲೌಸ್ ಹಾಕಿಕೊಳ್ಳುತ್ತೇವೆಯೇ? ಸಮಯವೇ ಹೇಳಲು ಸಾಧ್ಯ' ಎಂದು ನಟಿ ದಿಯಾ ಮಿರ್ಜಾ ಹೇಳಿದ್ದಾರೆ.

    ಇಂತಹ ಸನ್ನಿವೇಶಗಳು ಅನುಮಾನ

    ಇಂತಹ ಸನ್ನಿವೇಶಗಳು ಅನುಮಾನ

    ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಇಂಟಿಮೇಟ್ ಸನ್ನಿವೇಶಗಳ ನಿರ್ವಹಣೆಗೆಂದೇ ಕೋ ಆರ್ಡಿನೇಟರ್‌ಗಳಿರುತ್ತಾರೆ. ಅವರಲ್ಲಿ ಒಬ್ಬರಾದ ಅಮಂಡಾ ಬ್ಲೂಮೆಂತಲ್ ಹೇಳುವ ಪ್ರಕಾರ, 'ಒಂದು ಅವಧಿಯವರೆಗೆ ಇಂತಹ ದೃಶ್ಯಗಳು ಚಿತ್ರೀಕರಣ ನಡೆಯುವುದು ಅನುಮಾನ. ನಿರ್ಮಾಣ ಸಂಸ್ಥೆಗಳು ಸುರಕ್ಷತೆಗೆ ಮಹತ್ವ ನೀಡಲಿವೆ' ಎಂದಿದ್ದಾರೆ.

    ಸಂಪ್ರದಾಯವಾದಿಯಾಗಲಿದೆಯೇ ಹಾಲಿವುಡ್?

    ಸಂಪ್ರದಾಯವಾದಿಯಾಗಲಿದೆಯೇ ಹಾಲಿವುಡ್?

    ಇಷ್ಟೇ ಅಲ್ಲ, ಹಾಲಿವುಡ್‌ನಲ್ಲಿ ಇನ್ನೂ ಕಠಿಣ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಅಪರಾಧ ದೃಶ್ಯಗಳು, ನಗ್ನತೆ ಅಥವಾ ಲೈಂಗಿಕತೆಗೆ ಸಂಬಂಧಿಸಿದಂತಹ ಸಂಗತಿಗಳ ಮೇಲೆ ಕಡಿವಾಣ ಹಾಕಲಾಗಿತ್ತು. ಸಿನಿಮಾ ಅಥವಾ ಧಾರಾವಾಹಿ ಕಥೆಗಳಲ್ಲಿ 'ವರ್ಜಿನ್' ಎಂಬ ಪದಕ್ಕೂ ಕತ್ತರಿ ಹಾಕಲಾಗಿತ್ತು. ಈಗ ಅಂತಹ ದೃಶ್ಯಗಳನ್ನು ಕೂಡ ನಿಯಂತ್ರಿಸಲಿದ್ದು, ಹಾಲಿವುಡ್ ತೀರಾ ಸಂಪ್ರದಾಯವಾದಿಯಾದರೂ ಅಚ್ಚರಿಯಿಲ್ಲ.

    ಪ್ರಣಯದ ಬದಲು ಬಾಗಿಲ ದರ್ಶನ!

    ಪ್ರಣಯದ ಬದಲು ಬಾಗಿಲ ದರ್ಶನ!

    ಈಗಾಗಲೇ ಸಿನಿಮಾಗಳ ಭವಿಷ್ಯದ ಬಗ್ಗೆ ತಮಾಷೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರರಂಗ ಇನ್ನು ನೂರು ವರ್ಷ ಹಿಂದಕ್ಕೆ ಹೋಗಲಿದೆ. ಪ್ರೀತಿ ಪ್ರೇಮ ಪ್ರಣಯದ ಸನ್ನಿವೇಶಗಳು ತೆರೆಯ ಮೇಲೆ ಕಾಣಿಸಲಾರದು. ಅದರ ಬದಲು ಬಾಗಿಲು ಮುಚ್ಚುವ, ಜೋಡಿ ಹಕ್ಕಿಗಳನ್ನು ತೋರಿಸುವಂತಹ ದೃಶ್ಯಗಳ ಮೂಲಕವೇ ಮುಂದಿನದು ಲೈಂಗಿಕತೆಗೆ ಸಂಬಂಧಿಸಿದ ದೃಶ್ಯ ಎಂದು ಪ್ರೇಕ್ಷಕರು ಊಹಿಸುವಂತೆ ಮಾಡುವುದು ಅನಿವಾರ್ಯವಾಗಬಹುದು ಎನ್ನುತ್ತಾರೆ ಹಾಲಿವುಡ್‌ನ ತಂತ್ರಜ್ಞರು.

    English summary
    Hollywood and other movie industries will face the challenge to shoot intimate scenes post coronavirus.
    Saturday, May 30, 2020, 14:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X