For Quick Alerts
  ALLOW NOTIFICATIONS  
  For Daily Alerts

  ಸಪ್ಪೆ ಶುಕ್ರವಾರ: ಸ್ಟಾರ್ ನಟರ ಸಿನಿಮಾ ಇಲ್ಲ! ಹೊಸಬರ ಸಿನಿಮಾ ಕಡಿಮೆಯೇನಲ್ಲ!

  |

  ಶುಕ್ರವಾರ ಬಂತೆಂದರೆ ವಿವಿಧ ಚಿತ್ರರಂಗಗಳಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತವೆ. ಅದು ಮಾಮೂಲಿ ಸಹ ಹೌದು. ಆದರೆ ಈ ಶುಕ್ರವಾರ (ಸೆಪ್ಟೆಂಬರ್ 02) ಯಾಕೋ ಸ್ವಲ್ಪ ಡಲ್ಲಾಗಿದೆ.

  ಕನ್ನಡ ಸೇರಿದಂತೆ ಯಾವುದೇ ಚಿತ್ರರಂಗದಲ್ಲಿ ಈ ಶುಕ್ರವಾರ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಹಾಗೆಂದು ಯಾವ ಒಳ್ಳೆಯ ಸಿನಿಮಾಗಳೂ ಇಲ್ಲ ಎಂದೇನೂ ಅಲ್ಲ. ಹೊಸಬರ ಕಂಟೆಂಟ್ ಆಧರಿತ ಸಿನಿಮಾಗಳು ಕೆಲವು ಈ ವಾರ ತೆರೆಗೆ ಬಂದಿವೆ.

  ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಈ ವಾರ ಯಾವ ಯಾವ ಸಿನಿಮಾಗಳು ತೆರೆಗೆ ಬಂದಿವೆ ಎಂಬ ಪಟ್ಟಿ ಇಲ್ಲಿದೆ.

  ಕನ್ನಡದ ಆರು ಸಿನಿಮಾಗಳು ಬಿಡುಗಡೆ

  ಕನ್ನಡದ ಆರು ಸಿನಿಮಾಗಳು ಬಿಡುಗಡೆ

  ಕನ್ನಡದ ಸುಮಾರು ಆರು ಸಿನಿಮಾಗಳು ಇಂದು ಬಿಡುಗಡೆ ಆಗಿವೆ. ಆದರೆ ಬಹುತೇಕ ಹೊಸಬರ ಸಿನಿಮಾಗಳೇ. ಶಿವರಾಜ್ ಕೆ.ಆರ್.ಪೇಟೆ ಹಾಗೂ ಇತರರು ನಟಿಸಿರುವ 'ಧಮಾಕಾ' ಇಂದು ಬಿಡುಗಡೆ ಆಗಿದೆ. 'ತಾಜ್ ಮಹಲ್ 2', ನೃತ್ಯವನ್ನು ಆಧಾರವಾಗಿಟ್ಟುಕೊಂಡಿರುವ 'ಸರ್ವಸ್ಯಂ ನಾಟ್ಯಂ' ಸಿನಿಮಾ, ಆಕ್ಷನ್ ಥ್ರಿಲ್ಲರ್ ಸಿನಿಮಾ 'ಕ್ಷಿಪ್ರ', ಪತ್ತೆಧಾರಿ ಕತೆ ಹೊಂದಿರುವ 'ಫ್ಯಾಂಟಸಿ', ಥ್ರಿಲ್ಲರ್ ಕತೆಯುಳ್ಳ 'ಮರ್ಕಟ' ಸಿನಿಮಾಗಳು ಇಂದು ಬಿಡುಗಡೆ ಆಗಿವೆ.

  ತೆಲುಗಿನ ಯಾವ ಸಿನಿಮಾ ಬಿಡುಗಡೆ

  ತೆಲುಗಿನ ಯಾವ ಸಿನಿಮಾ ಬಿಡುಗಡೆ

  ತೆಲುಗಿನಲ್ಲಿ ಈ ವಾರ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿಲ್ಲ. ಆಗಿರುವುದು ಕೆಲವೇ ಸಿನಿಮಾಗಳು. ಪ್ರೀತಿಸುವ ಹುಡುಗಿಗಾಗಿ ಪವನ್ ಕಲ್ಯಾಣ್ ನಟನೆಯ 'ಖುಷಿ' ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕೊಳ್ಳಲು ಯುವಕ ಮಾಡುವ ಸಾಹಸಗಳ ಕತೆಯನ್ನು 'ಫಸ್ಟ್ ಡೇ ಫಸ್ಟ್ ಶೋ' ಸಿನಿಮಾ ಹೊಂದಿದೆ. ಈ ಸಿನಿಮಾಕ್ಕೆ ಚಿರಂಜೀವಿ ಶುಭ ಹಾರೈಸಿದ್ದಾರೆ. ಜೊತೆಗೆ ಪ್ರೇಮಕತೆ 'ರಂಗರಂಗ ವೈಭವಂಗಾ' ಬಿಡುಗಡೆ ಆಗಿದೆ. ಈ ಎರಡು ಸಿನಿಮಾಗಳ ಹೊರತಾಗಿ ಪ್ರೇಮಕತೆ 'ಆಕಾಶ ವೀಧುಲ್ಲೊ', ನಟ ಸುನಿಲ್ ನಟನೆಯ 'ಬುಜ್ಜಿ ಇಲಾರಾ', ಅಭಿಮಾನಿಗಳ ಕತೆ ಹೊಂದಿರುವ 'ಡೈ ಹಾರ್ಡ್ ಫ್ಯಾನ್ಸ್' ಜೊತೆಗೆ ಪವನ್ ಕಲ್ಯಾಣ್ ಹುಟ್ಟುಹಬ್ಬದ ವಿಶೇಷವಾಗಿ 'ಜಲ್ಸಾ' ಸಿನಿಮಾ ಮರು ಬಿಡುಗಡೆ ಆಗಿದೆ.

  ತಮಿಳಿನಲ್ಲಿ ಸಹ ಸಿನಿಮಾಗಳಿಲ್ಲ

  ತಮಿಳಿನಲ್ಲಿ ಸಹ ಸಿನಿಮಾಗಳಿಲ್ಲ

  ಎರಡು ದಿನದ ಹಿಂದೆ ಚಿಯಾನ್ ವಿಕ್ರಂ ನಟನೆಯ 'ಕೋಬ್ರಾ' ಸಿನಿಮಾ ಬಿಡುಗಡೆ ಆಗಿದೆ. ಅದೇ ದಿನ ಪಾ ರಂಜಿತ್ ನಿರ್ದೇಶನದ ಪ್ರಯೋಗಾತ್ಮಕ ಸಿನಿಮಾ 'ನಚ್ಚತ್ತಿರಂ ನಗರ್ಗಿರದು' ಸಿನಿಮಾ ಸಹ ಬಿಡುಗಡೆ ಆಗಿದೆ. ಇವರೆಡರ ಹೊರತಾಗಿ ಇನ್ನಾವುದೇ ತಮಿಳು ಸಿನಿಮಾ ಈ ವಾರ ಬಿಡುಗಡೆ ಆಗಿಲ್ಲ. 2010 ರಲ್ಲಿ ಬಿಡುಗಡೆ ಆಗಿದ್ದ 'ವಿನೈತಾಂಡಿ ವರುವಾಯ' ಸಿನಿಮಾ ಮರು ಬಿಡುಗಡೆ ಆಗಿದೆ.

  ಮಲಯಾಳಂನಲ್ಲಿ ಕಂಟೆಂಟ್ ಆಧರಿತ ಸಿನಿಮಾಗಳು

  ಮಲಯಾಳಂನಲ್ಲಿ ಕಂಟೆಂಟ್ ಆಧರಿತ ಸಿನಿಮಾಗಳು

  ಕೋವಿಡ್ ಕಾಲದಲ್ಲಿ ತಮ್ಮ ಕಂಟೆಂಟ್ ಆಧರಿತ ಸಿನಿಮಾಗಳಿಂದ ಗಮನ ಸೆಳೆದಿದ್ದ ಮಲಯಾಳಂ ಚಿತ್ರರಂಗ ಇತ್ತೀಚೆಗೆ ಡಲ್ ಆಗಿದೆ. ಈ ವಾರ ಮಲಯಾಳಂನ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಎರಡೂ ಸಹ 'ಮಲಯಾಳಂ ಮಾದರಿ' ಸಿನಿಮಾಗಳೇ ಆಗಿವೆ. ಪಶುವೈದ್ಯನ ಕತೆ ಒಳಗೊಂಡ 'ಫಾಲ್ತು ಜಾನ್ವಾರ್' ಹಾಗೂ ಮಹಿಳಾ ಪ್ರಧಾನ ಕತೆಯುಳ್ಳ 'ರನ್ ಕಲ್ಯಾಣಿ' ಸಿನಿಮಾಗಳು ಬಿಡುಗಡೆ ಆಗಿವೆ. 'ರನ್ ಕಲ್ಯಾಣಿ' ಸಿನಿಮಾ ಈಗಾಗಲೇ ಕೆಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಪಡೆದಿದೆ.

  English summary
  Here is the list movies which are releasing on this Friday that is on September 02. No star actor movies this week.
  Friday, September 2, 2022, 16:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X