''ಅಪ್ಪು ಅಂದರೆ ಮುಗಳು ನಗೆ, ಅವರಿಗೆ ಅಹಂಕಾರವೇ ಇರಲಿಲ್ಲ'' - ಪೂಜಾ ಗಾಂಧಿ

''ಮಳೆ'' ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಒಂದು ಕಡೆ ತನ್ನೊಡಲು ತಂಪಾಗಿ ಧರೆ ಹಸನವಾಗುತ್ತದೆ ಅನ್ನೋ ಭಾವ ಭೂಮಿ ತಾಯಿಯದ್ದಾದ್ರೆ, ಮಳೆಯಲ್ಲಿ ನೆನೆದ್ರೆ ಮನಸು ಮುದಗೊಳ್ಳುತ್ತೆ ಅನ್ನೋ ಲಕ್ಷಾಂತರ ಹೃದಯಗಳು ಮತ್ತೊಂದು ಕಡೆ. ಸುರಿಯೋ ಸೋನೆಯಲ್ಲಿ ಬೆಚ್ಚಗೆ ಕೈ ಹಿಡಿದು ನಡೆಯೋದೂಂದ್ರೆ ಪ್ರೇಮಿಗಳಿಗಂತೂ ಪ್ರೀತಿಯ ಪರ್ವಕಾಲ. ಇಂತಹ ಮಳೆಯಲ್ಲಿ ''ದೆಹಲಿ''ಯಿಂದ ಕನ್ನಡ ಚಿತ್ರರಂಗದ ಕಡೆ ''ಕುಣಿದು ಕುಣಿದು'' ಬಂದವರು ಪೂಜಾ ಗಾಂಧಿ.

''ಮುಂಗಾರು ಮಳೆ'' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ಆ ನಂತರ ಒಂದಾದ ಮೇಲೊಂದು ಸಿನಿಮಾಗಳನ್ನೂ ಮಾಡಿದ ಪೂಜಾ ಹಾಗೇ ನೋಡಿದರೆ ಇವತ್ತು ಕನ್ನಡತಿಯೇ. ಇಲ್ಲಿಯೇ ಹುಟ್ಟಿ ಬೆಳೆದು ಕನ್ನಡ್ ಗೊತ್ತಿಲ್ಲ ಅನ್ನುವ ಅನೇಕ ನಾಯಕಿಯರ ನಡುವೆ, ಪೂಜಾ ತುಂಬಾನೇ ಇಷ್ಟ ಪಟ್ಟು ಹಲವಾರು ವರ್ಷ ಕಷ್ಟಪಟ್ಟು ಕನ್ನಡವನ್ನೂ ಕಲಿತಿದ್ದಾರೆ. ಕೇವಲ ಮಾತು ಅಷ್ಟೇ ಅಲ್ಲ ಕನ್ನಡದಲ್ಲಿ ಬರೆಯವುದನ್ನೂ ಕಲಿತಿದ್ದಾರೆ.

Mungaru Male fame Pooja Gandhi recalled her shooting experience with Puneeth Rajkumar for Milana

ಇಂಥಾ ಪೂಜಾ ಗಾಂಧಿ ಇತ್ತೀಚೆಗೆ ''ರ್ಯಾಪಿಡ್ ರಶ್ಮಿ'' ಅವರ ಎದುರು ಕುಳಿತು ತಮ್ಮ ಬದುಕಿನ ಪುಟಗಳನ್ನು ತಿರುವಿ ಹಾಕಿದ್ದಾರೆ. ಸಿನಿಮಾ, ಕನಸು, ಮದುವೆ. ಸಂಭಾವನೆ ಹೀಗೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಮ್ಮೆಲ್ಲರನ್ನು ಅಗಲಿದ ''ಡಾ.ಪುನೀತ್ ರಾಜ್ ಕುಮಾರ್'' ಅವರನ್ನು ಈ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ. ''ಸರಳತೆಗೆ ಮತ್ತೊಂದು ಹೆಸರೇ ಅಪ್ಪು'' ಎಂದು ಮನತುಂಬಿ ಅಚ್ಚ ಕನ್ನಡದಲ್ಲಿಯೇ ಮಾತನಾಡಿದ್ಧಾರೆ.

ಹೌದು, ಸಂದರ್ಶನದಲ್ಲಿ ''ಮಿಲನ'' ಚಿತ್ರದ ನೆನಪುಗಳನ್ನೂ ಮೆಲುಕು ಹಾಕಿರುವ ಪೂಜಾ ಗಾಂಧಿ, ನನ್ನ ಚಿತ್ರಕ್ಕೆ ''ಪ್ರಕಾಶ್'' ಸರ್ ಆಯ್ಕೆ ಮಾಡಿದರು. ಆದರೆ, ಒಂದು ಹಾಡು ಮತ್ತು ಒಂದೆರಡು ಸನ್ನಿವೇಶಗಳಿವೆಯಷ್ಟೇ ಎಂದು ಹೇಳಿದರು ಎಂದಿರುವ ಪೂಜಾ ಗಾಂಧಿ, ನಾನು ಆಗಷ್ಟೇ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇ. ''ಮುಂಗಾರು ಮಳೆ'' ಬ್ಲಾಕ್ ಬಸ್ಟರ್ ಆಗಿತ್ತು. ಈ ಸಮಯದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದಾ ಬೇಡವಾ ಅನ್ನುವ ಗೊಂದಲ ಇತ್ತು. ಆದರೆ, ''ಪುನೀತ್'' ಅವರ ಜೊತೆ ಆಕ್ಟ್ ಮಾಡಬೇಕೆಂಬ ಆಸೆ ನನ್ನಲ್ಲಿತ್ತು ಎಂದಿದ್ಧಾರೆ. ಹೀಗಾಗಿಯೇ ''ಮಿಲನ'' ಒಪ್ಪಿಕೊಂಡೆ ಎಂದು ಹೇಳಿರುವ ಪೂಜಾ ಗಾಂಧಿ ''ಅಪ್ಪು ಅಂದರೆ ನಗು'' ಎಂದಿದ್ದಾರೆ.

mungaru-male-fame-pooja-gandhi-recalled-her-shooting-experience-with-puneeth-rajkumar-for-milana

''ಮಿಲನ'' ಚಿತ್ರದ ಅನುಭವ ಮರೆಯಲು ಅಸಾಧ್ಯ ಎಂದಿರುವ ಪೂಜಾ ಗಾಂಧಿ, ಮೈಸೂರಿನಲ್ಲಿ ಮಹಾರಾಣಿ ಕಾಲೇಜ್ ದಿನ ಚಿತ್ರೀಕರಣ ಇತ್ತು. ಅವತ್ತೇ ನಾನು ಅವರನ್ನು ಮೊದಲ ಸಲ ಭೇಟಿ ಮಾಡಿದ್ದು ಎಂದಿದ್ದಾರೆ. ಚಿತ್ರೀಕರಣ ನಡೆಯುವಾಗ ಅದೆಷ್ಟೇ ಜನ ತಮ್ಮನ್ನು ನೋಡಲು ಬಂದರೂ ಕೂಡ ಅಪ್ಪು ಬೇಸರ ಮಾಡಿಕೊಳ್ಳಲಿಲ್ಲ. ಸುಸ್ತು ಮಾಡಿಕೊಳ್ಳಿಲ್ಲ. ಕ್ಯಾರಾವ್ಯಾನ್‌ಗೆ ಹೋಗಲಿಲ್ಲ. ಬದಲಿಗೆ ತಮ್ಮನ್ನು ನೋಡಲು ಬಂದ ಎಲ್ಲ ಜನರ ಜೊತೆ ಮುಗುಳು ನಗೆಯೊಂದಿಗೆ ಪುನೀತ್ ಮಾತನಾಡುತ್ತಿದ್ದರು ಎಂದಿರುವ ಪೂಜಾ ಗಾಂಧಿ ''ಮಾನವೀಯತೆ''ಯನ್ನು ನಾವು ಅವರಿಂದ ನೋಡಿ ಕಲಿಯಬೇಕು ಎಂದಿದ್ದಾರೆ.

ಇನ್ನೂ ನಾನು ಅವರನ್ನು ನೋಡಿದಂತೆ ಅವರು ಯಾವತ್ತು ಯಾರನ್ನೂ ಏಕವಚನದಲ್ಲಿ ಮಾತನಾಡಿಸಿಯೇ ಇಲ್ಲ. ಎಲ್ಲರನ್ನೂ ಬಹುವಚನದಲ್ಲಿಯೇ ಮಾತನಾಡಿಸುತ್ತಿದ್ದರು. ಎಲ್ಲರನ್ನೂ ಪ್ರೀತಿ -ಅಕ್ಕರೆಯಿಂದ ಮಾತನಾಡಿಸುತ್ತಿದ್ದರು ಎಂದಿರುವ ಪೂಜಾ ಗಾಂಧಿ, ಸ್ವಿಜರ್ ಲ್ಯಾಂಡ್‌ನಲ್ಲಿ ನಡೆದ ''ನಿನ್ನಿಂದಲೇ'' ಹಾಡಿನ ಚಿತ್ರೀಕರಣದ ದಿನಗಳನ್ನೂ ಕೂಡ ನೆನಪು ಮಾಡಿಕೊಂಡಿದ್ದಾರೆ. ದೊಡ್ಡ ಸ್ಟಾರ್ ಆದರೂ ಅಹಂಕಾರ ತೋರದೇ, ಎಲ್ಲರ ಜೊತೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು ಎಂದಿದ್ದಾರೆ.

mungaru-male-fame-pooja-gandhi-recalled-her-shooting-experience-with-puneeth-rajkumar-for-milana

ಮುಂದುವರೆದು ಮಾತನಾಡಿರುವ ಪೂಜಾ ಗಾಂಧಿ, ನಾನು ಆಗ ಹೊಸಬಳಾಗಿದ್ದೇ, ನನಗೆ ಅದು ಮೂರನೇಯದ್ದಾ, ನಾಲ್ಕನೇಯ ಸಿನಿಮಾ. ಆದರೆ ನಾನು ಹೊಸಬಳು ಎಂದು ನನಗೆ ಅವರು ಯಾವತ್ತು ಮನವರಿಕೆ ಮಾಡಿಕೊಡಲಿಲ್ಲ. ನಮ್ಮ ಜೊತೆ ಅಷ್ಟೊಂದು ಚೆನ್ನಾಗಿ ಬೆರೆಯುತ್ತಿದ್ದರು ಎಂದಿದ್ದಾರೆ. ಎಲ್ಲರ ಜೊತೆ ಚಾಪೆ ಮೇಲೆ ಕುಂತ್ಕೊಂಡು ಆರಾಮಾಗಿ ಮಾತನಾಡುತ್ತಿದ್ದರು ಎಂದು ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದಾರೆ. ನನ್ನ ಬಗ್ಗೆ ನನ್ನ ಡ್ಯಾನ್ಸ್ ಸ್ಟೆಪ್ಸ್ ಬಗ್ಗೆ ತುಂಬಾನೇ ಕಾಳಜಿಯನ್ನೂ ವಹಿಸುತ್ತಿದ್ದರು ಎಂದು ಕೂಡ ಹೇಳಿರುವ ಪೂಜಾ ಗಾಂಧಿ, ''ನಿನ್ನಿಂದಲೇ'' ಹಾಡು ರೆಡಿಯಾದ ಮೇಲೆ ''ರಾಘಣ್ಣ'' ನನಗೆ ಕರೆ ಮಾಡಿ ಅಭಿನಂದನೆ ತಿಳಿಸಿದರು. ಪಾತ್ರ ಚಿಕ್ಕದಾದರೂ ನನಗೆ ''ಮಿಲನ'' ತುಂಬಾ ದೊಡ್ಡ ಹೆಸರು ತಂದು ಕೊಡ್ತು ಎಂದು ಕೂಡ ಹೇಳಿದ್ದಾರೆ ಪೂಜಾ ಗಾಂಧಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X