twitter
    For Quick Alerts
    ALLOW NOTIFICATIONS  
    For Daily Alerts

    ತಂದೆ ಸತ್ತಾಗ ಅಳಲಿಲ್ಲ: ತಮನ್ ಬದುಕಿನ ಕಣ್ಣೀರ ಕಥೆ

    |

    ಒಬ್ಬ ಸಾಧಕನ ಹಿಂದೆ ನೂರು ನೋವುಗಳು ಇರುತ್ತದೆ. ಆ ನೋವು.. ಕಷ್ಟದ ದಿನಗಳೆ ಎಷ್ಟೋ ಜನರಿಗೆ ಸ್ಪೂರ್ತಿ ನೀಡುತ್ತದೆ. ಆ ರೀತಿ ಕಥೆ ಸಂಗೀತ ನಿರ್ದೇಶಕ ತಮನ್ ಜೀವನದಲ್ಲಿಯೂ ಇದೆ.

    ತಮನ್ ಸದ್ಯ ಸೌತ್ ಇಂಡಿಯಾದ ಬೇಡಿಕೆಯ ಸಂಗೀತ ನಿರ್ದೇಶಕ. ತೆಲುಗು ಚಿತ್ರರಂಗದಲ್ಲಿ ತಮನ್ ಮ್ಯೂಸಿಕ್ ಮೋಡಿ ಬಹಳ ದೊಡ್ಡದು. ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾಗೆ ಸಹ ತಮನ್ ಸುಧೆ ಇರಲಿದೆ.

    ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಒಂದೊಂದೆ ಹೆಜ್ಜೆ ಇಟ್ಟು ಚಿತ್ರರಂಗಕ್ಕೆ ತಮನ್ ಬಂದರು. ಕಷ್ಟಪಟ್ಟು ಒಂದು ಸ್ಥಾನ ಸಂಪಾದನೆ ಮಾಡಿದ್ದಾರೆ. ಇಂದು ತಮನ್ ಸ್ಟಾರ್ ಮ್ಯಾಸಿಕ್ ಡೈರೆಕ್ಟರ್ ಆಗಿದ್ದಾರೆ. ಸದ್ಯ, 'ಅಲಾ ವೈಕುಂಠಪುರಂ ಲೋ' ಸಿನಮಾದ ಹಾಡುಗಳು ದೊಡ್ಡ ಜನಪ್ರಿಯತೆ ಪಡೆದಿವೆ.

    'ಯುವರತ್ನ' ಬಿಡುಗಡೆ ಯಾವಾಗ?, ಉತ್ತರ ನೀಡಿದ ಸಂತೋಷ್'ಯುವರತ್ನ' ಬಿಡುಗಡೆ ಯಾವಾಗ?, ಉತ್ತರ ನೀಡಿದ ಸಂತೋಷ್

    ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮನ್ ತಮ್ಮ ಜೀವನದ ಕಷ್ಟದ ದಿನಗಳ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡೆ

    ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡೆ

    ಐದನೇ ತರಗತಿ ಓದುವಾಗಲೇ ತಮನ್ ತಮ್ಮ ತಂದೆಯನ್ನು ಕಳೆದುಕೊಂಡರು. ಇದ್ದಕ್ಕಿದ್ದ ಹಾಗೆ ಅವರ ತಂದೆ ವಿಧಿವಶರಾದರು. ಇದು ಅವರ ಕುಟುಂಬಕ್ಕೆ ದೊಡ್ಡ ಆಘಾತ ಉಂಟು ಮಾಡಿತ್ತು. ಆ ಸ್ಥಿತಿಯಲ್ಲಿ ತಾಯಿ ಮತ್ತು ಸಹೋದರಿಯನ್ನು ನೋಡಿ, ತಮನ್ ಧೈರ್ಯವಾಗಿ ನಿಂತರು. ತಂದೆ ಸತ್ತ ದಿನ ಕೂಡ ನಾನು ಕಣ್ಣೀರು ಹಾಕಲಿಲ್ಲ ಎಂದು ಅವರು ನೋವಿನ ಸಂಗತಿ ಬಿಚ್ಚಿಟ್ಟಿದ್ದಾರೆ.

    ಅವಕಾಶಕ್ಕಾಗಿ ಸುತ್ತಾಟ

    ಅವಕಾಶಕ್ಕಾಗಿ ಸುತ್ತಾಟ

    ತಂದೆ ಸಾವಿನ ನಂತರ ತಮ್ಮ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಯೋಚನೆ ತಮನ್ ಮಾಡಿದರು. ತಂದೆ ತೀರಿಹೋದ ಕೆಲವೇ ತಿಂಗಳಿನಲ್ಲಿ ಶಾಲೆ ಬಿಟ್ಟರು. ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ತಮನ್ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನೀಡಲು ಶುರು ಮಾಡಿದರು. ಹೈದರಾಬಾದ, ಚೆನ್ನೈ, ಬೆಂಗಳೂರು ಎಲ್ಲ ಕಡೆ ಸುತ್ತಿದ್ದರು. ದಿನೇ ದಿನೇ ಸಂಗೀತ ಶಿಕರದ ಮೇಲೆ ಒಂದೊಂದೆ ಹೆಜ್ಜೆ ಇಡುತ್ತಿದ್ದರು.

    100 ರೂಪಾಯಿಯ ಬಾಡಿಗೆ ಮನೆ

    100 ರೂಪಾಯಿಯ ಬಾಡಿಗೆ ಮನೆ

    ತಮನ್ ಕುಟುಂದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿ ಇರಲಿಲ್ಲ. 100 ರೂಪಾಯಿ ಬಾಡಿಗೆ ಇರುವ ಸಣ್ಣ ಮನೆಯಲ್ಲಿ ಅವರು ಇದ್ದರು. ಯಾವುದೇ ಆಸ್ತಿ ಇರಲಿಲ್ಲ. ಆಗ ತಮನ್ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಹಾಡಿ ಆ ಹಣದಿಂದ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಕೆಲಸ ಕಷ್ಟ ಅನಿಸಿದರೂ, ಅದನ್ನು ಖುಷಿಯಿಂದ ಸ್ವೀಕರಿಸಿದೆ. ಅವಕಾಶಕ್ಕಾಗಿ ನಾನು ಸುತ್ತಿದ ಜಾಗಗಳಿಲ್ಲ ಎಂದು ಅವರೇ ಹೇಳಿದ್ದಾರೆ.

    ಪ್ರತಿ ಹಾಡು ಮಾಡುವಾಗ ನೆನಪಿಗೆ ಬರುತ್ತದೆ

    ಪ್ರತಿ ಹಾಡು ಮಾಡುವಾಗ ನೆನಪಿಗೆ ಬರುತ್ತದೆ

    ತಮನ್ ಒಂದು ಹಾಡಿಗೆ ಸಂಗೀತ ಮಾಡುವಾಗ ತಮ್ಮ ಹಳೆಯ ದಿನಗಳನ್ನು ನೆನೆಯುತ್ತಾರಂತೆ. ಹಿಂದೆ ಇದ್ದ ಪರಿಸ್ಥಿತಿ ಈಗ ಬಂದಿರುವ ಸ್ಥಾನ ನೋಡಿ ಅವರಿಗೆ ಇನ್ನಷ್ಟು ಕೆಲಸ ಮಾಡುವ ಉತ್ಸಾಹ ಬರುತ್ತದೆಯಂತೆ. ಅವಕಾಶಗಳು ಬಹಳ ಮುಖ್ಯ ಎನ್ನುವ ಅವರು, ಯಾವದೇ ಅವಕಾಶವನ್ನು ಬಿಡದೆ ಇರಲು ಇಷ್ಟಪಡುತ್ತಾರಂತೆ.

    ಮ್ಯಾನ್ ಕ್ಯಾನ್ ಡು ವಂಡರ್ಸ್

    ಮ್ಯಾನ್ ಕ್ಯಾನ್ ಡು ವಂಡರ್ಸ್

    ಸಣ್ಣ ವಯಸ್ಸಿಯಲ್ಲಿ ತಮ್ಮ ತಾಯಿ ಮಾಡಿದ ತ್ಯಾಗವನ್ನು ತಮನ್ ನೆನೆದಿದ್ದಾರೆ. ಮನುಷ್ಯನಿಗೆ ಜೀವನಾನುಭವ ಬಹಳ ಮುಖ್ಯ. ಒಬ್ಬ ಮನುಷ್ಯ ದೃಢ ನಿರ್ಧಾರ ಮಾಡಿದರೆ 'ಮ್ಯಾನ್ ಕ್ಯಾನ್ ಡು ವಂಡರ್ಸ್'' ಎಂದು ತಮನ್ ಅಭಿಪ್ರಾಯ ಪಟ್ಟಿದ್ದಾರೆ. ಇಂದು ತಮನ್ ಬೆಳವಣಿಗೆ ಎಷ್ಟೋ ಜನರಿಗೆ ಸ್ಪೂರ್ತಿ ನೀಡುವಂತಿದೆ.

    English summary
    Telugu music director Thaman spoke about his struggling life.
    Wednesday, January 22, 2020, 13:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X