"ಕರಿಮಣಿ ಮಾಲೀಕ ರಾಹುಲ್ಲಾ"; ಸಖತ್ ಟ್ವಿಸ್ಟ್ ಕೊಟ್ಟ 'ನಾನು ನಂದಿನಿ' ವಿಕ್ಕಿಪಿಡಿಯ
ಸೋಶಿಯಲ್ ಮೀಡಿಯಾ ತುಂಬೆಲ್ಲಾ "ಕರಿಮಣಿ ಮಾಲೀಕ ನಾನಲ್ಲ" ಹಾಗೂ "ರಾಹುಲ್ಲಾ.. ರಾಹುಲ್ಲಾ" ಹಾವಳಿ ಜೋರಾಗಿದೆ. ನಿಂತ್ರು ಕುಂತ್ರು ಜನ ಇದನ್ನೇ ಗುನುಗುವಂತಾಗಿದೆ ಬಿಟ್ಟಿದೆ. ಸೋಶಿಯಲ್ ಮೀಡಿಯಾ ಮಾಯೆಯೇ ಅಂಥಾದ್ದು. ಯಾವ ವಿಚಾರ, ಯಾರು ಯಾವಾಗ, ಹೇಗೆ ಟ್ರೆಂಡ್ ಆಗಿಬಿಡುತ್ತಾರೆ ಎಂದು ಹೇಳೋಕ್ಕಾಗಲ್ಲ.
ಕೆಲ ದಿನಗಳ ಹಿಂದೆ ವಿಕ್ಕಿಪಿಡಿಯ ವಿಕಾಸ್ ಮಾಡಿದ್ದ 'ನಾನು ನಂದಿನಿ' ಹಾಡು ಕೂಡ ಇದೇ ರೀತಿ ಟ್ರೆಂಡ್ ಸೆಟ್ ಮಾಡಿತ್ತು. ಇದೇ ವಿಕಾಸ್ ಸದ್ಯ ಟ್ರೆಂಡಿಂಗ್‌ನಲ್ಲಿರುವ "ಕರಿಮಣಿ ಮಾಲೀಕ" ಮತ್ತು "ರಾಹುಲ್ಲಾ.. ರಾಹುಲ್ಲಾ"ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಎರಡನ್ನೂ ಸೇರಿಸಿ ಹೊಸ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಸೂಪರ್ ಹಿಟ್ 'ಉಪೇಂದ್ರ' ಚಿತ್ರದ ಸೂಪರ್ ಹಿಟ್ ಗೀತೆ "ಏನಿಲ್ಲ.. ಏನಿಲ್ಲ". ಹಲವು ವರ್ಷಗಳ ಬಳಿಕ ಈ ಹಾಡು ದಿಢೀರ್ ಟ್ರೆಂಡ್ ಆಗುತ್ತಿದೆ. ಅದಕ್ಕೆ ಕಾರಣ ರೀಲ್ಸ್ ಕ್ರಿಯೇಟರ್ ಕನಕ ಮಾಡಿದ ಒಂದು ವಿಡಿಯೋ. ಇತ್ತೀಚೆಗೆ ಕನಕ ಮಾಡಿದ ರೀಲ್ಸ್ ಸಖತ್ ಸದ್ದು ಮಾಡ್ತಿಲ್ಲ. ಬಳಿಕ ಸಾಕಷ್ಟು ಜನ ಈ ರೀಲ್ಸ್ ಮಾಡಿ ವೈರಲ್ ಮಾಡಿದ್ದಾರೆ.
ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ "ರಾಹುಲ್ಲಾ.. ರಾಹುಲ್ಲಾ" ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. ಕೆಲವರು ಇದನ್ನು ಸಖತ್ ಟ್ರೋಲ್ ಸಹ ಮಾಡುತ್ತಿದ್ದಾರೆ. ಚಂದ್ರು ಶಿವಾನಂದ ವೃತ್ತದಲ್ಲಿ ನಾನ್ ವೆಜ್ ಹೋಟೆಲ್ ನಡೆಸುತ್ತಿದ್ದಾರೆ. ಜೊತೆಗೆ ಯುಟ್ಯೂಬ್ ಚಾನಲ್‌ನಲ್ಲಿ ತಮ್ಮ ಅಡುಗೆ ರೆಸೆಪಿಗಳನ್ನು ತೋರಿಸುತ್ತಿರುತ್ತಾರೆ. ಈ ವೇಳೆ ತಮ್ಮ ಆಪ್ತನನ್ನು ರಾಹುಲ್ಲಾ ರಾಹುಲ್ಲಾ ಎಂದು ಕರೆದಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. "ರಾಹುಲ್ಲಾ ಬೇಗ ಅಲ್ಲಾಡಿಸಪ್ಪಾ.. ರಾಹುಲ್ಲಾ ರುಬ್ಬಿ ರುಬ್ಬಿ ಕೊಡಪ್ಪಾ" ಎನ್ನುವ ಮಾತುಗಳು ಎಲ್ಲೆಲ್ಲೂ ಫೇಸ್‌ಬುಕ್, ಇನ್‌ಸ್ಟಾ, ವಾಟ್ಸಪ್ ಸ್ಟೇಟಸ್‌ಗಳಲ್ಲಿ ಹರಿದಾಡ್ತಿದೆ.
ಇದೀಗ ಸೋಶಿಯಲ್ ಮೀಡಿಯಾ ವಿಡಿಯೋ ಕಂಟೆಂಟ್ ಕ್ರಿಯೇಟರ್ ಎರಡೂ ವೈರಲ್ ರೀಲ್ಸ್ ಸೇರಿಸಿ ತಮ್ಮದೇ ಶೈಲಿಯಲ್ಲಿ ಹೊಸ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋಗೂ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಮಹಿಳೆ ವೇಷದಲ್ಲಿ ವಿಕ್ಕಿ ಕಾಣಿಸಿಕೊಂಡಿದ್ದು ಸ್ನೇಹಿತರಾದ ಅಮಿತ್ ಚಿಟ್ಟೆ, ಸಚಿತ್ ಸಾಥ್ ಕೊಟ್ಟಿದ್ದಾರೆ.
ವಿಕ್ಕಿಪಿಡಿಯ ವಿಕಾಸ್ ಹೊಸ ವಿಡಿಯೋಗೆ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಲೈಕ್ಸ್, ವೀವ್ಸ್ ಸಿಕ್ಕಿದೆ. ರಿಪೀಟ್ ಮೋಡ್‌ನಲ್ಲಿ ಕೆಲವರು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಕ್ರಿಯೇಟಿವ್ ಅಂದ್ರೆ ಇದು ಗುರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಬಹಳ ವರ್ಷಗಳ ಬಳಿಕ ವೈರಲ್ ಆಗುತ್ತಿರುವ 'ಏನಿಲ್ಲ ಏನಿಲ್ಲ' ಹಾಡಿನ ಬಗ್ಗೆ ಇತ್ತೀಚೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಪ್ರತಿಕ್ರಿಯಿಸಿದ್ದರು. ಆ ಹಾಡು ಹುಟ್ಟಿದ ಸಮಯ, ಯಾಕೆ ಅಂತಾದೊಂದು ಹಾಡು ಮಾಡಿದ್ದು? ಎನ್ನುವುದನ್ನೆಲ್ಲಾ ವಿವರಿಸಿದ್ದರು.
ನಟ, ನಿರ್ದೇಶಕ ಉಪೇಂದ್ರ ಹಾಗೂ ನಟಿ ಪ್ರೇಮ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನು ರೂಮರ್ ಇತ್ತು. ಆದರೆ ಅವರಿಬ್ಬರ ನಡುವೆ ಅಂಥದ್ದೇನಿಲ್ಲ ಎಂದು ಹಾಡಿನಲ್ಲಿ ಹೇಳೋಣ ಎಂದು ಮಾಡಿದ ಹಾಡಿದು. ಏನಿಲ್ಲ ಅಂದರೆ, ಎರಡು ಅರ್ಥ ಬರುತ್ತೆ. ಏನೇನಿಲ್ಲ? ಏನೇನೂ ಇಲ್ಲ? ಎಂಬ ಎರಡು ಅರ್ಥ ಬರುತ್ತೆ. ಹಾಗೇ ಫಸ್ಟ್ ಟ್ಯೂನ್ ಆಗಿದ್ದು ಈ ಪದದಿಂದ ಅಷ್ಟೇ. ಕೇವಲ 5ರಿಂದ 10 ನಿಮಿಷದಲ್ಲಿ ಟ್ಯೂನ್ ಪಲ್ಲವಿ ಸಿದ್ಧವಾಗಿತ್ತು" ಎಂದು ಗುರುಕಿರಣ್ ಹೇಳಿದ್ದರು.
ತಮ್ಮ ಹೋಟೆಲ್ ನೌಕರನ ಬಗ್ಗೆ ಟ್ರೋಲ್ ಮಾಡುತ್ತಿರುವುದರ ಬಗ್ಗೆ ಇತ್ತೀಚೆಗೆ ಉದ್ಯಮಿ ಚಂದ್ರು ಪ್ರತಿಕ್ರಿಯಿಸಿದ್ದರು. "ಒಳ್ಳೆಯ ರೀತಿಯಾಗಿ ಟ್ರೋಲ್ ಮಾಡಿದರೆ ಪರವಾಗಿಲ್ಲ. ಆದ್ರೆ ಕೆಟ್ಟ ಕೆಟ್ಟ ಪದ ಬಳಕೆ ಮಾಡುತ್ತಾ ಟ್ರೋಲ್ ಮಾಡಿದರೆ ಅದನ್ನ ದೇವರು ಮೆಚ್ಚುವುದಿಲ್ಲ. ಹಾಗೇ ತಿನ್ನುವ ಅನ್ನದ ವಿಚಾರದಲ್ಲಿ ಹೀಗೆ ಕೆಟ್ಟ ಪದ ಬಳಸಿದರೆ ಅದು ನಿಮಗೆ ಒಳ್ಳೆಯದು ಮಾಡಲ್ಲ" ಆಕ್ರೋಶ ಹೊರಹಾಕಿದ್ದರು. ಆ ಮೂಕಲ ತಮ್ಮ ಹೋಟೆಲ್ ನೌಕರ ರಾಹುಲ್ಲಾ ಪರವಾಗಿಯೂ ಚಂದ್ರು ಮಾತನಾಡಿದ್ದರು.


Click it and Unblock the Notifications











