twitter
    For Quick Alerts
    ALLOW NOTIFICATIONS  
    For Daily Alerts

    'ನಾಗ' ಮಹಿಮೆಯ ಸುತ್ತ ಬಂದಿರುವ ಕನ್ನಡದ ಖ್ಯಾತ ಸಿನಿಮಾಗಳು

    |

    ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ನಾಗರ ಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ. ಈ ವಿಶೇಷ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ನಾಗಪಂಚಮಿಯ ಬಗ್ಗೆ ಪುರಾಣಗಳಲ್ಲಿ ಹಲವು ರೀತಿಯ ಕಥೆಗಳಿವೆ. ಈ ಹಬ್ಬವನ್ನು ಪ್ರಮುಖವಾಗಿ ಹೆಣ್ಣು ಮಕ್ಕಳ ಹಬ್ಬವೆಂದು ಕರೆಯಲಾಗುತ್ತದೆ. ವಿಶೇಷವಾಗಿ ಅಣ್ಣ-ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

    ನಾಗರ ಪಂಚಮಿಯ ದಿನದಂದು ದೇವಸ್ಥಾನಗಳಿಗೆ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುವುದು ವಾಡಿಕೆ. ಎಲ್ಲಾ ಹಬ್ಬಗಳಿಗೂ ಮುನ್ನುಡಿಯಂತೆ ಬರುವ ಹಬ್ಬ ನಾಗರಪಂಚಮಿ. ಈ ಹಬ್ಬದ ನಂತರವೇ ವರಮಹಾಲಕ್ಷ್ಮಿ ಹಬ್ಬ, ಗೌರಿ-ಗಣೇಶ ಹಬ್ಬ, ದಸರಾ ಹಬ್ಬ, ದೀಪಾವಳಿ ಹಬ್ಬ ಬರುತ್ತದೆ.

    ವಿಶೇಷ ಲೇಖನ : ನಾಗಪಂಚಮಿ- ನಾಗಾವಲೋಕನ

    ಇನ್ನು ನಾಗರಪಂಚಮಿ, ನಾಗ ದೇವತೆ ಹಾಗೂ ನಾಗರಹಾವಿನ ಮಹತ್ವಗಳನ್ನು ಸಾರುವ ಅನೇಕ ಚಲನಚಿತ್ರಗಳು ಬಂದಿದೆ. ಕನ್ನಡದಲ್ಲೂ ನಾಗರ ಮಹಿಮೆ ಸಾರಿರುವ ಹಾಗೂ ನಾಗರ ಹೆಸರಿನಲ್ಲಿ ಹಲವು ಚಿತ್ರಗಳು ಬಂದಿದೆ. ಈ ವಿಶೇಷ ಸಂದರ್ಭದಲ್ಲಿ ಈ ಸಿನಿಮಾಗಳ ಕುರಿತು ಒಂದು ವಿಶೇಷ ನೋಟ. ಮುಂದೆ ಓದಿ...

    ವಿಷ್ಣುವರ್ಧನ್ 'ನಾಗಕನ್ಯೆ'

    ವಿಷ್ಣುವರ್ಧನ್ 'ನಾಗಕನ್ಯೆ'

    1975ರಲ್ಲಿ ಬಂದ ಸಿನಿಮಾ 'ನಾಗಕನ್ಯೆ'. ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಚೊಚ್ಚಲ ಬಾರಿಗೆ ನಿರ್ದೇಶಿಸಿದ ಚಿತ್ರ. ಡಾ ವಿಷ್ಣುವರ್ಧನ್, ರಾಜಶ್ರೀ, ಭವಾನಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    ಗರುಡರೇಖೆ

    ಗರುಡರೇಖೆ

    1982ರಲ್ಲಿ ಬಂದ ಸಿನಿಮಾ 'ಗರುಡರೇಖೆ'. ಶ್ರೀನಾಥ್, ಮಾಧವಿ, ಅಂಬಿಕಾ, ವಜ್ರಮುನಿ, ಟೈಗರ್ ಪ್ರಭಾಕರ್ ಸೇರಿದಂತೆ ಹಲವು ನಟಿಸಿದ್ದರು. ನಾಗಮುತ್ತು ಕಥಾಹಂದರವನ್ನಾಗಿಸಿ ತಯಾರಿಸಿದ್ದ ಚಿತ್ರ.

    ಪ್ರಭಾಕರ್ 'ಬೆಳ್ಳಿನಾಗ'

    ಪ್ರಭಾಕರ್ 'ಬೆಳ್ಳಿನಾಗ'

    1986ರಲ್ಲಿ ಮೂಡಿ ಬಂದಿದ್ದ ಸಿನಿಮಾ 'ಬೆಳ್ಳಿಬಾಗ'. ಟೈಗರ್ ಪ್ರಭಾಕರ್, ನಿಳಿನಿ, ದಿನೇಶ್, ಸುದರ್ಶನ್, ರಾಜಾನಂದ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

    ಶಂಕರ್ ನಾಗ್ 'ನಾಗಿಣಿ'

    ಶಂಕರ್ ನಾಗ್ 'ನಾಗಿಣಿ'

    1991ರಲ್ಲಿ ಬಂದಿದ್ದ ನಾಗಿಣಿ ಚಿತ್ರ ನೆನಪಿರಬಹುದು. ಶಂಕರ್ ನಾಗ್, ಅನಂತ್ ನಾಗ್, ದೇವರಾಜ್, ತಾರಾ, ಗೀತಾ, ರಂಜನಿ ಸೇರಿದಂತೆ ಹಲವು ನಟಿಸಿದ್ದ ಚಿತ್ರ. ಶ್ರೀಪ್ರಿಯ ನಿರ್ದೇಶಿಸಿದ್ದ ಈ ಚಿತ್ರ ಸೇಡಿನ ಕಥೆ. ನಾಗರಾಜನನ್ನು ಕೊಂದವರ ವಿರುದ್ಧ ನಾಗಿಣಿ ಸೇಡು ತೀರಿಸಿಕೊಳ್ಳುವ ರೋಚಕ ಕಥೆ. ಗೀತಾ ಈ ಸಿನಿಮಾದಲ್ಲಿ ನಾಗಿಣಿಯಾಗಿ ನಟಿಸಿದ್ದರು.

    ಅರ್ಜುನ್ ಸರ್ಜಾ 'ಶಿವನಾಗ'

    ಅರ್ಜುನ್ ಸರ್ಜಾ 'ಶಿವನಾಗ'

    1992ರಲ್ಲಿ ಬಿಡುಗಡೆಯಾದ ಚಿತ್ರ 'ಶಿವನಾಗ'. ಅರ್ಜುನ್ ಸರ್ಜಾ ಮತ್ತು ಮಾಲಾಶ್ರೀ ಅಭಿನಯಿಸಿದ್ದ ಸಿನಿಮಾ ಮನೆದೇವರು ನಾಗದೇವತೆ ಒಂದು ಕುಟುಂಬವನ್ನು ಹೇಗೆ ಕಾಯುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿತ್ತು. ಕೆ ಎಸ್‌ ಆರ್ ದಾಸ್ ಈ ಚಿತ್ರ ನಿರ್ದೇಶಿಸಿದ್ದರು.

    'ಖೈದಿ' ಹಾಡು ಮರೆಯೋಕೆ ಆಗಲ್ಲ

    'ಖೈದಿ' ಹಾಡು ಮರೆಯೋಕೆ ಆಗಲ್ಲ

    ವಿಷ್ಣುವರ್ಧನ್, ಆರತಿ, ಮಾಧವಿ, ಜಯಮಾಲಿನಿ ನಟಿಸಿರುವ ಖೈದಿ ಸಿನಿಮಾದ ಹಾಡೊಂದು ಬಹಳ ಜನಪ್ರಿಯವಾಗಿದೆ. ನಾಗರಾಜ ಮತ್ತು ನಾಗಿಣಿಯ ರೂಪ ತಾಳಿ ನೃತ್ಯ ಮಾಡುವ 'ತಾಳೆ ಹೂವು ಎದೆಯಿಂದ...' ಹಾಡು ಇದಾಗಿದ್ದು, ಇಂತಹ ವಿಶೇಷ ಸಂದರ್ಭದಲ್ಲಿ ಮೊದಲು ನೆನಪಾಗುತ್ತದೆ.

    ಪ್ರಕಾಶ್ ರಾಜ್ 'ನಾಗಮಂಡಲ'

    ಪ್ರಕಾಶ್ ರಾಜ್ 'ನಾಗಮಂಡಲ'

    ಗಿರೀಶ್ ಕಾರ್ನಡ್‌ರ ನಾಟಕ ಆಧರಿಸಿ ತಯಾರಾದ ಚಿತ್ರ ನಾಗಮಂಡಲ. ಟಿಎಸ್ ನಾಗಾಭರಣ ನಿರ್ದೇಶಿಸಿದ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿ ಲಭಿಸಿತ್ತು. ಹಾವು ಮತ್ತು ಮಹಿಳೆ ನಡುವಿನ ಪ್ರೀತಿ ಮತ್ತು ಸರಸದ ಕಥೆ ಹೊಂದಿದ್ದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾವಿನ ಪಾತ್ರ ಮಾಡಿದ್ದರು. ವಿಜಯಲಕ್ಷ್ಮಿ ಮಹಿಳೆ ಪಾತ್ರದಲ್ಲಿ ನಟಿಸಿದ್ದರು. 1997ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.

    ಸೌಂದರ್ಯ 'ನಾಗದೇವತೆ'

    ಸೌಂದರ್ಯ 'ನಾಗದೇವತೆ'

    2000ನೇ ವರ್ಷದಲ್ಲಿ ತೆರೆಗೆ ಬಂದ ಸಿನಿಮಾ ನಾಗದೇವತೆ. ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಪ್ರೇಮ, ಚಾರುಲತಾ, ಸೌಂದರ್ಯ, ಸಾಯಿ ಕುಮಾರ್ ಸೇರಿದಂತೆ ಹಲವರು ನಟಿಸಿದ್ದರು. ಸೌಂದರ್ಯ ನಾಗದೇವತೆ ಪಾತ್ರ ನಿರ್ವಹಿಸಿದ್ದರು.

    ಸಾಯಿ ಪ್ರಕಾಶ್ 'ಶ್ರೀನಾಗಶಕ್ತಿ'

    ಸಾಯಿ ಪ್ರಕಾಶ್ 'ಶ್ರೀನಾಗಶಕ್ತಿ'

    ಭಕ್ತಿ ಪ್ರಧಾನ ಕಥೆಗಳಿಗೆ ಹೆಸರುವಾಸಿವಾಗಿರುವ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಬಂದ ಸಿನಿಮಾ ಶ್ರೀನಾಗಶಕ್ತಿ. ಶ್ರುತಿ, ರಾಮ್ ಕುಮಾರ್ ಹಾಗೂ ಚಂದ್ರಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಚಂದ್ರಿಕಾ ಈ ಸಿನಿಮಾದಲ್ಲಿ ಹಾವಿನ ಪಾತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು.

    ನಾಗರ ಹೆಸರಿನ ಸಿನಿಮಾಗಳು

    ನಾಗರ ಹೆಸರಿನ ಸಿನಿಮಾಗಳು

    ನಾಗದೇವತೆ-ನಾಗರಹಾವಿನ ಮಹಿಮೆ, ಮಹತ್ವ ಸಾರುವ ಸಿನಿಮಾಗಳ ನಡುವೆ ಹಾವಿನ ಹೆಸರಿನಲ್ಲಿ ಬಂದ ಚಿತ್ರಗಳು ಹೆಚ್ಚಿವೆ. ನಾಗರಹಾವು ಹೆಸರಿನಲ್ಲಿ ಮೂರು ಸಿನಿಮಾ ಬಂದಿದೆ. 1972ರಲ್ಲಿ ವಿಷ್ಣುವರ್ಧನ್, 2002ರಲ್ಲಿ ಉಪೇಂದ್ರ ಹಾಗೂ 2016ರಲ್ಲಿ ರಮ್ಯಾ-ದಿಗಂತ್ ನಟಿಸಿದ ಚಿತ್ರಕ್ಕೆ ನಾಗರಹಾವು ಎಂದು ಹೆಸರಿಡಲಾಗಿತ್ತು. ರುದ್ರನಾಗ, ನಾಗರಹೊಳೆ, ನಾಗಕಾಳಭೈರವ, ಹಾವಿನ ಹೆಡೆ, ಹಾವಿನ ದ್ವೇಷ, ಬಳ್ಳಾರಿ ನಾಗ, ಕಾಳಿಂಗ ಹೀಗೆ ಹಲವು ಚಿತ್ರಗಳು ಗಮನ ಸೆಳೆದಿದೆ.

    ಚಿತ್ರಕೃಪೆ: ಗೂಗಲ್, ಯೂಟ್ಯೂಬ್

    ಬಾಲಿವುಡ್‌ನಲ್ಲಿ ನಾಗಿಣಿ-ನಾಗರಾಜ

    ಬಾಲಿವುಡ್‌ನಲ್ಲಿ ನಾಗಿಣಿ-ನಾಗರಾಜ

    ಕನ್ನಡದಲ್ಲಿ ಮಾತ್ರವಲ್ಲ ಹಿಂದಿ ಚಿತ್ರಗಳಲ್ಲಿಯೂ ನಾಗಿಣಿ-ನಾಗರಾಜ ಪಾತ್ರಗಳಲ್ಲಿ ಗಮನ ಸೆಳೆದ ಕಲಾವಿದರಿದ್ದಾರೆ. ನಾಗಿಣ ಸಿನಿಮಾದಲ್ಲಿ ಶ್ರೀದೇವಿ ನಾಗಿಣಿಯಾಗಿ ನಟಿಸಿದ್ದರು. ರಿಷಿ ಕಪೂರ್, ಅಮರಿಶ್ ಪುರಿ ಈ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 'ಶೇಷನಾಗ' ಚಿತ್ರದಲ್ಲಿ ಎವರ್‌ಗ್ರೀನ್ ನಟಿ ರೇಖಾ ನಾಗಿಣಿ ಪಾತ್ರ ಮಾಡಿದ್ದರು. ರೀನಾ ರಾಯ್ ಮತ್ತು ಜಿತೇಂದ್ರ ನಾಗಿಣಿ ಮತ್ತು ನಾಗರಾಜನಾಗಿ ಸಿನಿಮಾವೊಂದರಲ್ಲಿ ಅಭಿನಯಿಸಿದ್ದರು. 'ನಾಚೆ ನಾಗಿನ್ ಗಲಿ ಗಲಿ' ಸಿನಿಮಾದಲ್ಲಿ ಮೀನಾಕ್ಷಿ ಶೇಷಾದ್ರಿ ಮತ್ತು ನಿತೀಶ್ ಭಾರದ್ವಾಜ್ ನಾಗಿಣಿ ಮತ್ತು ನಾಗರಾಜನಾಗಿ ಬಣ್ಣ ಹಚ್ಚಿದ್ದರು. 'ಹಿಸ್' ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ನಾಗಿಣಿ ರೂಪ ತಾಳಿದ್ದರು. ಜಾನಿ ದುಷ್ಮಾನ್: ಏಕ್ ಅನೋಖಿ ಕಹಾನ್ ಚಿತ್ರದಲ್ಲಿ ಮನಿಷಾ ಕೊಯಿರಾಲ ಮತ್ತು ಅರ್ಮಾನ್ ಕೊಹ್ಲಿ ನಾಗಿಣಿ-ನಾಗರಾಜನಾಗಿ ಅಭಿನಯಿಸಿದ್ದರು.

    English summary
    Nag Panchami Special: Sandalwood Movies Related to Snakes.
    Friday, August 13, 2021, 14:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X